ಮಡಿಕೇರಿ ಆ.30 : ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ನಲ್ಲಿ ಕಳೆದು ಹೋಗಿದ್ದ ಚಿನ್ನದ ಬ್ರೇಸ್ ಲೆಟ್ ಅನ್ನು ನಗರ ಠಾಣೆಯ ಸಿಬ್ಬಂದಿ ವಾರಸುದಾರರಿಗೆ ನೀಡಿದ್ದಾರೆ.
ಪತ್ರಕರ್ತ, ಸೋಮವಾರಪೇಟೆ ನಿವಾಸಿ ತೇಲಪಂಡ ಕವನ್ ಕಾರ್ಯಪ್ಪ ಅವರು ಆ.29ರಂದು ಕುಶಾಲನಗರದಿಂದ ಮಡಿಕೇರಿಗೆ ಬರುತ್ತಿದ್ದ ಸಂದರ್ಭ ಬ್ರೇಸ್ ಲೆಟ್ ಕಳೆದುಕೊಂಡಿದ್ದರು. ಬಸ್‍ನಲ್ಲಿದ್ದ ಪ್ರಯಾಣಿಕರೋರ್ವರು ಬ್ರೇಸ್ ಲೆಟ್ ಅನ್ನು ಚಾಲಕರಿಗೆ ನೀಡಿ, ಮಡಿಕೇರಿ ಬಸ್ ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ಪ್ರೀತಿ ಘಾಟಗೆ ಅವರಿಗೆ ಮಾಹಿತಿ ನೀಡಿದ್ದರು.
ಬುಧವಾರ ವಾರಸುದಾರ ಕವನ್ ಕಾರ್ಯಪ್ಪ ಅವರು ನಗರ ಠಾಣೆಯಲ್ಲಿ ಪ್ರೀತಿ ಘಾಟ ಅವರಿಂದ ಬ್ರೇಸ್ ಲೆಟ್ ಅನ್ನು ಪಡೆದುಕೊಂಡರು. ಬ್ರೇಸ್ ಲೆಟ್ ವಾರಸುದಾರರಿಗೆ ತಲುಪುವಂತೆ ಮಾಡಿದ ಪ್ರಯಾಣಿಕನ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ.







