Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ವಿಜಯರತ್ನ ಇಂಟರ್‌ನ್ಯಾಷನಲ್ ಪ್ರಶಸ್ತಿ ಪುರಸ್ಕೃತ ಎಡಿಕೇರಿ ಪ್ರಸನ್ನರಿಗೆ ಸನ್ಮಾನ*
  • *ಮಾ.15 ರಂದು ಚೇರಳ ಗೌಡ ಸಮಾಜದ ನೂತನ ಸಮುದಾಯ ಭವನ ಉದ್ಘಾಟನೆ*
  • *ಆನೆ-ಮಾನವ ಸಂಘರ್ಷ ಶಾಶ್ವತ ಪರಿಹಾಕ್ಕೆ ಪ್ರಾಮಾಣಿಕ ಯತ್ನ : ಮಡಿಕೇರಿ 7, ನಾಗರಹೊಳೆ ವಿಭಾಗಕ್ಕೆ 20 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಮಂಜೂರು : ಸಚಿವ ಈಶ್ವರ ಖಂಡ್ರೆ*
  • *ಅರಣ್ಯ ಸಚಿವರು ತುರ್ತು ಸಭೆ ನಡೆಸಿ ಕಾಡಾನೆ ದಾಳಿ ನಿಯಂತ್ರಿಸದಿದ್ದಲ್ಲಿ ಪ್ರತಿಭಟನೆ : ಮಹಿಳಾ ಬಿಜೆಪಿ ಎಚ್ಚರಿಕೆ*
  • *ಕರ್ನಾಟಕ ಸುವರ್ಣ ಸಮುಚ್ಚಯ ಭವನದ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಸೂಚನೆ*
  • *ಮಾಯಮುಡಿ ಗ್ರಾ.ಪಂ ಆಡಳಿತಾಧಿಕಾರಿಯಾಗಿ ಪಿ.ಪಿ.ಕವಿತಾ ಅಧಿಕಾರ ಸ್ವೀಕಾರ*
  • *ಜವಾಬ್ದಾರಿ ನಿಭಾಯಿಸಲು ಸಾಧ್ಯವಾಗದಿದ್ದಲ್ಲಿ ಅರಣ್ಯ ಸಚಿವರು ರಾಜೀನಾಮೆ ನೀಡಲಿ : ವಿರಾಜಪೇಟೆ ಬಿಜೆಪಿ ಒತ್ತಾಯ*
  • *ಪರಿಹಾರಕ್ಕಿಂತಲೂ ಅಮೂಲ್ಯವಾದದ್ದು ಮನುಷ್ಯನ ಜೀವ : ಕಾಡಾನೆ ಸೆರೆಗೆ ಶಾಸಕರ ಸೂಚನೆ*
  • *ಹಮ್ಮಿಯಾಲದಲ್ಲಿ ಸಾರಿಗೆ ಸಮಸ್ಯೆ : ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕ ಡಾ.ಮಂತರ್ ಗೌಡ*
  • *ಕೆಎಸ್‌ಐಸಿ ಆವರಣದಲ್ಲಿ ಸ್ಡೇಡಿಯಂ ನಿರ್ಮಾಣ ಯೋಜನೆಗೆ ತಿಲಾಂಜಲಿ : ಸಂಘಟಿತ ಹೋರಾಟಕ್ಕೆ ಸಂದ ಜಯ : ಧನ್ಯವಾದ ಸಲ್ಲಿಸಿದ ಸಂಸದ ಯದುವೀರ್‌ ಒಡೆಯರ್‌*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ರಾಜಕೀಯ ಮತ್ತು ಪ್ರಕೃತಿ ಕೃತಿ ವಿಮರ್ಶೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ರಾಜಕೀಯ ಮತ್ತು ಪ್ರಕೃತಿ ಕೃತಿ ವಿಮರ್ಶೆ*

