Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಕಾರ್ಯಪ್ಪ ಕಾಲೇಜಿನಲ್ಲಿ ಪ್ರೊ.ಯಡಪಡಿತ್ತಾಯ ರಿಗೆ ಅಭಿನಂದನೆ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಕಾರ್ಯಪ್ಪ ಕಾಲೇಜಿನಲ್ಲಿ ಪ್ರೊ.ಯಡಪಡಿತ್ತಾಯ ರಿಗೆ ಅಭಿನಂದನೆ

ಜೂನ್ 13, 20232 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ ಜೂ.13 :   ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಾಲ್ಕು ವರ್ಷಗಳ ಕಾಲ ಕುಲಪತಿಯಾಗಿ ಸಮರ್ಥ ಆಡಳಿತ ನೀಡಿ ನಿವೃತ್ತರಾದ ಪ್ರೊ. ಯಡಪಡಿತ್ತಾಯ ಅವರಿಗೆ ನಗರದ ಫೀಲ್ಡ್ ಮಾರ್ಪಲ್ ಕೆ.ಎಂ‌.ಕಾರ್ಯಪ್ಪ ಕಾಲೇಜಿನಲ್ಲಿ ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭ ಕಾಲೇಜಿನ ನಿವೃತ್ತ ಪ್ರಾಂಶುಪಾಲರ, ಮಾಜಿ‌ ಸಿಂಡಿಕೇಟ್ ಸದಸ್ಯೆ ಡಾ. ಪಾರ್ವತಿ ಅಪ್ಪಯ್ಯ ಮಾತನಾಡಿ,  ಪ್ರೊ. ಯಡಪಡಿತ್ತಾಯ  ಅವರು ಅಧ್ಯಾಪಕರಾಗಿ, ಸಂಶೋಧಕರಾಗಿ, ಆಡಳಿತ ಅಧಿಕಾರಿಯಾಗಿ ಯಶಸ್ಸು ಸಾಧಿಸಿದರು.  ಸಿಂಡಿಕೇಟ್ ಸಭೆಗಳನ್ನು ಅತ್ಯುತ್ತಮವಾಗಿ ನಿರ್ವಹಿಸುವ ಮೂಲಕ ಪ್ರತಿಯೊಂದು ಕಾರ್ಯಚಟುವಟಿಕೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಆ ಮೂಲಕ ಅದನ್ನು ಜಾರಿಗೆ ತರುತ್ತಿದ್ದರು. ನ್ಯಾಕ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರತಿಯೊಂದು ಪುಟಗಳನ್ನು ಓದಿ ಅದರಲ್ಲಿ ಇರುವ ತಪ್ಪು ಒಪ್ಪುಗಳನ್ನು ಗುರುತಿಸಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿಗೆ a+ ಶ್ರೇಣಿ ಬರುವಂತೆ ಮಾಡಿದ್ದರು. ಸರ್ವರನ್ನೂ ಸಮಾನವಾಗಿ ಕಾಣುತ್ತಿದ್ದರು ಇವರು ಕಾಲೇಜು ಅಧ್ಯಾಪಕರಿಗೂ ಅವರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಪ್ರೊಫೆಸರ್ ಗೆ ಪದೋನ್ನತಿಯನ್ನು ನೀಡಿದರು. ಕೊಡವ ಭಾಷೆಗೆ ಮಹತ್ವವನ್ನು ನೀಡುವ ಉದ್ದೇಶದಿಂದ ಕೊಡವ ಸ್ನಾತಕೋತ್ತರ ಪದವಿ, ಕೊಡವ ಭಾಷೆಯನ್ನು ಪದವಿ ತರಗತಿಗಳಿಗೆ ರೂಪಿಸುವ ಕಾರ್ಯವನ್ನು ಇವರ ಕಾಲಾವಧಿಯಲ್ಲಿ ಮಾಡಲಾಯಿತು. ಪ್ರಾದೇಶಿಕ ಭಾಷೆಗೆ ಮಾನ್ಯತೆ, 20ಕ್ಕೂ ಅಧಿಕ ಪುಸ್ತಕಗಳನ್ನು ಪ್ರಸಾರಾಂಗದ ಮೂಲಕ ಮಾಡಲಾಯಿತು.

