Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮಾ.6 ರಂದು ಮಿನಿ ಉದ್ಯೋಗ ಮೇಳ*
  • ಶ್ರದ್ಧಾಭಕ್ತಿಯಿಂದ ಜರುಗಿದ ಬೊಟ್ಲಪ್ಪ ದೇವರ ವಾರ್ಷಿಕ ಉತ್ಸವ
  • *ವಿದ್ಯಾರ್ಥಿಗಳಿಗೆ ಜ್ಞಾನದ ಹಸಿವು ಅಗತ್ಯ : ಕೈಬುಲಿರ ಪಾರ್ವತಿ ಬೋಪಯ್ಯ*
  • *ಸೋಮವಾರಪೇಟೆಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮ : ಮಕ್ಕಳಲ್ಲಿ ದೇಶ ಪ್ರೇಮವನ್ನು ಬೆಳೆಸಿ : ಸುಧಾಕರ್ ಸಲಹೆ*
  • *ಶಾಸ್ತ ಯುವಕ ಸಂಘದಿಂದ ರುದ್ರಭೂಮಿಯಲ್ಲಿ ಶ್ರಮದಾನ*
  • *ಗುಂಡು ಹೊಡೆದುಕೊಂಡು ವ್ಯಕ್ತಿ ಆತ್ಮಹತ್ಯೆ*
  • *21ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿ*
  • *ಕೊಡಗಿನ ಗಡಿಭಾಗದ ಗೇಟ್‌ಗಳನ್ನು ಬಂದ್ ಮಾಡಿ ಹೋರಾಟ*
  • *ಜಿಲ್ಲಾ ಮಟ್ಟದ ಮಾದಕ ದ್ರವ್ಯ ಸಮನ್ವಯ ಸಮಿತಿ ಸಭೆ*
  • *ಮಡಿಕೇರಿಯಲ್ಲಿ ಮಾಚ್೯ 28 ರಂದು ಶ್ರೀ ರಾಮೋತ್ಸವ – ಸಾಂಸ್ಕೖತಿಕ ಕಾಯ೯ಕ್ರಮಗಳಿಗೆ ಆಹ್ವಾನ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕುಶಾಲನಗರ ತಾಲೂಕು ಕ.ಸಾ.ಪ ಪದಗ್ರಹಣ : ಕಲೆ ಸಾಹಿತ್ಯ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ರಾಜಮನೆತನದ ಕೊಡುಗೆ ಅಪಾರ : ರಾಜ ವಂಶಸ್ಥ ಯದುವೀರ್* 
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕುಶಾಲನಗರ ತಾಲೂಕು ಕ.ಸಾ.ಪ ಪದಗ್ರಹಣ : ಕಲೆ ಸಾಹಿತ್ಯ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ರಾಜಮನೆತನದ ಕೊಡುಗೆ ಅಪಾರ : ರಾಜ ವಂಶಸ್ಥ ಯದುವೀರ್* 

ಸೆಪ್ಟೆಂಬರ್ 11, 20232 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಸೆ.11 : ಕಲೆ ಸಾಹಿತ್ಯ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ರಾಜಮನೆತನದ ಕೊಡುಗೆ ಅಪಾರವಾಗಿದೆ ಎಂದು ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟಿದ್ದಾರೆ.

ಕುಶಾಲನಗರದ ಕಲಾಭವನದಲ್ಲಿ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಮಾತನಾಡುವ ಕ್ಷೇತ್ರಗಳ ಏಕೀಕರಣ ಗತವೈಭವವನ್ನು ಮರುಕಳಿಸುವಂತೆ ಮಾಡುವುದು ಹಿರಿಯರ ಚಿಂತನೆಯಾಗಿತ್ತು ಎಂದು ಹೇಳಿದ ಅವರು, ಕನ್ನಡ ಕಲೆ ಸಂಸ್ಕೃತಿ ಬೆಳಗುವಂತೆ ಮಾಡಿ ಅದಕ್ಕೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಹಲವು ರೀತಿಯಲ್ಲಿ ಕಾರ್ಯ ಯೋಜನೆ ರೂಪಿಸಿದ್ದರು ಎಂದು ತಿಳಿಸಿದರು.

ಪುಸ್ತಕಗಳು ಕಲೆಗಳು ನಾಟ್ಯ ನೃತ್ಯ ಮುಂತಾದವುಗಳಿಗೆ ಪ್ರೋತ್ಸಾಹ ನೀಡಿದ ಹೆಗ್ಗಳಿಕೆ ಅವರದ್ದಾಗಿದೆ ಎಂದು ಒಡೆಯರ್ ಸ್ಮರಿಸಿದರು.

