Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಜಿಲ್ಲಾ ಮಟ್ಟದ ಮಾದಕ ದ್ರವ್ಯ ಸಮನ್ವಯ ಸಮಿತಿ ಸಭೆ*
  • *ಮಡಿಕೇರಿಯಲ್ಲಿ ಮಾಚ್೯ 28 ರಂದು ಶ್ರೀ ರಾಮೋತ್ಸವ – ಸಾಂಸ್ಕೖತಿಕ ಕಾಯ೯ಕ್ರಮಗಳಿಗೆ ಆಹ್ವಾನ*
  • *ರಾಷ್ಟ್ರೀಯ ಮಹಿಳಾ ಕಲಾಶಿಬಿರಕ್ಕೆ ಚಾಲನೆ : ಚಿತ್ರಕಲಾ ಗ್ಯಾಲರಿ ಆರಂಭಿಸಲು ಪರಶುರಾಮ ಸಂಪತ್ ಕುಮಾರ್ ಕರೆ*
  • *ಏ.5 ರಿಂದ ಮೇ 2 ರವರೆಗೆ ಚೇನಂಡ ಕಪ್ ಹಾಕಿ ಉತ್ಸವ : 4 ಮೈದಾನಗಳಲ್ಲಿ ಪಂದ್ಯಾವಳಿ : ಹೆಸರು ನೋಂದಣಿಗೆ ಮಾ.20 ಕೊನೆ ದಿನ*
  • *ಏಪ್ರಿಲ್ ನಿಂದಲೇ ಪೂರ್ವಾನ್ವಯವಾಗಲಿದೆ ಹೊಸ ವಿದ್ಯುತ್ ದರ: ಯಾರಿಗೆ ಲಾಭ? ಯಾರಿಗೆ ನಷ್ಟ? ಇಲ್ಲಿದೆ ಕಂಪ್ಲೀಟ್ ಚಾರ್ಟ್*
  • *ನಿಮ್ಮ ಏರಿಯಾದಲ್ಲಿ ನೀರಿಲ್ಲವೇ?: ಕೂಡಲೇ ಈ ಕೆಲಸ ಮಾಡಿ! ಮನೆ ಬಾಗಿಲಿಗೇ ಬರಲಿದೆ ಕಾವೇರಿ ನೀರು; ಹೇಗೆ ಗೊತ್ತಾ?*
  • *ಸೆಟ್ಟೇರಿತು ‘ನನ್ನ ಸೈಕಲ್ ಸವಾರಿ’*
  • *ರಾಜ್ಯ ಬಜೆಟ್ ಕೊಡಗಿನ ಅಭಿವೃದ್ಧಿಗೆ ಪೂರಕವಾಗಿರಲಿ : ಬಿಜೆಪಿ ಒತ್ತಾಯ*
  • *ಬೈಲುಕುಪ್ಪೆಯಲ್ಲಿ ವಿಶ್ವದ ಅತಿ ದೊಡ್ಡ ಚಿತ್ರ ಪರದೆ ಅನಾವರಣ*
  • *ಸಾಧಿಸಲು ಹಳ್ಳಿ ನಗರ ಮುಖ್ಯವಲ್ಲ, ಬದಲಿಗೆ ಸಾಧಿಸಲು ವಾತವರಣ ಸೃಷ್ಟಿ ಮಾಡುವುದು ಮುಖ್ಯವಾಗಬೇಕು: ಪೂಜಾ ಸಜೇಶ್: ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಭಿರಕ್ಕೆ ಚಾಲನೆ: ಸೇವಾರ್ಥ ಮನೋಭಾವದಿಂದ ರಾಷ್ಟೃ ನಿರ್ಮಾಣ ಮಾಡುವತ್ತ ಗಮನ ಹರಿಸುವಂತಾಗಬೇಕು:ಗಣ್ಯರ ಅಭಿಮತ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ವಿದ್ಯೆಯನ್ನು ಹೃದಯದ ಭಾಷೆಯನ್ನಾಗಿ ಪರಿವರ್ತಿಸಿಕೊಳ್ಳಿ : ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ವಿ.ಪ್ರಸಾದ್ ಸಲಹೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ವಿದ್ಯೆಯನ್ನು ಹೃದಯದ ಭಾಷೆಯನ್ನಾಗಿ ಪರಿವರ್ತಿಸಿಕೊಳ್ಳಿ : ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ವಿ.ಪ್ರಸಾದ್ ಸಲಹೆ*

