ಗೋಣಿಕೊಪ್ಪ ಸೆ.11 : ಮಿಸ್, ಮಿಸ್ಸೆಸ್ ಮತ್ತು ಕಿಡ್ಸ್ ಮೈಸೂರು ಕರ್ನಾಟಕ ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಮೊದಲ ರನ್ನರ್ ಅಪ್ ಕಿರೀಟವನ್ನು ರಶ್ಮಿ ರಾಜ್ ಮುಡಿಗೇರಿಸಿಕೊಂಡಿದ್ದಾರೆ.
ಎಸ್.ಎಸ್ ಕಲಾಸಂಗಮ ಸಂಸ್ಥೆ ಮೈಸೂರಿನಲ್ಲಿ ಆಯೋಜಿಸಿದ್ದ ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ವಿಭಾಗದಲ್ಲಿ ರಶ್ಮಿ ಭಾಗವಹಿಸಿದ್ದರು. ಮೂರು ವಿಭಾಗದಲ್ಲಿ ಸುಮಾರು 60ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.
ಸೌಂದರ್ಯ ಸ್ಪರ್ಧೆಯ ತೀರ್ಪುಗಾರರಾಗಿ ಭುವನ ಸುಂದರಿ 2022 ವಿನ್ನರ್ ಸತ್ಯವತಿ ಬಸವರಾಜ್, ಜ್ಯೋತಿಬಿಹಲ್, ಸುಪ್ರಜಾ, ಪೂರ್ಣಿಮಾ, ಮುಖ್ಯ ಅತಿಥಿಗಳಾಗಿ ಜಗದೀಶ್, ಶಶಿಧರ್ ಕೋಟೆ ಖ್ಯಾತ ಗಾಯಕ ಗಂಡ್ಲಿ ಸದಾನಂದ ಸ್ವಾಮಿ, ಚಲನಚಿತ್ರ ನಟ ನಿರ್ಮಾಪಕ ಡಾ.ಬಲರಾಮ್, ಡಾ ಮಾಣಿಕ್ ಟ್ಯಾಂಡಲಿ, ರಾಮಪ್ಪ, ಕಲಾಸಂಗಮ ಸಂಸ್ಥೆಯ ಅಧ್ಯಕ್ಷ ಶಿವಕುಮಾರ್, ಬಿ.ಕೆ ಶೋಭಾ, ಪಿ.ಎನ್.ಶಿಲ್ಪ ಗಣೇಶ್ ಇದ್ದರು.
ರಶ್ಮಿ ಪೊನ್ನಂಪೇಟೆ ತಾಲೂಕಿನ ಮಡಿಕೆಬೀಡು ಗ್ರಾಮದ ಆದೇಂಗಡ ರಾಜ ಅಯ್ಯಪ್ಪ ಮತ್ತು ದಿ.ಸಾವಿತ್ರಿ ಅವರ ಪುತ್ರಿಯಾಗಿದ್ದಾರೆ. ಹಲವು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ರಶ್ಮಿ ವಿನ್ನರ್, ರನ್ನರ್ ಅಪ್ ಕಿರೀಟವನ್ನು ಮುಡುಗೇರಿಸಿಕೊಂಡಿದ್ದಾರೆ.








