Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಪರಿಹಾರಕ್ಕಿಂತಲೂ ಅಮೂಲ್ಯವಾದದ್ದು ಮನುಷ್ಯನ ಜೀವ : ಕಾಡಾನೆ ಸೆರೆಗೆ ಶಾಸಕರ ಸೂಚನೆ*
  • *ಹಮ್ಮಿಯಾಲದಲ್ಲಿ ಸಾರಿಗೆ ಸಮಸ್ಯೆ : ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕ ಡಾ.ಮಂತರ್ ಗೌಡ*
  • *ಕೆಎಸ್‌ಐಸಿ ಆವರಣದಲ್ಲಿ ಸ್ಡೇಡಿಯಂ ನಿರ್ಮಾಣ ಯೋಜನೆಗೆ ತಿಲಾಂಜಲಿ : ಸಂಘಟಿತ ಹೋರಾಟಕ್ಕೆ ಸಂದ ಜಯ : ಧನ್ಯವಾದ ಸಲ್ಲಿಸಿದ ಸಂಸದ ಯದುವೀರ್‌ ಒಡೆಯರ್‌*
  • *ಮಡಿಕೇರಿ : ಮಾ.11 ರಂದು ನಗರಸಭೆಯ ಆಯವ್ಯಯ ಸಭೆ*
  • *ಮಾ.12ರ ಹೋರಾಟಕ್ಕೆ ಸಿಪಿಐಎಂ ಪಕ್ಷದ ವಿರಾಜಪೇಟೆ ಘಟಕ ಬೆಂಬಲ : ಕೆ.ಎಸ್ ರಮೇಶ್*
  • *ಕ.ಸಾ.ಪ ದತ್ತಿ ಕಾರ್ಯಕ್ರಮ : ಕೊಡಗಿನ ಸಂಸ್ಕೃತಿಯ ಮೂಲ ಸ್ವರೂಪ ಪ್ರಕೃತಿ ಆರಾಧನೆ : ಮಧೋಶ್ ಪೂವಯ್ಯ*
  • *ಪಂಜರಪೇಟೆ ಕೊಡವ ಕೇರಿಯಿಂದ ವೃದ್ಧಾಶ್ರಮಕ್ಕೆ ಭೇಟಿ*
  • *ಕೊಡವ ಕೂಟಾಳಿಯಡ ಕೂಟದಿಂದ ಸಾಧಕ ಮಹಿಳೆಯರಿಗೆ ಸನ್ಮಾನ*
  • *ಆಫ್ ರೋಡ್ ಚಾಲೆಂಜರ್ಸ್ ಸ್ಪರ್ಧೆ : ಮಡಿಕೇರಿಯ ಜತೀನ್ ಕರ್ಕೆರ ಹಾಗೂ ಹಾರ್ಧಿಕ್ ಕರ್ಕೆರ ದ್ವಿತೀಯ*
  • *ಸೋಮವಾರಪೇಟೆಯಲ್ಲಿ ಬಿಜೆಪಿ ಮಂಡಲ ಯುವ ಮೋರ್ಚಾದಿಂದ ಪ್ರತಿಭಟನೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕುಶಾಲನಗರದಲ್ಲಿ ಪತ್ರಿಕಾ ದಿನಾಚರಣೆ : ವಾರ್ಷಿಕ ಪ್ರಶಸ್ತಿ ಪ್ರದಾನ, ಸಾಧಕ ಮಕ್ಕಳಿಗೆ ಸನ್ಮಾನ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕುಶಾಲನಗರದಲ್ಲಿ ಪತ್ರಿಕಾ ದಿನಾಚರಣೆ : ವಾರ್ಷಿಕ ಪ್ರಶಸ್ತಿ ಪ್ರದಾನ, ಸಾಧಕ ಮಕ್ಕಳಿಗೆ ಸನ್ಮಾನ*

