ಮಡಿಕೇರಿ ಮಾ.25 : ಕೊಡವ ಕುಟುಂಬಗಳ ನಡುವಿನ 23ನೇ ವರ್ಷದ ಕೌಟುಂಬಿಕ ಹಾಕಿ ಉತ್ಸವ ಅಪ್ಪಚೆಟ್ಟೋಳಂಡ ಹಾಕಿ ನಮ್ಮೆಯ ಪಂದ್ಯದಲ್ಲಿ 72 ವರ್ಷದ ಕುಕ್ಕೇರ ಜಯ ಚಿಣ್ಣಪ್ಪ ಕುಕ್ಕೇರ ತಂಡದ ಪರವಾಗಿ ಆಟವಾಡುವುರ ಮೂಲಕ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಭಾಜನರಾದರು.
ಕೊಡವ ಹಾಕಿ ಅಕಾಡೆಮಿ ಉಪಾಧ್ಯಕ್ಷರಾಗಿರುವ ಜಯ ಚಿಣ್ಣಪ್ಪ ಮೈದಾನದಲ್ಲಿ ಚುರುಕಿನ ಆಟವಾಡುವುದರ ಮೂಲಕ ಗಮನ ಸೆಳೆದರು.
ಕಿರಿಯ ಆಟಗಾರ ತನು : ಮೂರು ವರ್ಷ ಚಿಲ್ಲವಂಡ ತನು ತಮ್ಮಯ್ಯ ಹಾಕಿ ಸ್ಟಿಕ್ ಸಹಿತ ಮೈದಾನಕ್ಕೆ ಇಳಿಯುವುದರ ಮೂಲಕ ಅತ್ಯಂತ ಕಿರಿಯ ಆಟಗಾರ ಎಂಬ ಹೊಸ ದಾಖಲೆ ಬರೆದಿದ್ದಾರೆ.
ಇದೇ ಪಂದ್ಯದಲ್ಲಿ ಪೊನ್ನಚ್ಚಂಡ ತಂಡದ ಪರವಾಗಿ ಪತಿ, ಪತ್ನಿ, ಪುತ್ರ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದರು.








