Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ವಾಲಿಬಾಲ್‌ನಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆ*
  • *ಆರೋಗ್ಯಪೂರಕ ಜೀವನಶೈಲಿ ರೂಢಿಸಿಕೊಳ್ಳಿ: ಡಾ. ಸುಮುಖ್ ಕರೆ; ರೋಟರಿ ವುಡ್ಸ್ ವತಿಯಿಂದ ಪೋಷಣ್ ಅಭಿಯಾನ್ — ಮಹಿಳೆಯರಿಂದ ವೈವಿಧ್ಯಮಯ ತಿನಿಸುಗಳ ತಯಾರಿ*
  • *ವಿ.ಪಿ.ಶಶಿಧರ್‌ಗೆ ಸೆ.27ರಂದು ಕುಶಾಲನಗರದಲ್ಲಿ ‘ಪೌರ ಸನ್ಮಾನ’*
  • *ಕೊಡಗರಹಳ್ಳಿ ಗ್ರಾಮಸಭೆಯಲ್ಲಿ ಕಸ್ತೂರಿ ರಂಗನ್ ವರದಿ ಕುರಿತು ನಿರ್ಣಯ; ಕೃಷಿ ಹಾಗೂ ಜನಜೀವನಕ್ಕೆ ತೊಂದರೆಯಾಗದಂತೆ ಜಾರಿಗೆ ಒಕ್ಕೊರಲಿನ ಅಭಿಪ್ರಾಯ*
  • **ಮಡಿಕೇರಿ : ಅ.18 ರಂದು ಜಾನಪದ ದಸರಾ : ಕಲಾತಂಡಗಳಿಂದ ಅಜಿ೯ ಆಹ್ವಾನ** 
  • *ಮೂರು ದಿನ ಬ್ಯಾಂಕ್ ಮುಷ್ಕರ : ಸೇವೆಯಲ್ಲಿ ವ್ಯತ್ಯಯ*
  • *ಮಡಿಕೇರಿ : ಅ.18 ರಂದು ಜಾನಪದ ದಸರಾ : ಕಲಾತಂಡಗಳಿಂದ ಅಜಿ೯ ಆಹ್ವಾನ* 
  • *ನೂತನ ಕೊಡಗು ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಅಗತ್ಯ ಸಹಕಾರ : ನಿಯೋಗಕ್ಕೆ ಸಿಎಂ ಭರವಸೆ*
  • *ಕೊಡವ ಸಾಂಸ್ಕೃತಿಕ ಸಿರಿ : ಕೊಡವ ಭಾಷೆ ಸಂವಿಧಾನದ 8 ನೇ ಪರಿಚ್ಛೇದ ಸೇರ್ಪಡೆಗೆ ಮಹೇಶ್ ನಾಚಯ್ಯ ಮನವಿ*
  • *ಪೊನ್ನಂಪೇಟೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆ : ಸೆ.23 ರಿಂದ ವಾಹನ ಸಂಚಾರ ಮಾರ್ಗ ಬದಲಾವಣೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ವಿ.ಪಿ.ಶಶಿಧರ್‌ಗೆ ಸೆ.27ರಂದು ಕುಶಾಲನಗರದಲ್ಲಿ ‘ಪೌರ ಸನ್ಮಾನ’*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ವಿ.ಪಿ.ಶಶಿಧರ್‌ಗೆ ಸೆ.27ರಂದು ಕುಶಾಲನಗರದಲ್ಲಿ ‘ಪೌರ ಸನ್ಮಾನ’*

