Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಯುಕೊ ಅಧ್ಯಕ್ಷ ಮಂಜು ಚಿಣ್ಣಪ್ಪಗೆ ಸನ್ಮಾನ*
  • *ವಿಶ್ವ ಪರಂಪರೆಯ ತಾಣಗಳು ನಮ್ಮ ಇತಿಹಾಸದ ಸಾಕ್ಷಿಗಳು : ಬರಹ : ಗೀತಾಂಜಲಿ ಎನ್.ಎಂ. ಸೋಮವಾರಪೇಟೆ*
  • *3000 ಉದ್ಯೋಗ ಸೃಷ್ಟಿ: ಕೊಡಗು ಉದ್ಯೋಗ ಮೇಳಕ್ಕೆ ಚಾಲನೆ*
  • *ಕುಶಾಲನಗರ ಬಲಿಜ ಸಮಾಜದಿಂದ ಕೈವಾರ ತಾತಯ್ಯ ಜಯಂತಿ ಆಚರಣೆ*
  • *ಕುಶಾಲನಗರ : ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಅಗ್ನಿ ‌ಅವಘಡಗಳ‌ ಕುರಿತು ವಿಶೇಷ ಕಾರ್ಯಾಗಾರ*
  • *ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.19 ರಂದು ನಡೆಯುವ ಪಂದ್ಯಗಳು*
  • ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.18 ರಂದು ಗೆಲುವು ಸಾಧಿಸಿದ ತಂಡಗಳು
  • *ಮಡಿಕೇರಿ : ರಾಜ್ಯ ಮಟ್ಟದ “ಮೊಗೇರ ಕ್ರೀಡಾಕೂಟ” ಉದ್ಘಾಟನೆ*
  • *ಕಾಂಗ್ರೆಸ್ ಮುಖವಾಡ ಕಳಚಿಬಿದ್ದಿದೆ : ಕೊಡಗು ಬಿಜೆಪಿ ಅಸಮಾಧಾನ*
  • *ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮವಹಿಸಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಸೂಚನೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*‘ಸ್ಮಾರಕ ದತ್ತು ಯೋಜನೆ’ : ಸದುಪಯೋಗಕ್ಕೆ ಆಯುಕ್ತ ದೇವರಾಜ್ ಮನವಿ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*‘ಸ್ಮಾರಕ ದತ್ತು ಯೋಜನೆ’ : ಸದುಪಯೋಗಕ್ಕೆ ಆಯುಕ್ತ ದೇವರಾಜ್ ಮನವಿ*

