Close Menu
News-Desk-KannadaNews-Desk-Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ನಂದಿಬೆಟ್ಟದ ಗೇಟ್ ಬಂದ್! ಫೆಬ್ರವರಿ 14 ರಂದು ಪ್ರೇಮಿಗಳ ಪ್ರವೇಶಕ್ಕೆ ನಿರ್ಬಂಧ*
  • *ಮಾರ್ಚ್ 6ಕ್ಕೆ ರಾಜ್ಯ ಬಜೆಟ್ ಮಂಡನೆ: ಗ್ಯಾರಂಟಿ ಯೋಜನೆಗಳ ಕಥೆಯೇನು? ಸಂಪುಟ ಸಭೆಯ ಈ 5 ಪ್ರಮುಖ ನಿರ್ಧಾರಗಳನ್ನು ಮಿಸ್ ಮಾಡ್ಬೇಡಿ!*
  • *ಸಂತೋಷವಾಗಿ ಹೊರಟವರು ಮಸಣ ಸೇರಿದರು! ಪೋಷಕರ ಆಸೆಗಳನ್ನು ಮಣ್ಣು ಮಾಡಿದ ಆ ಒಂದು ಕ್ಷಣದ ಅಚಾತುರ್ಯವೇನು?*
  • *ಚಿನ್ನಾಭರಣ ಪ್ರಿಯರಿಗೆ ಸುವರ್ಣಾವಕಾಶ : ಕುಶಾಲನಗರದ ಜಿ.ಎಲ್‌.ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ‘ಓಲ್ಡ್ ಗೋಲ್ಡ್ ಎಕ್ಸ್‌ ಚೇಂಜ್ ಮೇಳ’*
  • *ಡೊನಾಲ್ಡ್ ಟ್ರಂಪ್ ಮೆಚ್ಚಿದ ಆ ‘ಒಂದು’ ನಿರ್ಧಾರ ಯಾವುದು? ಭಾರತಕ್ಕೆ ಸಿಗಲಿದೆ ಅತಿದೊಡ್ಡ ಆರ್ಥಿಕ ಲಾಭ!*
  • *ಜಾಹ್ನವಿ ಕಂದುಲಾ ಜೀವಕ್ಕೆ ‘ಬೆಲೆ’ ಕಟ್ಟಿದ ಅಮೆರಿಕಾ! ಸಿಯಾಟಲ್ ನಗರದಿಂದ ಬರಲಿದೆಯೇ ₹262 ಕೋಟಿ ಪರಿಹಾರ?*
  • *ಬಿಸಾಡಿದ ಬಾಟಲಿಗಳಿಂದ ಮತ್ತೆ ಗ್ಲಾಸಿಗೆ? ದೆಹಲಿ ಸ್ಟೇಡಿಯಂ ಸಿಬ್ಬಂದಿಯ ಈ ಕರ್ಮಕಾಂಡ ನೋಡಿ ನೀವೂ ವಾಕರಿಕೆ ಮಾಡ್ಕೊತೀರಾ!*
  • *ಚಿನ್ನಸ್ವಾಮಿಯಲ್ಲಿ ಮತ್ತೆ ಮೊಳಗಲಿದೆ RCB.. RCB.. ಸದ್ದು! ಸರ್ಕಾರದ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಹೇಗೆ? ಅಭಿಮಾನಿಗಳೇ ಈಗಲೇ ರೆಡಿಯಾಗಿ!*
  • *ಕರೆಂಟ್ ಬಿಲ್ ನೋಡಿ ಬೆಚ್ಚಿಬೀಳಬೇಡಿ! ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಗೆ ಕ್ಷಣಗಣನೆ; ಯಾರಿಗೆ ಎಷ್ಟು ಹೊರೆ?*
  • *ಶಾಲೆ ಪ್ರವಾಸಕ್ಕೆ ಟ್ರಕ್ ಬಳಕೆ: ಪೋಷಕರು ಫುಲ್ ಗರಂ! ಹೆಡ್‌ಮಾಸ್ಟರ್ ಅಮಾನತು ಹಿಂದಿನ ಅಸಲಿ ಕಥೆ ಇಲ್ಲಿದೆ*
News-Desk-KannadaNews-Desk-Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News-Desk-KannadaNews-Desk-Kannada





