Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕೊಡಗಿನ ಮೂಲಕ ಯಾವುದೇ ರೈಲು ಮಾರ್ಗದ ಪ್ರಸ್ತಾವನೆ ಇಲ್ಲ : ಸಂಸದ ಯದುವೀರ್*
  • *ಶಾಸಕದ್ವಯರಿಗೆ ಸಚಿವ ಸ್ಥಾನ ನೀಡಲು ಮಡಿಕೇರಿ ನಗರ ಮಹಿಳಾ ಕಾಂಗ್ರೆಸ್ ಒತ್ತಾಯ*
  • *ಕೊಡಗಿನ ಇಬ್ಬರು ಶಾಸಕರಿಗೆ ಸಚಿವ ಸ್ಥಾನ ನೀಡಲು ತೀಯನ್ ಮಹಾಸಭಾ ಒತ್ತಾಯ*
  • *ಶಿರಂಗಾಲದಲ್ಲಿ ವಿಶ್ವ ಹಾಲು ದಿನಾಚರಣೆ : ಒಂದು ದಿನಕ್ಕೆ 16 ಲಕ್ಷ ಲೀ. ಹಾಲು ಸಂಗ್ರಹ : ಜಿಲ್ಲಾ ನಿರ್ದೇಶಕ ಹೇಮಂತ್ ಕುಮಾರ್*
  • *ಮಾಸ್ಟರ್ಸ್ ಅಥ್ಲೆಟಿಕ್ಸ್ ನಲ್ಲಿ ಪೊನ್ನಮ್ಮ ಸಾಧನೆ* 
  • *ಕೊಡಗು ಜಿಲ್ಲಾ ವೀರಶೈವ ಜಂಗಮ ಅರ್ಚಕರು ಪುರೋಹಿತರ ವಾರ್ಷಿಕ ಮಹಾಸಭೆ*
  • *ಕೊಡಗು : ಶಾಲಾ ಪ್ರಾರಂಭೋತ್ಸವ : ವಿದ್ಯಾರ್ಥಿಗಳ ಆಸಕ್ತಿಯಿಂದ ಸರ್ಕಾರಿ ಶಾಲೆಯ ಗುಣಮಟ್ಟ ಹೆಚ್ಚುತ್ತದೆ : ಬಸವರಾಜು*
  • *ಪೊನ್ನಂಪೇಟೆ ತಾಲ್ಲೂಕು ಕನ್ನಡ ಪ್ರಥಮ ಸಾಹಿತ್ಯ ಸಮ್ಮೇಳನ :  ಮಕ್ಕಳಲ್ಲಿ ಕನ್ನಡ ಪ್ರೇಮ ಬೆಳೆಸಲು ಟಿ.ಎಸ್.ಗೋಪಾಲ್ ಕರೆ* 
  • *ಶಾಲಾ ಪ್ರಾರಂಭೋತ್ಸವ : ಸಿಹಿ ಹಂಚಿ ವಿದ್ಯಾರ್ಥಿಗಳನ್ನು ಬರಮಾಡಿಕೊಂಡ ಶಿಕ್ಷಕರು*
  • *ನಿವೃತ್ತಿ ನಂತರವೂ ಶಿಕ್ಷಣಕ್ಕೆ ಸಮರ್ಪಣೆ : ಒಂದು ವರ್ಷ ಸೇವೆ ಮುಂದುವರೆಸುವ ಮಹತ್ವದ ನಿರ್ಧಾರ ಕೈಗೊಂಡ ಶಿಕ್ಷಕಿ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡಗು : ಮುಸುಕಿನ ಜೋಳದಲ್ಲಿ ಸೈನಿಕ ಹುಳುವಿನ ಭಾದೆ : ಕೃಷಿ ಅಧಿಕಾರಿಗಳಿಂದ ಪರಿಶೀಲನೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೊಡಗು : ಮುಸುಕಿನ ಜೋಳದಲ್ಲಿ ಸೈನಿಕ ಹುಳುವಿನ ಭಾದೆ : ಕೃಷಿ ಅಧಿಕಾರಿಗಳಿಂದ ಪರಿಶೀಲನೆ*

