ಸೋಮವಾರಪೇಟೆ ಸೆ.6 : ಕಿರಗಂದೂರು ಗ್ರಾ.ಪಂ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ತಾರಾ ಸುಧೀರ್, ಉಪಾಧ್ಯಕ್ಷರಾಗಿ ಎಂ.ಎಂ.ಬೆಳ್ಳಿಯಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಡಾ.ಮಂಜುನಾಥ್ ಜೆ.ಶೆಟ್ಟಿ ಕಾರ್ಯನಿರ್ವಹಿಸಿದರು.
ಪಿಡಿಒ ರಜನಿ, ಮಾಜಿ ಅಧ್ಯಕ್ಷ ರಘು, ಮಾಜಿ ಉಪಾಧ್ಯಕ್ಷೆ ಸುಧಾರಾಣಿ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸುಧೀರ್, ಪ್ರಮುಖರಾದ ಬಿ.ಕೆ.ರಮೇಶ್, ಎಸ್.ಎಂ.ಪೂವಯ್ಯ, ಎಚ್.ಬಿ.ಶಿವಕುಮಾರ್, ರಾಜ್‍ಕುಮಾರ್, ಕೌಶಿಕ್, ರೋಷನ್, ಎಸ್.ಪಿ.ಪೊನ್ನಪ್ಪ, ಎಸ್.ಕೆ.ಪೂವಯ್ಯ, ಚಿದಾನಂದ ಸೇರಿದಂತೆ ಇತರರು ಇದ್ದರು.







