Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಶಾಂತಿನಿಕೇತನ ಯುವಕ ಸಂಘದಿoದ ಯಶಸ್ವೀ ರಕ್ತದಾನ ಶಿಬಿರ*
  • *ಮೂರ್ನಾಡಿನಲ್ಲಿ ಶ್ರದ್ಧಾಭಕ್ತಿಯಿಂದ ಗೌರಿ-ಗಣೇಶ ಮೂರ್ತಿಗಳ ವಿಸರ್ಜನೆ*
  • *ಭಗವದ್ಗೀತೆ ಶ್ಲೋಕ ಮತ್ತು ಭಾವಾರ್ಥ ಪಠಣ ಸ್ಪರ್ಧೆಯಲ್ಲಿ ಎಸ್.ಎಸ್. ದಿವಿತ್‌ಗೆ ಪ್ರಥಮ ಸ್ಥಾನ*
  • *ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿ.ಆರ್.ವರ್ಷ ಪ್ರಥಮ*
  • *ವಾಲಿಬಾಲ್ ಪಂದ್ಯಾವಳಿ : ಸರ್ವದೈವತ ಕಾಲೇಜಿನ ಬಾಲಕಿಯರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ*
  • *ಕಾಂತಪ್ಪಗೆ ಪಿಎಚ್‍ಡಿ ಪದವಿ*
  • *ಎಫ್‌.ಎಂ.ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಕೃತಕ ಬುದ್ಧಿಮತ್ತೆ, ಸೈಬರ್ ಸುರಕ್ಷತೆ ಕುರಿತು ಅರಿವು ಕಾರ್ಯಕ್ರಮ*
  • *ಅರೆಕಾಲಿಕ ಕಾನೂನು ಸ್ವಯಂ ಸೇವಕರ ತರಬೇತಿ ಕಾರ್ಯಾಗಾರ ಉದ್ಘಾಟನೆ*
  • *ವಿರಾಜಪೇಟೆ ಗಣೇಶೋತ್ಸವ: ಸೆ.25ರಿಂದ ವಾಹನ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ*
  • *ಸೋಮವಾರಪೇಟೆಯಲ್ಲಿ ಓಣಂ ಉತ್ಸವ ಹಾಗೂ ಹಿಂದೂ ಮಲಯಾಳ ಸಮಾಜದ ದಶಮಾನೋತ್ಸವ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ದಾಖಲೆಗಳಲ್ಲಿ “ಕೊಡವ” ಪದ ಬಳಕೆ : ಕ್ಯಾಬಿನೆಟ್ ಅನುಮೋದನೆ : ಸರ್ಕಾರದ ಕ್ರಮಕ್ಕೆ ಸಿಎನ್‌ಸಿ ಶ್ಲಾಘನೆ*
ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ

*ದಾಖಲೆಗಳಲ್ಲಿ “ಕೊಡವ” ಪದ ಬಳಕೆ : ಕ್ಯಾಬಿನೆಟ್ ಅನುಮೋದನೆ : ಸರ್ಕಾರದ ಕ್ರಮಕ್ಕೆ ಸಿಎನ್‌ಸಿ ಶ್ಲಾಘನೆ*

