Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕುಶಾಲನಗರ ತಾಲೂಕನ್ನು ಬರಪೀಡಿತವೆಂದು ಘೋಷಿಸಲು ಒತ್ತಾಯ*
  • *ವಿರಾಜಪೇಟೆ: ಸೋದರತೆಯ ಸಂಕೇತವನ್ನು ಬಿತ್ತುವ ಹಬ್ಬ ರಕ್ಷಾ ಬಂಧನ ಆಚರಣೆ*
  • *ಪೇರಿಯಂಡ ಪಿ.ಪೆಮ್ಮಯ್ಯ–ಜಿ.ಕೆ.ದೇವಕಿ ಪೆಮ್ಮಯ್ಯ ದತ್ತಿ ಪ್ರಶಸ್ತಿ : ಕೃತಿಗಳ ಆಹ್ವಾನಕ್ಕೆ ಅವಧಿ ವಿಸ್ತರಣೆ*
  • *ಶೇ.100 ಫಲಿತಾಂಶ: ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿಗೆ ಸನ್ಮಾನ*
  • *ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕಾವೇರಿ ಶಾಲಾ ವಿದ್ಯಾರ್ಥಿಗಳ ಅಮೋಘ ಸಾಧನೆ*
  •  *ರೋಟರಿ ವುಡ್ಸ್ ನಿಂದ ರಕ್ಷಾ ಬಂಧನ್ – ನಮ್ಮ ಹಬ್ಬ ನಮ್ಮ ಸೇವಾ ಯೋಜನೆ*
  • *ಕುಶಾಲನಗರ ಬಾಲಕಿಯರ ಪ್ರೌಢಶಾಲಾ ಮಕ್ಕಳಿಗೆ ಲೇಖನ ಸಾಮಾಗ್ರಿ ವಿತರಣೆ : ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುವುದು ಅವಶ್ಯಕ : ಡಾ‌ ಅಚ್ಯುತನ್*
  • *ಕೊಡಗು: ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಮಂಡಳಿ ಸಭೆ*
  • *ಆಧುನೀಕತೆಯ ಭರಾಟೆಯ ದಿನಗಳಲ್ಲಿ ಪ್ರಾಚೀನ  ಸಂಸ್ಕೖತಿ ಮರೆಯದಿರಿ – ಡಾ. ಉದಯಶಂಕರ್ ಕರೆ | ಶೖತಿಲಯ ತಂಡದಿಂದ ರಾಘವೇಂದ್ರ ಆರಾಧನೆಯ ಪ್ರಯುಕ್ತ ದಾಸರಕೀತ೯ನೆ*
  • *ವಿವಿಧೆಡೆ ರಾಖಿ ಕಟ್ಟಿದ  ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಜೂ.12 ರಿಂದ ಗ್ರಾ.ಪಂ.ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಮೀಸಲಾತಿ ಸಭೆ : ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮಾಹಿತಿ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಜೂ.12 ರಿಂದ ಗ್ರಾ.ಪಂ.ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಮೀಸಲಾತಿ ಸಭೆ : ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮಾಹಿತಿ*

