ಮಡಿಕೇರಿ ಆ.21 : ವೀರ ಸೇನಾನಿ ಪದ್ಮ ಭೂಷಣ ಜನರಲ್ ಕೊಡಂದೇರ ಎಸ್.ತಿಮ್ಮಯ್ಯ ಅವರ ಕಂಚಿನ ಪ್ರತಿಮೆಯನ್ನು ನಗರದ ಹೃದಯ ಭಾಗದಲ್ಲಿ 1973ರಲ್ಲಿ ಅಂದಿನ ‘ಪುರಸಭೆ’ ಸ್ಥಾಪನೆ ಮಾಡಿತ್ತು. ಅಂದು ಪುರಸಭೆ ಅಧ್ಯಕ್ಷರಾಗಿದ್ದ ಎಂ.ಸಿ.ನಾಣಯ್ಯ ಅವರು ಪದ್ಮಭೂಷಣ ಜನರಲ್ ಕೊಡಂದೇರ ಎಸ್. ತಿಮ್ಮಯ್ಯ ಅವರ ಪ್ರತಿಮೆ ಸ್ಥಾಪನೆಗೆ ಕಾರಣರಾಗಿದ್ದರು.
1972ರಲ್ಲಿ ಜನರಲ್ ತಿಮ್ಮಯ ಅವರ ಪ್ರತಿಮೆಯನ್ನು ಕೊಲ್ಕತ್ತಾದ ರಾಂಚಿಯಲ್ಲಿ ತಯಾರಿಸಲಾಗಿದ್ದು, ಆ ಕಾಲಘಟ್ಟದಲ್ಲಿ ಪುರಸಭೆ ಅನುದಾನ, ಸಾರ್ವಜನಿಕರು ಮತ್ತು ವಿವಿಧ ಸಂಘ ಸಂಸ್ಥೆಗಳ ಮೂಲಕ ದೇಣಿಗೆ ಸಂಗ್ರಹಿಸಿ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿತ್ತು. ಈ ಪ್ರತಿಮೆಯನ್ನು ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಅವರು 1973ರ ಮಾರ್ಚ್ 20 ರಂದು ಉದ್ಘಾಟಿಸಿದ್ದರು.