ಜುಲೈ 14, 20233 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜು.14 :  ಸಮಯೋಚಿತ ಲೇಖನಗಳ ಹರಿಕಾರ ಬಾಳೆಯಡ ಕಿಶನ್ ಪೂವಯ್ಯನವರ ಲೇಖನಗಳನ್ನು ಶಕ್ತಿ ಮತ್ತಿತರ ಪತ್ರಿಕೆಗಳಲ್ಲಿ ಓದುತ್ತಿದ್ದಾಗ ಇವರ ಯಾವುದೇ ಲೇಖನದಲ್ಲಿ ಪೂರ್ವಾಗ್ರಹ ಪೀಡಿತ ವಿಷಯಗಳ ಮೆರವಣಿಗೆ ಕಾಣುತ್ತಿರಲಿಲ್ಲ. ಕಾಲಕ್ಕೆ ತಕ್ಕಂತೆ ಮಾತ್ರವಲ್ಲ ಹೇಳಲೇಬೇಕಾದ ವಿಷಯಗಳ ಕುರಿತು ಕೇಳುವವರಾರೂ ಇಲ್ಲವೆಂದು ಭಾವಿಸಿಕೊಂಡಾಗ ಇವರ ಲೇಖನ ಪ್ರತ್ಯಕ್ಷವಾಗುತ್ತಿತ್ತು. ಅಂತಹ ಹಲವಾರು ಲೇಖನಗಳ ಸರಮಾಲೆಯನ್ನು ಸುಂದರ ಮಾಲೆಯಾಗಿ ಪೋಷಿಸಿದ ಕೃತಿಯೇ “ರಾಜಕೀಯ ಮತ್ತು ಪ್ರಕೃತಿ”
ಕೃತಿಯಲ್ಲಿ ಅಡಗಿರುವ ಮೊದಲ ಲೇಖನ “ಮಡಿಕೇರಿ ದಸರಾ” ಅಂದು ದೇವಾತಾ ಕಾರ್ಯ ಇಂದು ರಾಜಕೀಯ ಮೇಲಾಟ ಎಂಬ ಶೀರ್ಷಿಕೆಯನ್ನು ಹೊತ್ತು ತಂದಿದೆ. ಪಲ್ಲಕ್ಕಿ ಮತ್ತು ಲ್ಯಾಟಿನ್ ದೀಪಗಳ ಬೆಳಕಿನಲ್ಲಿ ನಡೆಯುತ್ತಿದ್ದ ದಸರಾದ ಇಂದಿನ ವೈಭವವನ್ನು ನಾವೆಲ್ಲರೂ ಕಾಣುತ್ತಿದ್ದೇವೆ. ಶಕ್ತಿ ದೇವತೆಗಳ ನವರಾತ್ರಿಯ ವೈಭವದ ಒಂಬತ್ತು ದಿನಗಳ ಉತ್ಸವದ ಪದಾಧಿಕಾರಿಗಳ ಅಯ್ಕೆಯ ಒಂಬತ್ತು ತಿಂಗಳ ಮೇಲಾಟದ ವಿವರಗಳನ್ನು ಅತ್ಯಂತ ಸೂಕ್ಷ್ಮವಾಗಿ, ಸೂಕ್ತವಾಗಿ ಕಟ್ಟಿಕೊಟ್ಟಿದ್ದಾರೆ. ದೇವತಾ ಕಾರ್ಯ ದಸರಾವನ್ನು ಸಿನಿಮೀಯ ಕೃತ್ಯದಂತೆ ಕಂಗೊಳಿಸಲು ಪ್ರಯತ್ನಿಸಿದವರಿಗೆ ಬೈಲಾ ತಿದ್ದುಪಡಿ ಮಾಡಲು ಏಕೆ ಸಾಧ್ಯವಾಗಲಿಲ್ಲ ಎಂಬುದು ಇವರ ಪ್ರಶ್ನೆ. ಮಡಿಕೇರಿ ದಸರಾ ನಾಡಹಬ್ಬ ಎಂದರೆ ಸಾಮಾನ್ಯ ಜನರ ಹಬ್ಬವಾಗದೇ ಹೊರನಾಡ ಹಬ್ಬವಾಗುತ್ತಿರುವ ಬಗ್ಗೆ ಸಮಸ್ತ ನಾಗರೀಕರ ಪರವಾಗಿ ಕೇಳಿರುವ ಇವರ ಪ್ರಶ್ನೆಗಳನ್ನು ನೀವೂ ಕೂಡ ಒಮ್ಮೆ ಓದಲೇಬೇಕು. ಎರಡನೆಯ ಲೇಖನ ಕೊಡಗಿನ ಹೋರಾಟಗಳು ಹಳಿ ತಪ್ಪುವ ಕಾರಣಗಳೇನೆಂದು ವಿವರವಾಗಿ ವಿವರಿಸಿದ್ದಾರೆ. ಅದು ಡಾ. ಕಸ್ತೂರಿ ರಂಗನ್ ಅಥವಾ ಗಾಡ್ಗೀಳ್ ವರದಿಗಳ ವಿಚಾರವಾಗಿರಬಹುದು ಹೈಟೆನ್ಷನ್ ಮಾರ್ಗದ ಹೋರಾಟ, ಕೊಡಗಿನ ಜಮ್ಮಾ ಸಮಸ್ಯೆಯ ಪರಹಾರದ ಕುರಿತಾಗಿ ಇರಬಹುದು. ರೈಲು ಮಾರ್ಗ, ರೆಸಾರ್ಟ್‌ಗಳಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ಸಹ ಉಲ್ಲೇಖಿಸಲಾಗಿದೆ. ಕೊಡಗಿನ ಹೋರಾಟಗಳ ನಡುವೆ ರಾಜಕಾರಣಿಗಳು ಅಥವಾ ಅವರ ಬೆಂಬಲಿಗರ ಪಾತ್ರವೇನು ಎಂಬುದನ್ನು ಅರ್ಥವತ್ತಾಗಿ ವಿವರಿಸಿದ್ದಾರೆ.
ಕೊಡಗಿನ ಏಕ ಸಂಘಟನೆಯ ಅಗತ್ಯತೆ ಮತ್ತು ಕೋಮು ಗಲಭೆಯ ಆತ್ಮ ವಿಮರ್ಶೆಯ ಕುರಿತು ಜಾತಿ ಜನಾಂಗಗಳ ತೂತುಗಳನ್ನು ತೆರೆದಿಟ್ಟು ವಿಧ್ಯಾಭ್ಯಾಸ ನೀಡದೇ ವಧಾಸ್ಥಾನಕ್ಕೆ ಕರೆದೊಯ್ದುತ್ತಿರುವ ಧರ್ಮಭೀರುಗಳ ಬಗ್ಗೆ, ನಮ್ಮ ಕಣ್ಣ ಮುಂದೆಯೇ ನಮ್ಮ ಸಂಸ್ಕೃತಿ ಆಚಾರ ವಿಚಾರಗಳು ನಶಿಸಿ ಹೋಗುತ್ತಿರುವ ಬಗ್ಗೆ ನಾವೆಲ್ಲರೂ ತಿಳಿದುಕೊಳ್ಳಬೇಕಾದ ವಿಚಾರಗಳನ್ನು ಮುಕ್ತವಾಗಿ ತೆರೆದಿಟ್ಟಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕಾವೇರಿ ಜನಾಂಗೀಯ ಗುಂಪುಗಳ ಸ್ವಪ್ರತಿಷ್ಠೆಗೆ ಬಲಿಯಾಗುತ್ತಿರುವ ಬಗ್ಗೆ ಮತ್ತು ಕೊಡಗಿನಲ್ಲಿಯೂ ಮೆಲ್ಲಗೆ ಅಡಿಯಿಟ್ಟಿರುವ ಬಗ್ಗೆ ಕೂಲಂಕಷವಾಗಿ ಅಧ್ಯಯನ ಮಾಡಿ ಬರೆದಿದ್ದಾರೆ. ಚುನಾವಣೆ ಎಂಬ ನಾಟಕ ರಂಗದಿಂದ ಜನಾಂಗದ ಸಂಘಟನೆಗಳು, ಸಮಾಜಗಳು, ಅದರ ಪ್ರಮುಖರು ದೂರವಿರುವುದು ಜನಾಂಗದ ಅಭಿವೃದ್ಧಿಯ ದೃಷ್ಟಿಯಿಂದ ಒಳಿತು ಕೆಡುಕುಗಳ ವಿಮರ್ಶೆ ನಮ್ಮ ಜಿಲ್ಲೆಯ ಹಿಂದಿನ ನಾಯಕರು ವಿಧಾನಸಭೆಯಲ್ಲಿ ಮಾತನಾಡಲು ನಿಂತರೆ ವಿಧಾನ ಸೌಧದ ಕಲ್ಲುಗಳು ಮೌನವಾಗುತ್ತಿದ್ದವು ರಾಜ್ಯಕ್ಕೆ ಮುಖ್ಯಮಂತ್ರಿ, ರಾಜ್ಯಪಾಲರು, ಸ್ಪೀಕರ್‌ಗಳನ್ನು ನೀಡಿದ ಜಿಲ್ಲೆಯಲ್ಲಿ ವೈಯುಕ್ತಿಕ ತೇಜೋವಧೆಯ ತಾಣವಾಗುತ್ತಿರುವ ವಿಪರ್ಯಾಸವನ್ನು ನೋಡುತ್ತಿರುವ ನಮಗೆ ಅದರ ಒಳಗುಟ್ಟುಗಳನ್ನು ತೆರೆದಿಟ್ಟಿದ್ದಾರೆ. ರಾಜಕೀಯ ಭಾರತದ ಸಮಗ್ರ ಜನತೆಯ ಬೇಕು ಬೇಡಗಳನ್ನು ಅರ್ಥೈಸಿಕೊಂಡು ದುಡಿಯಬೇಕಾದ ಸಾಮಾಜಿಕ ಕ್ಷೇತ್ರ ಎಂಬ ವಿಷಯವನ್ನು ಮರೆತ ರಾಜಕಾರಣಿಗಳಿಗೆ ಮನದಟ್ಟು ಮಾಡಿಕೊಡಬೇಕಾದ ಅಗತ್ಯವನ್ನು ನಾವು ಕೂಡ ಒಮ್ಮೆ ಮುಟ್ಟಿನೋಡಿಕೊಳ್ಳುವಂತೆ ಚಿತ್ರಿಸಿದ್ದಾರೆ. ಸೃಜನ ಎಂಬುದು ಸ್ವಜನವಾಗಿದೆ.