ಜೂನ್ 6, 20234 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜೂ.6 : ಜಿಲ್ಲೆಯ 103 ಗ್ರಾಮ ಪಂಚಾಯಿತಿಗಳ ಎರಡನೇ ಅವಧಿಗೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಮೀಸಲಾತಿ ನಿಗಧಿ ಮಾಡಬೇಕಿದ್ದು, ಆ ನಿಟ್ಟಿನಲ್ಲಿ ಇದೇ ಜೂನ್ 12 ರಿಂದ ಪ್ರಕ್ರಿಯೆಗಳು ಆರಂಭವಾಗಲಿದೆ. ಆದ್ದರಿಂದ ಆಯಾಯ ತಾಲ್ಲೂಕಿಗೆ ಸಂಬಂಧಿಸಿದ ಗ್ರಾ.ಪಂ.ಸದಸ್ಯರು ಮೀಸಲಾತಿ ನಿಗಧಿಪಡಿಸುವ ಸಭೆಗೆ ಆಗಮಿಸುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಕೋರಿದ್ದಾರೆ.
ನಗರದ ಗಾಂಧಿ ಭವನದಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅವರು ಕೊಡಗು ಜಿಲ್ಲೆಯ ಐದು ತಾಲ್ಲೂಕುಗಳ ಎಲ್ಲಾ ಗ್ರಾ.ಪಂ.ಗಳ ಚುನಾಯಿತ ಸದಸ್ಯರುಗಳ ಸಮ್ಮುಖದಲ್ಲಿ ಗ್ರಾ.ಪಂ.ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಮೀಸಲಾತಿ ಸ್ಥಾನ ನಿಗಧಿಪಡಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಆ ದಿಸೆಯಲ್ಲಿ ಜೂ.12 ರಂದು ಬೆಳಗ್ಗೆ 11 ಗಂಟೆಗೆ ವಿರಾಜಪೇಟೆಯ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜು, ಮಧ್ಯಾಹ್ನ 3 ಗಂಟೆಗೆ ಪೊನ್ನಂಪೇಟೆ ತಾಲ್ಲೂಕಿನ ಗೋಣಿಕೊಪ್ಪ ಪರಿಮಳ ಮಂಗಳ ವಿಹಾರದಲ್ಲಿ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ನಿಗಧಿ ಮಾಡುವ ಸಭೆ ನಡೆಯಲಿದೆ.
ಜೂ.13 ರಂದು ಬೆಳಗ್ಗೆ 11 ಗಂಟೆಗೆ ಕುಶಾಲನಗರ ಎಪಿಸಿಎಂಸಿ ಸಭಾಂಗಣ, ಮಧ್ಯಾಹ್ನ 3 ಗಂಟೆಗೆ ಸೋಮವಾರಪೇಟೆಯ ಜಾನಕಿ ಕನ್ವೆನ್ಷನ್ ಹಾಲ್‍ನಲ್ಲಿ ಸಭೆ ನಡೆಯಲಿದೆ. ಜೂನ್, 14 ರಂದು ಬೆಳಗ್ಗೆ 11 ಗಂಟೆಗೆ ನಗರದ ಕೊಡಗು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗ್ರಾ.ಪಂ.ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸ್ಥಾನ ನಿಗಧಿ ಮಾಡುವ ಸಭೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ರಾಜ್ಯ ಚುನಾವಣಾ ಆಯೋಗವು ಕೊಡಗು ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ, ಕುಶಾಲನಗರ ಮತ್ತು ಪೊನ್ನಂಪೇಟೆ ತಾಲ್ಲೂಕಿನ ಗ್ರಾ.ಪಂ.ಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಹುದ್ದೆ/ಸ್ಥಾನದ ವರ್ಗವಾರು ಸಂಖ್ಯೆಯನ್ನು ನಿಗಧಿ ಮಾಡಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾಹಿತಿ ನೀಡಿದರು.
