ಮಡಿಕೇರಿ ಏ.26 : ಕಾಟಕೇರಿ ಕೂರನಬಾಣೆಯ ಕೊರಗಜ್ಜ ದೈವಸ್ಥಾನದಲ್ಲಿ ಮೇ 3 ಮತ್ತು 4 ರಂದು ಶ್ರೀ ದೈವಗಳ ನೇಮೋತ್ಸವ ನಡೆಯಲಿದೆ.
ಮೇ 3 ರಂದು ಸಂಜೆ 4 ಗಂಟೆಗೆ ದೈವಗಳ ಭಂಡಾರ ತೆಗೆಯುವುದು, ಸಂಜೆ 7 ಗಂಟೆಗೆ ಮಂತ್ರವಾದಿ ಗುಳಿಗ ದೈವದ ನೇಮ, ರಾತ್ರಿ 9 ಗಂಟೆಗೆ ಪ್ರಸಾದ ವಿತರಣೆ ಹಾಗೂ 10 ಗಂಟೆಗೆ ಪಾಷಾಣ ಮೂರ್ತಿ ಹಾಗೂ ಕೊರತಿ ದೈವದ ನೇಮ ನೆರವೇರಲಿದೆ.
ಮೇ 4 ರಂದು ಮುಂಜಾನೆ 2 ಗಂಟೆಗೆ ಕೊರಗಜ್ಜ ದೈವದ ನೇಮ, ಬೆಳಿಗ್ಗೆ 8 ಗಂಟೆಗೆ ಧರ್ಮದೈವದ ನೇಮೋತ್ಸವ ಜರುಗಲಿದ್ದು, ಮಧ್ಯಾಹ್ನ 1 ಗಂಟೆಗೆ ಪ್ರಸಾದ ವಿತರಣೆ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ತರವಾಡು ಮನೆಯ ಪ್ರಮುಖರಾದ ಬಿ.ಸಿ.ಗಿರಿಜ ಹಾಗೂ ಕುಟುಂಬಸ್ಥರು ಮನವಿ ಮಾಡಿದ್ದಾರೆ.