ಜುಲೈ 28, 20233 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜು.28 : ಸರ್ಕಾರಿ ದಾಖಲೆಗಳಲ್ಲಿ ಕೊಡವರನ್ನು “ಕೊಡವ” ಎಂದು ನಮೂದಿಸುವ ಕುರಿತು ಕ್ಯಾಬಿನೆಟ್ ಅನುಮೋದನೆ ನೀಡಿದೆ. ಸರ್ಕಾರದ ಈ ಕ್ರಮಕ್ಕೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಶ್ಲಾಘನೆ ವ್ಯಕ್ತಪಡಿಸಿದೆ.
ಕಳೆದ 15 ವರ್ಷಗಳ ಸಿಎನ್‌ಸಿಯ ಸತತ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ ಎಂದು ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ.
ಕೊಡವರ ಕುಲ ಸಮಸ್ಯೆಗೆ ಸಂಬಂಧಿಸಿದ ಅತಿ ಪ್ರಧಾನ ಬೇಡಿಕೆಗಳಲ್ಲಿ ಒಂದಾದ “ಕೊಡವ” ಪದವನ್ನು ಕ್ಯಾಬಿನೆಟ್ ನಿರ್ಣಯದ ಮೂಲಕ ಅಧಿಕೃತಗೊಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದಂತೆ ನಡೆದಿದ್ದಾರೆ. “ಕೊಡವ” ಎನ್ನುವ ಉಜ್ವಲ ಶಾಸ್ತ್ರೀಯ ನಾಮಕ್ಕೆ ಶಾಸನಬದ್ಧ ಸ್ಥಿರೀಕರಣ ದೊರೆತ್ತಿದ್ದು, ಇದು ಸಿಎನ್‌ಸಿಯ ಮಹತ್ವದ ಮೈಲುಗಲ್ಲಾಗಿದೆ.
ಕೊಡವರನ್ನು “ಕೊಡವ” ಎಂದು ನಮೂದಿಸದೆ “ಕೊಡಗರು” ಎಂದು ನಮೂದಿಸುವ ಮೂಲಕ ಕೊಡವ ಬುಡಕಟ್ಟು ಆದಿಮ ಸಂಜಾತ ಮೂಲನಿವಾಸಿಗಳ ಅಸ್ತಿತ್ವದ ಬಗ್ಗೆ ಆತಂಕ ಮೂಡಿಸಲಾಗುತ್ತಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಿಎನ್‌ಸಿ ಸಂಘಟನೆ 2008 ರಿಂದಲೇ ಹೋರಾಟವನ್ನು ಆರಂಭಿಸಿತು. ಕೊಡವರ ಭಾವನೆಯನ್ನು ಅರ್ಥ ಮಾಡಿಕೊಂಡು ನಮ್ಮ ಬೇಡಿಕೆಯನ್ನು ಈಡೇರಿಸುವ ಮೂಲಕ ನ್ಯಾಯ ಒದಗಿಸುವ ಕೆಲಸವನ್ನು ಆಡಳಿತ ವ್ಯವಸ್ಥೆಗಳು ಇಲ್ಲಿಯವರೆಗೆ ಮಾಡಿರಲಿಲ್ಲ.
ಆದರೆ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಮುಖ್ಯಮಂತ್ರಿಗಳನ್ನು ಭೇಟಿಯಾದ ನಂತರ ನಡೆದ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಕೊಡವರನ್ನು “ಕೊಡವ” ಎಂದು ನಮೂದಿಸುವ ಕುರಿತು ಅನುಮೋದನೆ ನೀಡಿದೆ. ಇದು ನಮಗೆ ಸಿಕ್ಕ ದೊಡ್ಡ ಜಯವಾಗಿದ್ದು, ಇದಕ್ಕೆ ಕಾರಣಕರ್ತರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ಎ.ಎಸ್.