ಮಡಿಕೇರಿ ತಾಲ್ಲೂಕಿನಲ್ಲಿ 26 ಗ್ರಾ.ಪಂ.ಗಳಿದ್ದು, ಅದರಲ್ಲಿ 13 ಮಹಿಳೆಯರಿಗೆ ಮೀಸಲಾಗಿದೆ. ಪರಿಶಿಷ್ಟ ಜಾತಿ 2(ಒಬ್ಬ ಮಹಿಳೆ), ಅನುಸೂಚಿತ ಪಂಗಡ 1 (ಮಹಿಳೆ), ಹಿಂದುಳಿದ ವರ್ಗ(ಅ) 7(4 ಮಹಿಳೆ), ಹಿಂದುಳಿದ ವರ್ಗ(ಬ) 2 (1 ಮಹಿಳೆ), ಸಾಮಾನ್ಯ 14(6 ಮಹಿಳೆ) ನಿಗಧಿ ಮಾಡಲಾಗಿದೆ ಎಂದು ಹೇಳಿದರು.
ವಿರಾಜಪೇಟೆಯಲ್ಲಿ 17 ಗ್ರಾಮ ಪಂಚಾಯಿತಿಗಳಿದ್ದು, 9 ಮಹಿಳೆಯರಿಗೆ ನಿಗಧಿಯಾಗಿದೆ. ಅನುಸೂಚಿತ ಜಾತಿ 2(1 ಮಹಿಳೆ), ಅನುಸೂಚಿತ ಪಂಗಡ 2(1 ಮಹಿಳೆ), ಹಿಂದುಳಿದ ವರ್ಗ 3(2 ಮಹಿಳೆ), ಹಿಂದುಳಿದ ವರ್ಗ(ಬ) 1, ಸಾಮಾನ್ಯ 9(5 ಮಹಿಳೆ) ಮೀಸಲಾಗಿದೆ.
ಸೋಮವಾರಪೇಟೆ ತಾಲ್ಲೂಕಿನಲ್ಲಿ 23 ಗ್ರಾ.ಪಂ.ಗಳಿದ್ದು, ಇದರಲ್ಲಿ 12 ಗ್ರಾ.ಪಂ.ಗಳು ಮಹಿಳೆಯರಿಗೆ ಮೀಸಲಾಗಿದೆ. ಅನುಸೂಚಿತ ಜಾತಿಯಲ್ಲಿ 3(2 ಮಹಿಳೆ), ಅನುಸೂಚಿತ ಪಂಗಡ 1 ಮಹಿಳೆ, ಹಿಂದುಳಿದ(ಅ) 6(3 ಮಹಿಳೆ), ಹಿಂದುಳಿದ(ಬ) 1 ಮಹಿಳೆಯರಿಗೆ, ಸಾಮಾನ್ಯ 12 ರಲ್ಲಿ 5 ಮಹಿಳೆಯರಿಗೆ ಮೀಸಲಾಗಿದೆ.
ಕುಶಾಲನಗರ ತಾಲ್ಲೂಕಿನಲ್ಲಿ 16 ಗ್ರಾ.ಪಂಗಳಿದ್ದು, 8 ಮಹಿಳೆಯರಿಗೆ ಮೀಸಲಾಗಿದೆ. ಅನುಸೂಚಿತ ಜಾತಿ 2(1 ಮಹಿಳೆ), ಅನುಸೂಚಿತ ಪಂಡಗ 1 (1 ಮಹಿಳೆ), ಹಿಂದುಳಿದ ವರ್ಗ (ಅ) 4 (2 ಮಹಿಳೆಗೆ), ಹಿಂದುಳಿದ ವರ್ಗ (ಬ) 1 (1 ಮಹಿಳೆಗೆ) ಸಾಮಾನ್ಯ 8(3 ಮಹಿಳೆ) ಮೀಸಲಾಗಿದೆ.
ಹಾಗೆಯೇ ಪೊನ್ನಂಪೇಟೆ ತಾಲ್ಲೂಕಿನಲ್ಲಿ 21 ಗ್ರಾಮ ಪಂಚಾಯಿತಿಗಳಿದ್ದು, 11 ಮಹಿಳೆಯರಿಗೆ ಮೀಸಲಾಗಿದೆ. ಅನುಸೂಚಿತ ಜಾತಿ 1 (1 ಮಹಿಳೆ), ಅನುಸೂಚಿತ ಪಂಗಡ 5 (3 ಮಹಿಳೆಯರಿಗೆ), ಹಿಂದುಳಿದ ವರ್ಗ (ಅ) 3 (2 ಮಹಿಳೆಯರಿಗೆ), ಹಿಂದುಳಿದ ವರ್ಗ (ಬ) 1, ಸಾಮಾನ್ಯ 11 ರಲ್ಲಿ 5 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮಾಹಿತಿ ನೀಡಿದರು.
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಸಾರ್ವತ್ರಿಕ ಚುನಾವಣೆ ಸಂಬಂಧಿಸಿದಂತೆ ಮತದಾರರ ಪಟ್ಟಿಯನ್ನು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 25 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿದ್ದು, ಹಾಗೆಯೇ 50 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳು ಇವೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಮಡಿಕೇರಿ ತಾಲ್ಲೂಕಿನಲ್ಲಿ 6 ಜಿ.ಪಂ., 12 ತಾ.