Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ವಿರಾಜಪೇಟೆ : ಕೃಷಿ ಸಂಸ್ಕೃತಿಯ ಪರಿಚಯಕ್ಕೆ ರೋಟರಿ ಶಾಲೆಯ ವಿನೂತನ ಹೆಜ್ಜೆ*
  • *ಮೀನು ಹಿಡಿಯುವ ಸಲಕರಣೆಗಳ ವಿತರಣೆ*
  • *ಮಡಿಕೇರಿಯಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆ : ಆಯುರ್ವೇದ ಪದ್ಧತಿ ಕಾಯಿಲೆ ತಡೆಯುವ ಜೀವನ ವಿಧಾನ : ಡಾ.ಶ್ಯಾಮ್ ಪ್ರಸಾದ್*
  • *ಶ್ರೀಮಂಗಲದಲ್ಲಿ ಸೆ.26ರಂದು ಹೋಬಳಿ ಮಟ್ಟದ ಪ್ರಜಾಸೇವೆ ಅಭಿಯಾನ*
  • *ಪೋಷಣ ಮಾಸಾಚರಣೆ ಅರಿವು ಕಾರ್ಯಕ್ರಮ : ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಸಮತೋಲಿತ ಆಹಾರ, ಸ್ವಚ್ಛತೆ ಅಗತ್ಯ : ಡಾ.ಸನತ್ ಕುಮಾರ್*
  • *ಕುಂದಚೇರಿ ಗ್ರಾ.ಪಂ ವಿಶೇಷ ಗ್ರಾಮ ಸಭೆ : ಡಾ.ಕಸ್ತೂರಿ ರಂಗನ್ ವರದಿಗೆ ಆಕ್ಷೇಪ*
  • *ವಾಲಿಬಾಲ್‌ನಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆ*
  • *ಆರೋಗ್ಯಪೂರಕ ಜೀವನಶೈಲಿ ರೂಢಿಸಿಕೊಳ್ಳಿ: ಡಾ. ಸುಮುಖ್ ಕರೆ; ರೋಟರಿ ವುಡ್ಸ್ ವತಿಯಿಂದ ಪೋಷಣ್ ಅಭಿಯಾನ್ — ಮಹಿಳೆಯರಿಂದ ವೈವಿಧ್ಯಮಯ ತಿನಿಸುಗಳ ತಯಾರಿ*
  • *ವಿ.ಪಿ.ಶಶಿಧರ್‌ಗೆ ಸೆ.27ರಂದು ಕುಶಾಲನಗರದಲ್ಲಿ ‘ಪೌರ ಸನ್ಮಾನ’*
  • *ಕೊಡಗರಹಳ್ಳಿ ಗ್ರಾಮಸಭೆಯಲ್ಲಿ ಕಸ್ತೂರಿ ರಂಗನ್ ವರದಿ ಕುರಿತು ನಿರ್ಣಯ; ಕೃಷಿ ಹಾಗೂ ಜನಜೀವನಕ್ಕೆ ತೊಂದರೆಯಾಗದಂತೆ ಜಾರಿಗೆ ಒಕ್ಕೊರಲಿನ ಅಭಿಪ್ರಾಯ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕಾಕೋಟುಪರಂಬು ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ : ಹಿರಿಯ ಸಹಕಾರಿಗಳಿಗೆ ಸನ್ಮಾನ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕಾಕೋಟುಪರಂಬು ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ : ಹಿರಿಯ ಸಹಕಾರಿಗಳಿಗೆ ಸನ್ಮಾನ*