ತಮ್ಮ ಜನರ ಜಾತಿ ಅಥವಾ ಕೋಮಿನವರ ಬೆಂಬಲ ಪಡೆದು ಗುಂಪುಗಾರಿಕೆ ನಡೆಸಿ ತಮ್ಮ ಸ್ವಾರ್ಥಕ್ಕೋಸ್ಕರ ಅಧಿಕಾರದ ಗದ್ದುಗೆಯೇರುವ ಮೋಹಕ್ಕೆ ಮತ ಮತದೊಳಗೆ ವಿಷ ಬೀಜ ಬಿತ್ತಿ ಜಾತಿಯತೆಯ ಕಚ್ಚಾಟದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವ ನಾಯಕ. ಇಂದು ಯಾವ ಕೋಮಿನವರು ಪ್ರಾಬಲ್ಯವನ್ನು ಹೊಂದಿರುವವರೋ ಅವರೇ ಅಧಿಕಾರ ಚಲಾಯಿಸುತ್ತಾರೆ. ಜಾತಿ ಬಲ, ಹಣ ಬಲ, ತೋಳ್ಬಲ ಇಂದಿನ ರಾಜಕೀಯದ ಅಧಿಕಾರಕ್ಕೆ ಮೂಲ ಸೂತ್ರವಾಗಿ ನಿರುದ್ಯೋಗಿಗಳಿಗೆ ಅನಪೇಕ್ಷಿತ ಉದ್ಯೋಗ ನೀಡುವ ರಾಜಕೀಯದ ಹಣ ಗಳಿಸುವ ಕ್ಷೇತ್ರವಾಗಿದೆಯೆನ್ನುತ್ತಾರೆ. ಕುಸಿಯುತ್ತಿರುವ ಮೌಲ್ಯಾಧಾರಿತ ರಾಜಕಾರಣದ ಕುರಿತು ಇಂದಿನ ವಿದ್ಯಾವಂತರು ತಮ್ಮ ಪ್ರತಿಭೆಯನ್ನು ಜಾಲತಾಣಗಳಿಗೆ ಮೀಸಲಾಗಿರಿಸಿದ್ದಾರೆ ಎನ್ನುವ ಮಾತುಗಳು ಅಕ್ಷರಶಃ ಸತ್ಯವಾಗಿದೆ. “ಇಂದು ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರುವ ವೇದಿಕೆಯಾಗಿದೆಯೇ ಹೊರತು ಸಮಾಜದಲ್ಲಿ ಸಾಮಾಜಿಕ ಕ್ರಾಂತಿ ಉಂಟುಮಾಡುವ ವೇದಿಕೆಯಾಗಿಲ್ಲ” ಇತ್ತೀಚಿನ ದಿನಗಳಲ್ಲಿ ನಾವು ನಾಯಕರುಗಳ ಮೇಲೆ ಇರುವ ಅಭಿಮಾನವನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತೇವೆಯೋ ಹೊರತು ಅವರ ನಿಲುವುಗಳನ್ನು ಮತ್ತು ಉದ್ದೇಶಗಳನ್ನು ನಮ್ಮ ನಡೆಯಲ್ಲಿ ಅಳವಡಿಸಿಕೊಳ್ಳುವ ಮಾತೇ ಇಲ್ಲ ಎನ್ನುತ್ತಾರೆ.
ಲೇಖಕರು, ವಕೀಲರು, ನೋಟರಿಯೂ ಆಗಿರುವ ಬಾಳೆಯಡ ಕಿಸನ್ ಪೂವಯ್ಯನವರ ರಾಜಕೀಯ ಮತ್ತು ಪ್ರಕೃತಿ ಕೃತಿಯೂ ನನ್ನ ಕೈಗೆ ಸಿಕ್ಕಾಗ ಇನ್ನೂ ಸಹ ರಾಜ್ಯದ ಚುನಾವಣೆಯ ವಿಧಿ ವಿಧಾನಗಳು ಪ್ರಾರಂಭವಾಗಿರಲಿಲ್ಲ. ಅದಾಗಲೇ ಒಂದು ಕೃತಿಯ ಓದಿನಲ್ಲಿ ತೊಡಗಿದ್ದ ನನಗೆ ಇದನ್ನು ಓದಿಗೆತ್ತಿಕೊಳ್ಳುವ ವೇಳೆಗೆ ತಡವಾಗಿತ್ತು. ಪುಸ್ತಕವನ್ನು ತೆರೆದರೆ ಸಿಗುವ ಮೊದಲ ಪುಟವು “ಕೊಡವ ಮಕ್ಕಡ ಕೂಟ”ದ 62ನೆಯ ಸಾಹಿತ್ಯ ಮಾಲೆ ಎಂಬ ಅರಿವು ಮೂಡಿಸಿತ್ತು. ಮುಂದುವರಿದಾಗ ಪ್ರಕೃತಿ ಕುರಿತಾದ ಲೇಖನಗಳು ಅವರ ಮನಸ್ಸಿನ ಮಾತು “ಪ್ರಕೃತಿ ಎಂದರೆ ತಾಯಿ” ತಾಯಿಯ ಕುರಿತು ಏನು ಬರೆದರೂ ಚಂದವೇ ಆದರೆ ಪ್ರಕೃತಿಯ ಕುರಿತು ನೈಜ ಕಾಳಜಿಯುಳ್ಳವರ ಲೇಖಕರ ಒಂದೊಂದು ಲೇಖನವೂ ಹಿಂದಿನ ತಲೆಮಾರುಗಳ ತಪ್ಪುಗಳನ್ನು ಎತ್ತಿ ಹಿಡಿದು ಇಂದಿನ ತಲೆಮಾರಿಗೆ ತಿದ್ದಿಕೊಳ್ಳುವ ಅವಕಾಶವನಿತ್ತು ಮುಂದಿನ ಪೀಳಿಗೆಗೆ ದಾರಿದೀಪ ಆಗಲಿದೆಯೆಂದರೆ ಅದೇ ಸರಿಯಾದ ಮಾತು.
ಯಾವುದೇ ಪಂಥಕ್ಕೆ, ಯಾವುದೇ ಪಕ್ಷಕ್ಕೆ, ಯಾವುದೇ ಜಾತಿಮತದ ಮುಲಾಜಿಗೆ ಅಂಟಿಕೊಳ್ಳದೆಯೇ ತಮ್ಮ ಪ್ರಾಂಜಲ ಮನಸ್ಸಿನ ನೇರ ನುಡಿಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಈಗಾಗಲೇ ಮೇಲೆ ತಿಳಿಸಿದಂತೆ ಕೊಡಗಿನ ಪ್ರತಿಯೊಬ್ಬ ವ್ಯಕ್ತಿಯೂ ಓದಬೇಕಾದ ಕೃತಿ ಇದು ಎಂದು ಮತ್ತೊಮ್ಮೆ ಹೇಳುವೆ. ಕೊಡವ ಮಕ್ಕಡ ಕೂಟದ 62 ನೆಯ ಕೃತಿ ಇದಾಗಿದ್ದು 134 ಪುಟಗಳ 150 ರೂಪಾಯಿ ಬೆಲೆಯುಳ್ಳ ಪುಸ್ತಕವನ್ನು ತನ್ನ ತಂದೆ ತಾಯಿಗಳಿಗೆ ಅರ್ಪಣೆ ಮಾಡಿದ್ದಾರೆ. ಅಧ್ಯಕ್ಷರ ನುಡಿ ಬೊಳ್ಳಜ್ಜಿರ ಬಿ. ಅಯ್ಯಪ್ಪ ಅವರದು. ಕೆ.ಪಿ ಬಾಲಸುಬ್ರಹ್ಮಣ್ಯಂ ಕಂಜರ್ಪಣೆಯವರ ಸಂಕ್ಷಿಪ್ತ ಮುನ್ನುಡಿಯ ನೆಪದ ಜೊತೆಗೆ ತನ್ನ ಇಷ್ಟ ಮತ್ತು ಕಷ್ಟ ಕಾಲದಲ್ಲಿ ಕೈಹಿಡಿದವರನ್ನು ಲೇಖಕರು ಹಾಗೆಯೇ ನೆನೆದುಕೊಂಡಿದ್ದಾರೆ. ಕೊಡಗು ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಟ.ಪಿ.ರಮೇಶ್‌ರವರ ಬೆನ್ನುಡಿಯೂ ಇದೆ. ಬಹಳ ಹಿಂದೆಯೇ ಮಾಡಬೇಕಾಗಿದ್ದ ಕೆಲಸವನ್ನು ಲೇಖಕರು ಈಗ ಕೈಗೆತ್ತಿಕೊಂಡಿದ್ದಾರೆ ಎಂಬುದು ನನ್ನ ಅನಿಸಿಕೆ. ಇವರ ಇನ್ನಷ್ಟು ಕೃತಿಗಳು ಕೊಡಗಿನ ಜನತೆಯ ಜತೆಜತೆಗೆ ರಾಜ್ಯದ ಓದುಗರಿಗೆ ತಲುಪುವಂತಾಗಲಿ ಎಂದರೆ ರಾಜ್ಯದ ಮತ್ತು ರಾಷ್ಟ್ರದ ಹಲವಾರು ಸಮಸ್ಯೆಗಳನ್ನು ಎತ್ತಿ ಹಿಡಿಯುವಂತಾಗಲಿ ಎಂದು ಹಾರೈಸೋಣ…