ಪಂ.ಕ್ಷೇತ್ರಗಳು, ಸೋಮವಾರಪೇಟೆ ತಾಲ್ಲೂಕಿನಲ್ಲಿ 5 ಜಿ.ಪಂ.9 ತಾ.ಪಂ. ಕ್ಷೇತ್ರಗಳು, ವಿರಾಜಪೇಟೆ ತಾಲ್ಲೂಕಿನಲ್ಲಿ 4 ಜಿ.ಪಂ. ಕ್ಷೇತ್ರಗಳಿದ್ದು, 9 ತಾ.ಪಂ. ಕ್ಷೇತ್ರಗಳಿವೆ. ಕುಶಾಲನಗರ ತಾಲ್ಲೂಕಿನಲ್ಲಿ 5 ಜಿ.ಪಂ.ಕ್ಷೇತ್ರಗಳೀದ್ದು, 9 ತಾ.ಪಂ.ಕ್ಷೇತ್ರಗಳಿವೆ. ಪೊನ್ನಂಪೇಟೆ ತಾಲ್ಲೂಕಿನಲ್ಲಿ 5 ಜಿ.ಪಂ. ಮತ್ತು 11 ತಾ.ಪಂ. ಕ್ಷೇತ್ರಗಳಿವೆ ಎಂದು ವಿವರಿಸಿದರು.
ರಾಜ್ಯ ಚುನಾವಣಾ ಆಯೋಗವು ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ಕ್ಷೇತ್ರವಾರು ಮತದಾರರ ಪಟ್ಟಿಯನ್ನು ತಯಾರಿಸಲು ಸೂಚನೆ ನೀಡಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ತಾಲ್ಲೂಕು ಹಾಗೂ ಜಿ.ಪಂ ಚುನಾವಣೆಯು ಏಕಕಾಲದಲ್ಲಿ ನಡೆಯುವುದರಿಂದ ಹಾಗೂ ಒಂದೇ ಮತದಾರರ ಪಟ್ಟಿ ಉಪಯೋಗಿಸುವುದರಿಂದ, ಮತದಾರರ ಪಟ್ಟಿಯು ಸಂಬಂಧಪಟ್ಟ ಉಪ ವಿಭಾಗಾಧಿಕಾರಿಗಳ ಹಾಗೂ ತಾಲ್ಲೂಕು ತಹಶೀಲ್ದಾರರ ಸಹಿ ಪದನಾಮ ಒಳಗೊಂಡಿದೆ ಎಂದು ತಿಳಿಸಿದರು.
ಜಿ.ಪಂ ಯ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳು/ ಪ್ರದೇಶಗಳಲ್ಲಿ ಅಗತ್ಯತೆಗೆ ತಕ್ಕಂತೆ ಕನಿಷ್ಠ 400 ರಿಂದ 1500 ಮತದಾರರು ಇರುವಂತೆ ಮತದಾರರ ಪಟ್ಟಿ ತಯಾರಿಸಲಾಗುತ್ತದೆ ಎಂದರು.
ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ದಿನಾಂಕ:1-01-2023 ರ ಅರ್ಹತಾ ದಿನಾಂಕಕ್ಕೆ ಸಂಬಂಧಿಸಿದಂತೆ ದಿನಾಂಕ:5-01-2023 ರಂದು ಅಂತಿಮ ಮತದಾರರ ಪಟ್ಟಿಯನ್ನು ಹಾಗೂ ದಿನಾಂಕ 20-04-2023ರ ಪೂರಕ ಪಟ್ಟಿಯ ಡಾಟಾವನ್ನು ಅಳವಡಿಸಿಕೊಂಡು ತಯಾರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮಾಹಿತಿ ವಿವರಿಸಿದರು.
ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಕ್ಷೇತ್ರವಾರು ತಯಾರಿಸಲಾದ ಮತದಾರರ ಪಟ್ಟಿಗೆ ನೇರವಾಗಿ ಹೆಸರು ಸೇರ್ಪಡೆ ಮಾಡಲು ಅವಕಾಶವಿರುವುದಿಲ್ಲ. ತಾಲ್ಲೂಕು ಮತ್ತು ಜಿ.ಪಂ ಗಳಿಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನದವರೆಗೂ ವಿಧಾನಸಭಾ ಮತದಾರರ ಪಟ್ಟಿಯ ನೋಂದಣಾಧಿಕಾರಿಗಳು ನಿಯಮಾನುಸಾರ ಅಂಗೀಕರಿಸುವ, ಸೇರ್ಪಡೆ, ಬಿಡತಕ್ಕ ಮತ್ತು ತಿದ್ದುಪಡಿಗಳನ್ನು ಅಳವಡಿಸಿಕೊಂಡು ಜಿಲ್ಲಾ ಮತ್ತು ತಾ.ಪಂ ಕ್ಷೇತ್ರಗಳ ಮತದಾರರ ಪಟ್ಟಿಗೆ ಪೂರಕ ಪಟ್ಟಿಯನ್ನು ಸಿದ್ದಪಡಿಸಿಕೊಳ್ಳಲಾಗುತ್ತದೆ. 1500ಕ್ಕೂ ಹೆಚ್ಚಿಗೆ ಮತದಾರರನ್ನು ಹೊಂದಿರುವ ಮತಗಟ್ಟೆಯನ್ನು ವಿಭಜಿಸಿ ಹೆಚ್ಚುವರಿ (ಂuxiಟiಚಿಡಿಥಿ) ಮತಗಟ್ಟೆಯನ್ನು ರಚಿಸಲಾಗುವುದು.