Home » *ಸಿಎನ್‍ಸಿಯ 3ನೇ ಹಂತದ ಪಾದಯಾತ್ರೆ ಆರಂಭ : ಕೊಡವ ಲ್ಯಾಂಡ್ ಹೋರಾಟ ನಿಲ್ಲದು : ಎನ್.ಯು.ನಾಚಪ್ಪ ಹಕ್ಕೊತ್ತಾಯ ಮಂಡನೆ*
ಇತ್ತೀಚಿನ ಸುದ್ದಿಗಳು

*ಸಿಎನ್‍ಸಿಯ 3ನೇ ಹಂತದ ಪಾದಯಾತ್ರೆ ಆರಂಭ : ಕೊಡವ ಲ್ಯಾಂಡ್ ಹೋರಾಟ ನಿಲ್ಲದು : ಎನ್.ಯು.ನಾಚಪ್ಪ ಹಕ್ಕೊತ್ತಾಯ ಮಂಡನೆ*

October 7, 20233 Mins Read
Facebook WhatsApp Twitter Telegram Copy Link Threads Email LinkedIn Pinterest
Facebook Twitter WhatsApp Email Telegram Copy Link

ಮಡಿಕೇರಿ ಅ.7 : ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ 9 ಪ್ರಮುಖ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಡೆಸುತ್ತಿರುವ 5 ಹಂತಗಳ ಪಾದಯಾತ್ರೆಯಲ್ಲಿ 3ನೇ ಹಂತದ ಪಾದಯಾತ್ರೆ ಗೋಣಿಕೊಪ್ಪಲಿನಿಂದ ಆರಂಭಗೊಂಡಿತು.
ಪಟ್ಟಣದ ಶ್ರೀ ಉಮಾಮಹೇಶ್ವರಿ ದೇವಾಲಯದ ಬಳಿಯಿಂದ ಸಾಗಿದ ಪಾದಯಾತ್ರೆಯಲ್ಲಿ “ಕೊಡವ ಲ್ಯಾಂಡ್” ಪರ ಘೋಷಣೆಗಳು ಮೊಳಗಿದವು. ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಬಸ್ ನಿಲ್ದಾಣದ ಬಳಿ ಮಾನವ ಸರಪಳಿ ನಿರ್ಮಿಸಿದ ಪ್ರಮುಖರು ಪ್ರಮುಖ ಬೇಡಿಕೆಗಳ ಹಕ್ಕೊತ್ತಾಯಗಳನ್ನು ಮಂಡಿಸಿದರು.
ನಂತರ ಮಾಯಮುಡಿಯ ಕಂಗಳತ್ತನಾಡ್ ಮತ್ತು ಬಾಳೆಲೆಯ ಅರ್ಕೇರಿನಾಡ್ ಗೆ ಪಾದಯಾತ್ರೆ ಸಾಗಿತು. ಕೊಡವ ಜನಜಾಗೃತಿ ಸಭೆಯಲ್ಲಿ ಮಾತನಾಡಿದ ನಾಚಪ್ಪ ಅವರು ಬೇಡಿಕೆ ಈಡೇರುವವರೆಗೆ ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯ ಹೋರಾಟ ನಿಲ್ಲದು ಎಂದು ಘೋಷಿಸಿದರು.
ಕೊಡವರ ಪರವಾಗಿ ಸಿಎನ್‍ಸಿ ಸಂಘಟನೆ ಕಳೆದ ಅನೇಕ ವರ್ಷಗಳಿಂದ ಶಾಂತಿಯುತ ಹೋರಾಟವನ್ನು ನಿರಂತರವಾಗಿ ನಡೆಸಿಕೊಂಡು ಬಂದಿದೆ. ಕೊಡವ ಲ್ಯಾಂಡ್ ಗಾಗಿ ನಡೆಸುತ್ತಿರುವ ಪಾದಯಾತ್ರೆಯಲ್ಲಿ ಕೊಡವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಹೋರಾಟಕ್ಕೆ ಬಲ ತುಂಬುತ್ತಿರುವುದು ಶ್ಲಾಘನೀಯವೆಂದರು.