ಮಾರ್ಚ್ 28, 20232 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಮಾ.28 : ರಾಜ್ಯದ ಸ್ಮಾರಕಗಳನ್ನು ಸಂರಕ್ಷಿಸುವುದು ಮತ್ತು ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ‘ಸ್ಮಾರಕ ದತ್ತು ಯೋಜನೆ’ಯನ್ನು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿದ್ದು, ಆ ನಿಟ್ಟಿನಲ್ಲಿ ಸ್ಮಾರಕ ದತ್ತು ಪಡೆಯಲು ಮುಂದೆ ಬರುವವರು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಆಯುಕ್ತರಾದ ಎ.ದೇವರಾಜ ಅವರು ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ದತ್ತು ಯೋಜನೆಯಡಿ ಆಸಕ್ತ ಸಂಘ ಸಂಸ್ಥೆಗಳು, ಕಂಪನಿಗಳು, ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆಯಡಿ(ಸಿಎಸ್‍ಆರ್) ಕಾರ್ಯಕ್ರಮದಲ್ಲಿ ಸ್ಮಾರಕಗಳನ್ನು ದತ್ತು ಪಡೆಯಲು ಸರ್ಕಾರ ಅವಕಾಶ ಕಲ್ಪಿಸಿದ್ದು, ಸರ್ಕಾರದ ಜೊತೆ ಸರ್ಕಾರೇತರ ಸಂಸ್ಥೆಗಳು ಕೈಜೋಡಿಸುವಂತಾಗಬೇಕು ಎಂದು ಅವರು ಕೋರಿದರು.
ಸ್ಮಾರಕಗಳನ್ನು ದತ್ತು ಪಡೆಯುವ ಸಂಘ ಸಂಸ್ಥೆಯನ್ನು ‘ಸ್ಮಾರಕ ಮಿತ್ರ’ ಎಂದು ಕರೆಯಲಾಗುತ್ತದೆ. ಹಾಗೆಯೇ ಮೂಲಭೂತ ಪ್ರವಾಸಿ ಸೌಕರ್ಯಗಳು, ಸುಧಾರಿತ ಪ್ರವಾಸಿ ಸೌಕರ್ಯಗಳು, ಸಂರಕ್ಷಣಾ ಕಾರ್ಯಗಳನ್ನು ಗುರುತಿಸಿದೆ. ಆ ದಿಸೆಯಲ್ಲಿ ಸ್ಮಾರಕ ಮಿತ್ರವು ನೋಡಲ್ ಇಲಾಖೆಯೊಂದಿಗೆ ಸಮಾಲೋಚಿಸಿ ಸ್ಮಾರಕ ಅಭಿವೃದ್ಧಿಗೆ ಮುಂದಾಗಲಿದೆ ಎಂದು ಎ.ದೇವರಾಜ ಅವರು ವಿವರಿಸಿದರು.
ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಯ 53 ಸ್ಮಾರಕಗಳನ್ನು ದತ್ತು ಪಡೆಯಲು ಆಸಕ್ತ ಸಂಘ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸದ್ಯ ವಿಜಯಪುರದ ತಾಜ್ ಬಾವಡಿ ಸ್ಮಾರಕವನ್ನು ಅಭಿವೃದ್ಧಿ ಪಡಿಸಲು ಮುಂಬೈನ ಸಂಸ್ಥೆಯೊಂದು ಮುಂದೆ ಬಂದಿದೆ. ಹಾಗೆಯೇ ಕೊಪ್ಪಳ ಜಿಲ್ಲೆಯ ಆನೆಗುಂದಿಯ ಗಗನ ಮಹಲ್ ಸ್ಮಾರಕ ನಿರ್ವಹಣೆಗಾಗಿ ರಾಜ್ಯದ ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಮುಂದೆ ಬಂದಿದೆ ಎಂದು ತಿಳಿಸಿದರು.
ಸ್ಮಾರಕ ಸಂರಕ್ಷಣೆಗೆ ಹಾಗೂ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಅಗತ್ಯ ಮೂಲಸೌಲಭ್ಯ ಕಲ್ಪಿಸುವುದು ಪ್ರಮುಖವಾಗಿದೆ. ಶೌಚಾಲಯ, ಕುಡಿಯುವ ನೀರು, ಅಂತರ್ಜಾಲ ಸಂಪರ್ಕ, ಸಿಸಿಟಿವಿ ಅಳವಡಿಸುವುದು, ಅಗತ್ಯ ಪೀಠೋಪಕರಣಗಳನ್ನು ಇಡುವುದು, ಧ್ವನಿ ಬೆಳಕು ವ್ಯವಸ್ಥೆ ಮಾಡುವುದು ಹೀಗೆ ಹಲವು ರೀತಿಯಲ್ಲಿ ಆಕರ್ಷಣೀಯವಾಗಿ ಸ್ಮಾರಕವನ್ನು ಅಭಿವೃದ್ಧಿ ಜೊತೆಗೆ ನಿರ್ವಹಣೆ ಮಾಡಬೇಕಿದೆ ಎಂದು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಆಯುಕ್ತರಾದ ಎ.ದೇವರಾಜ ಅವರು ನುಡಿದರು.
