Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಮಡಿಕೇರಿ : ಡಿಎಸ್‍ಎಸ್‍ನಿಂದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಸನ್ಮಾನ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ : ಡಿಎಸ್‍ಎಸ್‍ನಿಂದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಸನ್ಮಾನ

ಜುಲೈ 3, 20232 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ ಜು.3 :  ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಪ್ರೋತ್ಸಾಹಿಸಬೇಕು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ತಿಳಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಮಡಿಕೇರಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅತಿ ಹೆಚ್ಚು ಅಂಕ ಪಡೆದ ದ್ವಿತೀಯ ಪಿ.ಯು.ಸಿ ಹಾಗೂ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಮತ್ತು ಫಲಿತಾಂಶ ಬರಲು ಕಾರಣರಾದ ಶಿಕ್ಷಕರಿಗೆ ಸನ್ಮಾನ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸನ್ಮಾನಿಸಿ ಮಾತನಾಡಿದರು.

ಸಮಾಜದಲ್ಲಿ ಇಂದು ಜನರು ಯಾವುದೇ ಕಟ್ಟುಪಾಡುಗಳಿಲ್ಲದೆ ಜೀವನ ನಡೆಸುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಡಾ.ಬಿ.ಆರ್.ಅಂಬೇಡ್ಕರ್ ಮುಂದಾಳತ್ವದಲ್ಲಿ ರಚನೆಯಾದ ಸಂವಿಧಾನ. ನಮ್ಮ ಬದುಕಿನಲ್ಲಿ ಸಂವಿಧಾನ ಬಹಳಷ್ಟು ಮುಖ್ಯವಾಗಿದ್ದು, ಜನಪ್ರತಿನಿಧಿಯಾಗಿ ಸಮುದಾಯದ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ಜೊತೆಯಾಗಿರುತ್ತೇನೆ ಎಂದು ಭರವಸೆ ನೀಡಿದರು.

ದೀಪಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ
ಸುಂದರರಾಜ್, ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗಬಾರದು, ಜೀವನದಲ್ಲಿ ಸಾಧನೆ ಮಾಡಬೇಕೆಂದರೆ ಶಿಕ್ಷಕರ ಮಾರ್ಗದರ್ಶನ ಮುಖ್ಯ. ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕೆಂದು  ಕರೆ ನೀಡಿದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ಮಾತನಾಡಿ,  ಡಿ.ಎಸ್.ಎಸ್ ಮಾಡಿರುವ ಸಮಾಜ ಸೇವೆಯ ವಿವರ ಹಾಗೂ ಕಳೆದ ಬಹಳಷ್ಟು ವರ್ಷಗಳಿಂದ ಸರಕಾರಿ ಶಾಲೆಯ ಶಿಕ್ಷಕ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ನಡೆಸುತ್ತಿರುವುದನ್ನು ಪ್ರಸ್ತಾಪಿಸಿದರು.

ಮಕ್ಕಳ ವಿಭಾಗದ  ವೈದ್ಯಾಧಿಕಾರಿ ಡಾ.ಪುರುಶೋತ್ತಮ್ ಮಾತನಾಡಿ,  ಎಸ್ ಎಸ್ ಎಲ್ ಸಿ ನಮ್ಮ ಜೀವನದಲ್ಲಿ ಬಹಳ ಮುಖ್ಯವಾಗಿರುತ್ತದೆ. ನಮ್ಮ ಬದುಕಿಗೆ ಮುಖ್ಯ ತಿರುವನ್ನು ನೀಡುವ ಸಮಯ ಇದಾಗಿದ್ದು, ಶಿಕ್ಷಕರ ಮಾರ್ಗದರ್ಶನವನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು ಎಂದು ವಿಚಾರ ವಿನಿಮಯ ಮಾಡಿದರು.

ಸಮಾಜಸೇವಕ ವಾಸುದೇವ್  ಮಾತನಾಡಿ,  ಸಾಧನೆ ಮಾಡಿದವರ ಮಾತುಗಳನ್ನು ಕೇಳಿದರೆ ನಮ್ಮ ಜೀವನಕ್ಕೆ ಬೇಕಾದ ಉಪಯುಕ್ತ ಅಂಶಗಳು ಸಿಗುತ್ತವೆ. ಒಬ್ಬ ವ್ಯಕ್ತಿ ಉನ್ನತ ಸ್ಥಾನವನ್ನು ಏರಬೇಕೆಂದರೆ ಅದಕ್ಕೆ ಮುಖ್ಯ ಕಾರಣ ಶಿಕ್ಷಕರು. ಅವರನ್ನು ಗೌರವಿಸುವ ಡಿ.ಎಸ್.ಎಸ್ ನ ಕಾರ್ಯ ಪ್ರಶಂಸನೀಯವಾಗಿದೆ ಎಂದರು.