ಪೊನ್ನಣ್ಣ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರುಗಳಾಗಿದ್ದ ಡಾ.ದ್ವಾರಕನಾಥ್, ಡಾ.ಜಯಪ್ರಕಾಶ್ ಹೆಗ್ಡೆ, ಹೈಕೋರ್ಟ್ನ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್, ನ್ಯಾಯವಾದಿ ಬಲ್ಲಚಂಡ ಬೆಳ್ಳಿಯಪ್ಪ ಹಾಗೂ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಕೊಡವ ಅವರ ಸುದೀರ್ಘ ಹೋರಾಟದಲ್ಲಿ ತಾಳ್ಮೆಯಿಂದ ನಿರಂತರವಾಗಿ ಕೈಜೋಡಿಸಿದ ಸಿಎನ್‌ಸಿ ಸ್ವಯಂ ಸೇವಕರು, ಅಭಿಮಾನಿಗಳು, ಪರೋಕ್ಷ ಮತ್ತು ನೇರವಾಗಿ ಬೆಂಬಲಿಸಿದವರಿಗೆ  ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
::: ಹೋರಾಟದ ಹಾದಿ :::
2008 ರಲ್ಲಿ ಡಾ.ದ್ವಾರಕಾನಾಥ್ ನೇತೃತ್ವದ ಆಯೋಗಕ್ಕೆ ಮನವಿ ಸಲ್ಲಿಸಲಾಯಿತು.  2009 ರಲ್ಲಿ ಆಯೋಗವು ಕೊಡಗಿಗೆ ಭೇಟಿ ನೀಡಿತು. (ಇದನ್ನು ವಿಫಲಗೊಳಿಸಲು ಅವರು ತಂಗಿದ್ದ ಅತಿಥಿ ಗೃಹದಲ್ಲಿ ಅವರ ಮೇಲೆ ಹಲ್ಲೆ ಯತ್ನ ನಡೆಸಿ ಅವರನ್ನು ಅಪಮಾನಿಸಲಾಯಿತು. ಆದರೂ ಅವರು ಕೊಟ್ಟ ಭರವಸೆಯಂತೆ ನಡೆದುಕೊಂಡರು) ಆಯೋಗದ ಕರೆಯ ಮೇರೆಗೆ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಕೊಡವ ಅವರೊಂದಿಗಿನ ತಂಡ ಬೆಂಗಳೂರಿನಲ್ಲಿರುವ ಆಯೋಗದ ಕಚೇರಿಯಲ್ಲಿನ ನ್ಯಾಯಾಲಯದಲ್ಲಿ ಕೊಡವ ಪದ ಬಳಕೆಯ ಸಮಗ್ರ ಚಾರಿತ್ರಿಕ ಹಿನ್ನೆಲೆ ಮತ್ತು ದಾಖಲಾತಿಯೊಂದಿಗೆ ಜ್ಞಾಪನಾ ಪತ್ರ ಸಲ್ಲಿಸಿತು. 2010 ರಲ್ಲಿ ಡಾ.ದ್ವಾರಕಾನಾಥ್ ಆಯೋಗ ಎಲ್ಲಾ ಸರ್ಕಾರಿ ದಾಖಲೆಗಳಲ್ಲಿ ‘ಕೊಡಗರು’ ಬದಲಿಗೆ ನಮ್ಮ “ಕೊಡವ” ಪದ ಬಳಕೆಗೆ ಶಿಫಾರಸ್ಸು ಮಾಡಿತು. ಇದಕ್ಕೆ ಸ್ಪಂದನೆ ಸಿಗದೆ ಇದ್ದಾಗ 2014 ರಲ್ಲಿ ಸಿಎನ್‌ಸಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತು. 2016 ರಲ್ಲಿ ಹೈಕೋರ್ಟ್ನಲ್ಲಿ ನ್ಯಾಯಾಂಗ ನಿಂದನೆಯನ್ನು ಸಲ್ಲಿಸಿತಾದರೂ ಯಾವುದೇ ಸ್ಪಂದನೆ ದೊರೆಯದೆ ಆದೇಶದ ಪ್ರತಿ ಕಸದ ಬುಟ್ಟಿ ಸೇರಿತು. 2018 ರಲ್ಲಿ ಮತ್ತೆ ಕೊಡವ ನ್ಯಾಷನಲ್ ಕೌನ್ಸಿಲ್ ಕೋರ್ಟ್ ಮೊರೆ ಹೋಯಿತು.
