Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಹುದುಗೂರು : ಸಾಮಾಜಿಕ ಅರಣ್ಯ ವಲಯದ ಸಸ್ಯಕ್ಷೇತ್ರದಲ್ಲಿ ಸಸಿಗಳ ವಿತರಣೆ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಹುದುಗೂರು : ಸಾಮಾಜಿಕ ಅರಣ್ಯ ವಲಯದ ಸಸ್ಯಕ್ಷೇತ್ರದಲ್ಲಿ ಸಸಿಗಳ ವಿತರಣೆ

ಮೇ 15, 20232 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ ಮೇ 15 : ಬದಲಾಗುತ್ತಿರುವ ಹವಾಮಾನ, ಜಾಗತಿಕ ತಾಪಮಾನ ಏರಿಕೆ ಪ್ರಪಂಚದಾದ್ಯಂತ ಎಲ್ಲ ರಾಷ್ಟ್ರಗಳು ಎದುರಿಸುತ್ತಿರುವ ಸವಾಲಾಗಿದೆ. ಈ ಜಾಗತಿಕ ಗಂಡಾಂತರ ತಡೆಗಟ್ಟಲು ಹಸಿರು ಪ್ರೀತಿಯನ್ನು ಜಾಗೃತಗೊಳಿಸಿ, ಜನರ ಬೇಡಿಕೆಗೆ ಅನುಸಾರವಾಗಿ ಸಸಿಗಳನ್ನು ಪೂರೈಸುವ ಜವಾಬ್ದಾರಿಯಿಂದ ವಿವಿಧ ಯೋಜನೆಗಳಡಿಯಲ್ಲಿ ‘ಸೋಮವಾರಪೇಟೆ ಸಾಮಾಜಿಕ ಅರಣ್ಯ ವಲಯದಿಂದ’ ಸೋಮವಾರಪೇಟೆ-ಕುಶಾಲನಗರ ರಸ್ತೆಯಲ್ಲಿ ಹುದುಗೂರು ಗ್ರಾಮದಲ್ಲಿರುವ ಸಾಮಾಜಿಕ ಅರಣ್ಯ ವಲಯದ ಸಸ್ಯಕ್ಷೇತ್ರದಲ್ಲಿ 50 ವಿವಿಧ ಸಸಿಗಳನ್ನು ಬೆಳೆಸಲಾಗಿದೆ.
ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಉದ್ಯೋಗ ಚೀಟಿ ಹೊಂದಿರುವ ಬಿಪಿಎಲ್ ಕಾರ್ಡುದಾರರು ಈ ಯೋಜನೆಯಲ್ಲಿ ಉಚಿತವಾಗಿ ಸಸಿಗಳನ್ನು ಪಡೆಯಬಹುದು ಹಾಗೂ ಇತರೆ ಯೋಜನೆಗಳಲ್ಲಿ ಸರ್ಕಾರ ನಿಗಧಿಪಡಿಸಿರುವ 6*9 ಅಳತೆಯ ಚೀಲದ ಸಸಿ ಒಂದಕ್ಕೆ ರೂ.7 ಹಾಗೂ 8*12 ಅಳತೆಯ ಚೀಲದ ಸಸಿ ಒಂದಕ್ಕೆ ರೂ.23.60 ಗಳನ್ನು ಪಾವತಿಸಿ ಪಡೆದುಕೊಳ್ಳಬಹುದು.
