Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಕೂಡುಮಂಗಳೂರು ಗ್ರಾ‌.ಪಂ ಸಾಮಾನ್ಯ ಸಭೆ: ಡೆಂಗ್ಯೂ ಜ್ವರ ಹರಡದಂತೆ ಅಗತ್ಯ ಕ್ರಮವಹಿಸಲು ತೀರ್ಮಾನ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಕೂಡುಮಂಗಳೂರು ಗ್ರಾ‌.ಪಂ ಸಾಮಾನ್ಯ ಸಭೆ: ಡೆಂಗ್ಯೂ ಜ್ವರ ಹರಡದಂತೆ ಅಗತ್ಯ ಕ್ರಮವಹಿಸಲು ತೀರ್ಮಾನ

ಜೂನ್ 22, 20232 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಕುಶಾಲನಗರ ಜೂ.22: ಜಿಲ್ಲೆಯಲ್ಲಿ ಡೆಂಗ್ಯೂ ಜ್ವರದ ಬಗ್ಗೆ ಜನರಲ್ಲಿ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆ ಡೆಂಗ್ಯೂ ಜ್ವರ ಹರಡದಂತೆ ಅಗತ್ಯ ಕ್ರಮಗಳನ್ನು ವಹಿಸುವ ಬಗ್ಗೆ ಕೂಡುಮಂಗಳೂರು ಗ್ರಾ.ಪಂ ನ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಕೂಡುಮಂಗಳೂರು ಗ್ರಾ.ಪಂ ಅಧ್ಯಕ್ಷರಾದ ಇಂದಿರಾ ರಮೇಶ್  ಅಧ್ಯಕ್ಷತೆಯಲ್ಲಿ ನಡೆದ ಸಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಈಗಾಗಲೇ ಶುಂಠಿಕೊಪ್ಪ ಹಾಗೂ ಇನ್ನಿತರ ಕಡೆಗಳಲ್ಲಿ ಡೆಂಗ್ಯೂ ಹಾವಳಿ ಹೆಚ್ಚಾಗುತ್ತಿದೆ. ಆದ್ದರಿಂದ ಡೆಂಗ್ಯೂ ಬಗ್ಗೆ ಸಾರ್ವಜನಿಕರಿಗೆ ಅರವು ಮೂಡಿಸುವುದರ ಜೊತೆಗೆ ಗ್ರಾ.ಪಂ ನ ಎಲ್ಲಾ ವಾರ್ಡ್ ನಲ್ಲಿಯೂ ರಾಸಾಯನಿಕ ಹೊಗೆಯನ್ನು ಸಿಂಪಡಿಸುವ ಬಗ್ಗೆ ನಿರ್ಧರಿಸಲಾಯಿತು. ಅಲ್ಲದೇ ಚರಂಡಿಗಳಲ್ಲಿ ಬ್ಲೀಚಿಂಗ್ ಹಾಕುವುದರ ಜೊತೆಗೆ ಸ್ಬಚ್ಚತೆಗೆ ಹೆಚ್ಚಿನ ಆದ್ಯತೆ ನೀಡುವ ಬಗ್ಗೆ ಒತ್ತಾಯಿಸಲಾಯಿತು. ಚರಂಡಿ ಸ್ವಚ್ಚತೆಗೊಳಿಸಿ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಹಾಕಲಾಗುತ್ತಿದೆ. ತ್ಯಾಜ್ಯವನ್ನು ದಿನಗಟ್ಟಲೇ ರಸ್ತೆಯಲ್ಲಿಯೇ ಬಿಡದೇ ಆದಷ್ಟು ಬೇಗನೇ ಅದನ್ನು ವಿಲೇವಾರಿ ಮಾಡಬೇಕಾಗಿದೆ. ಇಲ್ಲದಿದ್ದಲ್ಲಿ ಕೋಳಿ, ನಾಯಿಗಳು ತ್ಯಾಜ್ಯವನ್ನು ಕೆರೆದು ಚರಂಡಿ ಹಾಕುತ್ತವೆ. ಇದರಿಂದ ಚರಂಡಿ ಸ್ವಚ್ಚಗೊಳಿಸಿದ ಕೆಲಸ ವ್ಯರ್ಥವಾಗಲಿದೆ.