ಮಡಿಕೇರಿ ಆ.31 : ವಿರಾಜಪೇಟೆಯ ಕಾವೇರಿ ಪದವಿ ಕಾಲೇಜಿನಲ್ಲಿ 2023-2024 ನೇ ಸಾಲಿನ ಶೈಕ್ಷಣಿಕ ವರ್ಷದ ಪೋಷಕರ ಮತ್ತು ಶಿಕ್ಷಕರ ಸಭೆ ನಡೆಯಿತು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಆನಂದ್ ಕಾರ್ಲಾ ಅವರು ಮಾತನಾಡಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೋಷಕರ ಬೆಂಬಲ ಅಗತ್ಯ, ಅಂಕ ಗಳಿಕೆಯೇ ಮುಖ್ಯವಲ್ಲ. ಹಾಗೂ ರಾಷ್ಟ್ರದ ಅಭಿವೃದ್ಧಿಗೆ ವಿದ್ಯಾರ್ಥಿಗಳು ಆದರ್ಶಗಳನ್ನು ಮೈ ಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ವಿದ್ಯಾರ್ಥಿ ಸಲಹಾ ಸಮಿತಿಯ ಸಂಚಾಲಾಕಿ ಅಂಬಿಕಾ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಕಾಲೇಜು ಹಂತದಿಂದಲೇ ಪ್ರಾರಂಭವಾಗಬೇಕು. ನಾಯಕರಲ್ಲಿ ಉತ್ತಮ ಶಿಸ್ತು ನಡತೆಯನ್ನು ಕಲಿಸುತ್ತದೆ ಎಂಬುವುದನ್ನು ತಿಳಿಸಿಕೊಟ್ಟರು.
ಆಂತರಿಕ ಗುಣಮಟ್ಟ ಭರವಸೆ ಕೋಶ ಸಂಚಾಲಕಿ ಡಾ. ಕೆ.ಜಿ.ವೀಣಾ ಕಾಲೇಜಿನಲ್ಲಿರುವ ಕಾರ್ಯಕ್ರಮಗಳನ್ನು ಬಗ್ಗೆ ವಿವರಿಸಿದರು.
ಎನ್.ಸಿ.ಸಿ ಹಾಗೂ ಎನ್.ಎಸ್.ಎಸ್ (ಪದಾಧಿಕಾರಿಗಳು) ಸಂಚಾಲಕರು ಕಾಲೇಜಿನಲ್ಲಿರುವ ಸಾಂಸ್ಕೃತಿಕ ಚಟುವಟಿಕೆಯ ಮಹತ್ವವನ್ನು ತಿಳಿಕೊಟ್ಟರು.
ಇತಿಹಾಸ ಉಪನ್ಯಾಸಕಿ ಸಿ.ಪಿ.ಅನುಪಮ ಪ್ರಾರ್ಥಿಸಿದರು. ಪೋಷಕರ ಮತ್ತು ಶಿಕ್ಷಕರ ಸಂಘದ ಸಂಚಾಲಕ ನಾಗರಾಜು ಸ್ವಾಗತಿಸಿದರು. ಪೋಷಕರ ಮತ್ತು ಶಿಕ್ಷಕರ ಸಂಘದ ಸದಸ್ಯೆ ಅಕ್ಷತಾ ನಾಯ್ಕ್ ವಂದಿಸಿದರು.
ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾದ ಬೆನೆಡಿಟ್ ಸಾಲ್ದಾನ ನಿರೂಪಿಸಿದರು. ಈ ಸಂದರ್ಭ ಕಾಲೇಜಿನ ಉಪನ್ಯಾಸಕ ವೃಂದದವರು ಹಾಗೂ ಪೋಷಕರು ಸಭೆಯಲ್ಲಿ ಹಾಜರಿದ್ದರು.







