ಮಡಿಕೇರಿ ಆ.6 : ನಾಪೋಕ್ಲು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಸಭೆ ನಾಪೋಕ್ಲು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಪರಿಷತ್ ಹೋಬಳಿ ಅಧ್ಯಕ್ಷ ನೆರವಂಡ ಎಂ.ಉಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರೌಢ ಶಾಲಾ, ಕಾಲೇಜು ವಿಭಾಗ ಮತ್ತು ಸಾರ್ವಜನಿಕ ವಿಭಾಗಕ್ಕೆ ದೇಶ, ಭಕ್ತಿ ಗೀತೆ ಹಾಗೂ ಜಾನಪದ ಗೀತೆ (ಸಮೂಹ ಗಾಯನ ನಾಲ್ಕು ಮಂದಿ) ಮತ್ತು ಭಾವಗೀತೆ (ವೈಯುಕ್ತಿಕ) ಸ್ಪರ್ಧೆಯನ್ನು ಈ ತಿಂಗಳ ಒಳಗಾಗಿ ನಾಪೋಕ್ಲು ಪದವಿ ಕಾಲೇಜಿನಲ್ಲಿ ನಡೆಸಲು ಸಭೆ ತೀರ್ಮಾನಿಸಿತು. ಸೆ.12 ರಂದು ಮಧ್ಯಾಹ್ನ 3ಗಂಟೆಗೆ ಮುಂದಿನ ಸಭೆಯನ್ನು ನಡೆಸಲಾಗುತ್ತಿದ್ದು, ಸದಸ್ಯರುಗಳು ಖಡ್ಡಾಯವಾಗಿ ಹಾಜರಿರುವಂತೆ ಉಮೇಶ್ ಮನವಿ ಮಾಡಿದರು.









