Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಅ.11ರಿಂದ ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮ*
  • *ಕೊಡವ ತೋಕ್‌ಗೆ ಸಾಂವಿಧಾನಿಕ ರಕ್ಷಣೆ ನೀಡಲು ಆಗ್ರಹ: ಸಿಎನ್‌ಸಿ ಸತ್ಯಾಗ್ರಹ*
  • *2027ರ SSLC, ದ್ವಿತೀಯ PUC ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ: ಫೆಬ್ರವರಿ 27ರಿಂದ ಪಿಯುಸಿ, ಮಾರ್ಚ್ 22ರಿಂದ SSLC ಪರೀಕ್ಷೆ ಆರಂಭ*
  • *ರಸ್ತೆ ದಾಟಿದ ಹುಲಿ: ಸಾರ್ವಜನಿಕರಲ್ಲಿ ಆತಂಕ*
  • *ಮಡಿಕೇರಿ ದಸರಾ: ವಿವಿಧ ಅಲಂಕಾರ ಸ್ಪರ್ಧೆ ಆಯೋಜನೆ*
  • *ಕಾಂಗ್ರೆಸ್ ಸಂಘಟನಾ ಸೃಜನ್ ಅಭಿಯಾನಕ್ಕೆ ವೇಗ: ಮತ ಉಳಿಸಿ, ದೇಶ ಉಳಿಸಿ ಹೋರಾಟ; ಎಸ್‌ಐಆರ್ ಹೆಸರಿನಲ್ಲಿ ಅರ್ಹ ಮತದಾರರನ್ನು ಕೈಬಿಡುವ ಪ್ರಯತ್ನಕ್ಕೆ ಕಾಂಗ್ರೆಸ್ ಅಸಮಾಧಾನ*
  • *ಸಮಸ್ತ ಆ್ಯಪ್ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ*
  • *ಕೊಡಗು ಸುರಕ್ಷ ಆಂದೋಲನ ಸಮಿತಿ ಜಾಗೃತಿ ಜಾಥಾ ಸಮಾರೋಪ; ಅಕ್ರಮ ವಲಸಿಗರನ್ನು ಪತ್ತೆಹಚ್ಚಿ ಗಡಿಪಾರು ಮಾಡಲು ಆಗ್ರಹ*
  • *ಹಳ್ಳದಿಣ್ಣೆ ಗ್ರಾಮದ ರಸ್ತೆ ಅಭಿವೃದ್ಧಿಗೆ ₹25 ಲಕ್ಷ ಅನುದಾನ*
  • *ಅ.13 ಮತ್ತು 14ರಂದು ಕಾಫಿ ದಸರಾ ಸಂಭ್ರಮ: 50 ಮಳಿಗೆಗಳಲ್ಲಿ ಕಾಫಿ ಘಮ, 13 ಸಾಧಕರಿಗೆ ಸನ್ಮಾನ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡಗು ಚೆಕ್ ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ : ಹೆಚ್ಚಿನ ಸಿಬ್ಬಂದಿಗಳ ನಿಯೋಜನೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ ಪೊಲೀಸ್ ನ್ಯೂಸ್

*ಕೊಡಗು ಚೆಕ್ ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ : ಹೆಚ್ಚಿನ ಸಿಬ್ಬಂದಿಗಳ ನಿಯೋಜನೆ*

ಏಪ್ರಿಲ್ 2, 20232 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
SM Fitness Advertisement