ಜುಲೈ 10, 20232 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜು.10 : ಜಿಲ್ಲೆಯಲ್ಲಿ ಸುಮಾರು 2075 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳವನ್ನು ಬಿತ್ತನೆ ಮಾಡಿರುತ್ತಾರೆ. ಆದರೆ ಇದೀಗ ಮುಸುಕಿನ ಜೋಳಕ್ಕೆ ಹೆಬ್ಬಾಲೆ, ಕೂಡಿಗೆ ಮತ್ತು ಮರೂರು ಗ್ರಾಮಗಳ ಸುತ್ತಮುತ್ತ ಬಿತ್ತನೆ ಮಾಡಿದ ಮುಸುಕಿನ ಜೋಳದಲ್ಲಿ ಸೈನಿಕ ಹುಳು ಈ ವರ್ಷ ಈಗಾಗಲೇ ಕಾಣಿಸಿಕೊಂಡಿದ್ದು, ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರಾದ ಶಭಾನಾ ಎಂ ಶೇಖ್, ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ಡಾ.ವೀರೇಂದ್ರ ಕುಮಾರ್‍ಕೆ.ವಿ ಮತ್ತು ಕೃಷಿ ಇಲಾಖೆಯ ಕೃಷಿ ಅಧಿಕಾರಿ ನವ್ಯ ನಾಣಯ್ಯ ಇವರನ್ನು ಒಳಗೊಂಡ ತಂಡ ಕುಶಾಲನಗರ ತಾಲ್ಲೂಕಿನ ಮರೂರು ಗ್ರಾಮದ ಮಹೇಶ್ ಮತ್ತು ಕಪನಪ್ಪನವರ ಮುಸುಕಿನ ಜೋಳದ ಗದ್ದೆಗಳಿಗೆ ಭೇಟಿ ಕೊಟ್ಟು, ಸೈನಿಕ ಹುಳುವಿನ ಭಾದೆಯನ್ನು ಪರೀಶೀಲಿಸಿದರು.