ಜುಲೈ 31, 20232 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜು.31 : ಸಮಾಜಕ್ಕೆ ಒಳಿತಾಗುವ, ನೊಂದವರಿಗೆ ನ್ಯಾಯ ಒದಗಿಸುವ, ರಾಜಕಾರಣಿಗಳನ್ನು ತಿದ್ದುವ ವರದಿಗಳು ಪತ್ರಕರ್ತರ ಮೂಲಕ ನಿರಂತರವಾಗಿ ಪ್ರಕಟವಾಗಬೇಕು ಎಂದು ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದ ವತಿಯಿಂದ ಕುಶಾಲನಗರದಲ್ಲಿ ನಡೆದ ಪತ್ರಿಕಾ ದಿನಾಚರಣೆ, ವಾರ್ಷಿಕ ಪ್ರಶಸ್ತಿ ಪ್ರಧಾನ ಹಾಗೂ ಸಾಧಕ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ವರದಿ ಮಾಡುವ ಭರಾಟೆಯಲ್ಲಿ ಯಾವುದೇ ವ್ಯಕ್ತಿಯ ತೇಜೋವಧೆಗೆ ಮುಂದಾಗಬಾರದು.
ಸಮಾಜಮುಖಿ ಚಿಂತನೆಗಳನ್ನು ಮೂಡಿಸುವ, ಉತ್ತಮ ಸಂದೇಶ ನೀಡುವ ವರದಿಗಳು‌ ಹೆಚ್ಚಾಗಿ ಪ್ರಕಟಗೊಳ್ಳಬೇಕಿದೆ ಎಂದ ಅಪ್ಪಚ್ಚುರಂಜನ್, ಪ್ಲಾಸ್ಟಿಕ್ ಮುಕ್ತ ವಾತಾವರಣ, ಸಮೃದ್ದ ಪರಿಸರ ನಿರ್ಮಾಣ ಕಾರ್ಯಕ್ಕೆ ಎಲ್ಲರೂ‌ ಕೈಜೋಡಿಸಬೇಕಿದೆ. ಈ ಬಗ್ಗೆ ಪತ್ರಿಕೆ ಮಾಧ್ಯಮಗಳ ಮೂಲಕ ಜನರಿಗೆ ಅರಿವು ಮೂಡಿಸುವ ಕೆಲಸವಾಗಬೇಕಾಗಿದೆ ಎಂದು ಕರೆ ನೀಡಿದರು.
ನಿತ್ಯ ಸಮಯ ಪಾಲನೆ ಮಾಡುವ ಮೂಲಕ ಯಶಸ್ಸು ಸಾಧ್ಯ ಎಂದ ಅವರು ಪತ್ರಿಕಾ ದಿನಾಚರಣೆಯಲ್ಲಿ ಸಂಘದ ಸದಸ್ಯರ ಕುಟುಂಬ ಮಿಲನಕ್ಕೆ ಒತ್ತು‌ ನೀಡಿರುವುದು ಶ್ಲಾಘನೀಯ ವಿಚಾರ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎ. ಗೋಪಾಲ್ ಮಾತನಾಡಿ, ಅರಣ್ಯ ಕ್ಷೀಣಿಸಿದಂತೆ ಪರಿಸರ ಅಸಮತೋಲನ, ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡುತ್ತಿದೆ. ಈ ನಿಟ್ಟಿನಲ್ಲಿ ಅರಣ್ಯೀಕರಣಕ್ಕೆ ಅರಣ್ಯ ಇಲಾಖೆ ಹೆಚ್ಚಿನ ಒತ್ತು ನೀಡಿದೆ. ಇದಕ್ಕೆ ಪೂರಕವಾಗಿ ವರದಿಗಳನ್ನು ಮಾಡುವ ಮೂಲಕ‌ ಪತ್ರಕರ್ತರು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದು ಪತ್ರಕರ್ತರನ್ನು ಅಭಿನಂದಿಸಿದರು. ಶುದ್ದ ವಾಯು, ಜಲಕ್ಕಾಗಿ ಪರಿತಪಿಸುವ ದಿನಗಳ ಬಗ್ಗೆ ಎಚ್ಚರವಹಿಸಬೇಕಿದೆ. ಮಾಧ್ಯಮಗಳ ಮೂಲಕ ಸ್ವಚ್ಛತೆ ಜಾಗೃತಿ ಮಾಹಿತಿ ಬಿತ್ತರವಾಗಬೇಕು. ಪ್ರತಿಯೊಬ್ಬರು ವನ್ಯಜೀವಿಗಳ ಬಗ್ಗೆ ಕಾಳಜಿ ವಹಿಸುವಂತಾಗಬೇಕಿದೆ ಎಂದರು.