ದತ್ತು ಪಡೆಯಲು ಮುಂದಾಗುವ ಸಂಘ ಸಂಸ್ಥೆಗಳು ದಾಸ್ತಾವೇಜನ್ನು ಪರಿಶೀಲಿಸಿ ಅನುಮೋದನೆ ನೀಡಲು ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ‘ಸ್ಮಾರಕ ದತ್ತುಗಾಗಿ ಅಧಿಕಾರ ಸಮಿತಿ’ ಮಾರ್ಗಸೂಚಿ ಅನ್ವಯ ಕಾರ್ಯ ನಿರ್ವಹಿಸಬೇಕಿದೆ ಎಂದು ಅವರು ವಿವರಿಸಿದರು.
ಜಿಲ್ಲಾ ಮಟ್ಟದಲ್ಲಿ ಸಮರ್ಪಕ ಅನುಷ್ಠಾನ ಮತ್ತು ಪರಿಶೀಲನೆಗಾಗಿ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಸ್ಮಾರಕ ಸಮಿತಿ ರಚಿಸಲಾಗುತ್ತದೆ ಎಂದರು.
ಸ್ಮಾರಕಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಸ್ಮಾರಕಗಳ ಸಂರಕ್ಷಣೆ, ಅಭಿವೃದ್ಧಿ, ಸ್ಮಾರಕಗಳ ಬಳಿ ಪ್ರವಾಸೋದ್ಯಮ, ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸಿಎಸ್‍ಆರ್ ನಿಧಿಯಡಿ ರಾಜ್ಯದ ಕಲೆ, ಸಂಸ್ಕøತಿ, ಪರಂಪರೆ ಉಳಿಸಿ ಬೆಳೆಸಲು ದತ್ತು ಯೋಜನೆ ಸಹಕಾರಿಯಾಗಿದೆ ಎಂದರು.
ರಾಜ್ಯದಲ್ಲಿ 800 ಕ್ಕೂ ಹೆಚ್ಚು ಸಂರಕ್ಷಿತ ಸ್ಮಾರಕಗಳನ್ನು ಗುರುತಿಸಲಾಗಿದೆ. ಅತೀ ಹೆಚ್ಚು ಸಂರಕ್ಷಿತ ಸ್ಮಾರಕಗಳು ಇರುವುದು ರಾಜ್ಯದಲ್ಲಿ ಎಂಬುದು ಹೆಮ್ಮೆಯ ವಿಷಯವಾಗಿದೆ. ಆ ನಿಟ್ಟಿನಲ್ಲಿ ಸ್ಮಾರಕಗಳನ್ನು ಸಂರಕ್ಷಿಸಿ ಮೂಲ ಸೌಕರ್ಯ ಒದಗಿಸುವುದು ದತ್ತು ಯೋಜನೆಯ ಉದ್ದೇಶವಾಗಿದೆ ಎಂದರು.
ದತ್ತು ಪಡೆಯಲು 5 ವರ್ಷಗಳ ಕಾಲ ನಿರ್ವಹಣೆ, ಅಭಿವೃದ್ಧಿ ಮಾಡಬೇಕಿದೆ. ಆ ನಿಟ್ಟಿನಲ್ಲಿ ಪುರಾತತ್ವ ಇಲಾಖೆಯೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸಬೇಕಿದೆ ಎಂದರು.
ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ರಾಜರ ಗದ್ದುಗೆ, ನಾಲ್ಕುನಾಡು ಅರಮನೆ, ಹಾಗೆಯೇ ಅರಪಟ್ಟು ಈಶ್ವರ ದೇವಾಲಯವನ್ನು ಸ್ಮಾರಕ ಗುರುತಿಸಲಾಗಿದ್ದು, ಆಸಕ್ತಿ ಇರುವವರು ಇವುಗಳನ್ನು ದತ್ತು ಪಡೆದು ಜೀರ್ಣೋದ್ಧಾರ/ನಿರ್ವಹಣೆ ಮಾಡಬಹುದಾಗಿದೆ ಎಂದು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಆಯುಕ್ತರಾದ ಎ.ದೇವರಾಜ ಅವರು ಹೇಳಿದರು.
ಹೆಚ್ಚಿನ ಮಾಹಿತಿಗೆ ಪುರಾತತ್ವ ಇಲಾಖೆಯ ವೆಬ್‍ಸೈಟ್ http://archaeology.karnataka.gov.in ನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಕ್ಯೂರೇಟರ್ ರೇಖಾ, ಇತರರು ಇದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಯುಕೊ ಅಧ್ಯಕ್ಷ ಮಂಜು ಚಿಣ್ಣಪ್ಪಗೆ ಸನ್ಮಾನ*