ನಾಲ್ವಡಿ ಒಡೆಯರ್ ಅವರು ದೇವಾಲಯಗಳ ರಕ್ಷಣೆ, ಸಂಘ ಸಂಸ್ಥೆಗಳನ್ನು ಹುಟ್ಟು ಹಾಕುವ ಮೂಲಕ ಮುಂದಿನ ಪೀಳಿಗೆಗೆ ಸಂದೇಶ ನೀಡಿದ್ದರು ಎಂದ ಅವರು ದೂರ ದೃಷ್ಟಿಯ ಕಲ್ಪನೆಯ ಮೂಲಕ ಸ್ಥಾಪಿಸಿದ ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ರಾಜ್ಯದಲ್ಲಿ ಹಲವಾರು ಸಂಸ್ಥೆಗಳು ಶತಮಾನೋತ್ಸವ ಆಚರಣೆ ಕಾಣುವಂತಾಯಿತು ಎಂದು ಹೇಳಿದರು.

ಕೊಡಗು ಜಿಲ್ಲೆಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಒಡೆಯರ್ ಪ್ರಕೃತಿ ಸಂರಕ್ಷಣೆ ಹಾಗೂ ಸಂಸ್ಕೃತಿಯನ್ನು ರಕ್ಷಿಸುವ ಕೆಲಸ ಆದ್ಯತೆಯ ಮೂಲಕ ಆಗಬೇಕಾಗಿದೆ. ಆ ಮೂಲಕ ಪ್ರವಾಸೋದ್ಯಮಕ್ಕೆ ಒತ್ತು ನೀಡುವಂತಾಗಬೇಕು ಎಂದರು. ತಾನು ಕೂಡ ವಿಶ್ರಾಂತಿಗೆ ನಾಗರಹೊಳೆ ಸೇರಿದಂತೆ ಕೊಡಗಿನ ಭಾಗಗಳಿಗೆ ನಿರಂತರ ಭೇಟಿ ನೀಡುತ್ತಿದ್ದೇನೆ ಎಂದರು. ಕೊಡಗು ಜಿಲ್ಲೆಯ ಪ್ರಕೃತಿ ಸಂಪ್ರದಾಯ ಕಾಫಿ ಬೆಳೆ ಮುಂತಾದವುಗಳ ಸಂರಕ್ಷಣೆ ಮಾಡುವಲ್ಲಿ ಚಿಂತನೆ ಹರಿಸಬೇಕು ಎಂದು ಹೇಳಿದ ಒಡೆಯರ್ ನಮ್ಮ ಇಂದಿನ ಕೆಲಸ ಮುಂದಿನ ಪೀಳಿಗೆಗೆ ಸಹಕಾರಿಯಾಗಬೇಕಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮಡಿಕೇರಿ ಕ್ಷೇತ್ರ ಶಾಸಕರಾದ ಡಾ ಮಂತರ್ ಗೌಡ ಕಾರ್ಯಕ್ರಮಗಳ ಮೂಲಕ ನಾಡು ನುಡಿ ಸಂಸ್ಕೃತಿ ಉಳಿಸಿ ಬೆಳೆಸುವಂತೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಭಾಷೆ ರಕ್ಷಣೆಗೆ ಒತ್ತು ನೀಡಬೇಕಾಗಿದೆ ಎಂದ ಶಾಸಕರು ಕುಶಾಲನಗರ ಕಲಾಭವನ ಅಭಿವೃದ್ಧಿಗೆ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಲಾಗಿದೆ. ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪರಿಷತ್ತು ಮಾಜಿ ಅಧ್ಯಕ್ಷರು ಹಾಗೂ ಗೌರವ ಸಲಹೆಗಾರರ ಟಿ.ಪಿ.ರಮೇಶ್, ಪ್ರಾಸ್ತಾವಿಕವಾಗಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ ಮತ್ತು ಇತರೆ ವ್ಯವಸ್ಥೆಗಳಲ್ಲಿ ರಾಜರ ಕಾಲದ ಸಾಧನೆಯ ಸಮಗ್ರ ಮಾಹಿತಿ ಒದಗಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮದ್ ಅವರು ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಯೋಜಿತ ಅಧ್ಯಕ್ಷರಾದ ಕೆ ಎಸ್ ನಾಗೇಶ್ ಮತ್ತು ಅವರ ತಂಡಕ್ಕೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಒಡೆಯರ್ ಅವರನ್ನು ಪರಿಷತ್ತು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕೋಶಾಧಿಕಾರಿ ಕೆ ವಿ ಉಮೇಶ್ ಸಂಘಟನಾ ಕಾರ್ಯದರ್ಶಿಗಳಾದ ಕೆ ಬಿ ದೇವಿ ಪ್ರಸಾದ್, ರತ್ನಾವತಿ ಸೂಧನ ಹೋಬಳಿ ಅಧ್ಯಕ್ಷರುಗಳು, ನಿರ್ದೇಶಕರುಗಳು ಇದ್ದರು.

