Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಅಮ್ಮತ್ತಿ ಕೊಡವ ಸಮಾಜದಿಂದ ಶಾಸಕ ಎ.ಎಸ್.ಪೊನ್ನಣ್ಣರಿಗೆ ಸನ್ಮಾನ*
  • *ಕೆದಮುಳ್ಳೂರು : ಏ.3 ಮತ್ತು 4 ರಂದು ಶ್ರೀ ಚಾಮುಂಡಿ ದೇವಿಯ ತೆರೆ ಮಹೋತ್ಸವ*
  • *ಶ್ರದ್ಧಾಭಕ್ತಿಯಿಂದ ಜರುಗಿದ ಕೆದಮುಳ್ಳೂರು ಶ್ರೀ ಭಗವತಿ ದೇವರ ವಾರ್ಷಿಕೋತ್ಸವ*
  • *ಕುಡಿಯುವ ನೀರಿನ ಅಭಾವ : ಪೊನ್ನಂಪೇಟೆಯಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು*
  • *ಎಮ್ಮೆಮಾಡು ಪ್ರಕರಣ : ಸಾಮಾಜಿಕ ಜಾಲತಾಣದ ಮೇಲೆ ನಿಗಾ ವಹಿಸಿರುವ ಕೊಡಗು ಪೊಲೀಸ್*
  • *ಸೋಮವಾರಪೇಟೆ : ಮಹಿಳಾ ಸಂಘಗಳು ಮಹಿಳೆಯರ ಅಭಿವೃದ್ಧಿಗೆ ಸಹಕಾರಿ : ಸಾಹಿತಿ ಶ.ಗ.ನಯನತಾರ*
  • *ಕೊಡಗು : ದೈವಕ್ಕೆ ಅಪಮಾನ ಆರೋಪ : ಸೂಕ್ತ ಕ್ರಮಕ್ಕೆ ಒತ್ತಾಯ*
  • *ಭಗವಾನ್ ಮಹಾವೀರರ ಜೀವನ ಮತ್ತು ಬೋಧನೆಗಳು ಸಾರ್ವಕಾಲಿಕ : ವಾಣಿ ಪುಷ್ಪರಾಜ್*
  • *ಕೂಡಿಗೆ ಸೈನಿಕ ಶಾಲೆಗೆ ನಿರ್ದೇಶಕರ ಭೇಟಿ*
  • *”ಮುಕ್ಕಾಟಿರ ಕ್ರಿಕೆಟ್ ನಮ್ಮೆ” ಏ.3 ರಿಂದ ಆರಂಭ : 289 ತಂಡಗಳ ನಡುವೆ ಹಣಾಹಣಿ : ಮೇ 1 ರಂದು ಅಂತಿಮ ಪಂದ್ಯ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»ಚೆಟ್ಟಳ್ಳಿ : ತಮಿಳು ಯುವ ಒಕ್ಕೂಟದ ಕ್ರೀಡಾಕೂಟ : ಮಾತೃ ಭಾಷೆ ಮರೆತರೆ ತಾಯಿಯನ್ನು ಮರೆತಂತೆ : ಡಾ.ರೇವತಿ ಪೂವಯ್ಯ 
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಚೆಟ್ಟಳ್ಳಿ : ತಮಿಳು ಯುವ ಒಕ್ಕೂಟದ ಕ್ರೀಡಾಕೂಟ : ಮಾತೃ ಭಾಷೆ ಮರೆತರೆ ತಾಯಿಯನ್ನು ಮರೆತಂತೆ : ಡಾ.ರೇವತಿ ಪೂವಯ್ಯ 

