Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಜವಾಹರ ನವೋದಯ ವಿದ್ಯಾಲಯಕ್ಕೆ ಶೇ.100 ಫಲಿತಾಂಶ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಜವಾಹರ ನವೋದಯ ವಿದ್ಯಾಲಯಕ್ಕೆ ಶೇ.100 ಫಲಿತಾಂಶ

ಜುಲೈ 6, 20231 Min ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ ಜು.6 : ಕೊಡಗು ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆಯದ ಜವಾಹರ ನವೋದಯ ವಿದ್ಯಾಲಯದ 2023 ನೇ ಸಾಲಿನ ಸಿಬಿಎಸ್‍ಇ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, 10 ಮತ್ತು 12 ನೇ ತರಗತಿಗಳಲ್ಲಿ ವಿದ್ಯಾರ್ಥಿಗಳು 100 ಕ್ಕೆ 100 ಉತ್ತೀರ್ಣರಾಗಿದ್ದಾರೆ ಎಂದು ಗಾಳಿಬೀಡು ಜವಾಹರ ನವೋದಯ ವಿದ್ಯಾಲಯದ ಪ್ರಾಂಶುಪಾಲರಾದ ಪಂಕಜಾಕ್ಷನ್  ತಿಳಿಸಿದ್ದಾರೆ.
ಫಲಿತಾಂಶದಲ್ಲಿ ವಿದ್ಯಾಲಯವು ಕೊಡಗು ಜಿಲ್ಲೆಯಲ್ಲಿ ಎಂದಿನಂತೆ ಮುನ್ನಡೆ ಸಾಧಿಸಿದೆ. ಹನ್ನೆರಡನೇ ತರಗತಿಯಲ್ಲಿ 70 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲರೂ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ. 54 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಎಸ್.ಯು.ಸಾತ್ವಿಕ ಶೇ.94.4(ಪ್ರಥಮ), ಎಸ್.ಪಿ.ವೈಶಿಣಿ ಶೇ.90.8 (ದ್ವಿತೀಯ), ಬಿ.ಎಚ್.ಸಾಕ್ಷಿ ಶೇ.90(ತೃತೀಯ) ಸ್ಥಾನ ಪಡೆದಿದ್ದಾರೆ. ಹಾಗೆಯೇ ವಾಣಿಜ್ಯ ವಿಭಾಗದಲ್ಲಿ ಬಿ.ಜಿ.ದುರ್ಗೇಶ್ ಶೇ.95.4(ಪ್ರಥಮ), ಎಚ್.ಪಿ.ರಕ್ಷಯ ಶೇ.94 (ದ್ವಿತೀಯ), ಎಂ.ಕಾವೇರಿ ಶೇ.90 (ತೃತೀಯ) ಸ್ಥಾನ ಪಡೆದಿದ್ದಾರೆ.
ಹತ್ತನೇ ತರಗತಿಯಲ್ಲಿ 77 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ. ಇವರಲ್ಲಿ 68 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 39 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕೆ.ಜೆ.ನಿಧಿ ಶೇ.97 (ಪ್ರಥಮ), ಎಸ್.ಪ್ರತೀಕ್ಷಾ ಶೇ.94.8 (ದ್ವಿತೀಯ) ಎಂ.ಎ.ರಿಶಿಕಾ ಶೇ.92.8 (ತೃತೀಯ) ಸ್ಥಾನ ಪಡೆದಿದ್ದಾರೆ.
12 ನೇ ತರಗತಿ ವಾಣಿಜ್ಯ ವಿಭಾಗದ ಶೀಘ್ರಲಿಪಿ ವಿಷಯದಲ್ಲಿ 6 ವಿದ್ಯಾರ್ಥಿಗಳು 100 ಕ್ಕೆ 100 ಅಂಕ ಪಡೆದು ಗಣನೀಯ ಸಾಧನೆ ಮಾಡಿದ್ದಾರೆ. ಅಲ್ಲದೇ ವಿಷಯ ಸರಾಸರಿಯಲ್ಲಿ ವಿದ್ಯಾಲಯವು ದೇಶದಲ್ಲೇ ಮೊದಲ ಸ್ಥಾನ ಪಡೆದು ವಿದ್ಯಾಲಯದ ಹೆಸರನ್ನು ಉತ್ತುಂಗಕ್ಕೇರಿಸಿದ್ದಾರೆ. ಉನ್ನತ ಸಾಧನೆ ಮಾಡಿದ ಮತ್ತು ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು, ಹೆಚ್ಚಿನ ಅಂಕ ಪಡೆದು ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಪ್ರಾಚಾರ್ಯರು, ಶಿಕ್ಷಕರು, ಸಿಬ್ಬಂದಿಯವರು ಅಭಿನಂದಿಸಿದ್ದಾರೆ.

Follow us Follow us
Share. WhatsApp Facebook Twitter Email Telegram Copy Link

Related Posts

ಡ್ರಗ್ ವ್ಯಸನದ ವಿರುದ್ಧ ಶಿಕ್ಷಣ ಸಂಸ್ಥೆಗಳಲ್ಲಿ ಜಾಗೃತಿ ಮೂಡಿಸಿ : ಅನಿಲ್ ಹೆಚ್.ಟಿ.