ಕೃತಿ ವಿಮರ್ಶೆ:- ರಾಜಕೀಯ ಮತ್ತು ಪ್ರಕೃತಿ
ಕೃತಿಕಾರರು:- ಬಾಳೆಯಡ ಕಿಶನ್ ಪೂವಯ್ಯ
ವಿಮರ್ಶಕರು:- ವೈಲೇಶ್ ಪಿ ಎಸ್ ಕೊಡಗು. 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ವಿಜಯರತ್ನ ಇಂಟರ್‌ನ್ಯಾಷನಲ್ ಪ್ರಶಸ್ತಿ ಪುರಸ್ಕೃತ ಎಡಿಕೇರಿ ಪ್ರಸನ್ನರಿಗೆ ಸನ್ಮಾನ*

ಮಾರ್ಚ್ 11, 2026

*ಮಾ.15 ರಂದು ಚೇರಳ ಗೌಡ ಸಮಾಜದ ನೂತನ ಸಮುದಾಯ ಭವನ ಉದ್ಘಾಟನೆ*

ಮಾರ್ಚ್ 11, 2026

*ಆನೆ-ಮಾನವ ಸಂಘರ್ಷ ಶಾಶ್ವತ ಪರಿಹಾಕ್ಕೆ ಪ್ರಾಮಾಣಿಕ ಯತ್ನ : ಮಡಿಕೇರಿ 7, ನಾಗರಹೊಳೆ ವಿಭಾಗಕ್ಕೆ 20 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಮಂಜೂರು : ಸಚಿವ ಈಶ್ವರ ಖಂಡ್ರೆ*