ಉದ್ಯಮಿ ಎಸ್ ಎಲ್ ಎನ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ವಿಶ್ವನಾಥನ್ ಮಾತನಾಡಿ, ನಿಸರ್ಗ ರಮಣೀಯ ಕೊಡಗಿನ ಸೌಂದರ್ಯವನ್ನು ಪ್ಲಾಸ್ಟಿಕ್ ತ್ಯಾಜ್ಯಗಳು‌ ಕಳೆಗುಂದಿಸುತ್ತಿದೆ. ಆದಷ್ಟು ಪ್ಲಾಸ್ಟಿಕ್ ತ್ಯಾಜ್ಯ ನಿರ್ಮೂಲನೆಗೆ ಎಲ್ಲರೂ ಚಿಂತನೆ‌ ಹರಿಸಬೇಕಿದೆ ಎಂದರು. ಕುಶಾಲನಗರ ಪಟ್ಟಣವನ್ನು ಪ್ರವಾಹ ಮುಕ್ತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಮಾಧ್ಯಮಗಳು ಸರ್ಕಾರದ ಗಮನ ಸೆಳೆಯಬೇಕು ಎಂದು ಮನವಿ ಮಾಡಿದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿ, ಪತ್ರಿಕೋದ್ಯಮದ ಬದುಕು ಕಬ್ಬಿಣದ ಕಡಲೆಯಿದ್ದಂತೆ. ಹಲವು ತೊಡಕುಗಳನ್ನು ಸಮರ್ಥವಾಗಿ ಎದುರಿಸಿ, ಎದೆಗುಂದದೆ ನಡೆಯುವ, ಸಮಾಜದ ತಪ್ಪುಗಳನ್ನು ಆಮಿಷ, ಬೆದರಿಕೆಗಳಿಗೆ ಜಗ್ಗದೆ ಬಿತ್ತರಿಸುವ ಧೈರ್ಯ ಅಗತ್ಯವಿದೆ ಎಂದರು.
ಕುಶಾಲನಗರ ತಾಲೂಕು‌ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕುಶಾಲನಗರ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಸಬಲಂ ಭೋಜಣ್ಣ ರೆಡ್ಡಿ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ವಾರ್ಷಿಕ ಪ್ರಶಸ್ತಿ ವಿಜೇತರಾದ ಎಂ.ಎನ್.ಚಂದ್ರ ಮೋಹನ್, ಕೆ.ಕೆ.ನಾಗರಾಜಶೆಟ್ಟಿ, ಟಿ.ಆರ್.ಪ್ರಭುದೇವ್, ರಘು ಹೆಬ್ಬಾಲೆ, ವಿನೋದ್, ಇಸ್ಮಾಯಿಲ್ ಕಂಡಕೆರೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಚೈತನ್ಯ ಸಿ ಮೋಹನ್, ಪಿ.ಎಸ್.ತಿಷ್ಯ , ಎಸ್.ಪಿ. ಚಿತ್ತಾರ, ಎಸ್.ಪಿ. ಇಂಚರ , ಕೆ.ಎಸ್.ಅನನ್ಯ,  ಕೆ.ಎಸ್ ದೀಕ್ಷ  ,ಮಹಮ್ಮದ್ ಅರ್ಹನ್, ಮಹಮ್ಮದ್ ಜೈನ್ ಅವರನ್ನು ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ಪತ್ರಕರ್ತರು ಮತ್ತು ಕುಟುಂಬ ಸದಸ್ಯರಿಗೆ, ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಪ್ರಧಾನ ಕಾರ್ಯದರ್ಶಿ ವನಿತಾ ಚಂದ್ರಮೋಹನ್ ಸ್ವಾಗತಿಸಿದರು ಜಿಲ್ಲಾ ನಿರ್ದೇಶಕರಾದ ಪಿ ಆರ್ ಪ್ರಭುದೇವ್ ಕಾರ್ಯಕ್ರಮ ನಿರೂಪಿಸಿದರು, ನಿರ್ದೇಶಕ ಕೆ ಜೆ ಶಿವರಾಜ್ ವಂದಿಸಿದರು.