ಸೆಪ್ಟೆಂಬರ್ 23, 20232 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಸೆ.23 : ಕಳೆದ ಕೆಲವು ವರ್ಷಗಳಿಂದ ಶೈಕ್ಷಣಿಕ ಸಂಸ್ಥೆಗಳಲ್ಲಿ ಮಾದಕವ್ಯಸನದ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದೇವೆ. ಮಾನವ ಕಳ್ಳಸಾಗಣಿಕೆ, ಮಕ್ಕಳ ಮೇಲಿನ ಅತ್ಯಾಚಾರ ಇತ್ಯಾದಿ ಅಂಶಗಳ ಕುರಿತು ನಿರಂತರ ಕಾರ್ಯಕ್ರಮ ರೂಪಿಸಿಕೊಂಡು ಬಂದಿದ್ದೇವೆ. ಅಂಕಿ ಅಂಶಗಳನ್ನು ಗಮನಿಸುವಾಗ ಮಕ್ಕಳು, ವಿದ್ಯಾರ್ಥಿಗಳು ಈ ಜಾಲದಲ್ಲಿ ಸೇರಿದ್ದಾರೆ. ಶಿಕ್ಷಣ ಸಂಸ್ಥೆಗಳು ಈ ಬಗ್ಗೆ ಜಾಗೃತಿಯ ನೆಲೆಯನ್ನು ರೂಪಿಸುವ ಪ್ರಯತ್ನ ಮಾಡಬೇಕಾಗಿದೆ. ಆ ಮೂಲಕ ಶಿಕ್ಷಣ ಸಂಸ್ಥೆಗಳು ಸಾಮಾಜಿಕ ರಾಯಭಾರಿಗಳಂತೆ ಕಾರ್ಯನಿರ್ವಹಿಸಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ವಿ.ಪ್ರಸಾದ್ ಅಭಿಪ್ರಾಯಪಟ್ಟರು.

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಸಮಾಜಶಾಸ್ತ್ರ ವಿಭಾಗ ಮತ್ತು ರಾಷ್ಟ್ರೀಯ ಸೇವಾಯೋಜನೆಯ ಸಂಯುಕ್ತ ಆಶ್ರಯದಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾದಕ ವಸ್ತುಗಳು ನೈಸರ್ಗಿಕ ಮತ್ತು ರಸಾಯನಿಕ ಮಾದರಿಯಲ್ಲಿ ಕಾಣಬಹುದು. ಒತ್ತಡ ಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಲು ಸೋತ ಕಾರಣದಿಂದ, ಯುವಜನತೆಯ ಮಾದಕ ವ್ಯಸನಿಗಳಾಗಿದ್ದಾರೆ. ಎಂತಹ ಸ್ಥಿತಿಯನ್ನೂ ಎದುರಿಸುವ ಗುಣವನ್ನು, ಮೌಲ್ಯಗಳನ್ನೂ ನಮ್ಮ ಶಿಕ್ಷಣ ಕಲಿಸಿಕೊಡಬೇಕು. ಸಾಧ್ಯವಾದಷ್ಟು ಉತ್ತಮ ಪರಿಸರ ರೂಪಿಸಿಕೊಳ್ಳಿ, ವೈಯಕ್ತಿಕವಾಗಿ ನಿಮ್ಮ ಬದುಕು ನಿಮ್ಮ ಕೈಯಲ್ಲಿದೆ. ಒತ್ತಡ ಇದೆ ಎಂದು ಇಂತಹ ದಾರಿಗಳ ಕಡೆಗೆ ಗಮನಕೊಡಬೇಡಿ. ಕ್ಷಣಿಕ ಸುಖ ಬಿಟ್ಟು ಸಾರ್ಥಕ ಬದುಕನ್ನು ರೂಪಿಸುವ ಕಡೆಗೆ ಗಮನಹರಿಸಬೇಕು. ವಿದ್ಯೆಯನ್ನು ಬುದ್ದಿ ಮೂಲವಾಗಿಸದೆ ಹೃದಯದ ಭಾಷೆಯನ್ನಾಗಿ ಪರಿವರ್ತಿಸಿಕೊಳ್ಳಿ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಮಾದಕ ವ್ಯಸನ ಮತ್ತು ಕಾನೂನು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಹಿರಿಯ ವಕೀಲರು ಮತ್ತು ಪ್ರಧಾನ ಕಾನೂನು ನೆರವು ಅಧೀಕ್ಷಕರಾದ ಕೆ.ಆರ್.ವಿದ್ಯಾರ್ ಗೌಡ ಮಾತನಾಡಿ 2ನೇ ಮಹಾಯುದ್ಧದ ಸಂದರ್ಭದಲ್ಲಿ ತೀವ್ರಗಾಯದಲ್ಲಿ ಬಳಲಿದ ಸೈನಿಕರಿಗೆ ಮಾದಕ ವಸ್ತುಗಳನ್ನು ನೀಡುತ್ತಿದ್ದರು.

