ಸೋಮವಾರಪೇಟೆ ಜು.14 : ಅರಣ್ಯ ಇಲಾಖೆ ಮತ್ತು ಜ್ಞಾನ ವಿಕಾಸ ಆಂಗ್ಲ ಮಾಧ್ಯಮ ಶಾಲೆ ಸಂಯುಕ್ತ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು.
ವಲಯ ಉಪ ಅರಣ್ಯಾಧಿಕಾರಿ ಕೆ.ಸಿ.ನಾರಾಯಣ್, ಗಿಡ ನಡೆವು ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ. ವಿದ್ಯಾರ್ಥಿಗಳು ತಮ್ಮ ಮನೆಯ ಹತ್ತಿರ, ತೋಟದಲ್ಲಿ ಒಂದೊಂದು ಗಿಡಗಳನ್ನು ನೆಡುವ ಮೂಲಕ ಪರಿಸರಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಎಂ.ಚಂದ್ರಾಜು, ಕಾರ್ಯದರ್ಶಿ ಎಸ್. ವೆಂಕೆಟೇಶ್, ನಿರ್ದೇಶಕರಾದ ಎ.ಎಸ್. ಮಹೇಶ್, ಮುಖ್ಯ ಶಿಕ್ಷಕಿ ಪಿ.ಕೆ. ಲಕ್ಷ್ಮೀ, ಕ್ಷೇಮಾಭಿವೃದ್ಧಿ ಅಧಿಕಾರಿ ವಿಜಯ್ ಮತ್ತಿತರರು ಇದ್ದರು.