ಈ ಸಂದರ್ಭ ರಾಷ್ಟ್ರೀಯ ಸಮಿತಿ ಸದಸ್ಯ ಸುನಿಲ್ ಪೊನ್ನೇಟಿ ಸೇರಿದಂತೆ ಕುಶಾಲನಗರ Shut ಆಡಳಿತ ಮಂಡಳಿ, ಜಿಲ್ಲಾ ಸಂಘದ ನಿರ್ದೇಶಕರು, ಪದಾಧಿಕಾರಿಗಳು, ಸದಸ್ಯರು ಇದ್ದರು. 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಪರಿಹಾರಕ್ಕಿಂತಲೂ ಅಮೂಲ್ಯವಾದದ್ದು ಮನುಷ್ಯನ ಜೀವ : ಕಾಡಾನೆ ಸೆರೆಗೆ ಶಾಸಕರ ಸೂಚನೆ*

ಮಾರ್ಚ್ 10, 2026

*ಹಮ್ಮಿಯಾಲದಲ್ಲಿ ಸಾರಿಗೆ ಸಮಸ್ಯೆ : ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕ ಡಾ.ಮಂತರ್ ಗೌಡ*

ಮಾರ್ಚ್ 10, 2026

*ಕೆಎಸ್‌ಐಸಿ ಆವರಣದಲ್ಲಿ ಸ್ಡೇಡಿಯಂ ನಿರ್ಮಾಣ ಯೋಜನೆಗೆ ತಿಲಾಂಜಲಿ : ಸಂಘಟಿತ ಹೋರಾಟಕ್ಕೆ ಸಂದ ಜಯ : ಧನ್ಯವಾದ ಸಲ್ಲಿಸಿದ ಸಂಸದ ಯದುವೀರ್‌ ಒಡೆಯರ್‌*

ಮಾರ್ಚ್ 9, 2026

*ಹಮ್ಮಿಯಾಲದಲ್ಲಿ ಸಾರಿಗೆ ಸಮಸ್ಯೆ : ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕ ಡಾ.ಮಂತರ್ ಗೌಡ*

ಮಾರ್ಚ್ 10, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಮಾ.10 : ಮಡಿಕೇರಿ- ಮುಕ್ಕೋಡ್ಲು- ಹಮ್ಮಿಯಾಲ ನಡುವೆ ಸಂಚರಿಸುತ್ತಿದ್ದ ಬಸ್ ನಿಯಮಿತವಾಗಿ ಬಾರದೆ ಇರುವುದರಿಂದ ಗ್ರಾಮಸ್ಥರು…

*ಕೆಎಸ್‌ಐಸಿ ಆವರಣದಲ್ಲಿ ಸ್ಡೇಡಿಯಂ ನಿರ್ಮಾಣ ಯೋಜನೆಗೆ ತಿಲಾಂಜಲಿ : ಸಂಘಟಿತ ಹೋರಾಟಕ್ಕೆ ಸಂದ ಜಯ : ಧನ್ಯವಾದ ಸಲ್ಲಿಸಿದ ಸಂಸದ ಯದುವೀರ್‌ ಒಡೆಯರ್‌*

ಮಾರ್ಚ್ 9, 2026

*ಮಡಿಕೇರಿ : ಮಾ.11 ರಂದು ನಗರಸಭೆಯ ಆಯವ್ಯಯ ಸಭೆ*

ಮಾರ್ಚ್ 9, 2026

*ಮಾ.12ರ ಹೋರಾಟಕ್ಕೆ ಸಿಪಿಐಎಂ ಪಕ್ಷದ ವಿರಾಜಪೇಟೆ ಘಟಕ ಬೆಂಬಲ : ಕೆ.ಎಸ್ ರಮೇಶ್*

ಮಾರ್ಚ್ 9, 2026

*ಕ.ಸಾ.ಪ ದತ್ತಿ ಕಾರ್ಯಕ್ರಮ : ಕೊಡಗಿನ ಸಂಸ್ಕೃತಿಯ ಮೂಲ ಸ್ವರೂಪ ಪ್ರಕೃತಿ ಆರಾಧನೆ : ಮಧೋಶ್ ಪೂವಯ್ಯ*

ಮಾರ್ಚ್ 9, 2026

*ಪಂಜರಪೇಟೆ ಕೊಡವ ಕೇರಿಯಿಂದ ವೃದ್ಧಾಶ್ರಮಕ್ಕೆ ಭೇಟಿ*

ಮಾರ್ಚ್ 9, 2026

*ಕೊಡವ ಕೂಟಾಳಿಯಡ ಕೂಟದಿಂದ ಸಾಧಕ ಮಹಿಳೆಯರಿಗೆ ಸನ್ಮಾನ*

ಮಾರ್ಚ್ 9, 2026

*ಆಫ್ ರೋಡ್ ಚಾಲೆಂಜರ್ಸ್ ಸ್ಪರ್ಧೆ : ಮಡಿಕೇರಿಯ ಜತೀನ್ ಕರ್ಕೆರ ಹಾಗೂ ಹಾರ್ಧಿಕ್ ಕರ್ಕೆರ ದ್ವಿತೀಯ*

ಮಾರ್ಚ್ 9, 2026

*ಸೋಮವಾರಪೇಟೆಯಲ್ಲಿ ಬಿಜೆಪಿ ಮಂಡಲ ಯುವ ಮೋರ್ಚಾದಿಂದ ಪ್ರತಿಭಟನೆ*

ಮಾರ್ಚ್ 9, 2026

*ಕಾಡಾನೆ ದಾಳಿಗೆ ಗ್ರಾ.ಪಂ ಮಾಜಿ ಸದಸ್ಯೆ ಬಲಿ*

ಮಾರ್ಚ್ 9, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.