Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ವಿರಾಜಪೇಟೆ : ಕೃಷಿ ಸಂಸ್ಕೃತಿಯ ಪರಿಚಯಕ್ಕೆ ರೋಟರಿ ಶಾಲೆಯ ವಿನೂತನ ಹೆಜ್ಜೆ*
  • *ಮೀನು ಹಿಡಿಯುವ ಸಲಕರಣೆಗಳ ವಿತರಣೆ*
  • *ಮಡಿಕೇರಿಯಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆ : ಆಯುರ್ವೇದ ಪದ್ಧತಿ ಕಾಯಿಲೆ ತಡೆಯುವ ಜೀವನ ವಿಧಾನ : ಡಾ.ಶ್ಯಾಮ್ ಪ್ರಸಾದ್*
  • *ಶ್ರೀಮಂಗಲದಲ್ಲಿ ಸೆ.26ರಂದು ಹೋಬಳಿ ಮಟ್ಟದ ಪ್ರಜಾಸೇವೆ ಅಭಿಯಾನ*
  • *ಪೋಷಣ ಮಾಸಾಚರಣೆ ಅರಿವು ಕಾರ್ಯಕ್ರಮ : ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಸಮತೋಲಿತ ಆಹಾರ, ಸ್ವಚ್ಛತೆ ಅಗತ್ಯ : ಡಾ.ಸನತ್ ಕುಮಾರ್*
  • *ಕುಂದಚೇರಿ ಗ್ರಾ.ಪಂ ವಿಶೇಷ ಗ್ರಾಮ ಸಭೆ : ಡಾ.ಕಸ್ತೂರಿ ರಂಗನ್ ವರದಿಗೆ ಆಕ್ಷೇಪ*
  • *ವಾಲಿಬಾಲ್‌ನಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆ*
  • *ಆರೋಗ್ಯಪೂರಕ ಜೀವನಶೈಲಿ ರೂಢಿಸಿಕೊಳ್ಳಿ: ಡಾ. ಸುಮುಖ್ ಕರೆ; ರೋಟರಿ ವುಡ್ಸ್ ವತಿಯಿಂದ ಪೋಷಣ್ ಅಭಿಯಾನ್ — ಮಹಿಳೆಯರಿಂದ ವೈವಿಧ್ಯಮಯ ತಿನಿಸುಗಳ ತಯಾರಿ*
  • *ವಿ.ಪಿ.ಶಶಿಧರ್‌ಗೆ ಸೆ.27ರಂದು ಕುಶಾಲನಗರದಲ್ಲಿ ‘ಪೌರ ಸನ್ಮಾನ’*
  • *ಕೊಡಗರಹಳ್ಳಿ ಗ್ರಾಮಸಭೆಯಲ್ಲಿ ಕಸ್ತೂರಿ ರಂಗನ್ ವರದಿ ಕುರಿತು ನಿರ್ಣಯ; ಕೃಷಿ ಹಾಗೂ ಜನಜೀವನಕ್ಕೆ ತೊಂದರೆಯಾಗದಂತೆ ಜಾರಿಗೆ ಒಕ್ಕೊರಲಿನ ಅಭಿಪ್ರಾಯ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕುಶಾಲನಗರ ರೋಟರಿ ಕ್ಲಬ್‌ ನ ನೂತನ ಪದಾಧಿಕಾರಿಗಳ ಪದಗ್ರಹಣ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕುಶಾಲನಗರ ರೋಟರಿ ಕ್ಲಬ್‌ ನ ನೂತನ ಪದಾಧಿಕಾರಿಗಳ ಪದಗ್ರಹಣ*