1970ರ ಚಳವಳಿ ಹಿಪ್ಪಿ ಚಳವಳಿಯು ವಿಶ್ವದಾದ್ಯಂತ ಮಾದಕ ವಸ್ತುಗಳನ್ನು ಬಳಸುವ, ಫ್ರೀ ಸೆಕ್ಸ್ ಕಲ್ಪನೆಯನ್ನು ಮುಂದುಮಾಡುವ ಮಾದಕ ವಸ್ತು ಸೇವನೆಗೆ ಮತ್ತು ಮಾರಾಟಕ್ಕೆ ಕಾರಣವಾಯಿತು. ಪ್ರಪಂಚದಾದ್ಯಂತ ಶೇ.5.5 ಜನ ಮಾದಕದ್ರವ್ಯ ವ್ಯಸನಕ್ಕೆ ಬಲಿಯಾಗಿದ್ದಾರೆ. ಪ್ರಪಂಚದಾದ್ಯಂತ ಶೇ.1.4 ಜನ ಮಾದಕ ದ್ರವ್ಯ ಸೇವನೆಯಿಂದ ಹೊರಬರಲು ಬಯಸುವವರು. ಶೇ.75 ಜನ ಹೊರಗೆ ಬಂದು ಮತ್ತು ಶೇ.65 ಜನ ಮತ್ತೆ ಹಿಂದಿರುಗಿದ್ದಾರೆ. ಮೊದಲ ಬಾರಿ ಮಾದಕ ವಸ್ತು ಸೇವಿಸಿದರೆ ಒಂದು ವರ್ಷ ಜೈಲು ಶಿಕ್ಷೆ 10 ಸಾವಿರ ದಂಡ. ಮಾದಕ ವಸ್ತು ಸಂಗ್ರಹ ಮಾಡಿಟ್ಟರೆ 10 ವರ್ಷ ಶಿಕ್ಷೆ ಮತ್ತು 1 ಲಕ್ಷ ದಂಡ ಎಂಬ ಕಾನೂನಾತ್ಮಕ ಅಂಶಗಳನ್ನು ಅವರು ವಿವರಿಸಿದರು.

