ಮಡಿಕೇರಿ, ಜು.14: ಮಡಿಕೇರಿಯ ಅಶ್ವಿನಿ ಆಸ್ಪತ್ರೆ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಿಟ್ಟೆ ವಿಶ್ವ ವಿದ್ಯಾಲಯದ ಕುಲಪತಿ ವಿನಯ್ ಹೆಗ್ಡೆ ಹಾಗೂ ವಿ.ವಿ. ಯ ಸಾಮಾಜಿಕ ನಿರ್ವಹಣಾ ವಿಭಾಗದ ಅಧ್ಯಕ್ಷ ಪ್ರೊ. ಡಾ.ಸತೀಶ್ ಕುಮಾರ್ ಭಂಡಾರಿ ಅವರ ನಿರ್ಧಾರದಂತೆ ನಿಟ್ಟ್ಟೆ ಸಂಸ್ಥೆಯ ಎಲ್ಲ ಗ್ರಾಮೀಣ ವಿಭಾಗಗಳಲ್ಲಿ ವನ ಮಹೋತ್ಸವ ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಡಿಕೇರಿ ಅಶ್ವಿನಿ ಆಸ್ಪತ್ರೆಯಲ್ಲ್ಲಿರುವ ನಿಟ್ಟೆ ಸಂಸ್ಥೆಯ ದಂತ ಚಿಕಿತ್ಸಾ ವಿಭಾಗದ ಮುಖ್ಯಸ್ಥೆ ಡಾ.ಅನುಶ್ರೀ ತಿಳಿಸಿದರು.
ಈ ಸಂದರ್ಭ ಮಂಗಳೂರಿನ ವಾಣಿಜ್ಯೋದ್ಯಮಿ ರೊಟೇರಿಯನ್ ಸತೀಶ್ ಬೋಳಾರ್, ಮಡಿಕೇರಿ ನಗರಸಭಾಧ್ಯಕ್ಷೆ ಅನಿತ ಪೂವಯ್ಯ, ಮಡಿಕೇರಿ ರೋಟರಿ ವುಡ್ಸ್ ಅಧ್ಯಕ್ಷ ವಸಂತ್ ಕುಮಾರ್, ಮಿಸ್ಟಿಹಿಲ್ಸ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕಾರ್ಯದರ್ಶಿ ರತ್ನಾಕರ್ ರೈ, ಕೊಡಗು ವಿದ್ಯಾಲಯದ ಪ್ರಾಂಶುಪಾಲೆ ಸುಮಿತ್ರ, ವ್ಯವಸ್ಥಾಪಕ ರವಿ, ಮಂಗಳೂರಿನ ರೊಟೇರಿ ಯನ್ ಸೂರ್ಯಕಾಂತ್, ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತ ಶಯನ, ಶಕ್ತಿ ಪ್ರಧಾನ ಸಂಪಾದಕ ಜಿ.ರಾಜೇಂದ್ರ, ಅಶ್ವಿನಿ ಆಸ್ಪತ್ರೆ ಕಾರ್ಯದರ್ಶಿ ರವೀಂದ್ರ ಹಾಜರಿದ್ದು, ಗಿಡಗಳನ್ನು ನೆಟ್ಟರು.
ಈ ಸಂದರ್ಭ ಕೊಡಗು ವಿದ್ಯಾಲಯದ ಆವರಣದಲ್ಲಿ ಗಿಡಗಳನ್ನು ಬೆಳೆಸಲು ಡಾ. ಅನುಶ್ರೀ ಸಸಿಗಳನ್ನು ಹಸ್ತಾಂತರಿಸಿದರು.