ಜೂನ್ 29, 20232 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಕುಶಾಲನಗರ ಜೂ.29 :   ಕುಶಾಲನಗರ ರೋಟರಿ ಕ್ಲಬ್‌ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.
ನೂತನ ಅಧ್ಯಕ್ಷ ರಾಗಿ ಸುನೀತಾ ಮಹೇಶ್, ಕಾರ್ಯದರ್ಶಿಯಾಗಿ ಕೆ.ಎಸ್ ಶರ್ಲಿ , ಖಜಾಂಜಿಯಾಗಿ ರಿಚರ್ಡ್ ಡಿಸೋಜ ಅಧಿಕಾರ ಸ್ವೀಕರಿಸಿದರು.
ರೋಟರಿ ಮಾಜಿ ಜಿಲ್ಲಾ ರಾಜ್ಯಪಾಲ ಎಂ.ಎಂ.ಸುರೇಶ್ ಚಂಗಪ್ಪ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಹಿಳೆಯರಿಗೆ ಅಧ್ಯಕ್ಷ ಸ್ಥಾನ ಲಭಿಸಿದ ಕಾರಣ ಈ ಬಾರಿ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದಂತೆ ಆಗಿದೆ. ಮಹಿಳೆಯರು ತಮ್ಮ ಬುದ್ಧಿ ಶಕ್ತಿ ಪ್ರದರ್ಶಿಸುವ ಮೂಲಕ
ಕುಶಾಲನಗರ ರೋಟರಿ ಕ್ಲಬ್ ಅನ್ನು ಇತರೆ ಕ್ಲಬ್ ಗಳಿಗೆ ಮಾದರಿಯಾಗಿ ರೂಪಿಸಬೇಕು ಎಂದು ಹೇಳಿದರು.
ರೋಟರಿ ಕ್ಲಬ್‌ ಸಮಾಜ ಸೇವೆಗೆ ಮಾದರಿಯಾಗಿದೆ. ದುರ್ಬಲ ಹಾಗೂ ಬಡ ವಿದಾರ್ಥಿಗಳ ಏಳಿಗೆಗಾಗಿ ರೋಟರಿ ಸಂಸ್ಥೆ ಶ್ರಮಿಸುತ್ತಿದೆ. ಎಸ್ಎಸ್ಎಲ್ಸಿ, ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಸನ್ಮಾನಿಸಿರುವುದು ಶ್ಲಾಘನೀಯ ಎಂದರು.

ಸಹಾಯಕ ರಾಜ್ಯಪಾಲ ಎಂ.ಡಿ ಲಿಖಿತ್ ಮಾತನಾಡಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಮಾಜ ಸೇವೆ ಸಲ್ಲಿಸುತ್ತಿರುವ ಪ್ರತಿಷ್ಠಿತ ರೋಟರಿ ಸಂಸ್ಥೆಯ ಸದಸ್ಯರು ವೈಯಕ್ತಿಕವಾಗಿ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಸಮಾಜದ ಬೇಡಿಕೆಗಳಿಗೆ ಸ್ಪಂದಿಸುವಂತಾಗಬೇಕು. ರೋಟರಿ ಸದಸ್ಯರು ತಾವು ಮಾಡುವ ಸೇವಾ ಕಾರ್ಯಗಳಲ್ಲಿ ನಿಗಧಿತ ಗುರಿ ಇಟ್ಟುಕೊಂಡು ಸಮಾಜ ಸೇವೆಗೆ ಮುಂದಾಗಬೇಕು ಹಾಗೂ ಸ್ವಾವಲಂಬಿಗಳು, ದುರ್ಬಲರಿಗೆ, ಕಡುಬಡ ವರಿಗೆ ಸಹಾಯ ಹಸ್ತ ನೀಡಬೇಕು ಎಂದರು.
ಇದೇ ಸಂದರ್ಭ ಅಂಗನವಾಡಿ ಮಕ್ಕಳಿಗೆ ಕುರ್ಚಿ ಹಾಗೂ ಚಾರ್ಟ್ ಗಳನ್ನು ವಿತರಿಸಲಾಯಿತು. ಸ್ಥಳೀಯ ಸಾಧಕರಾದ ಪ್ರಗತಿ ಬಡಿಗೇರ್, ವಾಯು ಸೇನೆಯ ಫ್ಲೈಯಿಂಗ್ ಆಫೀಸರ್ ಸಚಿನ್ ಬ್ಯಾಂಬೂರೆ, ಪಟ್ಟಣ ಪಂಚಾಯಿತಿ ಸದಸ್ಯ ವಿಎಸ್ ಆನಂದ್ ಕುಮಾರ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಕ್ಲಬ್ ಸಹಾಯಕ ರಾಜ್ಯಪಾಲ ಎಸ್.ಕೆ.ಸತೀಶ್, ನಿಕಟ ಪೂರ್ವ ಅಧ್ಯಕ್ಷ ಉಲ್ಲಾಸ್ ಕೃಷ್ಣ, ಕಾರ್ಯದರ್ಶಿ ಶಿಬು ಥಾಮಸ್, ನಿಕಟ ಪೂರ್ವ ಸಹಾಯಕ ರಾಜ್ಯಪಾಲ ಮಹೇಶ್ ನಾಲ್ವಡೆ , ಕ್ಲಬ್ ಸಲಹೆಗಾರ ಎಂ.ಡಿ.ರಂಗಸ್ವಾಮಿ,ನಿರ್ದೇಶಕ ಡಾ. ಹರಿ ಶೆಟ್ಟಿ ಉಪಸ್ಥಿತರಿದ್ದರು. ಪದಗ್ರಹಣ ಸಮಾರಂಭಕ್ಕೆ ಶನಿವಾರಸಂತೆ, ಸೋಮವಾರ ಪೇಟೆ, ಸುಂಟಿಕೊಪ್ಪ, ಗೋಣಿಕೊಪ್ಪ, ಮಡಿಕೇರಿ, ಮಡಿಕೇರಿಯ ಮಿಸ್ಟಿ ಹಿಲ್ಸ್, ಹುಣಸೂರು, ಪಿರಿಯಾ ಪಟ್ಟಣ ಸೇರಿದಂತೆ ವಿವಿಧೆಡೆಗಳಿಂದ ರೋಟರಿ ಪ್ರತಿನಿಧಿಗಳು ಭಾಗವಹಿಸಿದ್ದರು.

