ಮಡಿಕೇರಿ ಏ.13 : ವಿಧಾನಸಭಾ ಚುನಾವಣೆ ಸಂಬಂಧ ಕೊಡಗು ಜಿಲ್ಲೆಗೆ ವೆಚ್ಚ ವೀಕ್ಷಕರಾಗಿ ನೇಮಕವಾಗಿರುವ ಶಲಭ್ ಕಟಿಯಾರ್ (ಐಆರ್‍ಎಸ್) (ಸಿ ಮತ್ತು ಸಿಇ) ಅವರು ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಕಚೇರಿಗೆ ಭೇಟಿ ನೀಡಿ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರಿಂದ ಹಲವು ಮಾಹಿತಿ ಪಡೆದರು.
ವೆಚ್ಚಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ನಗರದ ಜಿಲ್ಲಾಡಳಿತ ಭವನದ ಮೊದಲ ಮಹಡಿಯಲ್ಲಿರುವ ಕಚೇರಿಗೆ ಬೆಳಗ್ಗೆ 11 ರಿಂದ ಮಧ್ಯಾಹ್ನ 12 ಗಂಟೆ ವರೆಗೆ ಭೇಟಿ ನೀಡಿ ಮಾಹಿತಿ ನೀಡಬಹುದಾಗಿದೆ. ಅಥವಾ ಸಂಚಾರಿ ದೂರವಾಣಿ ಸಂಖ್ಯೆ 9353190721 ಸಂಪರ್ಕಿಸಬಹದಾಗಿದೆ ಎಂದು ವೆಚ್ಚ ವೀಕ್ಷಕರ ಸಂಪರ್ಕ ಅಧಿಕಾರಿ ಎಚ್.ಸಿ.ಗಿರೀಶ್ ಅವರು ತಿಳಿಸಿದ್ದಾರೆ.







