ಸುಂಟಿಕೊಪ್ಪ ಏ.11: ಹಳೆಯ ವಿದ್ಯಾರ್ಥಿಗಳ ಗೆಳೆಯರ ಬಳಗ ಗುಂಡುಗುಟ್ಟಿ ಹಾಗೂ ಪನ್ಯ ಎಫ್.ಸಿ. ವತಿಯಿಂದ ಗುಂಡುಗುಟ್ಟಿ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಪ್ರಥಮ ವರ್ಷದ ವಾಲಿಬಾಲ್ ಪಂದ್ಯಾವಳಿಯಲ್ಲಿ ಮಹೇಶ್ ಪ್ರೆಂಡ್ಸ್ ತಂಡ ಚಾಂಪಿಯನ್‍ಶಿಪ್ ಪಡೆದುಕೊಂಡರೆ, ದ್ವಿತೀಯ ಮಹೇಶ್ ಪ್ರೆಂಡ್ಸ್ ‘ಬಿ’ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಮುಕ್ತ ವಾಲಿಬಾಲ್ ಪಂದ್ಯಾವಳಿಯಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಒಟ್ಟು 16 ತಂಡಗಳು ಪಾಲ್ಗೊಂಡಿದ್ದವು.
ಗುಂಡುಗುಟ್ಟಿ ಶಾಲೆಯ ಹಳೆಯ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು, ಹಳೆಯ ನೆನಪುಗಳನ್ನು ಹಂಚಿಕೊಂಡು ಸ್ನೇಹ, ಪ್ರೀತಿ, ಸೌಹಾರ್ದತೆಗೆ ನಾಂದಿ ಹಾಡಿದರು.
ಹಳೆಯ ವಿದ್ಯಾರ್ಥಿ ಗೆಳೆಯ ಬಳಗದ ಅಧ್ಯಕ್ಷ ವಿಶ್ವ, ಉಪಾಧ್ಯಕ್ಷರುಗಳಾದ ಮಂಜು, ಶ್ರೀನಿವಾಸ್, ಲಿಖಿತ್, ಕಾರ್ಯದರ್ಶಿ ಕೇಶವ, ಖಜಾಂಚಿ ತೇಜಸ್, ಸಂಘಟನಾ ಕಾರ್ಯದರ್ಶಿಗಳಾದ ಸುಜಿ, ಪೊನ್ನಪ್ಪ, ರಮೇಶ್, ಗಣೇಶ್ ಪದಾಧಿಕಾರಿಗಳಾದ ಅರುಣ, ಅಣ್ಣಪ್ಪ, ಕಾರ್ತಿಕ್, ಕಿರಣ್‍ಕುಮಾರ್, ಕೊರಗಪ್ಪ (ಅರುಣ), ಗಣೇಶ್, ಪ್ರಜ್ವಲ್, ಪ್ರವೀಣ ಹಾಗೂ ಮತ್ತಿತರರ ಪದಾಧಿಕಾರಿಗಳು ಉಪಸ್ಥಿತರಿದ್ದರು.