ಪ್ರಸೂತಿ ವೈದ್ಯೆ ಡಾ.ಸೌಮ್ಯ ಮಾತನಾಡಿ,  ವಿದ್ಯಾರ್ಥಿಗಳಲ್ಲಿ ಗುರಿ ಇರಬೇಕು, ಆ ಗುರಿಯನ್ನು ಬೆನ್ನತ್ತಿ ಹೋಗಲು ಶಿಕ್ಷಕರು ನೆರವಾಗುತ್ತಾರೆ. ವಿದ್ಯಾರ್ಥಿಗಳು ಗಟ್ಟಿ ನಿಲುವನ್ನು ಬೆಳೆಸಿಕೊಳ್ಳಬೇಕೆಂದರು.

ಡಿ.ಎಸ್.ಎಸ್ ತಾಲ್ಲೂಕು ಸಂಚಾಲಕ ದೀಪಕ್ ಪೊನ್ನಪ್ಪ ಮಾತನಾಡಿ, ವ್ಯಕ್ತಿಗಿಂತ ವ್ಯಕ್ತಿತ್ವ ದೊಡ್ಡದು ಎಂಬಂತೆ ಶಿಕ್ಷಕ ವೃತ್ತಿಗೆ ಬಹಳ ಗೌರವ ಇದೆ, ವ್ಯಕ್ತಿಯೊಬ್ಬನನ್ನು ಉನ್ನತ ಹುದ್ದೆಗೇರಿಸುವ ಸಾಮರ್ಥ್ಯ ಇರುವುದು ಶಿಕ್ಷಕರಿಗೆ. ‌ಆದರೆ ಶಿಕ್ಷಕರು ಮಾತ್ರ ಮತ್ತಷ್ಟು ವಿದ್ಯಾರ್ಥಿಗಳನ್ನು ದೇಶಕ್ಕೆ ಕೊಡುಗೆ ನೀಡುವಲ್ಲಿ ಶ್ರಮಿಸುತ್ತಿರುತ್ತಾರೆ ಎಂದು ಶಿಕ್ಷಕರ ಕಾರ್ಯವೈಖರಿಯನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ  ಹೆಚ್.ವಿ.ದೇವದಾಸ್ ಮಾತನಾಡಿ, ದಿವಾಕರ್ ನೇತೃತ್ವದ ಡಿ ಎಸ್ ಎಸ್ ಕೊಡಗಿನಲ್ಲಿ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಹೆಮ್ಮೆಯ ವಿಚಾರ ಇವರ ಈ ಕಾರ್ಯಕ್ರಮಗಳಿಗೆ ವೈದ್ಯಕೀಯ ಇಲಾಖೆಯಿಂದ ಸೂಕ್ತ ಸಹಕಾರ ನೀಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಿ.ಎಸ್.ಎಸ್ ವಿಭಾಗೀಯ ಸಂಚಾಲಕ ವೀರಭದ್ರಯ್ಯ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಜಯ್, ಚಂದ್ರಶೇಖರ್, ಪಿ.ಕೆ.ನಳಿನಿ , ಲೋಕನಾಥ್ ಉಪಸ್ಥಿತರಿದ್ದರು.

ಪ್ರಮುಖರಾದ ಹೆಚ್.ಎನ್.ಶೃತಿ ಸ್ವಾಗತಿಸಿ, ನಿರೂಪಿಸಿದರು.

Follow us Follow us
Share. WhatsApp Facebook Twitter Email Telegram Copy Link

Related Posts

ಡ್ರಗ್ ವ್ಯಸನದ ವಿರುದ್ಧ ಶಿಕ್ಷಣ ಸಂಸ್ಥೆಗಳಲ್ಲಿ ಜಾಗೃತಿ ಮೂಡಿಸಿ : ಅನಿಲ್ ಹೆಚ್.ಟಿ.