ಸೆಪ್ಟೆಂಬರ್ 23, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ, NEWS DESK ಸೆ.23: ಅಸಹಾಯಕರು, ಬಡವರು, ಶೋಷಿತರು ಹಾಗೂ ದುರ್ಬಲ ವರ್ಗದವರ ಧ್ವನಿಯಾಗಿ ಕಳೆದ 35 ವರ್ಷಗಳಿಂದ ಸಾರ್ವಜನಿಕ ಬದುಕಿನಲ್ಲಿ ಸೇವೆ ಸಲ್ಲಿಸುತ್ತಿರುವ ಸಾಮಾಜಿಕ ಹೋರಾಟಗಾರ ಹಾಗೂ ಚಿಂತಕ ವಿ.ಪಿ.ಶಶಿಧರ್ ಅವರಿಗೆ ಸಮಾನ ಮನಸ್ಕರು ಹಾಗೂ ಹಿತೈಷಿಗಳ ಬಳಗದ ವತಿಯಿಂದ ಸೆ.27ರಂದು ಕುಶಾಲನಗರದಲ್ಲಿ ‘ಪೌರ ಸನ್ಮಾನ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಳಗದ ಗೌರವಾಧ್ಯಕ್ಷ ಹಾಗೂ ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಕೆ.ಎಸ್.ಕೃಷ್ಣೇಗೌಡ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ದಶಕಗಳಿಂದ ಕುಶಾಲನಗರ ವ್ಯಾಪ್ತಿಯ ಜನರ ಪ್ರಮುಖ ಆಶಯವಾಗಿರುವ ಹಾಗೂ ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರ ಕಾವೇರಿ ತಾಲ್ಲೂಕಿನ ಕನಸನ್ನು ಸಾಕಾರಗೊಳಿಸುವ ಹೋರಾಟದಲ್ಲಿ ವಿ.ಪಿ.ಶಶಿಧರ್ ಸಕ್ರಿಯವಾಗಿ ತೊಡಗಿಸಿಕೊಂಡು ಅವಿಶ್ರಾಂತವಾಗಿ ಶ್ರಮಿಸಿದ್ದಾರೆ. ಜನಸಾಮಾನ್ಯರ ಸಮಸ್ಯೆಗಳ ಪರವಾಗಿ ನಿರಂತರವಾಗಿ ಹೋರಾಡಿರುವ ಅವರ ಸಾರ್ವಜನಿಕ ಸೇವೆಯನ್ನು ಗೌರವಿಸುವ ಉದ್ದೇಶದಿಂದ ಈ ನಾಗರಿಕ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸೆ.27ರಂದು ಸಂಜೆ 5 ಗಂಟೆಗೆ ಕುಶಾಲನಗರದ ತಾವರೆಕೆರೆಯ ಎಸ್‌ಎಲ್‌ಎನ್ ಗ್ರ್ಯಾಂಡ್ ಕನ್ವೆನ್ಷನ್ ಹಾಲ್‌ನಲ್ಲಿ ಸಮಾರಂಭ ನಡೆಯಲಿದೆ. ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಲಿದ್ದು, ಅರಮೇರಿ ಮಠದ ಶ್ರೀಶಾಂತಮಲ್ಲಿ ಕಾರ್ಜುನ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ, ಶಾಸಕ ಹಾಗೂ ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ, ಶಾಸಕ ಹಾಗೂ ಮಾಜಿ ಸಚಿವ ತನ್ವೀರ್ ಸೇಠ್, ಕೊಡಗು ವಿಶ್ವವಿದ್ಯಾಲಯದ ಉಪಕುಲಪತಿ ಅಶೋಕ್ ಸಂಗಪ್ಪ ಆಲೂರ, ಮಾಜಿ ಸಂಸದ ಹಾಗೂ ಮಾಜಿ ಸಚಿವ ಹೆಚ್.ವಿಶ್ವನಾಥ್, ‘ಶಕ್ತಿ’ ದಿನಪತ್ರಿಕೆಯ ಸಂಪಾದಕ ಚಿದ್ವಿಲಾಸ್, ಹಿರಿಯ ಮುಖಂಡ ಎಂ.ಲಕ್ಷ್ಮಣ್, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಧ್ಯಕ್ಷ ನಿಕೇತ್ ರಾಜ್ ಮೌರ್ಯ, ಸಾಮಾಜಿಕ ಚಿಂತಕ ಹೆಚ್.ಕೆ.ವಿವೇಕಾನಂದ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಮಾನ ಮನಸ್ಕ ಹಾಗೂ ಹಿತೈಷಿಗಳ ಬಳಗದ ಅಧ್ಯಕ್ಷ ಅಬ್ದುಲ್ ರಝಾಕ್ ಅಧ್ಯಕ್ಷತೆ ವಹಿಸಲಿದ್ದಾರೆ.