ಶೈಕ್ಷಣಿಕ ಸ್ವಾತಂತ್ರ್ಯ, ಶೈಕ್ಷಣಿಕ ಅಭಿವೃದ್ಧಿಯನ್ನು ವಿಶ್ವವಿದ್ಯಾಲಯದ ಎಲ್ಲಾ ವಿಭಾಗಗಳಿಗೂ ಕಲ್ಪಿಸಿದರು. ಅವರ ನಾಲ್ಕು ವರ್ಷಗಳ ಅಧಿಕಾರವಧಿಯು ಅಭಿವೃದ್ಧಿಶೀಲ ವಿಶ್ವವಿದ್ಯಾನಿಲಯವಾಗಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ರೂಪಿಸುವ ಕೆಲಸವನ್ನು ಅವರು ಮಾಡಿದ್ದಾರೆ. ಮಾತ್ರವಲ್ಲ
ಯಾವ ಹಗರಣಗಳಾಗಿರಬಹುದು, ಭ್ರಷ್ಟಾಚಾರವಾಗಿರಬಹುದು ಇವರ ಅಧಿಕಾರಾವಧಿಯಲ್ಲಿ ನಡೆಯಲಿಲ್ಲ. ಅವರ ಸಾಧನೆಯು ನಮಗೆ ಸ್ಫೂರ್ತಿ ಎಂದು  ನುಡಿದರು.

ಡಾ. ಗಾಯತ್ರಿ ದೇವಿ ಮಂಗಳೂರು ಮತ್ತು ಕೊಡಗು ವಿಶ್ವವಿದ್ಯಾಲಯದ ಕೊನೆಯ ಕೊಂಡಿಯಾಗಿ, ಮೊದಲ ತುಳುವ ಭಾಷಿಕ ಕುಲಪತಿಗಳಾಗಿರುವುದೇ ಹೆಮ್ಮೆಯ ಸಂಗತಿ  ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಭಿನಂದನೆ  ಸ್ವೀಕರಿಸಿ ಮಾತನಾಡಿದ ಪ್ರೊ. ಯಡಪಡಿತ್ತಾಯ ಅವರು, ವಿಶ್ವವಿದ್ಯಾನಿಲಯದ ಕೆಲಸ ಮಾಡುವಾಗ ಕೆಲವರ ಜೊತೆಯಲ್ಲಿ ಕಠಿಣವಾಗಿ‌ ನಡೆದುಕೊಂಡಿದ್ದೇನೆ. ಆದರೂ ಯಾರ ಜೊತೆಯಲ್ಲಿ ಸಂಬಂಧವನ್ನು ಹಾಳು ಮಾಡಿಕೊಳ್ಳಲಿಲ್ಲ. ಪ್ರಜಾಪ್ರಭುತ್ವವಾದಿ ನೆಲೆಯಲ್ಲಿಯೇ ಆಡಳಿತ ನಡೆಸಿದ್ದೇನೆ ಎಂದರು.

ವಯಸ್ಸಿನ ಕಾರಣಕ್ಕಾಗಿ ನಿವೃತ್ತಿಯಾಗಿರಬಹುದು. ಬೌದ್ಧಿಕವಾಗಿ ನಿವೃತ್ತಿಯಾಗಲಾರೆ. ಕುಲಪತಿ ಹುದ್ದೆ ಹೂವಿನ ಹಾಸಿಗೆಯಲ್ಲ ಮುಳ್ಳಿನ ರಾಶಿ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು. ಸಂಶೋಧನೆ ತುಂಬಾ ಅಗತ್ಯವಾದ ಶೈಕ್ಷಣಿಕ ಚಟುವಟಿಕೆ, ಎಲ್ಲರೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು ಎಂದು  ನುಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ  ಕೊಡಗು ವಿಶ್ವವಿದ್ಯಾಲಯದ ಕುಲಪತಿ  ಪ್ರೊ.ಅಶೋಕ ಎಸ್ ಹಾಲೂರು, ಯಾವುದೇ ವಿಶ್ವವಿದ್ಯಾನಿಲಯ ಕಟ್ಟಲು ಹಲವಾರು ಕೌಶಲ್ಯದ ಅಗತ್ಯ. ಕುಲಪತಿ ಹುದ್ದೆ ಸುಲಭದ್ದಲ್ಲ. ಸವಾಲಿನದ್ದು. ಅದನ್ನು ಪ್ರೊ. ಯಡಪಡಿತ್ತಾಯ ಅವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದು ಅಭಿಪ್ರಾಯಪಟ್ಟಿರು.

ಅಭಿನಂದನಾ ಪ್ರಮಾಣ ಪತ್ರವನ್ನು ಗಣಕವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ರವಿಶಂಕರ್  ಓದಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ  ಮೇಜರ್ ಪ್ರೊ. ರಾಘವ ಬಿ  ಸ್ವಾಗತಿಸಿದರು. ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕ  ಪೂಣಚ್ಚ  ನಿರೂಪಿಸಿದರು.