ನಂತರ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಭಾನಾ ಎಂ ಶೇಖ್ ಅವರು ರೈತರಿಗೆ ಈ ಕೀಟದ ಹತೋಟಿಯ ಬಗ್ಗೆ ಮುಂಜಾಗರೂಕತೆಯನ್ನು ತೆಗೆದುಕೊಳ್ಳಬೇಕೆಂದು ತಿಳಿಸಿದರು. ಗೋಣಿಕೊಪ್ಪಲು ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಇಲಾಖೆ, ಕೊಡಗು ಜಿಲ್ಲೆ ಇವರುಗಳು ರೈತರಿಗೆ ಈ ಕೀಟದ ಹತೋಟಿಯ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಿದ್ದಾರೆ.
ಸೈನಿಕ ಹುಳು ಕೀಟವು ಹಗಲು ವೇಳೆಯಲ್ಲಿ ಮಣ್ಣು, ಕಾಂಡದ ಮಧ್ಯ ಮತ್ತು ಗರಿಗಳ ತಳಭಾಗದಲ್ಲಿ ವಾಸಿಸುತ್ತಿದ್ದು, ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಇದರ ಚಟುವಟಿಕೆ ಕ್ರೀಯಾಶೀಲವಾಗುತ್ತದೆ. ಈ ಕೀಟವು ಮುಸುಕಿನ ಜೋಳದ ಎಲೆ ಮತ್ತು ತೆನೆಯನ್ನು ಕತ್ತರಿಸುವ ಕಾರ್ಯ ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಕಂಡುಬರುತ್ತದೆ. ಹಗಲಿನ ಹೊತ್ತಿನಲ್ಲಿ ಈ ಕೀಟದ ಕಾರ್ಯಚಟುವಟಿಕೆ ಕಣ್ಣಿಗೆ ಕಾಣದಂತಾಗಿ ರೈತರಲ್ಲಿ ಆತಂಕ ಪಡುವ ಪರಿಸ್ಥಿಯನ್ನು ಈ ಕೀಟವು ತರುತ್ತದೆ. ತೀವ್ರವಾಗಿ ಹಾನಿಗೊಳಗಾದ ಬೆಳೆಯಲ್ಲಿ ಎಲೆಯ ದಿಂಡು ಮಾತ್ರ ಕಾಣಸಿಗುತ್ತದೆ ಎಂದು ಸೈನಿಕ ಹುಳುವಿನ ಕುರಿತು ಮಾಹಿತಿ ನೀಡಿದರು.
ಹತೋಟಿ ಕ್ರಮಗಳು: ದೀಪಗಳಿಗೆ ಪತಂಗವು ಆಕರ್ಷಣೆಯಾಗುವುದರಿಂದ ರಾತ್ರಿ ವೇಳೆ ದೀಪದ ಬಲೆಯನ್ನು ಅಳವಡಿಸಬೇಕು. ಜಮೀನಿನ ಸುತ್ತಾ ಒಂದು ಅಡಿ ಆಳ ಗುಂಡಿ ತೆಗೆದು ಅದಕ್ಕೆ ಎಲೆಗಳಿಂದ ಮುಚ್ಚುವುದರಿಂದ ಹಗಲಿನಲ್ಲಿ ಮರಿಗಳು ಬಂದು ಶೇಖರಣಯಾಗುತ್ತವೆ. ಗುಂಡಿಗಳಿಗೆ ರಾಸಾಯನಿಕ ಸಿಂಪರಣೆ ಮಾಡಿ ಮರಿಗಳನ್ನು ಬಹುಭಾಗ ನಾಶಪಡಿಸಬಹುದು. ಗುಂಡಿಗೆ ಬೂದಿಯನ್ನು ಹಾಕುವುದರಿಂದ ಹುಳುಗಳ ಚಲನೆಯನ್ನು ನಿಯಂತ್ರಿಸಬಹುದು. ಈ ಕೀಟದ ಭಾದೆ ಮುಸುಕಿನ ಜೋಳದಲ್ಲಿ ಕಂಡು ಬಂದರೆ ಸಂಜೆ ವೇಳೆಯಲ್ಲಿ ಅಂದರೆ ಸಾಯಂಕಾಲ 5.30ರ ನಂತರ ಎಮಾಮೆಕ್ಟಿನ್ ಬೆಂಜೋಯೆಟ್ 0.3 ಗ್ರಾಂ ಪ್ರತಿ ಲೀ. ನೀರಿಗೆ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು. ಈ ಕೀಟದ ಭಾದೆಯು ಸಂಜೆ ಹೊತ್ತು ಕ್ರೀಯಶೀಲವಾಗಿರುವುದರಿಂದ ಸಿಂಪರಣೆಯನ್ನು ಕಡ್ಡಾಯವಾಗಿ ಸಂಜೆ ಹೊತ್ತಿನಲ್ಲಿಯೇ ಮಾಡಬೇಕು.
ಹೆಚ್ಚಿನ ಮಾಹಿತಿಗೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಹಾಗೂ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳನ್ನು ಸಂರ್ಪಕಿಸಬಹುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಭಾನಾ ಎಂ ಶೇಖ್ ತಿಳಿಸಿದ್ದಾರೆ.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕೊಡಗಿನ ಮೂಲಕ ಯಾವುದೇ ರೈಲು ಮಾರ್ಗದ ಪ್ರಸ್ತಾವನೆ ಇಲ್ಲ : ಸಂಸದ ಯದುವೀರ್*

ಜೂನ್ 2, 2026

*ಶಾಸಕದ್ವಯರಿಗೆ ಸಚಿವ ಸ್ಥಾನ ನೀಡಲು ಮಡಿಕೇರಿ ನಗರ ಮಹಿಳಾ ಕಾಂಗ್ರೆಸ್ ಒತ್ತಾಯ*

ಜೂನ್ 2, 2026

*ಕೊಡಗಿನ ಇಬ್ಬರು ಶಾಸಕರಿಗೆ ಸಚಿವ ಸ್ಥಾನ ನೀಡಲು ತೀಯನ್ ಮಹಾಸಭಾ ಒತ್ತಾಯ*

ಜೂನ್ 2, 2026

*ಶಾಸಕದ್ವಯರಿಗೆ ಸಚಿವ ಸ್ಥಾನ ನೀಡಲು ಮಡಿಕೇರಿ ನಗರ ಮಹಿಳಾ ಕಾಂಗ್ರೆಸ್ ಒತ್ತಾಯ*

ಜೂನ್ 2, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಜೂ.2 : ರಾಜ್ಯ ಸರಕಾರದ ನೂತನ ಸಚಿವ ಸಂಪುಟದಲ್ಲಿ ಕೊಡಗು ಜಿಲ್ಲೆಯ ಶಾಸಕದ್ವಯರಿಗೆ ಸಚಿವ ಸ್ಥಾನ…

