Advertisement
11:36 AM Monday 4-December 2023

ಶಿವಮೊಗ್ಗ : ಪ್ರಧಾನಿ ಮೋದಿಯಿಂದ ರೂ.450 ಕೋಟಿ ವೆಚ್ಚದ ನೂತನ ವಿಮಾನ ನಿಲ್ದಾಣ ಉದ್ಘಾಟನೆ : ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

27/02/2023

ಶಿವಮೊಗ್ಗ  ಫೆ.27 :  ಶಿವಮೊಗ್ಗಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭೇಟಿ ನೀಡಿ ಸೋಗಾನೆಯಲ್ಲಿ ರೂ.450 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ವಿಮಾನ ನಿಲ್ದಾಣವನ್ನು ಉದ್ಘಾಟನೆ  ಮಾಡಿದರು.  ನಂತರ  ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. 

ಸ್ಮಾರ್ಟ್​ಸಿಟಿ ಕಾಮಗಾರಿ, ಶಿಮುಲ್​ ಹಾಲು ಪ್ಯಾಕಿಂಗ್​ ಘಟಕ, ಮಾಮ್​​ ಕೋಸ್ ಆಡಳಿತ ಭವನ, ಶಿಮೊಗ್ಗ-ಶಿಕಾರಿಪುರ, ರಾಣೆಬೆನ್ನೂರು ಹೊಸ ರೈಲು ಮಾರ್ಗಕ್ಕೆ ಶಿಲಾನ್ಯಾಸ ಹಾಗೂ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋಗೆ ಶಿಲಾನ್ಯಾಸ ನೆರವೇರಿಸಿದರು.