ಸೇವಾ ಮತದಾರರ ಪಟ್ಟಿ: ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆ) ನಿಯಮಗಳು 1993ರ ನಿಯಮ 42(ಎ) ರಂತೆ ಸೇವಾ ಮತದಾರರು ಅಂಚೆ ಮೂಲಕ ಮತ ನೀಡಲು ಹಕ್ಕುಳ್ಳವರಾಗಿರುತ್ತಾರೆ. ಆದ್ದರಿಂದ ವಿಧಾನಸಭಾ ಕ್ಷೇತ್ರದ ಕೊನೆಯ ಭಾಗವಾದ ಸೇವಾ ಮತದಾರರ ಪಟ್ಟಿಯನ್ನು ಅಳವಡಿಸಿಕೊಂಡು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಸೇವಾ ಮತದಾರರ ಪಟ್ಟಿ ತಯಾರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ತಿಳಿಸಿದರು.
ಮತದಾರರ ಪಟ್ಟಿ ಗಣಕೀಕರಣ ಮತ್ತು ಮುದ್ರಣ ಸಂಬಂಧ ಜೂನ್, 13 ರವರೆಗೆ ಮುದ್ರಕರಿಂದ ಪ್ರಥಮ ಚೆಕ್‍ಲಿಸ್ಟ್ ಪಡೆದುಕೊಂಡು ಕ್ಷೇತ್ರದ ವ್ಯಾಪ್ತಿಯಲ್ಲಿ ಮತ್ತೊಮ್ಮೆ ಪರಿಶೀಲಿಸುವುದು. ಪರಿಶೀಲನೆಯ ನಂತರ ಪ್ರಥಮ ಚೆಕ್‍ಲಿಸ್ಟ್‍ನಲ್ಲಿ ಆಗಬೇಕಾಗಿರುವ ಬದಲಾವಣೆಗಳನ್ನು ಮುದ್ರಕರಿಂದ ಮಾಡಿಸಿ ಕರಡು ಮತದಾರರ ಪಟ್ಟಿಯ ಪ್ರತಿಗಳನ್ನು ಮುದ್ರಕರಿಂದ ಪಡೆದುಕೊಳ್ಳಲಾಗುತ್ತದೆ ಎಂದರು.
ಜಿ.ಪಂ. ಮತ್ತು ತಾ.ಪಂ.ಚುನಾವಣೆ ಸಂಬಂಧ ಜೂ.14 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ. ಜೂ.19 ರಂದು ಆಕ್ಷೇಪಣೆಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ. ಜೂ.22 ರಂದು ಆಕ್ಷೇಪಣೆಗಳನ್ನು ಇತ್ಯರ್ಥ ಪಡಿಸಲು ಕೊನೆಯ ದಿನವಾಗಿದೆ. ಜೂ.25 ರಂದು ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಿದ ನಂತರ ಮುದ್ರಕರಿಂದ ಅಗತ್ಯ ಬದಲಾವಣೆಯನ್ನು ಮಾಡಿಸಿ ಅಂತಿಮ ಚೆಕ್‍ಲಿಸ್ಟ್ ಪಡೆದುಕೊಂಡು ಕ್ಷೇತ್ರದ ವ್ಯಾಪ್ತಿಯಲ್ಲಿ ಮತ್ತೊಮ್ಮೆ ಪರಿಶೀಲಿಸಲಾಗುತ್ತದೆ. ಜೂ.27 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಜ.1, 2024 ರಲ್ಲಿ ಅರ್ಹತಾ ದಿನಾಂಕದಂತೆ ಭಾವಚಿತ್ರವಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಕೈಗೊಳ್ಳಲು ಭಾರತ ಚುನಾವಣಾ ಆಯೋಗವು ವೇಳಾಪಟ್ಟಿ ಹೊರಡಿಸಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಚುನಾವಣಾ ತಹಶೀಲ್ದಾರ್ ಸಿ.ಜಿ. ರವಿಶಂಕರ, ಇತರರು ಇದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕುಶಾಲನಗರ ತಾಲೂಕನ್ನು ಬರಪೀಡಿತವೆಂದು ಘೋಷಿಸಲು ಒತ್ತಾಯ*