‘ಚುನಾವಣಾ ರಾಜಕಾರಣ ಹಾಗೂ ಪ್ರಜಾಪ್ರಭುತ್ವ’ ವಿಚಾರ ಸಂಕಿರಣ

ನಾಗರಿಕ ಸನ್ಮಾನಕ್ಕೂ ಮುನ್ನ ಸಂಜೆ 4 ಗಂಟೆಗೆ ‘ಚುನಾವಣಾ ರಾಜಕಾರಣ ಹಾಗೂ ಪ್ರಜಾಪ್ರಭುತ್ವ’ ವಿಷಯದ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಪತ್ರಕರ್ತ ರಮೇಶ್ ಕುಟ್ಟಪ್ಪ ಅಧ್ಯಕ್ಷತೆ ವಹಿಸಲಿದ್ದು, ನಿವೃತ್ತ ಶಿಕ್ಷಕ ನಜೀರ್ ಅಹಮ್ಮದ್ ಉದ್ಘಾಟಿಸಲಿದ್ದಾರೆ. ಸಾಮಾಜಿಕ ಚಿಂತಕ ಹಾಗೂ ಹೋರಾಟಗಾರ ಮುನೀರ್ ಕಾಟಿಪಳ್ಳ ವಿಚಾರ ಮಂಡಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೇಶವ ಕಾಮತ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಸ್.ಆರ್.ಮಾದಪ್ಪ, ಜನಪರ ಹೋರಾಟಗಾರ ಪಿ.ಆರ್.ಭರತ್, ರೆಡ್‌ಕ್ರಾಸ್ ಅಧ್ಯಕ್ಷ ಎಸ್.ಕೆ.ಸತೀಶ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೆ.ಎಸ್.ನಾಗೇಶ್, ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ರೇಖಾ ಶಿವಣ್ಣ, ವಕೀಲರ ಸಂಘದ ಅಧ್ಯಕ್ಷ ನಾಗೇಂದ್ರಬಾಬು, ಹಿರಿಯ ರಾಜಕಾರಣಿ ಎಸ್.ಕೆ.ವೀರಪ್ಪ, ಪ್ರಗತಿಪರ ಹೋರಾಟಗಾರ ಡಿ.ಎಸ್.ನಿರ್ವಾಣಪ್ಪ, ಪ್ರಗತಿಪರ ಚಿಂತಕ ನಂದ ಸುಬ್ಬಯ್ಯ, ರೋಟರಿ ಸಂಸ್ಥೆಯ ಪ್ರತಿನಿಧಿ ಮನು ಪೆಮ್ಮಯ್ಯ ಮತ್ತಿತರರು ಉಪಸ್ಥಿತರಿರುವರು ಎಂದು ಕೆ.ಎಸ್.ಕೃಷ್ಣೇಗೌಡ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಮಾನ ಮನಸ್ಕ ಹಾಗೂ ಹಿತೈಷಿಗಳ ಬಳಗದ ಖಜಾಂಚಿ ಹಾಗೂ ಕುಶಾಲನಗರ ಪುರಸಭಾ ಮಾಜಿ ಸದಸ್ಯ ವಿ.ಎಸ್.ಆನಂದ್ ಕುಮಾರ್, ನಿರ್ದೇಶಕ ನವೀದ್ ಖಾನ್, ನಿರ್ದೇಶಕ ಹಾಗೂ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಫೀಕ್ ಖಾನ್, ನಿರ್ದೇಶಕ ಇರ್ಫಾನ್ ಎಂ.ಜೆ., ನಿರ್ದೇಶಕ ಹಾಗೂ ಕೂಡಿಗೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅನಂತ್ ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ವಾಲಿಬಾಲ್‌ನಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆ*

ಸೆಪ್ಟೆಂಬರ್ 23, 2026

*ಆರೋಗ್ಯಪೂರಕ ಜೀವನಶೈಲಿ ರೂಢಿಸಿಕೊಳ್ಳಿ: ಡಾ. ಸುಮುಖ್ ಕರೆ; ರೋಟರಿ ವುಡ್ಸ್ ವತಿಯಿಂದ ಪೋಷಣ್ ಅಭಿಯಾನ್ — ಮಹಿಳೆಯರಿಂದ ವೈವಿಧ್ಯಮಯ ತಿನಿಸುಗಳ ತಯಾರಿ*

ಸೆಪ್ಟೆಂಬರ್ 23, 2026

*ಕೊಡಗರಹಳ್ಳಿ ಗ್ರಾಮಸಭೆಯಲ್ಲಿ ಕಸ್ತೂರಿ ರಂಗನ್ ವರದಿ ಕುರಿತು ನಿರ್ಣಯ; ಕೃಷಿ ಹಾಗೂ ಜನಜೀವನಕ್ಕೆ ತೊಂದರೆಯಾಗದಂತೆ ಜಾರಿಗೆ ಒಕ್ಕೊರಲಿನ ಅಭಿಪ್ರಾಯ*

