ಮಡಿಕೇರಿ ಆ.6 : ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಕ್ರೀಡಾ ಸಮಿತಿ ಹಾಗೂ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿಹಬ್ಬ ಕ್ರೀಡಾ ಸಮಿತಿ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಪತ್ರಕರ್ತರಿಗಾಗಿ ಆಯೋಜಿಸಿದ್ದ ಒಳಾಂಗಣ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಿತು.
ಜಿಲ್ಲೆಯ ವಿವಿಧ ಭಾಗಗಳಿಂದ ಪತ್ರಕರ್ತರು ಕೇರಂ, ಟೇಬಲ್ ಟೆನ್ನಿಸ್, ಚೆಸ್, ಮೈಂಡ್ ಗೇಮ್ ನಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಮಹಿಳೆಯರ ಕೇರಂ ಸಿಂಗಲ್ಸ್ ವಿಭಾಗದಲ್ಲಿ ಬಿ.ಆರ್. ಸವಿತಾ ರೈ ಪ್ರಥಮ, ಉದಿಯಂಡ ಜಯಂತಿ ದ್ವಿತೀಯ ಸ್ಥಾನ ಪಡೆದುಕೊಂಡರು.
ಪುರುಷರ ಕೇರಂ ಸಿಂಗಲ್ಸ್ ವಿಭಾಗದಲ್ಲಿ ಶಿವರಾಜು ಪ್ರಥಮ, ನವೀನ್ ಡಿಸೋಜ ದ್ವಿತೀಯ, ಡಬಲ್ಸ್ ವಿಭಾಗದಲ್ಲಿ ವಿನೋದ್, ಜಯಪ್ರಕಾಶ್ ಜೋಡಿ ಪ್ರಥಮ, ಆದರ್ಶ್, ನವೀನ್ ಡಿಸೋಜ ಜೋಡಿ ದ್ವಿತೀಯ ಸ್ಥಾನ ಗಳಿಸಿದರು.
ಟೇಬಲ್ ಟೆನ್ನಿಸ್ ಸಿಂಗಲ್ಸ್ ನಲ್ಲಿ ಅಜ್ಜಮಾಡ ರಮೇಶ್ ಕುಟ್ಟಪ್ಪ ಪ್ರಥಮ, ಅಲ್ಲಾರಂಡ ವಿಠಲ ನಂಜಪ್ಪ ದ್ವಿತೀಯ, ಡಬಲ್ಸ್ ನಲ್ಲಿ ಅಜ್ಜಮಾಡ ರಮೇಶ್ ಕುಟ್ಟಪ್ಪ, ಮಂಜು ಸುವರ್ಣ ಜೋಡಿ ಪ್ರಥಮ, ಅಲ್ಲಾರಂಡ ವಿಠಲ, ಗಣೇಶ್ ಜೋಡಿ ದ್ವಿತೀಯ ಸ್ಥಾನದೊಂದಿಗೆ ವಿಜೇತರಾದರು.
ಚೆಸ್ ಸ್ಪರ್ಧೆಯಲ್ಲಿ ರಿಜ್ವಾನ್ ಹುಸೇನ್ ಪ್ರಥಮ, ಕೃಷ್ಣ, ಮೈಂಡ್ ಗೇಮ್ ನಲ್ಲಿ ಕಾಯಪಂಡ ಶಶಿ ಸೋಮಯ್ಯ ಪ್ರಥಮ, ಜಯಪ್ರಕಾಶ್ ದ್ವಿತೀಯ ಸ್ಥಾನ ತಮ್ಮದಾಗಿಸಿಕೊಂಡರು.
ಕೊಡಗು ಪ್ರೆಸ್ ಕ್ಲಬ್ ಬೆಳ್ಳಿಮಹೋತ್ಸವ ಆಚರಣ ಸಮಿತಿ ಅಧ್ಯಕ್ಷ ಉಳ್ಳಿಯಡ ಎಂ. ಪೂವಯ್ಯ ಬಹುಮಾನ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪತ್ರಕರ್ತರನ್ನು ಒಗ್ಗೂಡಿಸಲು ಈ ರೀತಿಯ ಕ್ರೀಡಾಕೂಟಗಳು ಹೆಚ್ಚಾಗಿ ನಡೆಯಬೇಕು. ದೈಹಿಕ ಹಾಗೂ ಮಾನಸಿಕ ಕ್ಷಮತೆ ವೃದ್ಧಿಗೆ ಕ್ರೀಡೆ ಸಹಕಾರಿ ಎಂದು ತಿಳಿಸಿದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ನಿತ್ಯ ಒತ್ತಡದಲ್ಲಿರುವ ಪತ್ರಕರ್ತರ ಮನೋಲ್ಲಾಸಕ್ಕೆ ಈ ರೀತಿಯ ಕಾರ್ಯಕ್ರಮಗಳು ಪೂರಕ ಎಂದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕ್ರೀಡಾ ಸಮಿತಿ ಸಂಚಾಲಕ ಮಂಜು ಸುವರ್ಣ, ಸಹಸಂಚಾಲಕ ನವೀನ್ ಸುವರ್ಣ, ಕೊಡಗು ಪ್ರೆಸ್ ಕ್ಲಬ್ ಬೆಳ್ಳಿಹಬ್ಬ ಕ್ರೀಡಾ ಸಮಿತಿ ಸಂಚಾಲಕ ಸಂತೋಷ್ ರೈ ಸೇರಿದಂತೆ ಇನ್ನಿತರರು ಹಾಜರಿದ್ದರು.
ಆನಂದ್ ಕೊಡಗು, ಕಿಶೋರ್ ರೈ ಕತ್ತಲೆ ಕಾಡು ನಿರೂಪಿಸಿ, ಹೆಚ್.ಜೆ.ರಾಕೇಶ್ ಸ್ವಾಗತಿಸಿ, ಡಿ. ಸ್ಟ್ಯಾನ್ಲಿ ವಂದಿಸಿದರು.