ಫೆಬ್ರವರಿ 20, 20233 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
ಮಡಿಕೇರಿ ಫೆ.20 : ತಮ್ಮ ಮಾತೃ ಭಾಷೆಯನ್ನು ಮರೆತರೆ ಅದು ತಮ್ಮ ತಾಯಿಯನ್ನೇ ಮರೆತಂತೆ ಎಂದು ಕೊಡಗಿನ ಖ್ಯಾತ ಲೇಖಕಿ ಹಾಗೂ ಕಾವೇರಿ ಕಾಲೇಜಿನ ಉಪನ್ಯಾಸಕಿ ಡಾ. ರೇವತಿ ಪೂವಯ್ಯ ಅಭಿಪ್ರಾಯಪಟ್ಟರು.
ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ತಮಿಳು ಯುವ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ, ಸಮುದಾಯ ಬಾಂಧವರ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗು ಸಾಂಸ್ಕೃತಿಕ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಬಹು ಸಂಸ್ಕೃತಿಯ ಈ ನಾಡಿನಲ್ಲಿ ಆಯಾ ಸಂಸ್ಕೃತಿ ಉಳಿಯಲು ಮಾತೃಭಾಷೆಯೇ ಮೂಲ. ಮಾತೃಭಾಷೆ ಹೃದಯದ ಭಾಷೆ, ಮಾತೆ ಹಾಲೂಡುತ್ತಾ ಮಾತನಾಡಿದ ಭಾಷೆ, ಹುಟ್ಟಿದ ತಕ್ಷಣ ಕಿವಿಯ ಮೇಲೆ ಬಿದ್ದ ಭಾಷೆ, ಹೀಗಾಗಿ ಅದರೊಂದಿಗಿನ ಬಂಧ ತಾಯಿಯಷ್ಟೇ ಆಪ್ತ. ‘ಭಾವಕ್ಕೆ ಭಾಷೆಯ ಬಂಧನವಿಲ್ಲ ಆದರೆ ಭಾವನೆಗಳು ಸಮರ್ಥವಾಗಿ ವ್ಯಕ್ತವಾಗುವುದು ಮಾತ್ರಭಾಷೆಯಲ್ಲೇ. ನಾವು ಬೆಳೆದಂತೆ ಹಲವು ಭಾಷೆಗಳನ್ನು ಕರಗತಗೊಳಿಸಿ ಕೊಳ್ಳುತ್ತೇವೆ. ವ್ಯವಹಾರಕ್ಕಾಗಿ ಯಾವದೋ ಭಾಷೆ ಬಳಸುತ್ತೇವೆ. ಆದರೆ ಮಾತೃಭಾಷೆ ಎಂಬುದು ನಮ್ಮ ಆಂತರ್ಯದ ಭಾಷೆ. ಹೀಗಾಗಿ ಅದರ ಮೇಲೆ ಪ್ರೀತಿ ಶಾಶ್ವತ.
ಭಾಷಾ ಸೌಹಾರ್ದ ಎಂದು ಕರ್ನಾಟಕದಲ್ಲಿ ಆಚರಣೆ ಮಾಡಲಾತಿದೆ . ಕರ್ನಾಟಕದಲ್ಲಿ ತಿರುವಳ್ಳುವರ್ ಪ್ರತಿಮೆಯನ್ನು, ತಮಿಳುನಾಡಿನಲ್ಲಿ ಸರ್ವಜ್ಞನ ಪ್ರತಿಮೆಯನ್ನು ಸ್ಥಾಪನೆ ಮಾಡಿರುವುದನ್ನು ನಾವು ಗಮನಿಸಬಹುದೆಂದರು. ತಮಿಳುನಾಡಿನಲ್ಲಿ ತಿರುವಲ್ಲುವರ್ ಅವರನ್ನು ಸಂತ ಕವಿ, ಶ್ರೇಷ್ಠ ಕವಿ ಎಂದು ಕರೆಯಲಾಗುತ್ತದೆ. ತಿರುವಳ್ಳುವರ್ ಅವರ ಕಾವ್ಯವನ್ನು ಸಾಧ್ಯವಾದಷ್ಟು ಕೊಡವ ಭಾಷೆಗೆ ತರ್ಜುಮೆ ಮಾಡಿದ್ದೇನೆ.
