Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕಸಾಪ ಸಂತಾಪ*
  • *ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ಮತ್ತು ಪರಿವಾರ ದೇವರುಗಳ 58ನೇ ವರ್ಷದ ತೆರೆ ಮಹೋತ್ಸವ*
  • *ಸುಗ್ಗಿಕಟ್ಟೆಗಳ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ಡಾ.ಮಂತರ್ ಗೌಡ*
  • *ಕೊಡಗು ಜಿಲ್ಲಾ ಸಾಹಿತ್ಯ ಸಮ್ಮೇಳನ ಪೂರ್ವಬಾವಿ ಸಭೆ : ಬಿ.ಸಿ.ದಿನೇಶ್ ಗೆ ಅಭಿನಂದನೆ*
  • *ವಿಶ್ವ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನ : ಮಾ.21 ರಂದು ಸಿಎನ್‌ಸಿಯಿಂದ “ವಿಚಾರ ಸಂಕಿರಣ”*
  • *ಕೊಡಗಿನಲ್ಲಿ ಮೊದಲ ಬಾರಿಗೆ ವಿಶೇಷ ಚೇತನರಿಗಾಗಿ ರಾಜ್ಯಮಟ್ಟದ ಕ್ರೀಡಾಕೂಟ* 
  • *ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ* 
  • *ಮಾ.16 ರಂದು “ಸ್ವಚ್ಛ ಕೊಡಗು, ಸುಂದರ ಕೊಡಗು” ಉದ್ಘಾಟನಾ ಕಾರ್ಯಕ್ರಮ*
  • *ಕುಶಾಲನಗರ ಸಂಚಾರ ಠಾಣೆಯ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ*
  • *ಮಡಿಕೇರಿ ಘಟಕದ ನೂತನ ಡಿಪೋ ವ್ಯವಸ್ಥಾಪಕರನ್ನು ಭೇಟಿಯಾದ ಎಐಟಿಯುಸಿ ಸಂಘಟನೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಯುವ ಜನರಲ್ಲಿ ಮತದಾನದ ಅರಿವು : ಗಮನ ಸೆಳೆದ ಬೈಕ್ ಜಾಥ : ಮತದಾನ ಪ್ರತಿಯೊಬ್ಬರ ಹಕ್ಕು : ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಯುವ ಜನರಲ್ಲಿ ಮತದಾನದ ಅರಿವು : ಗಮನ ಸೆಳೆದ ಬೈಕ್ ಜಾಥ : ಮತದಾನ ಪ್ರತಿಯೊಬ್ಬರ ಹಕ್ಕು : ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ*