*ಕೊಡಗಿನ ಇಬ್ಬರು ಶಾಸಕರಿಗೆ ಸಚಿವ ಸ್ಥಾನ ನೀಡಲು ತೀಯನ್ ಮಹಾಸಭಾ ಒತ್ತಾಯ*

ಜೂನ್ 2, 2026

*ಶಿರಂಗಾಲದಲ್ಲಿ ವಿಶ್ವ ಹಾಲು ದಿನಾಚರಣೆ : ಒಂದು ದಿನಕ್ಕೆ 16 ಲಕ್ಷ ಲೀ. ಹಾಲು ಸಂಗ್ರಹ : ಜಿಲ್ಲಾ ನಿರ್ದೇಶಕ ಹೇಮಂತ್ ಕುಮಾರ್*

ಜೂನ್ 1, 2026

*ಮಾಸ್ಟರ್ಸ್ ಅಥ್ಲೆಟಿಕ್ಸ್ ನಲ್ಲಿ ಪೊನ್ನಮ್ಮ ಸಾಧನೆ* 

ಜೂನ್ 1, 2026

*ಕೊಡಗು ಜಿಲ್ಲಾ ವೀರಶೈವ ಜಂಗಮ ಅರ್ಚಕರು ಪುರೋಹಿತರ ವಾರ್ಷಿಕ ಮಹಾಸಭೆ*

ಜೂನ್ 1, 2026

*ಕೊಡಗು : ಶಾಲಾ ಪ್ರಾರಂಭೋತ್ಸವ : ವಿದ್ಯಾರ್ಥಿಗಳ ಆಸಕ್ತಿಯಿಂದ ಸರ್ಕಾರಿ ಶಾಲೆಯ ಗುಣಮಟ್ಟ ಹೆಚ್ಚುತ್ತದೆ : ಬಸವರಾಜು*

ಜೂನ್ 1, 2026

*ಪೊನ್ನಂಪೇಟೆ ತಾಲ್ಲೂಕು ಕನ್ನಡ ಪ್ರಥಮ ಸಾಹಿತ್ಯ ಸಮ್ಮೇಳನ :  ಮಕ್ಕಳಲ್ಲಿ ಕನ್ನಡ ಪ್ರೇಮ ಬೆಳೆಸಲು ಟಿ.ಎಸ್.ಗೋಪಾಲ್ ಕರೆ* 

ಜೂನ್ 1, 2026

*ಶಾಲಾ ಪ್ರಾರಂಭೋತ್ಸವ : ಸಿಹಿ ಹಂಚಿ ವಿದ್ಯಾರ್ಥಿಗಳನ್ನು ಬರಮಾಡಿಕೊಂಡ ಶಿಕ್ಷಕರು*

ಜೂನ್ 1, 2026

*ನಿವೃತ್ತಿ ನಂತರವೂ ಶಿಕ್ಷಣಕ್ಕೆ ಸಮರ್ಪಣೆ : ಒಂದು ವರ್ಷ ಸೇವೆ ಮುಂದುವರೆಸುವ ಮಹತ್ವದ ನಿರ್ಧಾರ ಕೈಗೊಂಡ ಶಿಕ್ಷಕಿ*

ಜೂನ್ 1, 2026

*ಕುಶಾಲನಗರದಲ್ಲಿ 186ನೇ ಕಾವೇರಿ ನದಿಗೆ ಮಹಾ ಆರತಿ : ನದಿ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ : ಕಿರಣ್ ಜಿ.ಗೌರಯ್ಯ*

ಜೂನ್ 1, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.