ಸಿಎನ್‍ಸಿ ಸರ್ಕಾರದ ಮುಂದಿಟ್ಟಿರುವ ಬೇಡಿಕೆಗಳು ನ್ಯಾಯಸಮ್ಮತವಾಗಿದೆ. ಅತ್ಯಂತ ಸೂಕ್ಷ್ಮ ಬುಡಕಟ್ಟು ಜನಾಂಗ ಕೊಡವರಿಗೆ ನ್ಯಾಯಯುತವಾಗಿ ಸಾಂವಿಧಾನಿಕ ಭದ್ರತೆ ಸಿಗುವ ಅಗತ್ಯವಿದೆ. ಸಣ್ಣ ಜನಾಂಗಕ್ಕೆ ರಕ್ಷಣೆ ನೀಡದಿದ್ದಲ್ಲಿ ಒಂದು ವಿಶಿಷ್ಟ ಸಂತತಿಯೇ ಅಳಿದು ಹೋಗುವ ಆತಂಕವಿದೆ. ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡಬೇಕು. ಕೊಡಗಿನ ಆದಿಮಸಂಜಾತ ಕೊಡವ ಜನಾಂಗವನ್ನು ಸಂವಿಧಾನದ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸುವುದರಿಂದ ಕೊಡವರಿಗೆ ಭದ್ರತೆ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.
ಕೊಡವ ಜನಾಂಗಕ್ಕೆ ಯಾವುದೇ ವಿಶೇಷ ಪರಿಚ್ಛೇದಗಳ ಷರತ್ತು ಇಲ್ಲದಿರುವುದರಿಂದ ಎಸ್.ಟಿ ಪಟ್ಟಿಗೆ ಸೇರಿಸುವುದು ವರ್ತಮಾನದ ಅನಿವಾರ್ಯ ಅವಶ್ಯಕತೆಯಾಗಿದೆ. ಕರ್ನಾಟಕದ ಗೌರವಾನ್ವಿತ ಉಚ್ಚ ನ್ಯಾಯಾಲಯದ ಆದೇಶದಂತೆ, ಕೊಡವ ಜನಾಂಗದ ನ್ಯಾಯಯುತ, ಸೂಕ್ಷ್ಮ ಸಮಗ್ರ ಕುಲಶಾಸ್ತ್ರ ಅಧ್ಯಯನ ಆರಂಭಿಸಬೇಕು.
ಕೊಡವ “ಸಂಸ್ಕಾರ ಗನ್” ಹಕ್ಕುಗಳನ್ನು ಸಿಖ್ಖರ “ಕಿರ್ಪಾನ್” ಗೆ ಸಮಾನವಾಗಿ ಸಂವಿಧಾನದ 25 ಮತ್ತು 26ನೇ ವಿಧಿಗಳಡಿಯಲ್ಲಿ ಕೊಡವರ “ಧಾರ್ಮಿಕ ಸಂಸ್ಕಾರ”ವೆಂದು ರಕ್ಷಿಸಬೇಕು. ಮಾತೃ ಭಾಷೆ ಕೊಡವ ತಕ್ಕ್ ಅನ್ನು 8ನೇ ಶೆಡ್ಯೂಲ್‍ಗೆ ಸೇರಿಸಬೇಕು. ನಮ್ಮ ಸಂವಿಧಾನದ 347, 350, 350ಎ ಮತ್ತು 350ಬಿ ವಿಧಿಗಳಡಿಯಲ್ಲಿ ಪಠ್ಯಕ್ರಮ ಮತ್ತು ಆಡಳಿತದಲ್ಲಿ ಕೊಡವ ತಕ್ಕ್ ಅನ್ನು ಪರಿಚಯಿಸಬೇಕು. ಕೊಡವ ತಕ್ಕ್ ಅನ್ನು ರಾಜ್ಯದ 3ನೇ ಆಡಳಿತ ಭಾಷೆಯನ್ನಾಗಿ ಪರಿಗಣಿಸಬೇಕು ಸೇರಿದಂತೆ ಒಟ್ಟು 9 ಬೇಡಿಕೆಗಳ ಕುರಿತು ನಾಚಪ್ಪ ವಿವರಿಸಿದರು.
ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಜಾಗೃತಿ ಸಭೆಗಳನ್ನು ಆರಂಭಿಸಲಾಯಿತು. ಕೊಡವರು ಸಾಂಪ್ರದಾಯಿಕ ಕೊಡವ ಉಡುಪಿನಲ್ಲಿ ಕೋವಿಯೊಂದಿಗೆ ಪಾದಯಾತ್ರೆಯಲ್ಲಿ ಸಾಗಿದರು.
