Advertisement
12:52 AM Thursday 7-December 2023

ನೌಕಾಪಡೆಯ ಅತ್ಯಾಧುನಿಕ ಹಗುರ ಹೆಲಿಕಾಪ್ಟರ್ ತುರ್ತು ಭೂಸ್ಪರ್ಷ : ಮೂವರ ರಕ್ಷಣೆ

08/03/2023

ನವದೆಹಲಿ ಮಾ.8 : ಭಾರತೀಯ ನೌಕಾಪಡೆಯ ಅತ್ಯಾಧುನಿಕ ಹಗುರ ಹೆಲಿಕಾಪ್ಟರ್ ಕರಾವಳಿ ಭಾಗದಲ್ಲಿ ಇಂದು ತುರ್ತು ಭೂಸ್ಪರ್ಷ ಮಾಡಿದೆ. ನೌಕಾ ಗಸ್ತು ಪಡೆಯ ಮೂಲಕ ಹೆಲಿಕಾಪ್ಟರ್ ನಲ್ಲಿದ್ದ ಮೂವರು ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ. ಹಗುರ ಹೆಲಿಕಾಪ್ಟರ್ ALH ಮುಂಬೈ ಕರಾವಳಿಯಲ್ಲಿ ತುರ್ತು ಭೂಸ್ಪರ್ಷ ಮಾಡಿದ್ದು, ಘಟನೆಯ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.