‌ ಆದ್ದರಿಂದ ಈ ಬಗ್ಗೆ ಗಮನಹರಿಸುವಂತೆ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರು ಆಗ್ರಹಿಸಿದರು. ಇದಕ್ಕೆ ಸದಸ್ಯರಾದ ಗಿರೀಶ್, ದಿನೇಶ್ ಆಶಾರವರು ಧ್ವನಿಗೂಡಿಸಿದರು.
ಪಂಚಾಯಿತಿಯ ಕಸದ ವಾಹನ ಸಮಯಕ್ಕೆ ಸರಿಯಾಗಿ ವಾರ್ಡ್ ಗೆ ಬರುತ್ತಿಲ್ಲ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸದಸ್ಯರಾದ ಗಿರೀಶ್ ಒತ್ತಾಯಿಸಿದರು. ಕಸದ ವಾಹನಗಳನ್ನು ಸಮಯಕ್ಕೆ ಸರಿಯಾಗಿ ಕಳುಹಿಸಿಕೊಡಬೇಕು. ಅದು ಬಿಟ್ಟು ಕಾಟಾಚಾರಕ್ಕೆ ಕೆಲಸ ಮಾಡಬೇಡಿ ಎಂದು‌ ಕೆ.ಬಿ.ಶಂಶುದ್ಧೀನ್ ಅಸಮಾಧಾನ ವ್ಯಕ್ತಪಡಿಸಿದರು.
ಪ.ಜಾತಿ ಹಾಗೂ ಪ.ಪಂ ಜನಾಂಗದವರಿಗೆ ಶೇ.೨೫ ರ ನಿಧಿಯಲ್ಲಿ ನೀಡುವ ಅಂತ್ಯ ಸಂಸ್ಕಾರದ ಹಣವನ್ನು, ಒಂದು ತಿಂಗಳ ಒಳಗಾಗಿ ಅರ್ಜಿ ನೀಡುವವರಿಗೆ ಮಾತ್ರ ಹಣ ನೀಡುವಂತೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಸ್ವಚ್ಚತಾ ಸಿಬ್ಬಂದಿಗಳನ್ನು ಆಯಾ ದಿನದಂದು ನಿಗಧಿಪಡಿಸಿದ ವಾರ್ಡ್ ನಲ್ಲಿ ಕೆಲಸ ನಿರ್ವಹಿಸಲು ಬಿಡಬೇಕು.‌ ಅವರನ್ನು ಬೇರೆ ಕೆಲಸಗಳಿಗೆ ಬಳಸದಂತೆ ಸದಸ್ಯೆ ಫಿಲೋಮಿನಾ ಒತ್ತಾಯಿಸಿದರು. ಇದಕ್ಕೆ ಇನ್ನಿತರ ಸದಸ್ಯರು ಧ್ವನಿಗೂಡಿಸಿದರು.
ಕೋಳಿ ಮಾಂಸದ ತ್ಯಾಜ್ಯಗಳನ್ನು ಆನೆಕೆರೆ ಬಳಿ ಎಸೆಯಲಾಗುತ್ತಿದ್ದು, ಇದರಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಸದಸ್ಯ ದಿನೇಶ್ ಆಗ್ರಹಿಸಿದರು. ಕಸ ಎಸೆದವರಿಗೆ ದಂಡ ವಿಧಿಸುವುದಾಗಿ ಪಿಡಿಓ ಸಂತೋಷ್ ಸಭೆಗೆ ತಿಳಿಸಿದರು.
ಮುಂಗಾರು ಮಳೆ ಬೀಳದೇ ನದಿಯಲ್ಲಿ ನೀರಿಲ್ಲ. ಬರದ ಆತಂಕ ಜನರಲ್ಲಿದೆ. ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಇನ್ನೂ ಕೂಡ ಸಂಪರ್ಕಕೊಡಲಾಗಿಲ್ಲ. ನೀರಿನ ಸಮಸ್ಯೆ ಉಲ್ಭವವಾಗುವುದಕ್ಕೂ ಮುನ್ನ ಅಗತ್ಯ ಕ್ರಮ ಕೈಗೊಳ್ಳಬೇಕು ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರು ಪಿಡಿಓ ಬಳಿ ಮನವಿ ಮಾಡಿದರು. ಈಗಾಗಲೇ ಈ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿದೆ. ಯೋಜನೆ ವಿದ್ಯುತ್ ಸಂಪರ್ಕ ನೀಡಲು ಎರಡು ಟಿ.ಸಿ ನೀಡುತ್ತೇವೆ ಎಂದು ಸಂಬಂಧಿಸಿದ ಇಂಜಿನಿಯರ್ ತಿಳಿಸಿದ್ದಾರೆ. ಆದಷ್ಟು ಬೇಗನೇ ವಿದ್ಯುತ್ ಸಂಪರ್ಕ ಕಲ್ಪಿಸಿ, ಯೋಜನೆಯನ್ನು ಜನಬಳಕೆಗೆ ಉಪಯೋಗಿಸಲಾಗುವುದು ಎಂದರು.
ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ಜಾಗ ನಿಗಧಿ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ‌ಈ ಬಗ್ಗೆ ಶಾಸಕರಿಗೆ ಪತ್ರ ಬರೆಯುವಂತೆ ನಿರ್ಧರಿಸಲಾಯಿತು. ಕುಶಾಲನಗರ ತಾಲ್ಲೂಕು ಘೋಷಣೆಯಾಗಿ ವರ್ಷ ಕಳೆದರೂ ಪಂಚಾಯಿತಿ ಕಟ್ಟಡದಲ್ಲಿ ಹಳೆಯ ತಾಲ್ಲೂಕಿನ ಹೆಸರಿದೆ.‌ ಕೂಡಲೇ ಕುಶಾಲನಗರ ತಾಲ್ಲೂಕು ಎಂದು ಬದಲಾಯಿಸಿ ಎಂದು ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಮನವಿ ಮಾಡಿದರು. ದೂರದೃಷ್ಟಿ ಯೋಜನೆಗೆ ಕಾಮಗಾರಿಗಳ ಪಟ್ಟಿಯನ್ನು ನೀಡುವಂತೆ ಪಿಡಿಓ ಸಂತೋಷ್ ಸಭೆಗೆ ತಿಳಿಸಿದರು. ನಂತರ ಸಾರ್ವಜನಿಕರ ಅರ್ಜಿ ವಿಲೇವಾರಿ ಮಾಡಲಾಯಿತು. ಅಧ್ಯಕ್ಷರ ಅನುಮತಿ ಮೇರೆಗೆ ಇತರೆ ವಿಷಯಗಳ ಬಗ್ಗೆ ಚರ್ಚೆ‌ ನಡೆಯಿತು.
ಈ ಸಂದರ್ಭ ಕೂಡುಮಂಗಳೂರು ಗ್ರಾ.ಪಂ ಉಪಾಧ್ಯಕ್ಷರಾದ ಬಾಸ್ಕರ್‌ ನಾಯಕ್, ಗ್ರಾ.ಪಂ ಸದಸ್ಯರು ಹಾಗೂ ಪಂಚಾಯಿತಿ ಸಿಬ್ಬಂದಿಗಳು ಇದ್ದರು.