ಏಪ್ರಿಲ್ 18, 2026

*ವಿಶ್ವ ಪರಂಪರೆಯ ತಾಣಗಳು ನಮ್ಮ ಇತಿಹಾಸದ ಸಾಕ್ಷಿಗಳು : ಬರಹ : ಗೀತಾಂಜಲಿ ಎನ್.ಎಂ. ಸೋಮವಾರಪೇಟೆ*

ಏಪ್ರಿಲ್ 18, 2026

*3000 ಉದ್ಯೋಗ ಸೃಷ್ಟಿ: ಕೊಡಗು ಉದ್ಯೋಗ ಮೇಳಕ್ಕೆ ಚಾಲನೆ*

ಏಪ್ರಿಲ್ 18, 2026

*ವಿಶ್ವ ಪರಂಪರೆಯ ತಾಣಗಳು ನಮ್ಮ ಇತಿಹಾಸದ ಸಾಕ್ಷಿಗಳು : ಬರಹ : ಗೀತಾಂಜಲಿ ಎನ್.ಎಂ. ಸೋಮವಾರಪೇಟೆ*

ಏಪ್ರಿಲ್ 18, 2026 ಇತ್ತೀಚಿನ ಸುದ್ದಿಗಳು ಕರ್ನಾಟಕ ವಿಶೇಷ

(*ಬರಹ : ಗೀತಾಂಜಲಿ ಎನ್.ಎಂ ಸೋಮವಾರಪೇಟೆ ) ಮಡಿಕೇರಿ ಏ.18 NEWS DESK : ಮಾನವ ಸಮಾಜದ ಬೆಳವಣಿಗೆ ಕೇವಲ…

*3000 ಉದ್ಯೋಗ ಸೃಷ್ಟಿ: ಕೊಡಗು ಉದ್ಯೋಗ ಮೇಳಕ್ಕೆ ಚಾಲನೆ*

ಏಪ್ರಿಲ್ 18, 2026

*ಕುಶಾಲನಗರ ಬಲಿಜ ಸಮಾಜದಿಂದ ಕೈವಾರ ತಾತಯ್ಯ ಜಯಂತಿ ಆಚರಣೆ*

ಏಪ್ರಿಲ್ 18, 2026

*ಕುಶಾಲನಗರ : ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಅಗ್ನಿ ‌ಅವಘಡಗಳ‌ ಕುರಿತು ವಿಶೇಷ ಕಾರ್ಯಾಗಾರ*

ಏಪ್ರಿಲ್ 18, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.19 ರಂದು ನಡೆಯುವ ಪಂದ್ಯಗಳು*

ಏಪ್ರಿಲ್ 18, 2026

ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.18 ರಂದು ಗೆಲುವು ಸಾಧಿಸಿದ ತಂಡಗಳು

ಏಪ್ರಿಲ್ 18, 2026

*ಮಡಿಕೇರಿ : ರಾಜ್ಯ ಮಟ್ಟದ “ಮೊಗೇರ ಕ್ರೀಡಾಕೂಟ” ಉದ್ಘಾಟನೆ*

ಏಪ್ರಿಲ್ 18, 2026

*ಕಾಂಗ್ರೆಸ್ ಮುಖವಾಡ ಕಳಚಿಬಿದ್ದಿದೆ : ಕೊಡಗು ಬಿಜೆಪಿ ಅಸಮಾಧಾನ*

ಏಪ್ರಿಲ್ 18, 2026

*ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮವಹಿಸಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಸೂಚನೆ*

ಏಪ್ರಿಲ್ 18, 2026

*ಮಹಿಳೆಯರಿಗೆ ಅಧಿಕಾರ ನೀಡುವುದನ್ನು ಸಹಿಸದ ಕಾಂಗ್ರೆಸ್ : ಸೋಮವಾರಪೇಟೆ ಬಿಜೆಪಿ ಅಸಮಾಧಾನ*

ಏಪ್ರಿಲ್ 18, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.