ಮಡಿಕೇರಿ ಏ.3 : ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಕರ್ನಾಟಕ ಶಾಸ್ತ್ರೀಯ ನೃತ್ಯ ಮತ್ತು ತಾಳವಾದ್ಯ ವಿಭಾಗದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಮಡಿಕೇರಿಯ ಎಸ್.ಪಿ.ಮೌಲ್ಯ ಪುಟ್ಟಯ್ಯ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಇವಳು ಮಡಿಕೇರಿಯ ಕೇಕಡ ಪಳಂಗಪ್ಪ (ಪ್ರವೀಣ್) ಹಾಗೂ ಮಾಲ ದಂಪತಿಗಳ ಪುತ್ರಿಯಾಗಿದ್ದು, ನಾಟ್ಯನಿಕೇತನ ನೃತ್ಯಾಲಯದ ವಿದುಷಿ ಪೂರ್ಣಿಮ ಅವರ ಬಳಿ ನೃತ್ಯಾಭ್ಯಾಸ ಮಾಡುತ್ತಿದ್ದಾಳೆ.