ಅಕ್ಟೋಬರ್ 27, 2026

ಕೊಡಗು ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಲೋಕೇಶ್ ಸಾಗರ್ ಅಭ್ಯರ್ಥಿ: ಕನ್ನಡಸಿರಿ ಸ್ನೇಹ ಬಳಗದ ನಿರ್ಧಾರ

ಅಕ್ಟೋಬರ್ 27, 2026

ಕೊಡಗು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬಿಜೆಪಿ ಮುತ್ತಿಗೆ : ಪ್ರಧಾನಿ ಮೋದಿ ವಿರುದ್ಧದ ಹೇಳಿಕೆಗೆ ಕ್ಷಮೆಯಾಚನೆಗೆ ಆಗ್ರಹ

ಅಕ್ಟೋಬರ್ 27, 2026

ಕೊಡಗು ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಲೋಕೇಶ್ ಸಾಗರ್ ಅಭ್ಯರ್ಥಿ: ಕನ್ನಡಸಿರಿ ಸ್ನೇಹ ಬಳಗದ ನಿರ್ಧಾರ

ಅಕ್ಟೋಬರ್ 27, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಅ.27 NEWS DESK  : ಮುಂಬರುವ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಲೋಕೇಶ್…

ಕೊಡಗು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬಿಜೆಪಿ ಮುತ್ತಿಗೆ : ಪ್ರಧಾನಿ ಮೋದಿ ವಿರುದ್ಧದ ಹೇಳಿಕೆಗೆ ಕ್ಷಮೆಯಾಚನೆಗೆ ಆಗ್ರಹ

ಅಕ್ಟೋಬರ್ 27, 2026

ಸುಂಟಿಕೊಪ್ಪ ಆರೋಗ್ಯ ಕೇಂದ್ರದ ಸಮಸ್ಯೆಗಳಿಗೆ ಶೀಘ್ರ ಪರಿಹಾರ: ಡಿಎಚ್‌ಒ ಸತೀಶ್ ಕುಮಾರ್ ಭರವಸೆ; ವೈದ್ಯರು, ಔಷಧಿಗಳ ಕೊರತೆ ನೀಗಿಸಲು ಕ್ರಮ; ಸ್ವಚ್ಛತೆ ಮತ್ತು ಕಟ್ಟಡ ದುರಸ್ತಿಗೆ ₹10 ಲಕ್ಷ ಅನುದಾನ ಬಿಡುಗಡೆ

ಅಕ್ಟೋಬರ್ 27, 2026

ಸ್ವಚ್ಛ ಕಾವೇರಿ ಜಾಗೃತಿ ರಥಯಾತ್ರೆಗೆ ಚಾಲನೆ : ಪ್ರಕೃತಿಯೊಂದಿಗೆ ಬದುಕಲು ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಕರೆ

ಅಕ್ಟೋಬರ್ 27, 2026

ಡಾ. ಲಲಿತ ಕೆ.ಪಿ. ಅವರಿಗೆ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಪ್ರದಾನ; ಜಾನಪದದ ಮೂಲ ಬೇರುಗಳಿಲ್ಲದೆ ಆಧುನಿಕತೆ ಇಲ್ಲ: ಡಾ. ಲಲಿತ ಕೆ.ಪಿ.

ಅಕ್ಟೋಬರ್ 27, 2026

ಪತ್ತಲೋಧಿ ದಿನದಂದು ಸಿಎನ್‌ಸಿಯಿಂದ ತರ್ಪಣ ಅರ್ಪಣೆ

ಅಕ್ಟೋಬರ್ 27, 2026

ಶಾಸಕರ ಫ್ಲೆಕ್ಸ್ ಹರಿದವರ ವಿರುದ್ಧ ಕಠಿಣ ಕ್ರಮಕ್ಕೆ ಕೋಚನ ಚೇತನ್ ಆಗ್ರಹ

ಅಕ್ಟೋಬರ್ 27, 2026

ಶಾಸಕರ ಫ್ಲೆಕ್ಸ್ ಗೆ ಹಾನಿ ಪ್ರಕರಣ : ಮಡಿಕೇರಿ ನಗರ ಮಹಿಳಾ ಕಾಂಗ್ರೆಸ್ ಖಂಡನೆ

ಅಕ್ಟೋಬರ್ 27, 2026

ಶಾಸಕರ ಫ್ಲೆಕ್ಸ್ ಹರಿದವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಕವನ್ ಕೊತ್ತೋಳಿ ಆಗ್ರಹ

ಅಕ್ಟೋಬರ್ 27, 2026

ಶಾಸಕರ ಫ್ಲೆಕ್ಸ್ ಗೆ ಹಾನಿ ಖಂಡನೀಯ : ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವ ಚಾಳಿಯನ್ನು ಬಿಜೆಪಿ ನಿಲ್ಲಿಸಲಿ

ಅಕ್ಟೋಬರ್ 27, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.