ಇಂತಹ ಕೃತಿಯನ್ನು ಅನುವಾದ ಮಾಡುವುದರಲ್ಲಿ ನನಗೆ ತುಂಬ ಸಂತೋಷವಾಯಿತು.ವಿಶ್ವದಲ್ಲಿ ಶಾಸ್ತ್ರೀಯ ಸ್ಥಾನ ಮಾನ ಸಿಕ್ಕಿರುವ ಭಾಷೆ ತಮಿಳು, ಶಾಸ್ತ್ರೀಯ ಸ್ಥಾನಮಾನ ಪಡೆಯುವ ಭಾಷೆ ಸುಮಾರು 2000 ಸಾವಿರ ವರ್ಷಗಳ ಹಳೆಯದಾಗಿರಬೇಕು.
ತಿರುಕುರಲ್ ಜಗತ್ತಿನ ಹೆಚ್ಚು ಭಾಷೆಗಳಿಗೆ ತರ್ಜುಮೆ ಮಾಡಲಾಗಿದ್ದು, ಎರಡನೇ ಸ್ಥಾನದಲ್ಲಿದೆ.
ತಮಿಳು, ಕನ್ನಡ, ಮಲಯಾಳಂ, ಕೊಡವ ಭಾಷೆ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳು ದ್ರಾವಿಡ ಭಾಷೆಗಳೇ. ದ್ರಾವಿಡ ಎಂದರೇ ಅದು ತಮಿಳು ಎಂಬ ಅರ್ಥವಿದೆ. ಪ್ರತಿಯೊಬ್ಬರು ತಮ್ಮ ಮಾತೃಭಾಷೆಯ ಮೂಲಕ ಬೇರೆ ಭಾಷೆಯನ್ನು ನೋಡಬೇಕು. ಇಂದಿನ ಮಕ್ಕಳು ಹಿರಿಯರಿಂದ ಭಾಷೆಯ ಬಗ್ಗೆ ತಿಳಿದುಕೊಳ್ಳಬೇಕು‌ ಎಂದರು.
ಮತ್ತೋರ್ವ ಅತಿಥಿ ಮುಧೋಶ್ ಪೂವಯ್ಯ ಮಾತನಾಡಿ ತಮಿಳುನಾಡಿನಲ್ಲಿ ಕೊಡಗಿನವರನ್ನು ಕೂಡ ತಮಿಳು ಮಕ್ಕಳ್ ಎಂದು ಕರೆಯುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಭೆಯ ಅಧ್ಯಕ್ಷೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ರವಿ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಸಮುದಾಯ ಬಾಂಧವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಸಂಘಟನೆ ವಿವಿಧ ಬಗೆಯ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬಂದಿದೆ. ಮುಂದೆ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಾಗೃತಿ ಮೂಡಿಸಲು ಪ್ರಯತ್ನಿಸಲಿದ್ದೇವೆ ಎಂದರು.
ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಮಾತನಾಡಿ, ಒಕ್ಕೂಟದ ವತಿಯಿಂದ ಸಮುದಾಯದ ಯುವ ಜನತೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿವರ್ಷ ಶೈಕ್ಷಣಿಕ ಕ್ಷೇತ್ರ, ಕ್ರೀಡಾ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿ ಗೌರವಿಸಲಾಗುತ್ತಿದ್ದು, ಮತ್ತಷ್ಟು ಸಾಧನೆ ಮಾಡಲು ಉತ್ತೇಜನ ನೀಡಲಾಗುತ್ತಿದೆ ಎಂದರು.