ಶಿಕ್ಷಕರಾದ ಊ ರ ನಾಗೇಶ್ ಮತ್ತು ಬಿ ಬಿ ಹೇಮಲತಾ ನಿರೂಪಣೆ, ಪರಿಷತ್ ಪ್ರಧಾನ ಕಾರ್ಯದರ್ಶಿಗಳಾದ ಟಿ.ವಿ. ಶೈಲಾ ಸ್ವಾಗತ, ಎಸ್ ನಾಗರಾಜ್ ವಂದಿಸಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮಾ.6 ರಂದು ಮಿನಿ ಉದ್ಯೋಗ ಮೇಳ*

ಮಾರ್ಚ್ 5, 2026

ಶ್ರದ್ಧಾಭಕ್ತಿಯಿಂದ ಜರುಗಿದ ಬೊಟ್ಲಪ್ಪ ದೇವರ ವಾರ್ಷಿಕ ಉತ್ಸವ

ಮಾರ್ಚ್ 5, 2026

*ವಿದ್ಯಾರ್ಥಿಗಳಿಗೆ ಜ್ಞಾನದ ಹಸಿವು ಅಗತ್ಯ : ಕೈಬುಲಿರ ಪಾರ್ವತಿ ಬೋಪಯ್ಯ*

ಮಾರ್ಚ್ 5, 2026

ಶ್ರದ್ಧಾಭಕ್ತಿಯಿಂದ ಜರುಗಿದ ಬೊಟ್ಲಪ್ಪ ದೇವರ ವಾರ್ಷಿಕ ಉತ್ಸವ

ಮಾರ್ಚ್ 5, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಸೋಮವಾರಪೇಟೆ ಮಾ.5 NEWS DESK : ಮಾದಾಪುರ ಸಮೀಪದ ಗರ್ವಾಲೆ ಗ್ರಾಮದ ಕೋಟೆಬೆಟ್ಟ ಬೊಟ್ಲಪ್ಪ ದೇವರ ವಾರ್ಷಿಕ ಉತ್ಸವ ಶ್ರದ್ಧಾಭಕ್ತಿಯಿಂದ…

*ವಿದ್ಯಾರ್ಥಿಗಳಿಗೆ ಜ್ಞಾನದ ಹಸಿವು ಅಗತ್ಯ : ಕೈಬುಲಿರ ಪಾರ್ವತಿ ಬೋಪಯ್ಯ*

ಮಾರ್ಚ್ 5, 2026

*ಸೋಮವಾರಪೇಟೆಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮ : ಮಕ್ಕಳಲ್ಲಿ ದೇಶ ಪ್ರೇಮವನ್ನು ಬೆಳೆಸಿ : ಸುಧಾಕರ್ ಸಲಹೆ*

ಮಾರ್ಚ್ 5, 2026

*ಶಾಸ್ತ ಯುವಕ ಸಂಘದಿಂದ ರುದ್ರಭೂಮಿಯಲ್ಲಿ ಶ್ರಮದಾನ*

ಮಾರ್ಚ್ 5, 2026

*ಗುಂಡು ಹೊಡೆದುಕೊಂಡು ವ್ಯಕ್ತಿ ಆತ್ಮಹತ್ಯೆ*

ಮಾರ್ಚ್ 5, 2026

*21ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿ*

ಮಾರ್ಚ್ 5, 2026

*ಕೊಡಗಿನ ಗಡಿಭಾಗದ ಗೇಟ್‌ಗಳನ್ನು ಬಂದ್ ಮಾಡಿ ಹೋರಾಟ*

ಮಾರ್ಚ್ 5, 2026

*ಜಿಲ್ಲಾ ಮಟ್ಟದ ಮಾದಕ ದ್ರವ್ಯ ಸಮನ್ವಯ ಸಮಿತಿ ಸಭೆ*

ಮಾರ್ಚ್ 5, 2026

*ಮಡಿಕೇರಿಯಲ್ಲಿ ಮಾಚ್೯ 28 ರಂದು ಶ್ರೀ ರಾಮೋತ್ಸವ – ಸಾಂಸ್ಕೖತಿಕ ಕಾಯ೯ಕ್ರಮಗಳಿಗೆ ಆಹ್ವಾನ*

ಮಾರ್ಚ್ 5, 2026

*ರಾಷ್ಟ್ರೀಯ ಮಹಿಳಾ ಕಲಾಶಿಬಿರಕ್ಕೆ ಚಾಲನೆ : ಚಿತ್ರಕಲಾ ಗ್ಯಾಲರಿ ಆರಂಭಿಸಲು ಪರಶುರಾಮ ಸಂಪತ್ ಕುಮಾರ್ ಕರೆ*

ಮಾರ್ಚ್ 5, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.