ನೂತನ ಸಾಲಿನ ಆಡಳಿತ ಮಂಡಳಿ ಅಧಿಕಾರ ಸ್ವೀಕಾರ  : 2023-24 ನೇ ಸಾಲಿನ ನೂತನ ಅಧ್ಯಕ್ಷರಾಗಿ ಸುನೀತಾ ಮಹೇಶ್ , ಕಾರ್ಯದರ್ಶಿಯಾಗಿ ಕೆ.ಎಸ್. ಶರ್ಲಿ, ಖಜಾಂಚಿಯಾಗಿ ರಿಚರ್ಡ್ ಡಿಸೋಜ,
ನಿದೇರ್ಶಕರುಗಳಾಗಿ ರಾಣಿ ಉಲ್ಲಾಸ್,ಎಂ.ಎಂ. ಸಂತೋಷ್ ಪಿ.ನವೀನ್, ಉಮಾಶಂಕರ್, ಶೋಭಾ ಸತೀಶ್,ಡಾ.ಧರಣೇಂದ್ರ,ಕಿರಣ್‌ದೇವಯ್ಯ, ಜಾಕೋಬ್,ರಮೇಶ್ ಕುಮಾರ್,ಎನ್.ಜಿ.ಪ್ರಕಾಶ್, ಟಿ.ವಿ.ರವಿ, ಆರತಿ ಎಚ್.ಶೆಟ್ಟಿ ಆಯ್ಕೆಯಾಗಿದ್ದಾರೆ.  

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ವಿರಾಜಪೇಟೆ : ಕೃಷಿ ಸಂಸ್ಕೃತಿಯ ಪರಿಚಯಕ್ಕೆ ರೋಟರಿ ಶಾಲೆಯ ವಿನೂತನ ಹೆಜ್ಜೆ*

ಸೆಪ್ಟೆಂಬರ್ 23, 2026

*ಮೀನು ಹಿಡಿಯುವ ಸಲಕರಣೆಗಳ ವಿತರಣೆ*

ಸೆಪ್ಟೆಂಬರ್ 23, 2026

*ಮಡಿಕೇರಿಯಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆ : ಆಯುರ್ವೇದ ಪದ್ಧತಿ ಕಾಯಿಲೆ ತಡೆಯುವ ಜೀವನ ವಿಧಾನ : ಡಾ.ಶ್ಯಾಮ್ ಪ್ರಸಾದ್*