2021 ಡಿ.8 ರಂದು ಹೈಕೋರ್ಟ್ನ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಪೀಠವು “ಕೊಡಗರು” ಬದಲಿಗೆ “ಕೊಡವ” ಪದ ಬಳಸುವಂತೆ ಮಹತ್ವದ ತೀರ್ಪು ನೀಡಿತು. 2022 ರಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರಿಗೆ ನ್ಯಾಯಾಲಯದ ಆದೇಶದೊಂದಿಗೆ ಜ್ಞಾಪನಾ ಪತ್ರವನ್ನು ಸಲ್ಲಿಸಲಾಯಿತು. ನಂತರ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರ ಮೂಲಕ ಅಂದಿನ ಸಿಎಂ ಬೊಮ್ಮಾಯಿ ಅವರಿಗೆ ಪತ್ರ ತಲುಪಿತು. ಆದರೂ ಆಗಿನ ಕೊಡವ ಸ್ನೇಹಿ ಎಂದು ಕರೆಸಿಕೊಳ್ಳುತ್ತಿದ್ದ ಸರ್ಕಾರ ಬದ್ಧತೆ ತೋರದೆ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿತು. ಈ ಬೆಳವಣಿಗೆ ಕೊಡವರ ಭಾವನೆಗೆ ಧಕ್ಕೆಯನ್ನುಂಟು ಮಾಡಿತ್ತು ಎಂದು ನಾಚಪ್ಪ ಉಲ್ಲೇಖಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಾಸಕ ಎ.ಎಸ್.ಪೊನ್ನಣ್ಣ ಅವರುಗಳು ನುಡಿದಂತೆ ನಡೆದಿದ್ದಾರೆ. ಇವರುಗಳ ಸಕಾರಾತ್ಮಕ ನಡೆಯು ಉನ್ನತ ಅಧಿಕಾರದಲ್ಲಿ ಉತ್ತಮ ವ್ಯಕ್ತಿಗಳು ಆಡಳಿತ ನಡೆಸುತ್ತಿದ್ದರೆ ಎಲ್ಲಾ ಸಾಂವಿಧಾನಿಕ ಹೋರಾಟಗಳು ಫಲಕಾರಿಯಾಗಲಿವೆ ಎಂಬುವುದಕ್ಕೆ ಇದೊಂದು ಉದಾಹರಣೆ. ಕೆಲವರು ತಮ್ಮ ಮೋಡಿಯ ಮಾತಿನ ಮೂಲಕ ಇಲ್ಲಿಯವರೆಗೆ ಕೊಡವರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಾ ನಮ್ಮನ್ನು ವಂಚಿಸುವುದು ಬಿಟ್ಟರೆ ಬೇರೇನನ್ನೂ ಮಾಡಲಿಲ್ಲ.
ಚುನಾವಣೆ ಸಂದರ್ಭ ನೀಡಿದ ಭರವಸೆಯಂತೆ ಶಾಸಕ ಎ.ಎಸ್.ಪೊನ್ನಣ್ಣ ಅವರು ನಮ್ಮ ಬೇಡಿಕೆ ಈಡೇರುವಂತೆ ನೋಡಿಕೊಂಡಿದ್ದಾರೆ. ಇದೇ ಜು.15 ರಂದು ಸಿಎನ್‌ಸಿ ನಿಯೋಗಕ್ಕೆ ನೀಡಿದ ಭರವಸೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ನಡೆದುಕೊಂಡಿದ್ದು, ನಮ್ಮ ಭಾವನೆಗೆ ಗೌರವ ನೀಡಿ ಜು.27 ರಂದು ಕ್ಯಾಬಿನೆಟ್ ಅನುಮೋದನೆ ದೊರೆಯುವಂತೆ ಮಾಡಿದ್ದಾರೆ. ಸಂವಿಧಾನದ ಚೌಕಟ್ಟಿನಲ್ಲಿರುವ ಸಿಎನ್‌ಸಿಯ ನ್ಯಾಯ ಸಮ್ಮತವಾದ ಇತರ ಬೇಡಿಕೆಗಳನ್ನು ಕೂಡ ಮುಂದಿನ ದಿನಗಳಲ್ಲಿ ಸರ್ಕಾರ ಈಡೇರಿಸುತ್ತದೆ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