ಶೈಕ್ಷಣಿಕ ಮತ್ತು ಸಾಮಾಜಿಕ ಜವಾಬ್ದಾರಿ ಪ್ರತಿಯೊಬ್ಬ ವಿದ್ಯಾರ್ಥಿಯ ಮೇಲಿದೆ. ಉತ್ತಮ ವಿದ್ಯಾರ್ಥಿಗಳನ್ನು ಉತ್ಪಾದಿಸುವ ಕಾರ್ಖಾನೆಯಾಗಿ ಶೈಕ್ಷಣಿಕ ಸಂಸ್ಥೆ ರೂಪುಗೊಳ್ಳಬೇಕು. ಆ ಮೂಲಕ ಸಮಾಜಕ್ಕೆ ದೇಶಕ್ಕೆ ಅನುಕೂಲಕರವಾದ ಅಂಶಗಳನ್ನು ಶಿಕ್ಷಣ ಸಂಸ್ಥೆ ಮತ್ತು ವಿದ್ಯಾರ್ಥಿ ಸಮೂಹ ನಿರ್ವಹಿಸಬೇಕು. ಮಾದಕ ವ್ಯಸನ ಬಳಕೆಯ ಮಾಡುವವರ ಕುರಿತು ಮಾಹಿತಿಗಳಿದ್ದರೆ ಅದನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಬೇಕು. ಎಂದಿಗೂ ಮಾದಕ ವಸ್ತುಗಳನ್ನು ಬಳಸುವುದಿಲ್ಲ ಎಂಬ ಪ್ರತಿಜ್ಞೆಯನ್ನು ವಿದ್ಯಾರ್ಥಿಗಳು ಕೈಗೊಳ್ಳಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಡಾ. ಬಿ.ರಾಘವ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕರಾದ ಡಾ. ರಾಜೇಂದ್ರ, ಎನ್.ಎಸ್ ಎಸ್.ಸಂಚಾಲಕರಾದ ಡಾ. ಮಹದೇವಯ್ಯ ಮತ್ತು ಡಾ. ಎ.ಎನ್.ಗಾಯತ್ರಿ ಹಾಜರಿದ್ದರು.
ಎನ್‍ಎಸ್‍ಎಸ್, ಎನ್‍ಸಿಸಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಡಾ. ಎ.ಎನ್.ಗಾಯತ್ರಿ ಸ್ವಾಗತಿಸಿದರು. ಅಧ್ಯಾಪಕ ಪ್ರದೀಪ್ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳ ಜೊತೆಯಲ್ಲಿ ಸಂವಾದ ನಡೆಸಿದರು.

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಜಿಲ್ಲಾ ಮಟ್ಟದ ಮಾದಕ ದ್ರವ್ಯ ಸಮನ್ವಯ ಸಮಿತಿ ಸಭೆ*

ಮಾರ್ಚ್ 5, 2026

*ಮಡಿಕೇರಿಯಲ್ಲಿ ಮಾಚ್೯ 28 ರಂದು ಶ್ರೀ ರಾಮೋತ್ಸವ – ಸಾಂಸ್ಕೖತಿಕ ಕಾಯ೯ಕ್ರಮಗಳಿಗೆ ಆಹ್ವಾನ*

ಮಾರ್ಚ್ 5, 2026

*ರಾಷ್ಟ್ರೀಯ ಮಹಿಳಾ ಕಲಾಶಿಬಿರಕ್ಕೆ ಚಾಲನೆ : ಚಿತ್ರಕಲಾ ಗ್ಯಾಲರಿ ಆರಂಭಿಸಲು ಪರಶುರಾಮ ಸಂಪತ್ ಕುಮಾರ್ ಕರೆ*

ಮಾರ್ಚ್ 5, 2026

*ಮಡಿಕೇರಿಯಲ್ಲಿ ಮಾಚ್೯ 28 ರಂದು ಶ್ರೀ ರಾಮೋತ್ಸವ – ಸಾಂಸ್ಕೖತಿಕ ಕಾಯ೯ಕ್ರಮಗಳಿಗೆ ಆಹ್ವಾನ*

ಮಾರ್ಚ್ 5, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಮಾಚ್೯ 05 – ನಗರದ ಶ್ರೀ ಕೋದಂಡ ರಾಮದೇವಾಲಯ ಸಮಿತಿ ವತಿಯಿಂದ ಮಾಚ್೯ 28 ರಂದು ಶನಿವಾರ ಆಯೋಜಿತ…