ಹುದುಗೂರು ಸಸ್ಯಕ್ಷೇತ್ರದಲ್ಲಿ ನೇರಳೆ, ಮಹಾಗನಿ, ನೆಲ್ಲಿ, ಸೀತಾಫಲ, ಜಂಬು ನೇರಳೆ, ಮರಸೇಬು, ಆಮೆಹಣ್ಣು, ಬಿಳಿ ಧೂಪ, ಸಂಪಿಗೆ, ಹಿಪ್ಪೆ, ರುದ್ರಾಕ್ಷಿ, ಬಿದಿರು, ಮೊಟ್ಟೆ ಹಣ್ಣು, ಕಾಚಂಪುಳಿ, ಶಿವನಿ, ಸೀಬೆ, ವಾಟೆ ಹುಳಿ, ಕಹಿಬೇವು, ಸೀಮರೂಬ, ಬಿಲ್ವಪತ್ರೆ, ಲಿಚ್ಛಿ, ನಿಂಬೆ, ಗೇರು, ಕಾಡು ಬಾದಾಮಿ, ನಕ್ಷತ್ರ ಹಣ್ಣು, ಶ್ರೀಗಂಧ, ದಾಳಿಂಬೆ, ಕೂಳಿ, ಲಾವಂಚ, ಅಗಸೆ, ರಕ್ತಚಂದನ, ಪಾರಿಜಾತ, ಹೊನ್ನೆ, ಹೊಳೆ ದಾಸವಾಳ, ಚಕ್ಕೆ, ಕಹಿ ಹುಳಿ, ಮುಳ್ಳು ಸಂಪಿಗೆ, ದೊಡ್ಡ ಪತ್ರೆ, ಬುಗುರಿ, ನೋನಿ, ತೇಗ, ಹೆಬ್ಬೇವು, ಇನ್ಸುಲಿನ್, ಹಲಸು, ಹೆಬ್ಬಲಸು, ಸಿಲ್ವರ್, ಚಕ್ರಮುನಿ, ಅಮೃತಬಳ್ಳಿ, ಬೆಣ್ಣೆ ಹಣ್ಣು, ಅಮಟೆ, ಅರಳಿ ಹಾಗೂ ಪಲಾವ್ ಎಲೆ.
ಕೊಡಗಿನಲ್ಲಿ ನಶಿಸುತ್ತಿರುವ ಕಾಡು ಜಾತಿಯ ಹಣ್ಣುಗಳ ಸಸಿಗಳು ಹಾಗೂ ಪ್ರಥಮ ಬಾರಿಗೆ ಜಾನುವಾರಿಗೆ ಉತ್ತಮ ಮೇವಿನ ಬೆಳೆಯಾದ ‘ಅಗಸೆ’ ಸಸಿಗಳನ್ನು ಮತ್ತು ಮಣ್ಣಿನ ಸವಕಳಿ ತಡೆಯಲು ನೆಡಬಹುದಾದ ಲಾವಂಚ ಸಸಿಗಳು ಹಾಗೂ ಔಷಧೀಯ ಸಸಿಗಳನ್ನು ಬೆಳೆದಿರುವುದು ವಿಶೇಷ. ಅಪರೂಪವಾದ ಪಾರಿಜಾತ ಸಸಿಗಳು ಸಹ ಲಭ್ಯವಿರುತ್ತದೆ.
ಸಸಿಗಳನ್ನು ಪಡೆಯಲು ಪಹಣಿ ಪತ್ರ(ಆರ್‍ಟಿಸಿ), ಬಿಪಿಎಲ್ ಕಾರ್ಡು(ಮನರೇಗಾ ಯೋಜನೆಗೆ ಮಾತ್ರ), ಉದ್ಯೋಗ ಚೀಟಿ(ಮನರೇಗಾ ಯೋಜನೆಗೆ ಮಾತ್ರ), ಆಧಾರ್ ಕಾರ್ಡು ಒದಗಿಸಬೇಕು. ಹೆಚ್ಚಿನ ಮಾಹಿತಿಗೆ ಫಿರೋಜ್ ಖಾನ್ ಎಸ್.ಕೆ., ಉಪ ವಲಯ ಅರಣ್ಯಾಧಿಕಾರಿಗಳು 9483646101, ಭವ್ಯ ಸಿ.ಕೆ., ಉಪ ವಲಯ ಅರಣ್ಯಾಧಿಕಾರಿಗಳು 9008994572, ಅನಿಲ್ ಕುಮಾರ್ ಕೆ.ಬಿ., ಗಸ್ತು ಅರಣ್ಯ ಪಾಲಕರು 9482108007, ಶೀಥಲ್ ಪಿ.ಎಲ್., ತಾಂತ್ರಿಕ ಸಹಾಯಕರು, ಮನರೇಗಾ (ಅರಣ್ಯ) 8861340218 ನ್ನು ಸಂಪರ್ಕಿಸಬಹುದು ಎಂದು ಸೋಮವಾರಪೇಟೆ ಸಾಮಾಜಿಕ ಅರಣ್ಯ ವಲಯ ಅರಣ್ಯಾಧಿಕಾರಿ ಅವರು ತಿಳಿಸಿದ್ದಾರೆ.

