ಮಡಿಕೇರಿ ಫೆ.28 : ಒಡಿಶಾದ ರೋರ್ಕೆಲಾದಲ್ಲಿ ನಡೆಯಲಿರುವ ಎಫ್‍ಐಎಚ್ ಪ್ರೋ-ಲೀಗ್ ಅಂತರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಭಾರತೀಯ ಪರುಷರ ಹಾಕಿ ತಂಡದ ತರಬೇತುದಾರರಾಗಿ ಕಾರ್ಯನಿರ್ವಹಿಸಲು ಕೊಡಗಿನ ವಿರಾಜಪೇಟೆಯ ಬೊಳ್ಳೆಪಂಡ ಜೆ.ಕಾರ್ಯಪ್ಪ ಆಯ್ಕೆಯಾಗಿದ್ದಾರೆ.
ಇವರೊಂದಿಗೆ ಶಿವೇಂದರ್ ಸಿಂಗ್, ಆಸ್ಟ್ರೀಲಿಯಾದ ಡೇವಿಡ್ ಜಾನ್ ಅವರು ಕೂಡ ಕೈಜೋಡಿಸಲಿದ್ದಾರೆ. ಇತ್ತೀಚಿಗಷ್ಟೆ ಭಾರತ ತಂಡದ ಮುಖ್ಯ ತರಬೇತುದಾರರ ಹುದ್ದೆಗೆ ಭಾರತವು ವಿಶ್ವಕಪ್‍ನಲ್ಲಿ ಸಾಧನೆ ಮಾಡಲು ವಿಫಲವಾದ ಕಾರಣ ರಾಜಿನಾಮೆ ನೀಡಿದ್ದ ಗ್ರಾಹಾಮ್ ರೀಡ್ ಸ್ಥಾನವನ್ನು ಇವರುಗಳು ತುಂಬಲಿದ್ದಾರೆ.
ಮುಂದಿನ ತಿಂಗಳು ಪ್ರತಿಷ್ಠಿತ ಆಸ್ಟ್ರೇಲಿಯಾ ಹಾಗೂ ಜರ್ಮನಿ ಹಾಕಿ ತಂಡಗಳ ವಿರುದ್ಧ ರೋರ್ಕೆಲಾದಲ್ಲಿ ಹಾಕಿ ಪಂದ್ಯಾವಳಿ ನಡೆಯಲಿದ್ದು, ಈ ಟೂರ್ನಿಯಲ್ಲಿ ತರಬೇತುದಾರರ ಪಾತ್ರವನ್ನು ಕಾರ್ಯಪ್ಪ ಹಾಗೂ ತಂಡ ವಹಿಸಲಿದೆ.
ತಂಡದ ನಾಯಕತ್ವವನ್ನು ಹರ್ಮನ್‍ಪ್ರೀತ್ ಸಿಂಗ್ ವಹಿಸಿಲಿದ್ದಾರೆ. ಗೋಲ್‍ಕೀಪರ್‍ಗಳಾಗಿ ಶ್ರೀಜೇಶ್, ಪವನ್, ಮಿಡ್‍ಫೀಲ್ಡ್‍ರ್ಸ್ ಆಗಿ ಹಾರ್ದಿಕ್ ಸಿಂಗ್, ರಾಜ್‍ಕುಮಾರ್ ಪಾಲ್, ವಿವೇಕ್ ಸಾಗರ್ ಪ್ರಸಾದ್, ಮನ್‍ಪ್ರೀತ್ ಸಿಂಗ್, ಮೊಯ್ರಾಂಗ್‍ತೆಮ್, ರಬಿಚಂದ್ರ ಸಿಂಗ್ ವಿಷ್ಣುಕಾಂತ್ ಸಿಂಗ್, ದಿಲ್ ಪ್ರೀತ್ ಸಿಂಗ್, ಶಿಮ್‍ಶೀರ್ ಸಿಂಗ್, ಜರ್ಮನ್ ಪ್ರೀತ್ ಸಿಂಗ್, ನಿಲಾಮ್ ಸಂಜೀಪ್ ಸೆಸ್, ಸುಮಿತ್ ಹಾಗೂ ಮಂಜೀತ್, ಫಾರ್ವಡ್ರ್ಸ್‍ಗಳಾಗಿ ಎಸ್ ಕಾರ್ತಿ, ಸುಖ್‍ಜೀತ್ ಸಿಂಗ್, ಅಭಿಷೇಕ್ ಹಾಗೂ ಗುರ್‍ಜಾಂತ್ ಸಿಂಗ್, ನಿಲಾಮ್ ಸಂಜೀಪ್ ಸೆಸ್, ಸುಮಿತ್ ಹಾಗೂ ಗುರ್‍ಜಾಂತ್ ಸಿಂಗ್ ಅವರುಗಳು ಭಾರತವನ್ನು ಪ್ರತಿನಿಧಿಸಿದ್ದಾರೆ.







