Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಕಾರ್ಯಪ್ಪ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ “ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕಾರ್ಯಾಗಾರ”
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಕಾರ್ಯಪ್ಪ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ “ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕಾರ್ಯಾಗಾರ”

ಜುಲೈ 12, 20232 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ ಜು.12 :  ಕೊಡಗಿನ ಪ್ರತಿ ಮನೆಯಲ್ಲಿ ಓರ್ವ ಸದಸ್ಯರನ್ನು ರಾಜ್ಯ ಮತ್ತು ಕೇಂದ್ರ ಸರಕಾರಿ ಉದ್ಯೋಗಿಯನ್ನಾಗಿ ಮಾಡುವ ಅಗತ್ಯತೆ ಹೆಚ್ಚಿದೆ. ಕೊಡಗಿನ ಯುವಕರು ಕ್ರೀಡೆಯ ಮೂಲಕವೇ ಪೊಲೀಸ್ ಇಲಾಖೆಯಲ್ಲಿ ಹೆಚ್ಚಿನ ಅವಕಾಶವನ್ನು ಪಡೆದುಕೊಳ್ಳಬಹುದು. ಆದರೆ ದುರಾದೃಷ್ಟವಶಾತ್ ಕೊಡಗಿನ ಯುವ ತಲೆಮಾರು ಸರಕಾರಿ ಉದ್ಯೋಗವನ್ನು ಪಡೆದುಕೊಳ್ಳುವ ಬಗ್ಗೆ ತಾತ್ಸಾರ ಮನೋಭಾವನ್ನು ಹೊಂದಿದ್ದಾರೆ. ಈ ಕುರಿತು ನಮ್ಮೊಳಗೆ ನಾವು ನಮ್ಮನ್ನು ಪರಾಮರ್ಶೆಗೆ ಒಳಪಡಿಸಿಕೊಳ್ಳಬೇಕು ಎಂದು ಕೊಡಗು ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಡಾ.ರೂಪಾ ಅಭಿಪ್ರಾಯಪಟ್ಟರು.

ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಐಕ್ಯೂಎಸಿ, ಪ್ಲೇಸ್ ಮೆಂಟ್ ಮತ್ತು ಸ್ಕಿಲ್ ಡೆವಲಪ್ಮೆಂಟ್ ಕೋಶ( ವಿಭಾಗದ)ಗಳ ವತಿಯಿಂದ ಜಿಲ್ಲಾ ಉದ್ಯೋಗ ವಿನಿಮಯ ಮಾಹಿತಿ ಕೇಂದ್ರದ ಸಹಯೋಗದಲ್ಲಿ ನಡೆಸಲಾದ ಉದ್ಯೋಗ ಮಾಹಿತಿ ಮತ್ತು‌ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸರಕಾರಿ ಮತ್ತು ಖಾಸಗಿ ಔದ್ಯೋಗಿಕ ಅವಕಾಶಗಳ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡಿದ ಐಕ್ಯೂಎಸಿ ಕೋಶದ ಸಂಯೋಜಕ ಡಾ. ಆರ್.ರಾಜೇಂದ್ರ  ಮಾತನಾಡಿ, ವಿವಿಧ ಹುದ್ದೆಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಇದೊಂದು ಸಂಕ್ರಮಣ ಕಾಲ. ಮಾನವಸಂಪನ್ಮೂಲ ದೇಶ ಅಭಿವೃದ್ಧಿಗೆ ಪೂರಕವಾಗಿರಬೇಕು. ನಮ್ಮ ದೇಶದಲ್ಲಿ 7.43ರಷ್ಟು ನಿರುದ್ಯೋಗದ ಪ್ರಮಾಣ ಇದೆ. ಯುವ ಜನಾಂಗವನ್ನು ಸ್ವ ಉದ್ಯೋಗಿಗಳನ್ನಾಗಿ ಮಾಡಲು ಹಲವು ನೆಲೆಯಲ್ಲಿ ಶೈಕ್ಷಣಿಕ ಸಂಸ್ಥೆಗಳು ಶ್ರಮಿಸಬೇಕಾಗಿದೆ. ಶಿಕ್ಷಣದ ಜೊತೆಯಲ್ಲಿ ತರಬೇತಿ ಮತ್ತು ಕೌಶಲ್ಯದಿಂದ ಔದ್ಯೋಗಿಕ ಅವಕಾಶ ಕಲ್ಪಿಸಿಕೊಟ್ಟರೆ ಸುಭದ್ರವಾದ ಆರ್ಥಿಕತೆಯನ್ನು ಕಟ್ಟಲು ಸಾಧ್ಯ ಎಂದರು.