ಪ್ರಮುಖರಾದ ಸುರೇಶ್ ಬಿಳಿಗೇರಿ ಮಾತನಾಡಿ, ಸಮುದಾಯ ಬಾಂಧವರ ಒಗ್ಗೂಡುವಿಕೆಗೆ ಯುವ ಒಕ್ಕೂಟ ಉತ್ತಮ ವೇದಿಕೆ ಕಲ್ಪಿಸಿದೆ. ಯುವ ಜನತೆಯನ್ನು ಉತ್ತೇಜಿಸುವ ಕೆಲಸವನ್ನು ಸಂಘಟನೆ ಸದಾ ಮಾಡುತ್ತಿದ್ದು, ಜಿಲ್ಲೆಯಲ್ಲಿರುವ ತಮಿಳು ಬಾಂಧವರು ಮತ್ತಷ್ಟು ಬೆಂಬಲ ನೀಡುವ ಮುಖಾಂತರ ಒಕ್ಕೂಟಕ್ಕೆ ಶಕ್ತಿ ತುಂಬಬೇಕಾಗಿದೆ ಎಂದರು.
ಇದೇ ಸಂದರ್ಭ ವಿಶ್ವ ವಿಖ್ಯಾತ ತಿರುಕ್ಕುರಳ್ ಅನ್ನು ಕೊಡವ ಭಾಷೆಗೆ ಭಾಷಾಂತರ ಮಾಡಿರುವ ಮಲ್ಲೆಂಗಡ ರೇವತಿ ಪೂವಯ್ಯ, ಸೇರಿದಂತೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇನಿಯ, ಅಮೃತ, ಶಿವಕಾಮಿ, ಶಕ್ತಿಪ್ರಿಯ, ದೀಪ್ತಿ, ಸಂದೀಪ್, ಅನುತ, ಪವಿತ್ರ, ಗುಣಶೇಖರ್, ಸರಿತಾ, ಸಂಧ್ಯಾ, ನಂದಿನಿ ಹಾಗೂ ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಾಗಿ ನಿತಿನ್ ಕುಮಾರ್ ಅವರನ್ನು  ಸನ್ಮಾನಿಸಿ ಗೌರವಿಸಲಾಯಿತು.
ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ನಂತರ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಪುರುಷರಿಗೆ ನಡೆದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಅಡ್ಮಿನ್ ಬಳಗ ಪ್ರಥಮ ಸ್ಥಾನ ಹಾಗೂ ಎಂವೈಸಿಸಿ ಹೊಳಮಾಲ ದ್ವಿತೀಯ ಸ್ಥಾನವನ್ನು ಪಡೆಯಿತು.
ಮಹಿಳೆಯ ವಿಭಾಗದಲ್ಲಿ ಜಾನಕಿ ಆ್ಯಂಡ್ ಟೀಂ ಪ್ರಥಮ ಹಾಗೂ ಮಂಜುಳಾ ಪ್ರಕಾಶ್ ಆ್ಯಂಡ್ ಟೀಂ ಪಡೆಯಿತು.
ಕಾರ್ಯಕ್ರಮವನ್ನು ವಿಘ್ನೇಶ್ ಭೂತಾನಕಾಡು ನಿರೂಪಿಸಿದರೆ, ಅರುಣ್ ಕುಮಾರ್ ಸ್ವಾಗತಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಯುವ ಒಕ್ಕೂಟದ ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ, ಉಪಾಧ್ಯಕ್ಷೆ ಶಾಂತಿ, ಕಾರ್ಯಕ್ರಮದ ಸಂಚಾಲಕ ಶಶಿ ಕುಮಾರ್, ಪ್ರಕಾಶ್, ಮಣಿಕಂಠ ಸೆಲ್ವಂ, ಹರೀಶ್, ಸುಧಾಕರ್, ಸುಕುಮಾರ್ ಸೇರಿದಂತೆ ಮತ್ತಿತರರು ಇದ್ದರು.
Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಅಮ್ಮತ್ತಿ ಕೊಡವ ಸಮಾಜದಿಂದ ಶಾಸಕ ಎ.ಎಸ್.ಪೊನ್ನಣ್ಣರಿಗೆ ಸನ್ಮಾನ*

