ಮಡಿಕೇರಿ ಸೆ.2 : ಮಡಿಕೇರಿಯ ಹಳೆಯ ಬಸ್ ನಿಲ್ದಾಣದಲ್ಲಿರುವ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತಕ್ಕೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಹಾನಿಗೊಳಗಾದ ವೃತ್ತವನ್ನು ಸಾರಿಗೆ ನಿಗಮ ದುರಸ್ತಿ ಪಡಿಸಿದೆ.
ಅಜ್ಜಮಾಡ ದೇವಯ್ಯ ಪ್ರತಿಮೆ ಇರುವ ವೃತ್ತಕ್ಕೆ ಬಸ್ ಡಿಕ್ಕಿಯಾಗಿ ವೃತ್ತಕ್ಕೆ ಹಾನಿಯಾದ ಹಿನ್ನೆಲೆ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ದೂರು ದಾಖಲಿಸಿದ್ದರು.