ವಿಶ್ವ ಬ್ಯಾಂಕ್ ನ ವರದಿಯ ಪ್ರಕಾರ ಜಿಡಿಪಿಯ ಪ್ರಮಾಣ ಹೆಚ್ಚಾಗಲು ಕೌಶಲ್ಯ ಆಧಾರಿತವಾದ ಔದ್ಯೋಗಿಕ ನೆಲೆಗಟ್ಟು ಅಗತ್ಯವಾಗಿದೆ. ಉದ್ಯೋಗವು ಮನುಷ್ಯರ ಲಕ್ಷಣ. ಸಾಮಾನ್ಯ ಜನತೆಯು ಔದ್ಯೋಗಿಕ ಬದುಕಿನ ಮೂಲಕ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಪ್ರತಿ ವರ್ಷ ಶೈಕ್ಷಣಿಕ ಸಂಸ್ಥೆಯಿಂದ ಸಾವಿರಾರು ವಿದ್ಯಾರ್ಥಿಗಳು ಉತ್ಪಾದಿಸಲ್ಪಡುತ್ತಾರೆ. ಅವರೆಲ್ಲರೂ ಸಮಗ್ರ ಆರ್ಥಿಕ ಪ್ರಗತಿಗೆ ಸಹಕಾರಿಯಾಗಬೇಕಾದರೆ ಉದ್ಯೋಗಿಗಳಾಗಬೇಕು ಎಂದು ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ. ಬಿ. ರಾಘವ  ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ಪ್ರಾಧ್ಯಾಪಕ  ರವಿಶಂಕರ್, ಪ್ರೊ. ಗಾಯತ್ರಿ ದೇವಿ, ಡಾ. ಪ್ರದೀಪ್ ಭಂಡಾರಿ, ಡಾ.ಶೈಲಶ್ರೀ, ಡಾ.ರೇಣುಶ್ರೀ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿಗಳು ಉಪಸ್ಥಿತರಿದ್ದರು.

ಅರ್ಥಶಾಸ್ತ್ರ ವಿಭಾಗದ ಅಧ್ಯಾಪಕ  ಸಚಿನ್ ನಿರೂಪಿಸಿದರು. ಕಾರ್ಯಾಗಾರದ ಕೊನೆಯಲ್ಲಿ ವಿದ್ಯಾರ್ಥಿಗಳ ಜೊತೆಯಲ್ಲಿ ಪ್ರಶ್ನೋತ್ತರ ಸಂವಾದವನ್ನು ಏರ್ಪಡಿಸಲಾಯಿತು.

Follow us Follow us
Share. WhatsApp Facebook Twitter Email Telegram Copy Link

Related Posts

ಜಿಲ್ಲಾ ಮಟ್ಟದ ಉದ್ದ ಜಿಗಿತ ಸ್ಪರ್ಧೆಯಲ್ಲಿ ಸಂತ ಅನ್ನಮ್ಮ ಶಾಲೆಯ ಆರ್ಯನ್ ಕುನ್ವರ್‌ಗೆ ಪ್ರಥಮ ಸ್ಥಾನ

ಅಕ್ಟೋಬರ್ 29, 2026

ಕೊಡಗು ಜಿಲ್ಲೆಗೆ ನೂತನ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಜಯಲಕ್ಷ್ಮಿ ರಾಯಕೋಡ ಅಧಿಕಾರ ಸ್ವೀಕಾರ