Follow us Follow us
Share. WhatsApp Facebook Twitter Email Telegram Copy Link

Related Posts

ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಸಾಧನೆ ಸಾಧ್ಯ; ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲು ಆದ್ಯತೆ – ಶಾಸಕ ಡಾ. ಮಂಥರ್ ಗೌಡ

ನವೆಂಬರ್ 21, 2026

ಬಸವೇಶ್ವರರ ಕುರಿತು ಅವಹೇಳನಕಾರಿ ಬರಹ: ಲೇಖಕರ ವಿರುದ್ಧ ಕಾನೂನು ಕ್ರಮಕ್ಕೆ ವೀರಶೈವ ಮಹಾಸಭಾ ಆಗ್ರಹ

ನವೆಂಬರ್ 21, 2026

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಸಾಧನೆ

ನವೆಂಬರ್ 21, 2026

ಬಸವೇಶ್ವರರ ಕುರಿತು ಅವಹೇಳನಕಾರಿ ಬರಹ: ಲೇಖಕರ ವಿರುದ್ಧ ಕಾನೂನು ಕ್ರಮಕ್ಕೆ ವೀರಶೈವ ಮಹಾಸಭಾ ಆಗ್ರಹ

ನವೆಂಬರ್ 21, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಕುಶಾಲನಗರ, NEWS DESK ನ.21: ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವೇಶ್ವರರ ಕುರಿತು ‘ಬಸವ ಮಂಟಪ’ ಕೃತಿಯಲ್ಲಿ ಅವಹೇಳನಕಾರಿ ಹಾಗೂ ಅವಾಚ್ಯ…

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಸಾಧನೆ

ನವೆಂಬರ್ 21, 2026

ಅರಪಟ್ಟು ಗ್ರಾಮದ ದೇವರ ಕಾಡಿನಲ್ಲಿ ಶ್ರೀ ಅಯ್ಯಪ್ಪ ದೇವರ ವಾರ್ಷಿಕ ಮಹಾಪೂಜೆ

ನವೆಂಬರ್ 21, 2026

ಲಿಟಲ್ ಸ್ಕಾಲರ್ಸ್ ಅಕಾಡೆಮಿಯಿಂದ ರಾಮನಗರ ಅಂಗನವಾಡಿ ಮಕ್ಕಳಿಗೆ ಕಲಿಕಾ ಸಾಮಗ್ರಿಗಳ ವಿತರಣೆ

ನವೆಂಬರ್ 21, 2026

ಸಂಸ್ಕೃತಿಯ ಜೊತೆಗೆ ವಚನಕಾರರ ಮೌಲ್ಯಗಳನ್ನು ಅರಿಯಿರಿ: ಪ್ರೊ. ಭಾರತಿ ಹಿರೇಮಠ್; ವಚನಗಳಲ್ಲಿ ಕಾಯಕ ಪ್ರಜ್ಞೆ ವಿಚಾರ ಸಂಕಿರಣ ಉದ್ಘಾಟನೆ

ನವೆಂಬರ್ 21, 2026

ಎಸ್.ಜೆ.ಎಂ. ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ಪ್ರತಿಭಾ ಕಾರಂಜಿಯಲ್ಲಿ ಉತ್ತಮ ಸಾಧನೆ

ನವೆಂಬರ್ 21, 2026

ನ.24ರಂದು ಗೋಣಿಕೊಪ್ಪಲಿನಲ್ಲಿ ವಿಕಲಚೇತನರ ಜಾಥಾ, ಕ್ರೀಡಾ ಮತ್ತು ಪ್ರತಿಭಾ ಸ್ಪರ್ಧೆ

ನವೆಂಬರ್ 21, 2026

ನ.24ರಂದು ಭಾಗಮಂಡಲದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ

ನವೆಂಬರ್ 21, 2026

ನ.21ರಂದು 71ನೇ ಕನ್ನಡ ರಾಜ್ಯೋತ್ಸವ–ಕನ್ನಡ ಹಬ್ಬ ಕಾರ್ಯಕ್ರಮ

ನವೆಂಬರ್ 21, 2026

ನ.23ರಂದು ತಲಕಾವೇರಿ ದೇವಾಲಯದಲ್ಲಿ ಸ್ವಚ್ಛತಾ ಕಾರ್ಯ

ನವೆಂಬರ್ 21, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.