ಮಡಿಕೇರಿ ಏ.2 : ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಾದ್ಯಂತ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು, ಚೆಕ್ ಪೋಸ್ಟ್ ಗಳಲ್ಲಿ ಪೊಲೀಸ್ ಇಲಾಖೆಯಿಂದ ತಪಾಸಣಾ ಕಾರ್ಯ ಚುರುಕುಗೊಳಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 14 ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದ್ದು, ಜಿಲ್ಲೆಯಿಂದ ಹೊರ ಹೋಗುವ ಮತ್ತು ಒಳ ಬರುವ ಎಲ್ಲಾ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಚೆಕ್ ಪೋಸ್ಟ್ ಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಕೊಡಗು ಜಿಲ್ಲೆ ಕೇರಳ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ಹಿನ್ನೆಲೆಯಲ್ಲಿ 3 ಅಂತರ್ ರಾಜ್ಯ ಚೆಕ್‌ಪೋಸ್ಟ್ ತೆರೆಯಲಾಗಿದೆ. ಕೇರಳ ಗಡಿಯ ಕರಿಕೆ, ಮಾಕುಟ್ಟ ಹಾಗೂ ಪೆರುಂಬಾಡಿ ಅಂತರ್ ರಾಜ್ಯ ಚೆಕ್‌ಪೋಸ್ಟ್ ಗಳಾಗಿದ್ದು, 11 ಅಂತರ್ ಜಿಲ್ಲಾ ಚೆಕ್‌ಪೋಸ್ಟ್ ಗಳು ಕಾರ್ಯಾಚರಿಸುತ್ತಿವೆ. ಮೈಸೂರು, ಹಾಸನ, ಸುಳ್ಯ ಸಂಪರ್ಕಿಸುವ ಪ್ರದೇಶಗಳಲ್ಲಿ 100 ಮೀಟರ್ ಅಂತರದಲ್ಲಿ ತಲಾ 2 ಚೆಕ್‌ಪೋಸ್ಟ್ ತೆರೆಯಲಾಗಿದೆ.
ಸಾರ್ವಜನಿಕರ ಅನುಕೂಲಕ್ಕಾಗಿ ಕೊಡಗಿನಿಂದ ಹೊರ ಹೋಗುವ ವಾಹನಗಳನ್ನು ಕೊಡಗು ಗಡಿಯಲ್ಲಿ ತಪಾಸಣೆ ನಡೆಸಲಾಗುತ್ತಿದ್ದು, ಕೊಡಗು ಪ್ರವೇಶಿಸುವ ವಾಹನಗಳನ್ನು ಅಂತರ್ ಜಿಲ್ಲಾ ಚೆಕ್‌ಪೋಸ್ಟ್ಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಅರಣ್ಯ ಇಲಾಖೆ, ಕಂದಾಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳು ಎಲ್ಲಾ ಚೆಕ್‌ಪೋಸ್ಟ್ ಗಳಲ್ಲಿ ಜಂಟಿಯಾಗಿ ಕಾರ್ಯಚರಣೆ ನಡೆಸುತ್ತಿದ್ದಾರೆ. ಅಬಕಾರಿ ಇಲಾಖೆ ಅಕ್ರಮ ಮದ್ಯ ಮಾರಾಟ, ಕಳ್ಳಭಟ್ಟಿ ತಯಾರಿಕೆ ಮತ್ತಿತ್ತರ ನಿಯಮಬಾಹಿರ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದೆ. ಪೊಲೀಸ್ ಇಲಾಖೆ ಅಕ್ರಮ ಹಣ ಸಾಗಾಟ, ಆಮಿಷ ಒಡ್ಡುವ ವಸ್ತುಗಳು, ಗಾಂಜಾ ಮಾರಾಟ ಮತ್ತಿತ್ತರ ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ನಿಗಾ ವಹಿಸಿದೆ.
::: ಹೆಚ್ಚುವರಿ ಸಿಬ್ಬಂದಿ :::
ಈಗಾಗಲೇ ಸೂಕ್ಷ್ಮ ಅತೀ ಸೂಕ್ಷ್ಮ ಮತಗಟ್ಟೆಗಳು ಹಾಗೂ ಸೂಕ್ಷ್ಮ ಪ್ರದೇಶಗಳನ್ನು ಪೊಲೀಸ್ ಇಲಾಖೆ ಗುರುತು ಮಾಡಿದೆ. ಚುನಾವಣಾ ಸಂದರ್ಭ ಈ ಮತಗಟ್ಟೆಗಳಿಗೆ ಹೆಚ್ಚುವರಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗುತ್ತಿದೆ. ಇದಕ್ಕಾಗಿ ಹೊರ ರಾಜ್ಯಗಳಿಂದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಶಸ್ತ್ರ ಸಜ್ಜಿತ ಯೋಧರನ್ನು ಕೊಡಗು ಜಿಲ್ಲೆಗೆ ಕರೆಸಲಾಗುತ್ತಿದೆ. ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರ ಹಾಗೂ ಕೆಲವು ಚೆಕ್ ಪೋಸ್ಟ್ಗಳಲ್ಲಿಯೂ ಇವರನ್ನು ಕರ್ತವ್ಯಕ್ಕಾಗಿ ನಿಯೋಜಿಸಲಾಗುತ್ತದೆ.
ಭಯಮುಕ್ತ, ಪಾರದರ್ಶಕ ಚುನಾವಣೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.
ಈಗಾಗಲೇ ಅಪರಾಧ ಪ್ರಕರಣದ ಇಬ್ಬರನ್ನು ಗಡಿಪಾರು ಮಾಡಲಾಗಿದ್ದು, ಉಳಿದ 6 ಮಂದಿಯ ಗಡಿಪಾರಿಗೆ ವಿಚಾರಣೆ ನಡೆಯುತ್ತಿದೆ. ಒಟ್ಟು 600 ಮಂದಿಯ ಚಲನವಲನಗಳ ಮೇಲೆ ನಿಗಾ ವಹಿಸಲಾಗಿದೆ. ಜಿಲ್ಲೆಯಾದ್ಯಂತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