ಆಗಷ್ಟ್ 30, 2026

*ವಿರಾಜಪೇಟೆ: ಸೋದರತೆಯ ಸಂಕೇತವನ್ನು ಬಿತ್ತುವ ಹಬ್ಬ ರಕ್ಷಾ ಬಂಧನ ಆಚರಣೆ*

ಆಗಷ್ಟ್ 30, 2026

*ಪೇರಿಯಂಡ ಪಿ.ಪೆಮ್ಮಯ್ಯ–ಜಿ.ಕೆ.ದೇವಕಿ ಪೆಮ್ಮಯ್ಯ ದತ್ತಿ ಪ್ರಶಸ್ತಿ : ಕೃತಿಗಳ ಆಹ್ವಾನಕ್ಕೆ ಅವಧಿ ವಿಸ್ತರಣೆ*

ಆಗಷ್ಟ್ 30, 2026

*ವಿರಾಜಪೇಟೆ: ಸೋದರತೆಯ ಸಂಕೇತವನ್ನು ಬಿತ್ತುವ ಹಬ್ಬ ರಕ್ಷಾ ಬಂಧನ ಆಚರಣೆ*

ಆಗಷ್ಟ್ 30, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ, NEWS DESK ಆ.30 : ರಕ್ಷಾ ಬಂಧನ ಹಬ್ಬವು ಪುರಾಣ ಕಾಲದಿಂದಲೂ ಸಹೋದರತೆಯ ಸಂಕೇತವಾಗಿ ಅಣ್ಣ ತಂಗಿಯ ಮಧುರ…

*ಪೇರಿಯಂಡ ಪಿ.ಪೆಮ್ಮಯ್ಯ–ಜಿ.ಕೆ.ದೇವಕಿ ಪೆಮ್ಮಯ್ಯ ದತ್ತಿ ಪ್ರಶಸ್ತಿ : ಕೃತಿಗಳ ಆಹ್ವಾನಕ್ಕೆ ಅವಧಿ ವಿಸ್ತರಣೆ*

ಆಗಷ್ಟ್ 30, 2026

*ಶೇ.100 ಫಲಿತಾಂಶ: ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿಗೆ ಸನ್ಮಾನ*

ಆಗಷ್ಟ್ 30, 2026

*ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕಾವೇರಿ ಶಾಲಾ ವಿದ್ಯಾರ್ಥಿಗಳ ಅಮೋಘ ಸಾಧನೆ*

ಆಗಷ್ಟ್ 30, 2026

 *ರೋಟರಿ ವುಡ್ಸ್ ನಿಂದ ರಕ್ಷಾ ಬಂಧನ್ – ನಮ್ಮ ಹಬ್ಬ ನಮ್ಮ ಸೇವಾ ಯೋಜನೆ*

ಆಗಷ್ಟ್ 30, 2026

*ಕುಶಾಲನಗರ ಬಾಲಕಿಯರ ಪ್ರೌಢಶಾಲಾ ಮಕ್ಕಳಿಗೆ ಲೇಖನ ಸಾಮಾಗ್ರಿ ವಿತರಣೆ : ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುವುದು ಅವಶ್ಯಕ : ಡಾ‌ ಅಚ್ಯುತನ್*

ಆಗಷ್ಟ್ 30, 2026

*ಕೊಡಗು: ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಮಂಡಳಿ ಸಭೆ*

ಆಗಷ್ಟ್ 30, 2026

*ಆಧುನೀಕತೆಯ ಭರಾಟೆಯ ದಿನಗಳಲ್ಲಿ ಪ್ರಾಚೀನ  ಸಂಸ್ಕೖತಿ ಮರೆಯದಿರಿ – ಡಾ. ಉದಯಶಂಕರ್ ಕರೆ | ಶೖತಿಲಯ ತಂಡದಿಂದ ರಾಘವೇಂದ್ರ ಆರಾಧನೆಯ ಪ್ರಯುಕ್ತ ದಾಸರಕೀತ೯ನೆ*

ಆಗಷ್ಟ್ 30, 2026

*ವಿವಿಧೆಡೆ ರಾಖಿ ಕಟ್ಟಿದ  ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು*

ಆಗಷ್ಟ್ 30, 2026

*ಚೇರಂಬಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ : ಸಂಘಕ್ಕೆ ರೂ.35.20 ಲಕ್ಷ ಲಾಭ : ಪ್ರತಿಭಾವಂತ ವಿದ್ಯಾಥಿಗಳಿಗೆ ಪ್ರೋತ್ಸಾಹ ಧನ ವಿತರಣೆ*

ಆಗಷ್ಟ್ 30, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.