ಏಪ್ರಿಲ್ 16, 20232 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಏ.16 : ಮತದಾನದ ಮಹತ್ವ ಮತ್ತು ಮತದಾನ ಮಾಡಿ ಎಂಬ ಜಾಗೃತಿ ಸಂದೇಶದ ಬೈಕ್ ಜಾಥಾ ಮಡಿಕೇರಿಯಲ್ಲಿ ಜನಮನ ಸೆಳೆಯಿತು.
ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿಯ ವತಿಯಿಂದ (ಸ್ವೀಪ್) ಮತ್ತು ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿದ್ದ ಬೈಕ್ ಜಾಥಾಕ್ಕೆ ನಗರದ ಬನ್ನಿಮಂಟಪದಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಹಸಿರುನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಜಿಲ್ಲಾಧಿಕಾರಿ ಸತೀಶ್ ಅವರ ಪತ್ನಿ ರೂಪಶ್ರೀ ಅವರೊಂದಿಗೆ ಬೈಕ್ ಜಾಥಾದಲ್ಲಿ ಪಾಲ್ಗೊಂಡರೆ, ಜಿ.ಪಂ.ಸಿಇಒ ಮತ್ತು ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಎಸ್.ಆಕಾಶ್ ಬುಲೆಟ್ ಬೈಕ್ ನಲ್ಲಿ ಬಂದು ಗಮನ ಸೆಳೆದರು.
ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತ, ಮಂಗೇರಿರ ಮುತ್ತಣ್ಣ ವೃತ್ತ, ಜನರಲ್ ತಿಮ್ಮಯ್ಯ ವೃತ್ತ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತಕ್ಕಾಗಿ ಸಾಗಿದ ಬೈಕ್ ಜಾಥಾ ರಾಜಾಸೀಟು ಉದ್ಯಾನವನದಲ್ಲಿ ಕೊನೆಗೊಂಡಿತು.
ರಾಜಾಸೀಟ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್, ಮತದಾನ ಪ್ರತಿಯೊಬ್ಬರ ಹಕ್ಕಾಗಿದೆ. ಯುವಜನತೆ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಲು ಪ್ರೋತ್ಸಾಹ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ 18 ವರ್ಷ ತುಂಬಿದ ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಯುವಕ, ಯುವತಿಯರಿಗೆ ಮತದಾನ ಮಾಡಿದ ಬಳಿಕ ಮೊಬೈಲ್ ಸೆಲ್ಫಿ ಸ್ಪರ್ಧೆ ಯನ್ನು ಮತಗಟ್ಟೆಯ ಹೊರ ಆವರಣದಲ್ಲಿ ನಡೆಸಲು ಯೋಜನೆ ರೂಪಿಸಲಾಗುತ್ತಿದೆ. ಸಖಿ ಬೂತ್, ಯಂಗ್ ಬೂತ್ ಗಳು ಕೂಡ ಈ ಬಾರಿಯ ವಿಶೇಷವಾಗಿದೆ ಎಂದರು.
ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಎಸ್.ಆಕಾಶ್ ಮಾತನಾಡಿ, ಮತದಾನದ ಜಾಗ್ರತಿ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಆಯೋಜಿತವಾಗಿದೆ. ಏಪ್ರಿಲ್ 30 ರಂದು ಮಡಿಕೇರಿಯಲ್ಲಿ ಮತದಾನ ಮಹತ್ವ ಸಾರುವ ರಂಗೋಲಿ ಸ್ಪರ್ಧೆ ಮತ್ತು ಮೊಬೈಲ್ ಲೈಟ್ ನಲ್ಲಿ ನಾನು ಮತಹಾಕುವೆ ಎಂಬ ಅಭಿಯಾನವೂ ವಿಭಿನ್ನವಾಗಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಕೊಡಗು ಜಿಲ್ಲಾ ಮತದಾನದ ರಾಯಭಾರಿ ಕೆ.ರವಿಮುತ್ತಪ್ಪ ಮಾತನಾಡಿ, ತಾನು 20 ವರ್ಷಗಳಿಂದ 39 ಮೃತದೇಹಗಳನ್ನು ನದಿಯಾಳದಿಂದ ಹೊರತೆಗೆದು ಯಾವುದೇ ಹಣ ಪಡೆಯದೇ ಮೃತರ ಕುಟುಂಬಸ್ಥರಿಗೆ ಒಪ್ಪಿಸುವ ಕಾಯಕದಲ್ಲಿ ನಿರತನಾಗಿದ್ದೇನೆ. ತನ್ನ ಸೇವೆಯನ್ನು ಕೊಡಗು ಜಿಲ್ಲಾಡಳಿತ ಗುರುತಿಸಿ ಮತದಾನದ ರಾಯಭಾರಿಯನ್ನಾಗಿ ಮಾಡಿದ್ದು ಸಂತೋಷ ತಂದಿದೆ ಎಂದರು. ಪ್ರತಿಯೊಬ್ಬರೂ ನೀರ್ಭಿತಿಯಿಂದ ಮತ ಹಾಕುವಂತೆ ಅವರು ಕರೆ ನೀಡಿದರು.
ಚುನಾವಣಾ ರಾಯಭಾರಿ ವಿಶೇಷ ಚೇತನ ಮಹಿಳೆ ಎಸ್.ಕೆ.ಈಶ್ವರಿ ಮಾತನಾಡಿ, ಮತದಾನದ ಬಗ್ಗೆ ಕೆಲವರಲ್ಲಿ ನಿರ್ಲಕ್ಷ್ಯ ತೊರಬಾರದು. ಮತದಾನ ಮಾಡುವ ಮೂಲಕ ಪ್ರಜೆಯಾಗಿರುವುದನ್ನು ಪ್ರತಿಯೊಬ್ಬರೂ ಸಾಬೀತು ಪಡಿಸಬೇಕು ಎಂದು ಮನವಿ ಮಾಡಿದರು.
ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ. ಬೇಬಿ ಮ್ಯಾಥ್ಯು ಮಾತನಾಡಿ, ಬಡವರ್ಗದವರು ತಮ್ಮ ಹಕ್ಕು ಚಲಾಯಿಸಲು ಸಂಭ್ರಮದಿoದ ಮತಗಟ್ಟೆಗೆ ಬರುತ್ತಾರೆ. ಆದರೆ ಶ್ರೀಮಂತ ವರ್ಗದ ಅನೇಕರು ಮತದಾನದ ಬಗ್ಗೆ ನಿರಾಸಕ್ತಿ ತೋರುವ ಬೆಳವಣಿಗೆ ಸರಿಯಲ್ಲ ಎಂದು ಹೇಳಿದರು.
ದಿಶ ಪೌಂಡೇಶನ್ ನ ಅಜಯ್ ಸೂದ್ ಮಾತನಾಡಿ, ವಿಶೇಷ ಚೇತನರೂ ಮತದಾನದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಚುನಾವಣಾ ಆಯೋಗ ಈ ವರ್ಗದವರಿಗೆ ಮತ ಚಲಾಯಿಸಲು ಎಲ್ಲಾ ರೀತಿಯ ಅನುಕೂಲತೆ ಕಲ್ಪಿಸಿದೆ, ಇದರ ಸದುಪಯೋಗವನ್ನು ಅರ್ಹರು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ನ ಜಂಟಿ ಕಾರ್ಯದರ್ಶಿ ವಿನಾಯಕ್ ಎಸ್.ಎ. ತೇಜರಾಜ್, ರಾಜು, ಸುಮೇಶ್ ರಾಮನ್, ವಿಶ್ವ, ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ, ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ., ಕಾರ್ಯದರ್ಶಿ ರವಿಕುಮಾರ್, ಕೌಸರ್, ರೋಟರಿ ವುಡ್ಸ್ ನಿರ್ದೇಶಕ ವಿಕ್ರಂ ಜಾದೂಗಾರ್, ಲೋಕೇಶ್, ವಿವೇಕಾನಂದ ಯೂತ್ ಮೂವ್‌ಮೆಂಟ್ ನಿರ್ದೇಶಕ ಡಾ.ಪ್ರಶಾಂತ್, ಸಂಚಾಲಕ ಅಂಕಾಚಾರಿ, ಯೂತ್ ರೆಡ್ ಕ್ರಾಸ್ ಉಪಾಧ್ಯಕ್ಷೆ ಡಾ.ಅನುಶ್ರೀ , ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಸೇರಿದಂತೆ ವಿವಿಧ ಸಂಘಸoಸ್ಥೆಗಳ ಪ್ರಮುಖರು ಹಾಜರಿದ್ದರು.
ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಂ.ಧನoಜಯ್ ಸ್ವಾಗತಿಸಿದ ಕಾರ್ಯಕ್ರಮವನ್ನು ಅನಿಲ್ ಎಚ್.ಟಿ. ನಿರೂಪಿಸಿದರು. ರಾಜಾಸೀಟ್ ನಲ್ಲಿ ನಾನು ಮತದಾನ ಮಾಡುತ್ತೇನೆ ಎಂಬ ಘೋಷಣೆಯನ್ನೂ ಕೂಗಲಾಯಿತು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕಸಾಪ ಸಂತಾಪ*