Follow us Follow us
Share. WhatsApp Facebook Twitter Email Telegram Copy Link

Related Posts

ಮಂಗಳೂರು ವಲಯದ ಅಂಡರ್-15 ಮಹಿಳಾ ಕ್ರಿಕೆಟ್ ತಂಡಕ್ಕೆ ಪ್ರಗತಿ ಶಾಲೆಯ ಮೂವರು ವಿದ್ಯಾರ್ಥಿನಿಯರು ಆಯ್ಕೆ

ಅಕ್ಟೋಬರ್ 24, 2026

ಕುಶಾಲನಗರ : ಮಳೆಯಿಂದ ಮನೆಗಳಿಗೆ ಹಾನಿ

ಅಕ್ಟೋಬರ್ 24, 2026

ಮಳೆಯಿಂದ ಕೊಡಗಿನ ವಿವಿಧೆಡೆ ಹಾನಿ : ಕುಸಿದು ಬಿದ್ದ ಮನೆಗಳ ಗೋಡೆ, ಮೇಲ್ಛಾವಣಿ, ಕೊಟ್ಟಿಗೆ

ಅಕ್ಟೋಬರ್ 24, 2026

ಕುಶಾಲನಗರ : ಮಳೆಯಿಂದ ಮನೆಗಳಿಗೆ ಹಾನಿ

ಅಕ್ಟೋಬರ್ 24, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಕುಶಾಲನಗರ ಅ.24 NEWS DESK : ಮಳೆಯಿಂದಾಗಿ ಕುಶಾಲನಗರ ವ್ಯಾಪ್ತಿಯಲ್ಲಿ ವಿವಿಧ ಮನೆಗಳಿಗೆ ಹಾನಿಯಾಗಿದೆ. ತಾಲೂಕಿನ ಚಿಕ್ಕ ಅಳುವಾರ ಗ್ರಾಮದ…

ಮಳೆಯಿಂದ ಕೊಡಗಿನ ವಿವಿಧೆಡೆ ಹಾನಿ : ಕುಸಿದು ಬಿದ್ದ ಮನೆಗಳ ಗೋಡೆ, ಮೇಲ್ಛಾವಣಿ, ಕೊಟ್ಟಿಗೆ

ಅಕ್ಟೋಬರ್ 24, 2026

ಮಡಿಕೇರಿಯಲ್ಲಿ ಆರ್‌ಎಸ್‌ಎಸ್ ವಿಜಯದಶಮಿ ಪಥಸಂಚಲನ

ಅಕ್ಟೋಬರ್ 24, 2026

ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಬಂಧ ಸ್ಪರ್ಧೆ: ಜಗದೀಶ್ ಟಿ.ಎ., ಜೆಸಿಂತಾ ಪಿ.ಜೆ. ಪ್ರಥಮ

ಅಕ್ಟೋಬರ್ 24, 2026

ಬೆಳಕುಮಾನಿ ಶಾಲೆಯಲ್ಲಿ ‘ಯೋಗಸಿಂಚನಾ’ ಯೋಜನೆಗೆ ಚಾಲನೆ

ಅಕ್ಟೋಬರ್ 24, 2026

ಬಾಳೆಯಡ ಕಿಶನ್ ಪೂವಯ್ಯ ಅವರಿಗೆ ದಿ. ಬಿ.ಎಸ್. ಗೋಪಾಲಕೃಷ್ಣ ದತ್ತಿ ಪ್ರಶಸ್ತಿ ಪ್ರದಾನ

ಅಕ್ಟೋಬರ್ 24, 2026

ಎಸ್‍ಜಿಎಫ್‍ಐ ರಾಜ್ಯಮಟ್ಟದ ಕ್ರಿಕೆಟ್ ಚಾಂಪಿಯನ್‍ಶಿಪ್‍ಗೆ ಪ್ರಗತಿ ಶಾಲೆಯ ಮೂವರು ವಿದ್ಯಾರ್ಥಿನಿರು ಆಯ್ಕೆ

ಅಕ್ಟೋಬರ್ 24, 2026

ನವೆಂಬರ್‌ನಲ್ಲಿ ಕಾರ್ಯಪ್ಪ ಕಾಲೇಜು ಹಳೆ ವಿದ್ಯಾರ್ಥಿಗಳ ಮಹಾಸಭೆ, ಸಂತೋಷ ಕೂಟ

ಅಕ್ಟೋಬರ್ 24, 2026

ಮಡಿಕೇರಿ ದಸರಾ ವೇದಿಕೆಯಲ್ಲಿ ಗಮನ ಸೆಳೆದ ಸಂಸ್ಕೃತಿ ಸಿರಿ ಟ್ರಸ್ಟ್‌ನ ‘ಮಣಿಕಂಠೋದಯ’ ನೃತ್ಯರೂಪಕ

ಅಕ್ಟೋಬರ್ 24, 2026

ಮಾದಾಪುರದಲ್ಲಿ ಅದ್ದೂರಿಯಾಗಿ 6ನೇ ವರ್ಷದ ಸಾರ್ವಜನಿಕ ಆಯುಧ ಪೂಜೆ ಆಚರಣೆ

ಅಕ್ಟೋಬರ್ 24, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.