  

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಶಾಂತಿನಿಕೇತನ ಯುವಕ ಸಂಘದಿoದ ಯಶಸ್ವೀ ರಕ್ತದಾನ ಶಿಬಿರ*

ಸೆಪ್ಟೆಂಬರ್ 22, 2026

*ಮೂರ್ನಾಡಿನಲ್ಲಿ ಶ್ರದ್ಧಾಭಕ್ತಿಯಿಂದ ಗೌರಿ-ಗಣೇಶ ಮೂರ್ತಿಗಳ ವಿಸರ್ಜನೆ*

ಸೆಪ್ಟೆಂಬರ್ 21, 2026

*ಭಗವದ್ಗೀತೆ ಶ್ಲೋಕ ಮತ್ತು ಭಾವಾರ್ಥ ಪಠಣ ಸ್ಪರ್ಧೆಯಲ್ಲಿ ಎಸ್.ಎಸ್. ದಿವಿತ್‌ಗೆ ಪ್ರಥಮ ಸ್ಥಾನ*

ಸೆಪ್ಟೆಂಬರ್ 21, 2026

*ಮೂರ್ನಾಡಿನಲ್ಲಿ ಶ್ರದ್ಧಾಭಕ್ತಿಯಿಂದ ಗೌರಿ-ಗಣೇಶ ಮೂರ್ತಿಗಳ ವಿಸರ್ಜನೆ*

ಸೆಪ್ಟೆಂಬರ್ 21, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮೂರ್ನಾಡು ಸೆ.21 NEWS DESK :  ಮೂರ್ನಾಡು ಪಟ್ಟಣದಲ್ಲಿ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗೌರಿ-ಗಣೇಶೋತ್ಸವದ ಗಣೇಶ ಮೂರ್ತಿಗಳನ್ನು ಏಳು…

*ಭಗವದ್ಗೀತೆ ಶ್ಲೋಕ ಮತ್ತು ಭಾವಾರ್ಥ ಪಠಣ ಸ್ಪರ್ಧೆಯಲ್ಲಿ ಎಸ್.ಎಸ್. ದಿವಿತ್‌ಗೆ ಪ್ರಥಮ ಸ್ಥಾನ*

ಸೆಪ್ಟೆಂಬರ್ 21, 2026

*ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿ.ಆರ್.ವರ್ಷ ಪ್ರಥಮ*

ಸೆಪ್ಟೆಂಬರ್ 21, 2026

*ವಾಲಿಬಾಲ್ ಪಂದ್ಯಾವಳಿ : ಸರ್ವದೈವತ ಕಾಲೇಜಿನ ಬಾಲಕಿಯರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ*

ಸೆಪ್ಟೆಂಬರ್ 21, 2026

*ಕಾಂತಪ್ಪಗೆ ಪಿಎಚ್‍ಡಿ ಪದವಿ*

ಸೆಪ್ಟೆಂಬರ್ 21, 2026

*ಎಫ್‌.ಎಂ.ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಕೃತಕ ಬುದ್ಧಿಮತ್ತೆ, ಸೈಬರ್ ಸುರಕ್ಷತೆ ಕುರಿತು ಅರಿವು ಕಾರ್ಯಕ್ರಮ*

ಸೆಪ್ಟೆಂಬರ್ 21, 2026

*ಅರೆಕಾಲಿಕ ಕಾನೂನು ಸ್ವಯಂ ಸೇವಕರ ತರಬೇತಿ ಕಾರ್ಯಾಗಾರ ಉದ್ಘಾಟನೆ*

ಸೆಪ್ಟೆಂಬರ್ 21, 2026

*ವಿರಾಜಪೇಟೆ ಗಣೇಶೋತ್ಸವ: ಸೆ.25ರಿಂದ ವಾಹನ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ*

ಸೆಪ್ಟೆಂಬರ್ 21, 2026

*ಸೋಮವಾರಪೇಟೆಯಲ್ಲಿ ಓಣಂ ಉತ್ಸವ ಹಾಗೂ ಹಿಂದೂ ಮಲಯಾಳ ಸಮಾಜದ ದಶಮಾನೋತ್ಸವ*

ಸೆಪ್ಟೆಂಬರ್ 21, 2026

*ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಕರವೇ ವತಿಯಿಂದ ಹಣ್ಣು ಹಂಪಲು ವಿತರಣೆ*

ಸೆಪ್ಟೆಂಬರ್ 21, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.