ಮಡಿಕೇರಿ ಜು.27 : ನಲ್ಲೂರು ತೋಟದ ಕೂಲಿ ಕಾರ್ಮಿಕ ವಿಜಯ್ ಕುಮಾರ್ ಅವರ ಮೇಲೆ ಬುಧವಾರ ಕಾಡಾನೆ ದಾಳಿಯಾಗಿದ್ದು, ಮೈಸೂರು ಅಪೋಲೋ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರು ಬುಧವಾರ ರಾತ್ರಿ 12 ಗಂಟೆಗೆ ಮೈಸೂರಿನ ಆಸ್ಪತ್ರೆಗೆ ಆಗಮಿಸಿ ಗಾಯಳು ಯೋಗ ಕ್ಷೇಮ ವಿಚಾರಿಸಿ ಗಾಯಾಳುವಿಗೆ ಧೈರ್ಯ ತುಂಬಿದರು. ರೋಗಿಯ ಕುಟುಂಬಸ್ಥರಿಗೆ ಬೆಟ್ ಶಿಟ್, ಊಟದ ವ್ಯವಸ್ಥೆ ಮಾಡುವ ಮೂಲಕ ಸ್ಪಂದನೆ ಮಾಡಿದರು. ಅಲ್ಲದೆ ತುರ್ತು ಚಿಕಿತ್ಸೆಗೆ ರು.10 ಸಾವಿರ ನಗದನ್ನು ನೀಡಿದರು. ದಾಳಿಗೆ ಒಳಗಾಗಿರುವ ಗಾಯಳು ಅವರಿಗೆ ಶ್ವಾಸಕೋಶದ ಭಾಗದಲ್ಲಿ ಪೆಟ್ಟಾಗಿದ್ದು, ಚಿಕಿತ್ಸೆಯ ಮೂಲಕ ಗುಣಮುಖರಾಗಲಿದ್ದಾರೆ. ಯಾವುದೇ ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಆಸ್ಪತ್ರೆಯಲ್ಲಿದ್ದ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.