*ರಾಷ್ಟ್ರೀಯ ಮಹಿಳಾ ಕಲಾಶಿಬಿರಕ್ಕೆ ಚಾಲನೆ : ಚಿತ್ರಕಲಾ ಗ್ಯಾಲರಿ ಆರಂಭಿಸಲು ಪರಶುರಾಮ ಸಂಪತ್ ಕುಮಾರ್ ಕರೆ*

ಮಾರ್ಚ್ 5, 2026

*ಏ.5 ರಿಂದ ಮೇ 2 ರವರೆಗೆ ಚೇನಂಡ ಕಪ್ ಹಾಕಿ ಉತ್ಸವ : 4 ಮೈದಾನಗಳಲ್ಲಿ ಪಂದ್ಯಾವಳಿ : ಹೆಸರು ನೋಂದಣಿಗೆ ಮಾ.20 ಕೊನೆ ದಿನ*

ಮಾರ್ಚ್ 5, 2026

*ಏಪ್ರಿಲ್ ನಿಂದಲೇ ಪೂರ್ವಾನ್ವಯವಾಗಲಿದೆ ಹೊಸ ವಿದ್ಯುತ್ ದರ: ಯಾರಿಗೆ ಲಾಭ? ಯಾರಿಗೆ ನಷ್ಟ? ಇಲ್ಲಿದೆ ಕಂಪ್ಲೀಟ್ ಚಾರ್ಟ್*

ಮಾರ್ಚ್ 5, 2026

*ನಿಮ್ಮ ಏರಿಯಾದಲ್ಲಿ ನೀರಿಲ್ಲವೇ?: ಕೂಡಲೇ ಈ ಕೆಲಸ ಮಾಡಿ! ಮನೆ ಬಾಗಿಲಿಗೇ ಬರಲಿದೆ ಕಾವೇರಿ ನೀರು; ಹೇಗೆ ಗೊತ್ತಾ?*

ಮಾರ್ಚ್ 5, 2026

*ಸೆಟ್ಟೇರಿತು ‘ನನ್ನ ಸೈಕಲ್ ಸವಾರಿ’*

ಮಾರ್ಚ್ 5, 2026

*ರಾಜ್ಯ ಬಜೆಟ್ ಕೊಡಗಿನ ಅಭಿವೃದ್ಧಿಗೆ ಪೂರಕವಾಗಿರಲಿ : ಬಿಜೆಪಿ ಒತ್ತಾಯ*

ಮಾರ್ಚ್ 5, 2026

*ಬೈಲುಕುಪ್ಪೆಯಲ್ಲಿ ವಿಶ್ವದ ಅತಿ ದೊಡ್ಡ ಚಿತ್ರ ಪರದೆ ಅನಾವರಣ*

ಮಾರ್ಚ್ 4, 2026

*ಸಾಧಿಸಲು ಹಳ್ಳಿ ನಗರ ಮುಖ್ಯವಲ್ಲ, ಬದಲಿಗೆ ಸಾಧಿಸಲು ವಾತವರಣ ಸೃಷ್ಟಿ ಮಾಡುವುದು ಮುಖ್ಯವಾಗಬೇಕು: ಪೂಜಾ ಸಜೇಶ್: ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಭಿರಕ್ಕೆ ಚಾಲನೆ: ಸೇವಾರ್ಥ ಮನೋಭಾವದಿಂದ ರಾಷ್ಟೃ ನಿರ್ಮಾಣ ಮಾಡುವತ್ತ ಗಮನ ಹರಿಸುವಂತಾಗಬೇಕು:ಗಣ್ಯರ ಅಭಿಮತ*

ಮಾರ್ಚ್ 4, 2026

*ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ಗಮನಹರಿಸಿ: ಡಾ.ಮಂತರ್ ಗೌಡ*

ಮಾರ್ಚ್ 4, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.