ಮಾರ್ಚ್ 30, 2026

*ಕೆದಮುಳ್ಳೂರು : ಏ.3 ಮತ್ತು 4 ರಂದು ಶ್ರೀ ಚಾಮುಂಡಿ ದೇವಿಯ ತೆರೆ ಮಹೋತ್ಸವ*

ಮಾರ್ಚ್ 30, 2026

*ಶ್ರದ್ಧಾಭಕ್ತಿಯಿಂದ ಜರುಗಿದ ಕೆದಮುಳ್ಳೂರು ಶ್ರೀ ಭಗವತಿ ದೇವರ ವಾರ್ಷಿಕೋತ್ಸವ*

ಮಾರ್ಚ್ 30, 2026

*ಕೆದಮುಳ್ಳೂರು : ಏ.3 ಮತ್ತು 4 ರಂದು ಶ್ರೀ ಚಾಮುಂಡಿ ದೇವಿಯ ತೆರೆ ಮಹೋತ್ಸವ*

ಮಾರ್ಚ್ 30, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ ಮಾ.30 NEWS DESK : ವಿರಾಜಪೇಟೆ ಸಮೀಪದ ಕೆದಮುಳ್ಳುರು ಗ್ರಾಮದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಶ್ರೀ ಚಾಮುಂಡಿ ದೇವಿಯ…

*ಶ್ರದ್ಧಾಭಕ್ತಿಯಿಂದ ಜರುಗಿದ ಕೆದಮುಳ್ಳೂರು ಶ್ರೀ ಭಗವತಿ ದೇವರ ವಾರ್ಷಿಕೋತ್ಸವ*

ಮಾರ್ಚ್ 30, 2026

*ಕುಡಿಯುವ ನೀರಿನ ಅಭಾವ : ಪೊನ್ನಂಪೇಟೆಯಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು*

ಮಾರ್ಚ್ 30, 2026

*ಎಮ್ಮೆಮಾಡು ಪ್ರಕರಣ : ಸಾಮಾಜಿಕ ಜಾಲತಾಣದ ಮೇಲೆ ನಿಗಾ ವಹಿಸಿರುವ ಕೊಡಗು ಪೊಲೀಸ್*

ಮಾರ್ಚ್ 30, 2026

*ಸೋಮವಾರಪೇಟೆ : ಮಹಿಳಾ ಸಂಘಗಳು ಮಹಿಳೆಯರ ಅಭಿವೃದ್ಧಿಗೆ ಸಹಕಾರಿ : ಸಾಹಿತಿ ಶ.ಗ.ನಯನತಾರ*

ಮಾರ್ಚ್ 30, 2026

*ಕೊಡಗು : ದೈವಕ್ಕೆ ಅಪಮಾನ ಆರೋಪ : ಸೂಕ್ತ ಕ್ರಮಕ್ಕೆ ಒತ್ತಾಯ*

ಮಾರ್ಚ್ 30, 2026

*ಭಗವಾನ್ ಮಹಾವೀರರ ಜೀವನ ಮತ್ತು ಬೋಧನೆಗಳು ಸಾರ್ವಕಾಲಿಕ : ವಾಣಿ ಪುಷ್ಪರಾಜ್*

ಮಾರ್ಚ್ 30, 2026

*ಕೂಡಿಗೆ ಸೈನಿಕ ಶಾಲೆಗೆ ನಿರ್ದೇಶಕರ ಭೇಟಿ*

ಮಾರ್ಚ್ 30, 2026

*”ಮುಕ್ಕಾಟಿರ ಕ್ರಿಕೆಟ್ ನಮ್ಮೆ” ಏ.3 ರಿಂದ ಆರಂಭ : 289 ತಂಡಗಳ ನಡುವೆ ಹಣಾಹಣಿ : ಮೇ 1 ರಂದು ಅಂತಿಮ ಪಂದ್ಯ*

ಮಾರ್ಚ್ 30, 2026

*ಏ.18 ಮತ್ತು 19 ರಂದು ಮಡಿಕೇರಿಯಲ್ಲಿ ರಾಜ್ಯ ಮಟ್ಟದ “ಮೊಗೇರ ಕ್ರೀಡಾಕೂಟ”*

ಮಾರ್ಚ್ 30, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.