ಜುಲೈ 5, 20232 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ವಿರಾಜಪೇಟೆ ಜು.5 : ರಾಜ್ಯದಲ್ಲಿ ಸಹಕಾರಿ ಸಂಸ್ಥೆಗಳಲ್ಲಿ ಶಿಸ್ತು ಬದ್ಧ, ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿರುವುದು ಕೊಡಗು ಜಿಲ್ಲೆ ಮಾತ್ರ ಎಂದು ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಹೇಳಿದರು.
ಕಾಕೋಟುಪರಂಬು ಕೃಷಿ ಪತ್ತಿನ ಸಹಕಾರ ಸಂಘದ ರೂ.45 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು ಹಿಂದೆ ನಮ್ಮ ಪೂರ್ವಜರು ಕಟ್ಟಿ ಬೆಳೆಸಿದ ಸಹಕಾರಿ ಸಂಸ್ಥೆಗಳು ಇಂದಿಗೂ ಉತ್ತಮವಾಗಿದೆ ಎಂದರೆ ನಾವು ಅವರಿಗೆ ನೀಡುತ್ತಿರುವ ಗೌರವ ಎಂದರು.
ಜಿಲ್ಲೆಯ ಒಂದೆರಡು ಸಹಕಾರಿ ಸಂಸ್ಥೆಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ಸಹಕಾರಿ ಸಂಸ್ಥೆಗಳು ಅವ್ಯವಹಾರ ಹಾಗೂ ಹಣ ದುರುಪಯೋಗ ಇಲ್ಲದೆ ಪ್ರಗತಿ ಸಾಧಿಸಿದೆ ಎಂದು ಶ್ಲಾಘಿಸಿದರು.
ವಿಧಾನ ಪರಿಷತ್ ಸದಸ್ಯ ಮಂಡೆಪಂಡ ಸುಜಾ ಕುಶಾಲಪ್ಪ ಮಾತನಾಡಿ, ಸ್ವತಂತ್ರ ಪೂರ್ವದಲ್ಲಿಯೇ ಆರಂಭಗೊಂಡ ಸಹಕಾರಿ ಕ್ಷೇತ್ರ ಗ್ರಾಮೀಣ ಭಾಗದಲ್ಲಿ ಪ್ರಗತಿ ಸಾಧಿಸಿ ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಪೈಪೆÇೀಟಿ ನೀಡುತ್ತಿರುವುದು ಅವರುಗಳಿಗೆ ನುಂಗಲಾರದ ತುತ್ತಾಗಿದೆ. ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಿದರೆ ಸಹಕಾರ ಸಂಘಗಳು ಉಳಿದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಮಾತನಾಡಿ, ಜಿಲ್ಲೆಯಲ್ಲಿ ನೂರಕ್ಕೂ ಅಧಿಕ ಸಂಘ ಸಂಸ್ಥೆಗಳಿದ್ದು, ಅದರಲ್ಲಿ 71 ಸಹಕಾರಿ ಸಂಘ ಹಾಗೂ ಬ್ಯಾಂಕುಗಳು ಲಾಭದಲ್ಲಿ ಮುಂದುವರೆiÀುುತ್ತಿವೆ. ಹಲವು ಸಹಕಾರಿ ಬ್ಯಾಂಕ್‍ಗಳು ಕೋಟಿಗಳಲ್ಲಿ ವ್ಯವಹಾರ ನಡೆಸುತ್ತಿದ್ದು, ರಾಷ್ಟ್ರೀಕೃತ ಬ್ಯಾಂಕುಗಳಿಗೆ ಪೈಪೆÇೀಟಿ ನೀಡುತ್ತಿವೆ. ಜಿಲ್ಲೆಯ ಸಹಕಾರ ಕ್ಷೇತ್ರ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಎಲ್ಲಾ ಜಿಲ್ಲೆಗಳಿಗೆ ಮಾದರಿಯಾಗಿದೆ. ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಫ್ರೂಟ್ ತಂತ್ರಾಂಶ ಬೇರೆ ಜಿಲ್ಲೆಗಳಿಗೆ ವರದಾನವಾದರೆ ಕೊಡಗು ಜಿಲ್ಲೆಯ ಮಟ್ಟಿಗೆ ಮಾರಕವಾಗಿದೆ. ಈ ತಂತ್ರಾಂಶದಿಂದ ಜಿಲ್ಲೆಯ ರೈತರಿಗೆ ಸಹಕಾರಿ ಬ್ಯಾಂಕುಗಳಿಂದ ಸಾಲ ಸೌಲಭ್ಯಗಳನ್ನು ಪಡೆಯಲು ಕಷ್ಟವಾಗುತ್ತಿರುವ ಕಾರಣ ಜಿಲ್ಲೆಯ ಶಾಸಕರುಗಳು ಹಾಗೂ ವಿಧಾನ ಪರಿಷತ್ ಸದಸ್ಯರುಗಳು ವಿಧಾನಸಭೆಯಲ್ಲಿ ಧ್ವನಿ ಎತ್ತಿ ಜಿಲ್ಲೆಯ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದು ಹೇಳಿದರು.
ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪೂಳಂಡ ವಿನು ಪೆಮ್ಮಯ್ಯ ಮಾತನಾಡಿ, ಸಹಕಾರಿ ಸಂಘವು 1959ರಲ್ಲಿ 451 ಸದಸ್ಯರೊಂದಿಗೆ ಪ್ರಾರಂಭಗೊಂಡು ಪ್ರಸ್ತುತ 930 ಸದಸ್ಯರಿದ್ದಾರೆ. ಸಂಘದ ಹಳೆಯ ಕಟ್ಟಡ ರಸ್ತೆ ಬದಿಯಲ್ಲಿದ್ದ ಕಾರಣ ರಸ್ತೆ ವಿಸ್ತರಣೆ ಆಗುವ ಸಂದರ್ಭ ಕಟ್ಟಡಕ್ಕೆ ಹಾನಿ ಉಂಟಾಗುವುದರಿಂದ ಕಾಕೋಟುಪರಂಬು ಕಾಲಭೈರವ ದೇವಾಲಯ ಸಮಿತಿ ಸಂಘಕ್ಕೆ 25ಸೆಂಟ್ ಜಾಗವನ್ನು ಉದಾರವಾಗಿ ನೀಡಿದ ಫಲವಾಗಿ ಕಟ್ಟಡ ನಿರ್ಮಿಸಲು ಸಾಧ್ಯವಾಯಿತು ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭ ಶಾಸಕ ಎ.ಎಸ್ ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಸಂಘದ ಮಾಜಿ ಅಧ್ಯಕ್ಷರುಗಳಾದ ಮೇವಡ ಸುಬ್ಬಯ್ಯ, ಮಂಡೇಟಿರ ದೇವಯ್ಯ, ಕಟ್ಟೆರ ಕುಟ್ಟಪ್ಪ, ಮಂಡೇಟಿರ ಸುರೇಶ್, ಚಂಬಂಡ ಮಾಚಯ್ಯ, ಬಾಚಿರ ಬಿದ್ದಪ್ಪ, ಪಾಳೆಯಂಡ ರಾಬಿನ್ ದೇವಯ್ಯ, ಗುತ್ತಿಗೆದಾರರಾದ ಮೇವಡ ಪೂವಯ್ಯ, ಪೊನ್ನಕಚ್ಚಿರ ಸುಭಾಷ್ ಅವರುಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕೇಂದ್ರ ಸಹಕಾರ ಬ್ಯಾಂಕಿನ ಉಪಾಧ್ಯಕ್ಷ ಕೆಟೋಳಿರ ಹರೀಶ್ ಪೂವಯ್ಯ, ನಿರ್ದೇಶಕರಾದ ಪಟ್ರಪಂಡ ರಘು ನಾಣಯ್ಯ, ಹೊಟ್ಟೆಂಗಡ ರಮೇಶ್ ಕೋಲತಂಡ ಸುಬ್ರಮಣಿ, ಅರುಣ್ ಭೀಮಯ್ಯ, ಸಹಕಾರ ಅಭಿವೃದ್ಧಿ ಅಧಿಕಾರಿ ಎಂ.ಎಸ್ ಮೋಹನ್, ವ್ಯವಸ್ಥಾಪಕ ಕಟ್ಟೇರ ಪೂಣಚ್ಚ ಮತ್ತಿತರರು ಉಪಸ್ಥಿತರಿದ್ದರು.
ಉಪಾಧ್ಯಕ್ಷ ಮೇವಡ ವಶ್ಮಾ, ಸೀಮಾ, ಮಂಡೆಟಿರ ಅನಿಲ್, ಮೂಳೆರ ಸುಬ್ಬಯ್ಯ ಇದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ವಿರಾಜಪೇಟೆ : ಕೃಷಿ ಸಂಸ್ಕೃತಿಯ ಪರಿಚಯಕ್ಕೆ ರೋಟರಿ ಶಾಲೆಯ ವಿನೂತನ ಹೆಜ್ಜೆ*