ಮಾರ್ಚ್ 10, 2026

*ಮಾ.15 ರಂದು ಚೇರಳ ಗೌಡ ಸಮಾಜದ ನೂತನ ಸಮುದಾಯ ಭವನ ಉದ್ಘಾಟನೆ*

ಮಾರ್ಚ್ 11, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಮಾ.11 : ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿಯ ಚೇರಳ ಗೌಡ ಸಮಾಜದ ನೂತನ ಸಮುದಾಯ ಭವನದ ಉದ್ಘಾಟನಾ…

*ಆನೆ-ಮಾನವ ಸಂಘರ್ಷ ಶಾಶ್ವತ ಪರಿಹಾಕ್ಕೆ ಪ್ರಾಮಾಣಿಕ ಯತ್ನ : ಮಡಿಕೇರಿ 7, ನಾಗರಹೊಳೆ ವಿಭಾಗಕ್ಕೆ 20 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಮಂಜೂರು : ಸಚಿವ ಈಶ್ವರ ಖಂಡ್ರೆ*

ಮಾರ್ಚ್ 10, 2026

*ಅರಣ್ಯ ಸಚಿವರು ತುರ್ತು ಸಭೆ ನಡೆಸಿ ಕಾಡಾನೆ ದಾಳಿ ನಿಯಂತ್ರಿಸದಿದ್ದಲ್ಲಿ ಪ್ರತಿಭಟನೆ : ಮಹಿಳಾ ಬಿಜೆಪಿ ಎಚ್ಚರಿಕೆ*

ಮಾರ್ಚ್ 10, 2026

*ಕರ್ನಾಟಕ ಸುವರ್ಣ ಸಮುಚ್ಚಯ ಭವನದ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಸೂಚನೆ*

ಮಾರ್ಚ್ 10, 2026

*ಮಾಯಮುಡಿ ಗ್ರಾ.ಪಂ ಆಡಳಿತಾಧಿಕಾರಿಯಾಗಿ ಪಿ.ಪಿ.ಕವಿತಾ ಅಧಿಕಾರ ಸ್ವೀಕಾರ*

ಮಾರ್ಚ್ 10, 2026

*ಜವಾಬ್ದಾರಿ ನಿಭಾಯಿಸಲು ಸಾಧ್ಯವಾಗದಿದ್ದಲ್ಲಿ ಅರಣ್ಯ ಸಚಿವರು ರಾಜೀನಾಮೆ ನೀಡಲಿ : ವಿರಾಜಪೇಟೆ ಬಿಜೆಪಿ ಒತ್ತಾಯ*

ಮಾರ್ಚ್ 10, 2026

*ಪರಿಹಾರಕ್ಕಿಂತಲೂ ಅಮೂಲ್ಯವಾದದ್ದು ಮನುಷ್ಯನ ಜೀವ : ಕಾಡಾನೆ ಸೆರೆಗೆ ಶಾಸಕರ ಸೂಚನೆ*

ಮಾರ್ಚ್ 10, 2026

*ಹಮ್ಮಿಯಾಲದಲ್ಲಿ ಸಾರಿಗೆ ಸಮಸ್ಯೆ : ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕ ಡಾ.ಮಂತರ್ ಗೌಡ*

ಮಾರ್ಚ್ 10, 2026

*ಕೆಎಸ್‌ಐಸಿ ಆವರಣದಲ್ಲಿ ಸ್ಡೇಡಿಯಂ ನಿರ್ಮಾಣ ಯೋಜನೆಗೆ ತಿಲಾಂಜಲಿ : ಸಂಘಟಿತ ಹೋರಾಟಕ್ಕೆ ಸಂದ ಜಯ : ಧನ್ಯವಾದ ಸಲ್ಲಿಸಿದ ಸಂಸದ ಯದುವೀರ್‌ ಒಡೆಯರ್‌*

ಮಾರ್ಚ್ 9, 2026

*ಮಡಿಕೇರಿ : ಮಾ.11 ರಂದು ನಗರಸಭೆಯ ಆಯವ್ಯಯ ಸಭೆ*

ಮಾರ್ಚ್ 9, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.