ಮಡಿಕೇರಿ ಸೆ.18 : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಕಂಡು ವಿಶೇಷ ಚೇತನ ಯುವತಿಯೊಬ್ಬಳು ಭಾವುಕರಾಗಿರುವ ಪ್ರಸಂಗ ತಿತಿಮತಿಯಲ್ಲಿ ನಡೆದಿದೆ.
ತಿತಿಮತಿ ನಿವಾಸಿ ಸ್ವಾತಿ ಶಾಸಕ ಪೊನ್ನಣ್ಣ ಅವರನ್ನು ಖುದ್ದು ಭೇಟಿ ಮಾಡಬೇಕೆಂಬುದು ಬಹುದಿನದ ಬೇಡಿಕೆಯಾಗಿತ್ತು. ಅದರಂತೆ ಇಂದು ಶಾಸಕ ಪೊನ್ನಣ್ಣ ಅವರನ್ನು ಕಂಡು ಭಾವುಕರಾದರು.
ಶಾಸಕರು ಅವರೊಂದಿಗೆ ಮಾತನಾಡಿ, ಸಮಸ್ಯೆಯನ್ನ ಆಲಿಸಿ, ಧೈರ್ಯ ತುಂಬಿ, ಶುಭಹಾರೈಸಿದರು.