ಸೆಪ್ಟೆಂಬರ್ 23, 2026

*ಮೀನು ಹಿಡಿಯುವ ಸಲಕರಣೆಗಳ ವಿತರಣೆ*

ಸೆಪ್ಟೆಂಬರ್ 23, 2026

*ಮಡಿಕೇರಿಯಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆ : ಆಯುರ್ವೇದ ಪದ್ಧತಿ ಕಾಯಿಲೆ ತಡೆಯುವ ಜೀವನ ವಿಧಾನ : ಡಾ.ಶ್ಯಾಮ್ ಪ್ರಸಾದ್*

ಸೆಪ್ಟೆಂಬರ್ 23, 2026

*ಮೀನು ಹಿಡಿಯುವ ಸಲಕರಣೆಗಳ ವಿತರಣೆ*

ಸೆಪ್ಟೆಂಬರ್ 23, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಸೆ.23 NEWS DESK : ಕೊಡಗು ಜಿಲ್ಲೆಯ ಮೀನುಗಾರಿಕೆ ಇಲಾಖೆಯಲ್ಲಿ 2026-27 ನೇ ಸಾಲಿನಲ್ಲಿ ಕೊಡಗು ಜಿಲ್ಲೆಯ ಮೀನುಗಾರಿಕೆ…

*ಮಡಿಕೇರಿಯಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆ : ಆಯುರ್ವೇದ ಪದ್ಧತಿ ಕಾಯಿಲೆ ತಡೆಯುವ ಜೀವನ ವಿಧಾನ : ಡಾ.ಶ್ಯಾಮ್ ಪ್ರಸಾದ್*

ಸೆಪ್ಟೆಂಬರ್ 23, 2026

*ಶ್ರೀಮಂಗಲದಲ್ಲಿ ಸೆ.26ರಂದು ಹೋಬಳಿ ಮಟ್ಟದ ಪ್ರಜಾಸೇವೆ ಅಭಿಯಾನ*

ಸೆಪ್ಟೆಂಬರ್ 23, 2026

*ಪೋಷಣ ಮಾಸಾಚರಣೆ ಅರಿವು ಕಾರ್ಯಕ್ರಮ : ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಸಮತೋಲಿತ ಆಹಾರ, ಸ್ವಚ್ಛತೆ ಅಗತ್ಯ : ಡಾ.ಸನತ್ ಕುಮಾರ್*

ಸೆಪ್ಟೆಂಬರ್ 23, 2026

*ಕುಂದಚೇರಿ ಗ್ರಾ.ಪಂ ವಿಶೇಷ ಗ್ರಾಮ ಸಭೆ : ಡಾ.ಕಸ್ತೂರಿ ರಂಗನ್ ವರದಿಗೆ ಆಕ್ಷೇಪ*

ಸೆಪ್ಟೆಂಬರ್ 23, 2026

*ವಾಲಿಬಾಲ್‌ನಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆ*

ಸೆಪ್ಟೆಂಬರ್ 23, 2026

*ಆರೋಗ್ಯಪೂರಕ ಜೀವನಶೈಲಿ ರೂಢಿಸಿಕೊಳ್ಳಿ: ಡಾ. ಸುಮುಖ್ ಕರೆ; ರೋಟರಿ ವುಡ್ಸ್ ವತಿಯಿಂದ ಪೋಷಣ್ ಅಭಿಯಾನ್ — ಮಹಿಳೆಯರಿಂದ ವೈವಿಧ್ಯಮಯ ತಿನಿಸುಗಳ ತಯಾರಿ*

ಸೆಪ್ಟೆಂಬರ್ 23, 2026

*ವಿ.ಪಿ.ಶಶಿಧರ್‌ಗೆ ಸೆ.27ರಂದು ಕುಶಾಲನಗರದಲ್ಲಿ ‘ಪೌರ ಸನ್ಮಾನ’*

ಸೆಪ್ಟೆಂಬರ್ 23, 2026

*ಕೊಡಗರಹಳ್ಳಿ ಗ್ರಾಮಸಭೆಯಲ್ಲಿ ಕಸ್ತೂರಿ ರಂಗನ್ ವರದಿ ಕುರಿತು ನಿರ್ಣಯ; ಕೃಷಿ ಹಾಗೂ ಜನಜೀವನಕ್ಕೆ ತೊಂದರೆಯಾಗದಂತೆ ಜಾರಿಗೆ ಒಕ್ಕೊರಲಿನ ಅಭಿಪ್ರಾಯ*

ಸೆಪ್ಟೆಂಬರ್ 23, 2026

**ಮಡಿಕೇರಿ : ಅ.18 ರಂದು ಜಾನಪದ ದಸರಾ : ಕಲಾತಂಡಗಳಿಂದ ಅಜಿ೯ ಆಹ್ವಾನ** 

ಸೆಪ್ಟೆಂಬರ್ 23, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.