ಸೆಪ್ಟೆಂಬರ್ 23, 2026

*ಮೀನು ಹಿಡಿಯುವ ಸಲಕರಣೆಗಳ ವಿತರಣೆ*

ಸೆಪ್ಟೆಂಬರ್ 23, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಸೆ.23 NEWS DESK : ಕೊಡಗು ಜಿಲ್ಲೆಯ ಮೀನುಗಾರಿಕೆ ಇಲಾಖೆಯಲ್ಲಿ 2026-27 ನೇ ಸಾಲಿನಲ್ಲಿ ಕೊಡಗು ಜಿಲ್ಲೆಯ ಮೀನುಗಾರಿಕೆ…

*ಮಡಿಕೇರಿಯಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆ : ಆಯುರ್ವೇದ ಪದ್ಧತಿ ಕಾಯಿಲೆ ತಡೆಯುವ ಜೀವನ ವಿಧಾನ : ಡಾ.ಶ್ಯಾಮ್ ಪ್ರಸಾದ್*

ಸೆಪ್ಟೆಂಬರ್ 23, 2026

*ಶ್ರೀಮಂಗಲದಲ್ಲಿ ಸೆ.26ರಂದು ಹೋಬಳಿ ಮಟ್ಟದ ಪ್ರಜಾಸೇವೆ ಅಭಿಯಾನ*

ಸೆಪ್ಟೆಂಬರ್ 23, 2026

*ಪೋಷಣ ಮಾಸಾಚರಣೆ ಅರಿವು ಕಾರ್ಯಕ್ರಮ : ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಸಮತೋಲಿತ ಆಹಾರ, ಸ್ವಚ್ಛತೆ ಅಗತ್ಯ : ಡಾ.ಸನತ್ ಕುಮಾರ್*

ಸೆಪ್ಟೆಂಬರ್ 23, 2026

*ಕುಂದಚೇರಿ ಗ್ರಾ.ಪಂ ವಿಶೇಷ ಗ್ರಾಮ ಸಭೆ : ಡಾ.ಕಸ್ತೂರಿ ರಂಗನ್ ವರದಿಗೆ ಆಕ್ಷೇಪ*

ಸೆಪ್ಟೆಂಬರ್ 23, 2026

*ವಾಲಿಬಾಲ್‌ನಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆ*

ಸೆಪ್ಟೆಂಬರ್ 23, 2026

*ಆರೋಗ್ಯಪೂರಕ ಜೀವನಶೈಲಿ ರೂಢಿಸಿಕೊಳ್ಳಿ: ಡಾ. ಸುಮುಖ್ ಕರೆ; ರೋಟರಿ ವುಡ್ಸ್ ವತಿಯಿಂದ ಪೋಷಣ್ ಅಭಿಯಾನ್ — ಮಹಿಳೆಯರಿಂದ ವೈವಿಧ್ಯಮಯ ತಿನಿಸುಗಳ ತಯಾರಿ*

ಸೆಪ್ಟೆಂಬರ್ 23, 2026

*ವಿ.ಪಿ.ಶಶಿಧರ್‌ಗೆ ಸೆ.27ರಂದು ಕುಶಾಲನಗರದಲ್ಲಿ ‘ಪೌರ ಸನ್ಮಾನ’*

ಸೆಪ್ಟೆಂಬರ್ 23, 2026

*ಕೊಡಗರಹಳ್ಳಿ ಗ್ರಾಮಸಭೆಯಲ್ಲಿ ಕಸ್ತೂರಿ ರಂಗನ್ ವರದಿ ಕುರಿತು ನಿರ್ಣಯ; ಕೃಷಿ ಹಾಗೂ ಜನಜೀವನಕ್ಕೆ ತೊಂದರೆಯಾಗದಂತೆ ಜಾರಿಗೆ ಒಕ್ಕೊರಲಿನ ಅಭಿಪ್ರಾಯ*

ಸೆಪ್ಟೆಂಬರ್ 23, 2026

**ಮಡಿಕೇರಿ : ಅ.18 ರಂದು ಜಾನಪದ ದಸರಾ : ಕಲಾತಂಡಗಳಿಂದ ಅಜಿ೯ ಆಹ್ವಾನ** 

ಸೆಪ್ಟೆಂಬರ್ 23, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.