*ಅ.11ರಿಂದ ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮ*

ಅಕ್ಟೋಬರ್ 9, 2026

*ಕೊಡವ ತೋಕ್‌ಗೆ ಸಾಂವಿಧಾನಿಕ ರಕ್ಷಣೆ ನೀಡಲು ಆಗ್ರಹ: ಸಿಎನ್‌ಸಿ ಸತ್ಯಾಗ್ರಹ*

ಅಕ್ಟೋಬರ್ 9, 2026

*2027ರ SSLC, ದ್ವಿತೀಯ PUC ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ: ಫೆಬ್ರವರಿ 27ರಿಂದ ಪಿಯುಸಿ, ಮಾರ್ಚ್ 22ರಿಂದ SSLC ಪರೀಕ್ಷೆ ಆರಂಭ*

ಅಕ್ಟೋಬರ್ 9, 2026

*ಕೊಡವ ತೋಕ್‌ಗೆ ಸಾಂವಿಧಾನಿಕ ರಕ್ಷಣೆ ನೀಡಲು ಆಗ್ರಹ: ಸಿಎನ್‌ಸಿ ಸತ್ಯಾಗ್ರಹ*

ಅಕ್ಟೋಬರ್ 9, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಅ. 9: ಕೊಡವರ ಸಾಂಪ್ರದಾಯಿಕ ತೋಕ್‌ಗೆ (ಬಂದೂಕು) ಸಾಂವಿಧಾನಿಕ ಹಾಗೂ ಶಾಸನಬದ್ಧ ರಕ್ಷಣೆ ನೀಡಬೇಕು ಎಂದು…

*2027ರ SSLC, ದ್ವಿತೀಯ PUC ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ: ಫೆಬ್ರವರಿ 27ರಿಂದ ಪಿಯುಸಿ, ಮಾರ್ಚ್ 22ರಿಂದ SSLC ಪರೀಕ್ಷೆ ಆರಂಭ*

ಅಕ್ಟೋಬರ್ 9, 2026

*ರಸ್ತೆ ದಾಟಿದ ಹುಲಿ: ಸಾರ್ವಜನಿಕರಲ್ಲಿ ಆತಂಕ*

ಅಕ್ಟೋಬರ್ 9, 2026

*ಮಡಿಕೇರಿ ದಸರಾ: ವಿವಿಧ ಅಲಂಕಾರ ಸ್ಪರ್ಧೆ ಆಯೋಜನೆ*

ಅಕ್ಟೋಬರ್ 9, 2026

*ಕಾಂಗ್ರೆಸ್ ಸಂಘಟನಾ ಸೃಜನ್ ಅಭಿಯಾನಕ್ಕೆ ವೇಗ: ಮತ ಉಳಿಸಿ, ದೇಶ ಉಳಿಸಿ ಹೋರಾಟ; ಎಸ್‌ಐಆರ್ ಹೆಸರಿನಲ್ಲಿ ಅರ್ಹ ಮತದಾರರನ್ನು ಕೈಬಿಡುವ ಪ್ರಯತ್ನಕ್ಕೆ ಕಾಂಗ್ರೆಸ್ ಅಸಮಾಧಾನ*

ಅಕ್ಟೋಬರ್ 9, 2026

*ಸಮಸ್ತ ಆ್ಯಪ್ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ*

ಅಕ್ಟೋಬರ್ 9, 2026

*ಕೊಡಗು ಸುರಕ್ಷ ಆಂದೋಲನ ಸಮಿತಿ ಜಾಗೃತಿ ಜಾಥಾ ಸಮಾರೋಪ; ಅಕ್ರಮ ವಲಸಿಗರನ್ನು ಪತ್ತೆಹಚ್ಚಿ ಗಡಿಪಾರು ಮಾಡಲು ಆಗ್ರಹ*

ಅಕ್ಟೋಬರ್ 9, 2026

*ಹಳ್ಳದಿಣ್ಣೆ ಗ್ರಾಮದ ರಸ್ತೆ ಅಭಿವೃದ್ಧಿಗೆ ₹25 ಲಕ್ಷ ಅನುದಾನ*

ಅಕ್ಟೋಬರ್ 9, 2026

*ಅ.13 ಮತ್ತು 14ರಂದು ಕಾಫಿ ದಸರಾ ಸಂಭ್ರಮ: 50 ಮಳಿಗೆಗಳಲ್ಲಿ ಕಾಫಿ ಘಮ, 13 ಸಾಧಕರಿಗೆ ಸನ್ಮಾನ*

ಅಕ್ಟೋಬರ್ 9, 2026

*ಪ್ರಜಾಪ್ರಭುತ್ವದ ಆಶಯ ಅರಿಯಲು ಯುವಸಂಸತ್ತು ಸಹಕಾರಿ: ಪ್ರೊ. ಅಶೋಕ ಸಂಗಪ್ಪ ಆಲೂರ*

ಅಕ್ಟೋಬರ್ 9, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.