ಮಡಿಕೇರಿ ಆ.31 : ನ್ಯಾಯಾಧೀಶರಾಗಿ ನೇಮಕಗೊಂಡ ಮಡಿಕೇರಿ ವಕೀಲರ ಸಂಘದ ಸದಸ್ಯ ಅಬು ತಾಹೀರ್ ಅವರನ್ನು ಮಡಿಕೇರಿ ವಕೀಲರ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂದಭ೯ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶ್ಯಾಂ ಪ್ರಸಾದ್, ನ್ಯಾಯಾಧೀಶರ ಸ್ಥಾನ ಅತ್ಯಂತ ಗೌರವ ಮತ್ತು ಪ್ರತಿಷ್ಟೆಯದ್ದಾಗಿದೆ. ನ್ಯಾಯದಾನ ನೀಡುವಲ್ಲಿ ಸಮಪ೯ಕವಾಗಿ ಕಾಯ೯ನಿವ೯ಹಿಸಿ ಎಂದು ಹಾರೈಸಿದರು.
ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಎಂ.ಎ.ನಿರಂಜನ್ ಮಾತನಾಡಿ, ಅಬು ತಾಹೀರ್ ಅವರ ಸಾಧನೆ ಯುವ ವಕೀಲರಿಗೂ ಪ್ರೇರಣೆಯಾಗಲಿ. ಮತ್ತಷ್ಟು ಯುವ ವಕೀಲರು ಸ್ಪಧಾ೯ತ್ಮಕ ಪರೀಕ್ಷೆ ಬರೆಯುವ ಮೂಲಕ ನ್ಯಾಯಾಧೀಶರಾಗಿ ಆಯ್ಕೆಯಾಗುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ವಕೀಲ ಟಿ.ಎಚ್. ಅಬೂಬಕರ್ ಈ ಸಂದಭ೯ ನೂತನವಾಗಿ ನ್ಯಾಯಾಧೀಶರಾಗಿ ಆಯ್ಕೆಯಾದ ತನ್ನ ಕಛೇರಿ ಸಹೋದ್ಯೋಗಿ ಅಬು ತಾಹಿರ್ ಅವರ ಕುರಿತಂತೆ ಮಾತನಾಡಿದರು.
ಕಾಯ೯ಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಪ್ರಶಾಂತಿ, ಸಿವಿಲ್ ನ್ಯಾಯಾಧೀಶರಾದ ಮುನಿರತ್ನ, ಸಿವಿಲ್ ನ್ಯಾಯಾಧೀಶರಾದ ನಾಗೇಶ್, ವಕೀಲರ ಸಂಘಧ ಕಾಯ೯ದಶಿ೯ ಡಿ.ಎಂ.ಕೇಶವ, ಉಪಾಧ್ಯಕ್ಷ ಎಂ.ಪಿ.ನಾಗರಾಜು, ಸಕಾ೯ರಿ ಅಭಿಯೋಜಕರು, ವಕೀಲರ ಸಂಘದ ಸದಸ್ಯರು, ನ್ಯಾಯವಾದಿಗಳು ಹಾಜರಿದ್ದರು.