ಅಕ್ಟೋಬರ್ 29, 2026

ಭರತನಾಟ್ಯ ಹಿರಿಯರ ವಿಭಾಗದ ಪರೀಕ್ಷೆಯಲ್ಲಿ ತುಶಾಲಿಗೆ ಶೇ.90 ಅಂಕ

ಅಕ್ಟೋಬರ್ 29, 2026

ಕೊಡಗು ಜಿಲ್ಲೆಗೆ ನೂತನ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಜಯಲಕ್ಷ್ಮಿ ರಾಯಕೋಡ ಅಧಿಕಾರ ಸ್ವೀಕಾರ

ಅಕ್ಟೋಬರ್ 29, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಅ.29: ಕೊಡಗು ಜಿಲ್ಲೆಯ ನೂತನ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಜಯಲಕ್ಷ್ಮಿ ರಾಯಕೋಡ ಅವರು ಗುರುವಾರ ಅಧಿಕಾರ ವಹಿಸಿಕೊಂಡಿದ್ದಾರೆ.…

ಭರತನಾಟ್ಯ ಹಿರಿಯರ ವಿಭಾಗದ ಪರೀಕ್ಷೆಯಲ್ಲಿ ತುಶಾಲಿಗೆ ಶೇ.90 ಅಂಕ

ಅಕ್ಟೋಬರ್ 29, 2026

ನ. 22ರಂದು ಮಡಿಕೇರಿಯಲ್ಲಿ ‘ಕನ್ನಡ ಹಬ್ಬ’ ಸಾಂಸ್ಕೃತಿಕ ಕಾರ್ಯಕ್ರಮ; ಮಕ್ಕಳು, ವಿದ್ಯಾರ್ಥಿಗಳು ಹಾಗೂ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳ ಆಯೋಜನೆ

ಅಕ್ಟೋಬರ್ 29, 2026

ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಕಾಂಗ್ರೆಸ್‌ಗೆ ಅಪನಂಬಿಕೆ: ಸಂಸದ ಬ್ರಿಜೇಶ್ ಚೌಟ ಟೀಕೆ

ಅಕ್ಟೋಬರ್ 29, 2026

ಕ್ರೀಡೆಯಲ್ಲಿ ಸರ್ವದೈವತ ಪ್ರೌಢಶಾಲೆಗೆ ಹ್ಯಾಟ್ರಿಕ್ ಸಮಗ್ರ ಪ್ರಶಸ್ತಿಯ ಗರಿ

ಅಕ್ಟೋಬರ್ 29, 2026

ಬಿಜೆಪಿ ಆಡಳಿತದ ವೈಫಲ್ಯ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ : ಮಡಿಕೇರಿಗೆ ಅಂಟಿದ್ದ ಶಾಪ ವಿಮೋಚನೆಯಾಗಿದೆ : ಮೂಡ ಅಧ್ಯಕ್ಷ ಬಿ.ವೈ.ರಾಜೇಶ್ ಅಸಮಾಧಾನ

ಅಕ್ಟೋಬರ್ 29, 2026

ಅ.31 ರಂದು ಮಾಯಮುಡಿಯಲ್ಲಿ ಕೊಡಗು ಕುಲಾಲ ಕುಂಬಾರರ ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ : ನ.1 ರಂದು ಸಮಾರೋಪ

ಅಕ್ಟೋಬರ್ 29, 2026

ನ.2ರಂದು ಪೊನ್ನಂಪೇಟೆಯಲ್ಲಿ ಸಿಎನ್‌ಸಿ ಮಾನವ ಸರಪಳಿ : ಕೊಡವಲ್ಯಾಂಡ್ ಸ್ವಾಯತ್ತತೆಗಾಗಿ ಜನಜಾಗೃತಿ ಕಾರ್ಯಕ್ರಮ

ಅಕ್ಟೋಬರ್ 29, 2026

ನ.7 ರಂದು ಸಂದರ್ಶನ

ಅಕ್ಟೋಬರ್ 28, 2026

ನ.1 ರಂದು ಕನ್ನಡ ರಾಜ್ಯೋತ್ಸವ ದಿನಾಚರಣೆ

ಅಕ್ಟೋಬರ್ 28, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.