ಮಾರ್ಚ್ 15, 2026

*ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ಮತ್ತು ಪರಿವಾರ ದೇವರುಗಳ 58ನೇ ವರ್ಷದ ತೆರೆ ಮಹೋತ್ಸವ*

ಮಾರ್ಚ್ 15, 2026

*ಸುಗ್ಗಿಕಟ್ಟೆಗಳ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ಡಾ.ಮಂತರ್ ಗೌಡ*

ಮಾರ್ಚ್ 15, 2026

*ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ಮತ್ತು ಪರಿವಾರ ದೇವರುಗಳ 58ನೇ ವರ್ಷದ ತೆರೆ ಮಹೋತ್ಸವ*

ಮಾರ್ಚ್ 15, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಸುಂಟಿಕೊಪ್ಪ NEWS DESK ಮಾ.15 : ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ಮತ್ತು ಪರಿವಾರ ದೇವರುಗಳ 58ನೇ ವರ್ಷದ ತೆರೆ…

*ಸುಗ್ಗಿಕಟ್ಟೆಗಳ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ಡಾ.ಮಂತರ್ ಗೌಡ*

ಮಾರ್ಚ್ 15, 2026

*ಕೊಡಗು ಜಿಲ್ಲಾ ಸಾಹಿತ್ಯ ಸಮ್ಮೇಳನ ಪೂರ್ವಬಾವಿ ಸಭೆ : ಬಿ.ಸಿ.ದಿನೇಶ್ ಗೆ ಅಭಿನಂದನೆ*

ಮಾರ್ಚ್ 15, 2026

*ವಿಶ್ವ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನ : ಮಾ.21 ರಂದು ಸಿಎನ್‌ಸಿಯಿಂದ “ವಿಚಾರ ಸಂಕಿರಣ”*

ಮಾರ್ಚ್ 15, 2026

*ಕೊಡಗಿನಲ್ಲಿ ಮೊದಲ ಬಾರಿಗೆ ವಿಶೇಷ ಚೇತನರಿಗಾಗಿ ರಾಜ್ಯಮಟ್ಟದ ಕ್ರೀಡಾಕೂಟ* 

ಮಾರ್ಚ್ 15, 2026

*ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ* 

ಮಾರ್ಚ್ 15, 2026

*ಮಾ.16 ರಂದು “ಸ್ವಚ್ಛ ಕೊಡಗು, ಸುಂದರ ಕೊಡಗು” ಉದ್ಘಾಟನಾ ಕಾರ್ಯಕ್ರಮ*

ಮಾರ್ಚ್ 15, 2026

*ಕುಶಾಲನಗರ ಸಂಚಾರ ಠಾಣೆಯ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ*

ಮಾರ್ಚ್ 15, 2026

*ಮಡಿಕೇರಿ ಘಟಕದ ನೂತನ ಡಿಪೋ ವ್ಯವಸ್ಥಾಪಕರನ್ನು ಭೇಟಿಯಾದ ಎಐಟಿಯುಸಿ ಸಂಘಟನೆ*

ಮಾರ್ಚ್ 15, 2026

*ಅಂತರಾಷ್ಟ್ರೀಯ ಥೈಲ್ಯಾಂಡ್ ಮಾಸ್ಟರ್ಸ್ ಅಥ್ಲೆಟಿಕ್ ನಲ್ಲಿ ಚಿನ್ನ ಮತ್ತು ಬೆಳ್ಳಿ ಗೆದ್ದ ಬಂಗಾಡುಮನೆ ವಸಂತಿ*

ಮಾರ್ಚ್ 15, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.