Follow us Follow us
Share. WhatsApp Facebook Twitter Email Telegram Copy Link

Related Posts

ಮಂಗಳೂರು ವಲಯದ ಅಂಡರ್-15 ಮಹಿಳಾ ಕ್ರಿಕೆಟ್ ತಂಡಕ್ಕೆ ಪ್ರಗತಿ ಶಾಲೆಯ ಮೂವರು ವಿದ್ಯಾರ್ಥಿನಿಯರು ಆಯ್ಕೆ

ಅಕ್ಟೋಬರ್ 24, 2026

ಕುಶಾಲನಗರ : ಮಳೆಯಿಂದ ಮನೆಗಳಿಗೆ ಹಾನಿ

ಅಕ್ಟೋಬರ್ 24, 2026

ಮಳೆಯಿಂದ ಕೊಡಗಿನ ವಿವಿಧೆಡೆ ಹಾನಿ : ಕುಸಿದು ಬಿದ್ದ ಮನೆಗಳ ಗೋಡೆ, ಮೇಲ್ಛಾವಣಿ, ಕೊಟ್ಟಿಗೆ

ಅಕ್ಟೋಬರ್ 24, 2026

ಕುಶಾಲನಗರ : ಮಳೆಯಿಂದ ಮನೆಗಳಿಗೆ ಹಾನಿ

ಅಕ್ಟೋಬರ್ 24, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಕುಶಾಲನಗರ ಅ.24 NEWS DESK : ಮಳೆಯಿಂದಾಗಿ ಕುಶಾಲನಗರ ವ್ಯಾಪ್ತಿಯಲ್ಲಿ ವಿವಿಧ ಮನೆಗಳಿಗೆ ಹಾನಿಯಾಗಿದೆ. ತಾಲೂಕಿನ ಚಿಕ್ಕ ಅಳುವಾರ ಗ್ರಾಮದ…

ಮಳೆಯಿಂದ ಕೊಡಗಿನ ವಿವಿಧೆಡೆ ಹಾನಿ : ಕುಸಿದು ಬಿದ್ದ ಮನೆಗಳ ಗೋಡೆ, ಮೇಲ್ಛಾವಣಿ, ಕೊಟ್ಟಿಗೆ

ಅಕ್ಟೋಬರ್ 24, 2026

ಮಡಿಕೇರಿಯಲ್ಲಿ ಆರ್‌ಎಸ್‌ಎಸ್ ವಿಜಯದಶಮಿ ಪಥಸಂಚಲನ

ಅಕ್ಟೋಬರ್ 24, 2026

ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಬಂಧ ಸ್ಪರ್ಧೆ: ಜಗದೀಶ್ ಟಿ.ಎ., ಜೆಸಿಂತಾ ಪಿ.ಜೆ. ಪ್ರಥಮ

ಅಕ್ಟೋಬರ್ 24, 2026

ಬೆಳಕುಮಾನಿ ಶಾಲೆಯಲ್ಲಿ ‘ಯೋಗಸಿಂಚನಾ’ ಯೋಜನೆಗೆ ಚಾಲನೆ

ಅಕ್ಟೋಬರ್ 24, 2026

ಬಾಳೆಯಡ ಕಿಶನ್ ಪೂವಯ್ಯ ಅವರಿಗೆ ದಿ. ಬಿ.ಎಸ್. ಗೋಪಾಲಕೃಷ್ಣ ದತ್ತಿ ಪ್ರಶಸ್ತಿ ಪ್ರದಾನ

ಅಕ್ಟೋಬರ್ 24, 2026

ಎಸ್‍ಜಿಎಫ್‍ಐ ರಾಜ್ಯಮಟ್ಟದ ಕ್ರಿಕೆಟ್ ಚಾಂಪಿಯನ್‍ಶಿಪ್‍ಗೆ ಪ್ರಗತಿ ಶಾಲೆಯ ಮೂವರು ವಿದ್ಯಾರ್ಥಿನಿರು ಆಯ್ಕೆ

ಅಕ್ಟೋಬರ್ 24, 2026

ನವೆಂಬರ್‌ನಲ್ಲಿ ಕಾರ್ಯಪ್ಪ ಕಾಲೇಜು ಹಳೆ ವಿದ್ಯಾರ್ಥಿಗಳ ಮಹಾಸಭೆ, ಸಂತೋಷ ಕೂಟ

ಅಕ್ಟೋಬರ್ 24, 2026

ಮಡಿಕೇರಿ ದಸರಾ ವೇದಿಕೆಯಲ್ಲಿ ಗಮನ ಸೆಳೆದ ಸಂಸ್ಕೃತಿ ಸಿರಿ ಟ್ರಸ್ಟ್‌ನ ‘ಮಣಿಕಂಠೋದಯ’ ನೃತ್ಯರೂಪಕ

ಅಕ್ಟೋಬರ್ 24, 2026

ಮಾದಾಪುರದಲ್ಲಿ ಅದ್ದೂರಿಯಾಗಿ 6ನೇ ವರ್ಷದ ಸಾರ್ವಜನಿಕ ಆಯುಧ ಪೂಜೆ ಆಚರಣೆ

ಅಕ್ಟೋಬರ್ 24, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.