ಸೆಪ್ಟೆಂಬರ್ 23, 2026

*ಆರೋಗ್ಯಪೂರಕ ಜೀವನಶೈಲಿ ರೂಢಿಸಿಕೊಳ್ಳಿ: ಡಾ. ಸುಮುಖ್ ಕರೆ; ರೋಟರಿ ವುಡ್ಸ್ ವತಿಯಿಂದ ಪೋಷಣ್ ಅಭಿಯಾನ್ — ಮಹಿಳೆಯರಿಂದ ವೈವಿಧ್ಯಮಯ ತಿನಿಸುಗಳ ತಯಾರಿ*

ಸೆಪ್ಟೆಂಬರ್ 23, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಸೆ. 23: ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಹಾಗೂ ಸರಳ ಜೀವನಶೈಲಿಯನ್ನು ರೂಢಿಸಿಕೊಳ್ಳುವ ಮೂಲಕ ಮಹಿಳೆಯರು ತಮ್ಮ…

*ವಿ.ಪಿ.ಶಶಿಧರ್‌ಗೆ ಸೆ.27ರಂದು ಕುಶಾಲನಗರದಲ್ಲಿ ‘ಪೌರ ಸನ್ಮಾನ’*

ಸೆಪ್ಟೆಂಬರ್ 23, 2026

*ಕೊಡಗರಹಳ್ಳಿ ಗ್ರಾಮಸಭೆಯಲ್ಲಿ ಕಸ್ತೂರಿ ರಂಗನ್ ವರದಿ ಕುರಿತು ನಿರ್ಣಯ; ಕೃಷಿ ಹಾಗೂ ಜನಜೀವನಕ್ಕೆ ತೊಂದರೆಯಾಗದಂತೆ ಜಾರಿಗೆ ಒಕ್ಕೊರಲಿನ ಅಭಿಪ್ರಾಯ*

ಸೆಪ್ಟೆಂಬರ್ 23, 2026

**ಮಡಿಕೇರಿ : ಅ.18 ರಂದು ಜಾನಪದ ದಸರಾ : ಕಲಾತಂಡಗಳಿಂದ ಅಜಿ೯ ಆಹ್ವಾನ** 

ಸೆಪ್ಟೆಂಬರ್ 23, 2026

*ಮೂರು ದಿನ ಬ್ಯಾಂಕ್ ಮುಷ್ಕರ : ಸೇವೆಯಲ್ಲಿ ವ್ಯತ್ಯಯ*

ಸೆಪ್ಟೆಂಬರ್ 23, 2026

*ಮಡಿಕೇರಿ : ಅ.18 ರಂದು ಜಾನಪದ ದಸರಾ : ಕಲಾತಂಡಗಳಿಂದ ಅಜಿ೯ ಆಹ್ವಾನ* 

ಸೆಪ್ಟೆಂಬರ್ 23, 2026

*ನೂತನ ಕೊಡಗು ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಅಗತ್ಯ ಸಹಕಾರ : ನಿಯೋಗಕ್ಕೆ ಸಿಎಂ ಭರವಸೆ*

ಸೆಪ್ಟೆಂಬರ್ 23, 2026

*ಕೊಡವ ಸಾಂಸ್ಕೃತಿಕ ಸಿರಿ : ಕೊಡವ ಭಾಷೆ ಸಂವಿಧಾನದ 8 ನೇ ಪರಿಚ್ಛೇದ ಸೇರ್ಪಡೆಗೆ ಮಹೇಶ್ ನಾಚಯ್ಯ ಮನವಿ*

ಸೆಪ್ಟೆಂಬರ್ 22, 2026

*ಪೊನ್ನಂಪೇಟೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆ : ಸೆ.23 ರಿಂದ ವಾಹನ ಸಂಚಾರ ಮಾರ್ಗ ಬದಲಾವಣೆ*

ಸೆಪ್ಟೆಂಬರ್ 22, 2026

*ಆನೆಕಾಡು ಬಳಿಯ ಅಪಘಾತ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ :  ರಸ್ತೆ ಸುರಕ್ಷತಾ ಮಾರ್ಗಸೂಚಿ ಅಳವಡಿಕೆಗೆ ಸೂಚನೆ*

ಸೆಪ್ಟೆಂಬರ್ 22, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.