ಅಕ್ಟೋಬರ್ 27, 2026

ಕೊಡಗು ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಲೋಕೇಶ್ ಸಾಗರ್ ಅಭ್ಯರ್ಥಿ: ಕನ್ನಡಸಿರಿ ಸ್ನೇಹ ಬಳಗದ ನಿರ್ಧಾರ

ಅಕ್ಟೋಬರ್ 27, 2026

ಕೊಡಗು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬಿಜೆಪಿ ಮುತ್ತಿಗೆ : ಪ್ರಧಾನಿ ಮೋದಿ ವಿರುದ್ಧದ ಹೇಳಿಕೆಗೆ ಕ್ಷಮೆಯಾಚನೆಗೆ ಆಗ್ರಹ

ಅಕ್ಟೋಬರ್ 27, 2026

ಕೊಡಗು ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಲೋಕೇಶ್ ಸಾಗರ್ ಅಭ್ಯರ್ಥಿ: ಕನ್ನಡಸಿರಿ ಸ್ನೇಹ ಬಳಗದ ನಿರ್ಧಾರ

ಅಕ್ಟೋಬರ್ 27, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಅ.27 NEWS DESK  : ಮುಂಬರುವ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಲೋಕೇಶ್…

ಕೊಡಗು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬಿಜೆಪಿ ಮುತ್ತಿಗೆ : ಪ್ರಧಾನಿ ಮೋದಿ ವಿರುದ್ಧದ ಹೇಳಿಕೆಗೆ ಕ್ಷಮೆಯಾಚನೆಗೆ ಆಗ್ರಹ

ಅಕ್ಟೋಬರ್ 27, 2026

ಸುಂಟಿಕೊಪ್ಪ ಆರೋಗ್ಯ ಕೇಂದ್ರದ ಸಮಸ್ಯೆಗಳಿಗೆ ಶೀಘ್ರ ಪರಿಹಾರ: ಡಿಎಚ್‌ಒ ಸತೀಶ್ ಕುಮಾರ್ ಭರವಸೆ; ವೈದ್ಯರು, ಔಷಧಿಗಳ ಕೊರತೆ ನೀಗಿಸಲು ಕ್ರಮ; ಸ್ವಚ್ಛತೆ ಮತ್ತು ಕಟ್ಟಡ ದುರಸ್ತಿಗೆ ₹10 ಲಕ್ಷ ಅನುದಾನ ಬಿಡುಗಡೆ

ಅಕ್ಟೋಬರ್ 27, 2026

ಸ್ವಚ್ಛ ಕಾವೇರಿ ಜಾಗೃತಿ ರಥಯಾತ್ರೆಗೆ ಚಾಲನೆ : ಪ್ರಕೃತಿಯೊಂದಿಗೆ ಬದುಕಲು ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಕರೆ

ಅಕ್ಟೋಬರ್ 27, 2026

ಡಾ. ಲಲಿತ ಕೆ.ಪಿ. ಅವರಿಗೆ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಪ್ರದಾನ; ಜಾನಪದದ ಮೂಲ ಬೇರುಗಳಿಲ್ಲದೆ ಆಧುನಿಕತೆ ಇಲ್ಲ: ಡಾ. ಲಲಿತ ಕೆ.ಪಿ.

ಅಕ್ಟೋಬರ್ 27, 2026

ಪತ್ತಲೋಧಿ ದಿನದಂದು ಸಿಎನ್‌ಸಿಯಿಂದ ತರ್ಪಣ ಅರ್ಪಣೆ

ಅಕ್ಟೋಬರ್ 27, 2026

ಶಾಸಕರ ಫ್ಲೆಕ್ಸ್ ಹರಿದವರ ವಿರುದ್ಧ ಕಠಿಣ ಕ್ರಮಕ್ಕೆ ಕೋಚನ ಚೇತನ್ ಆಗ್ರಹ

ಅಕ್ಟೋಬರ್ 27, 2026

ಶಾಸಕರ ಫ್ಲೆಕ್ಸ್ ಗೆ ಹಾನಿ ಪ್ರಕರಣ : ಮಡಿಕೇರಿ ನಗರ ಮಹಿಳಾ ಕಾಂಗ್ರೆಸ್ ಖಂಡನೆ

ಅಕ್ಟೋಬರ್ 27, 2026

ಶಾಸಕರ ಫ್ಲೆಕ್ಸ್ ಹರಿದವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಕವನ್ ಕೊತ್ತೋಳಿ ಆಗ್ರಹ

ಅಕ್ಟೋಬರ್ 27, 2026

ಶಾಸಕರ ಫ್ಲೆಕ್ಸ್ ಗೆ ಹಾನಿ ಖಂಡನೀಯ : ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವ ಚಾಳಿಯನ್ನು ಬಿಜೆಪಿ ನಿಲ್ಲಿಸಲಿ

ಅಕ್ಟೋಬರ್ 27, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.