ಮಡಿಕೇರಿ ಆ.8 : ಭಾರತ ಸೇವಾದಳದ ಸೋಮವಾರಪೇಟೆ ತಾಲ್ಲೂಕು ಸಮಿತಿ ಮತ್ತು ಸೋಮವಾರಪೇಟೆ ತಾಲ್ಲೂಕು ಪಂಚಾಯ್ತಿಯ ಸಂಯುಕ್ತಾಶ್ರಯದಲ್ಲಿ ತಾಲ್ಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿಯ ಸಿಬ್ಬಂದಿ ವರ್ಗಕ್ಕೆ ರಾಷ್ಟ್ರಧ್ವಜದ ಕುರಿತು ಮಾಹಿತಿ ಶಿಬಿರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾ.ಪಂ ಸಹ ನಿರ್ದೇಶಕ ರಾಕೇಶ್, ಶಿಬಿರದ ಲಾಭ ಪಡೆದುಕೊಳ್ಳುವಂತೆ ಗ್ರಾ.ಪಂ ಸಿಬ್ಬಂದಿ ವರ್ಗಕ್ಕೆ ಕರೆ ನೀಡಿದರು.
ಭಾರತ ಸೇವಾದಳದ ಜಿಲ್ಲಾ ಸಂಘಟಕ ಜಿ.ಈ.ರೇವಣ್ಣ ಮಾತನಾಡಿ ಸೇವಾದಳ ಮತ್ತು ರಾಷ್ಟ್ರಧ್ವಜದ ಕುರಿತು ವಿವರಿಸಿದರು.
ರಾಷ್ಟ್ರಧ್ವಜದ ಆರೋಹಣ, ಅವರೋಹಣ, ರಾಷ್ಟ್ರಗೀತೆ ಮತ್ತು ರಾಷ್ಟ್ರ ಲಾಂಛನದ ಬಗ್ಗೆ ಜಿಲ್ಲಾ ಸಂಪನ್ಮೂಲ ಶಿಕ್ಷಕ ಹೆಚ್.ಪಿ.ಕರುಂಬಯ್ಯ ಮಾಹಿತಿ ನೀಡಿದರು.
ರಾಷ್ಟ್ರಧ್ವಜದ ಉಗಮ, ಇತಿಹಾಸ ಮತ್ತು ತ್ರಿವರ್ಣ ಧ್ವಜದ ಕುರಿತು ಸೇವಾದಳದ ಸಂಪನ್ಮೂಲ ಶಿಕ್ಷಕ ಎ.ಆರ್.ರಂಗಸ್ವಾಮಿ ತಿಳಿಸಿದರು.
ಧ್ವಜಾರೋಹಣ, ರಾಷ್ಟ್ರಗೀತೆ, ವಂದೇ ಮಾತರಂ, ಧ್ವಜಗೀತೆ ಹಾಡುವ ರೀತಿಯನ್ನು ಸೇವಾದಳದ ತಾಲ್ಲೂಕು ಸಮಿತಿಯ ಸದಸ್ಯರಾದ ಮೀರಾ ಸುಮನ್ ಕ್ಯಾಸ್ತಲಿನ ವಿವರಿಸಿದರು.
ಸೇವಾದಳದ ತಾಲ್ಲೂಕು ಸಮಿತಿಯ ಅಧ್ಯಕ್ಷ ಎಂ.ಪಿ.ಗೋಪಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಶಿಕ್ಷಕ ಕರುಂಬಯ್ಯ ವಂದಿಸಿದರು.








