ಮಡಿಕೇರಿ ಜೂ.12 : ಟಾಟಾ ಮೋಟಾರ್ಸಿನ ಅಧಿಕೃತ ಡೀಲರ್ ಗಳಲ್ಲಿ ಒಂದಾಗಿರುವ ಮಂಗಳೂರಿನ ಅರವಿಂದ್ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ವತಿಯಿಂದ ಭಾಗಮಂಡಲದ ಕೆವಿಜಿ ಐಟಿಐನಲ್ಲಿ ದ್ವಿತೀಯ ವರ್ಷದ ಎಲ್ಲಾ ತರಬೇತುದಾರರಿಗೆ ಕ್ಯಾಂಪಸ್ ಸಂದರ್ಶನ ನಡೆಯಿತು.
ಈ ಸಂದರ್ಭ ಮಂಗಳೂರಿನ ಟಾಟಾ ಮೋಟರ್ಸ್ ಲಿಮಿಟೆಡ್ ಪ್ರತಿನಿಧಿಗಳಾದ ಪ್ರಮೋದ್ ಕುಮಾರ್ (Deputy manager H.R), ಐ.ಜಿ.ಶಿವಕುಮಾರ್ (AGM HR and legal), ಪ್ರಾಂಶುಪಾಲ ಕೆ.ವಿ. ಶ್ರೀಕಾಂತ್ ಕಿರಿಯ ತರಬೇತಿ ಅಧಿಕಾರಿ ಕೃಷ್ಣಮೂರ್ತಿ ಮತ್ತು ಪದ್ಮಕುಮಾರ್ ಹಾಜರಿದ್ದರು.







