ಮಡಿಕೇರಿ ಸೆ.22 : ಕಗ್ಗೋಡ್ಲು ಗ್ರಾಮದ ಹೂಕಾಡುವಿನಲ್ಲಿ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ 18ನೇ ವರ್ಷದ ಗಣೇಶೋತ್ಸವ ಸಂಭ್ರಮದಿಂದ ಜರುಗಿತು.
ಪೂಜಾ ಕಾರ್ಯದ ಬಳಿಕ ಶೋಭಾಯಾತ್ರೆಗು ಮುನ್ನ ಗ್ರಾಮದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಿತಿ ಅಧ್ಯಕ್ಷ ಉಮೇಶ್ ರೈ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೈನಿಕರಾದ ಮಂದ್ರೀರ ಉಮೇಶ್, ಬಿ.ಜೆ. ಭರತ್ ಪೂಜಾರಿ, ಮಾಜಿ ಸೈನಿಕ ಹಗರಿಮನೆ ಮೇ. ವಾಸಪ್ಪ, ದಾನಿಗಳಾದ ದಿವಾಕರ ರೈ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗಾಗಿ ಎಂ.ವಿ.ಶ್ವೇತಾ , ಎಂ.ವಿ.ವಿವೇಕ್ , ತನಿಷ್ಕಾ ರೈ, ಎಂ.ಅಮೃತ ಅವರನ್ನು ಸಮಿತಿ ಹಾಗೂ ಗ್ರಾಮದ ಪ್ರಮುಖರು ಸನ್ಮಾನಿಸಿದರು.
ಕಾರ್ಯದರ್ಶಿ ಕೆ.ಆರ್. ಸತೀಶ್ ನಿರೂಪಿಸಿದರು. ಉಪಾಧ್ಯಕ್ಷ ಸುರೇಶ್(ರಾಜು), ಖಜಾಂತಿ ಗಣಪತಿ, ಸುರೇಶ್ ಮುಂತಾದವರು ಈ ಸಂದರ್ಭ ಇದ್ದರು. ಬಳಿಕ ಶೋಭಾಯಾತ್ರೆ ಮೂಲಕ ಉತ್ಸವ ಮೂರ್ತಿಯನ್ನು ಕೊಂಡೊಯ್ದು, ಸ್ಥಳೀಯ ಹೊಳೆಯಲ್ಲಿ ವಿಸರ್ಜಿಸಲಾಯಿತು.