ಅ.8 ರಂದು ಬೆಳಗ್ಗೆ 10 ಗಂಟೆಗೆ ಕಿರ್ನಾಲ್‍ನಾಡ್ (ಕಿರ್ಗೂರ್-ಬೆಸಗೂರ್), 3 ಗಂಟೆಗೆ ಪತ್ತ್ ಕಟ್‍ನಾಡ್ (ಬೆಕ್ಕೆಸೆಡ್ಲೂರ್-ಕಾನೂರ್) (ಪೊನ್ನಂಪೇಟೆ ತಾಲೂಕು), ಅ.9 ರಂದು ಬೆಳಗ್ಗೆ 10 ಗಂಟೆಗೆ ತೊಡನಾಡ್ (ಕುಮಟೂರ್-ಶ್ರೀಮಂಗಲ), 2:30 ಗಂಟೆಗೆ, ಕುರ್ಚಿನಾಡ್ (ಕುರ್ಚಿ-ಬೀರುಗ) (ಪೊನ್ನಂಪೇಟೆ ತಾಲೂಕು), ಅ.10 ರಂದು ಬೆಳಗ್ಗೆ 10 ಗಂಟೆಗೆ ಮರೆನಾಡ್, ಪಾಕೇರಿನಾಡ್, ಐವತ್ನಾಡ್, ಪೊನಾಡ್ ಈ ನಾಲ್ಕು ನಾಡು ಮಂದ್‍ಗಳಲ್ಲಿ ಸಭೆ (ಬಾಡಗರ ಕೇರಿ-ತೆರಾಲ್-ಬಿರುನಾಣಿ) (ಪೊನ್ನಂಪೇಟೆ ತಾಲ್ಲೂಕು), ಅ.11 ರಂದು ಬೆಳಗ್ಗೆ 10 ಗಂಟೆಗೆ ತಾಳೆರಿನಾಡ್ (ಟಿ.ಶೆಟ್ಟಿಗೇರಿ), 2.30 ಗಂಟೆಗೆ ಅಂಜಿಗೇರಿನಾಡ್ (ಹುದಿಕೇರಿ-ಬೇಗೂರು) (ಪೊನ್ನಂಪೇಟೆ ತಾಲೂಕು) ನಲ್ಲಿ ಪಾದಯಾತ್ರೆ ನಡೆಯಲಿದೆ ಎಂದು ನಾಚಪ್ಪ ಹೇಳಿದರು.
ಮದ್ರಿರ ಕರುಂಬಯ್ಯ, ಜಮ್ಮಡ ನಂದ, ಜಮ್ಮಡ ಮೋಹನ್, ಕೋಣಿಯಂಡ ಸಂಜು, ಅಜ್ಜಿಕುಟ್ಟೀರ ಲೋಕೇಶ್, ಅಪ್ಪೆಂಗಡ ಮಾಲೆ, ಜಮ್ಮಡ ಜಯ, ಕಾಂಡೇರ ಸುರೇಶ್, ಜಮ್ಮಡ ಜಗನ್, ಜಮ್ಮಡ ಡೀನ, ಕಾಡ್ಯಮಾಡ ಮನು ಸೋಮಯ್ಯ, ಪುಚ್ಚಿಮಾಡ ಸುಭಾಷ್, ಪುಚ್ಚಿಮಾಡ ರಾಯ್, ಕಿರಿಯಮಾಡ ಶಯನ್, ಕಿರಿಯಮಾಡ ಶಾನ್, ಡಾ.ಕಾಳಿಮಾಡ ಶಿವಪ್ಪ, ಪವರ್ಂಗಡ ನವೀನ್, ಚೋಳಪಂಡ ನಾಣಯ್ಯ, ಕಲಿಯಂಡ ಮೀನಾ, ಕೊಲ್ಲಿರ ಗಯಾ, ಚೋಳಪಂಡ ಜ್ಯೋತಿ, ಪಟ್ಟಮಾಡ ಲಲಿತಾ, ಪಟ್ಟಮಾಡ ಕುಶ, ಚಿಯಬೇರ ಸತೀಶ್, ಅಳ್ಮಂಡ ಜೈ, ಮಂದಪಂಡ ಮನೋಜ್, ಅಜ್ಜಿನಂಡ ಅಯ್ಯಪ್ಪ, ಬೊಟ್ಟಂಗಡ ಜಪ್ಪು, ಕೊಲ್ಲಿರ ಗೋಪಿ, ಬಾಚಂಗಡ ಭಾವಿ, ಚೊಟ್ಟೆಕಾಲಪಂಡ ಮನು, ಪುಲ್ಲಂಗಡ ನಟೇಶ್, ಜಮ್ಮಡ ಮಾದಪ್ಪ, ಕೊಂಗಂಡ ಸುಬ್ಬಯ್ಯ, ತೀತರಮಾಡ ಸುನಿಲ್, ಪುಚ್ಚಿಮಾಡ ಸುನಿಲ್, ತೀತರಮಾಡ ತಮ್ಮ, ಆಲೆಮಾಡ ಸುನ್ನು, ಕಾಡ್ಯಮಾಡ ಗೌತಮ್, ಕೊನಿಯಂಡ ಸಾಬು, ಮುರುವಂಡ ಸುರೇಶ್, ಚೆಪ್ಪುಡಿರ ಕಿರಣ್ ಅಪ್ಪಯ್ಯ, ಕೊನಿಯಂಡ ತಿಮ್ಮಯ್ಯ, ತೀತಮಾಡ ಜಗದೀಶ್, ಆಪ್ತೀರ ಜಶ್ಮಿ ಬೋಪಣ್ಣ, ಆಪಟ್ಟಿರ ಲೀನಾ ಪ್ರದೀಪ್, ಚೆಪ್ಪುಡಿರ ಬೆಳ್ಳಿಯಪ್ಪ, ಚೆಪ್ಪುಡಿರ ಅಪ್ಪಣ್ಣ, ಸ್ಯಾನ್ ಸಂಪತ್, ಚೆಪ್ಪುಡಿರ ಪ್ರದೀಪ್ ಪೂವಯ್ಯ, ಸಣ್ವಂಡ ರಮೇಶ್, ಕಾಳಪಂಡ ನರೇಂದ್ರ, ಕೊನಿಯಂಡ ಹ್ಯಾರಿ, ನಾಮೆರ ರವಿ ದೇವಯ್ಯ, ಚೆಪ್ಪುಡಿರ ಸುಬ್ಬಯ್ಯ, ಮಣಿಪಂಡ ಸುರೇಶ್, ಚಿರಿಯಪಂಡ ನಂಜಪ್ಪ, ಸಣ್ವಂಡ ವಿನಯ್ ಅಯ್ಯಪ್ಪ, ಸಣ್ವಂಡ ವಿಶ್ವನಾಥ, ಸಣ್ವಂಡ ವಿಜಯ, ಸಣ್ವಂಡ ಪ್ರಸಾದ್, ಪೊಡಮಾಡ ದಿವ್ಯ, ಪೊಡಮಾಡ ಮೀರ, ಪೊಡಮಾಡ ನಳಿನಿ, ಪಾರುವಂಗಡ ಅನಿತ, ಆಡ್ಡೆಂಗಡ ಗ್ರೀಷ್ಮ, ಆರಮಣಮಡ ದಿವ್ಯ ಗಣಪತಿ, ಆದೆಂಗಡ ರೀನ ತಿಮ್ಮಯ್ಯ, ಆದೆಂಗಡ ಲೀಲ ಬೆಳ್ಯಪ್ಪ, ಕಾಂಡೇರ ಭವಾನಿ, ಕಾಂಡೇರ ತ್ರಿಷ, ಅಡ್ಡೆಂಗಡ ರುಕ್ಮಿಣಿ, ಅಡ್ಡೆಂಗಡ ಪೊನ್ನಮ್ಮ, ಪೊಡಮಾಡ ಉಷಾ, ಅಡ್ಡೆಂಗಡ ಮಂಜುಳಾ, ಅಡ್ಡೆಂಗಡ ಗೀತಾ, ಆರಮಣಮಡ ಚಿತ್ರ, ಆದೆಂಗಡ ಬೀನ, ಅಣ್ಣಳಮಾಡ ಚೊಂದಮ್ಮ, ಅಡ್ಡೆಂಗಡ ಗೀತಾ, ಕಾಡ್ಯಮಾಡ ಕರುಂಬಯ್ಯ, ಕಾಂಡೇರ ಸುರೇಶ್, ಕಾಂಡೇರ ಗಯ, ಆರಮಣಮಡ ಕೃಷ್ಣ, ಮಾಚಂಗಡ ಡಿಕ್ಕಿ, ಆರಮಣಮಡ ಜೀಲ್, ಪಾರ್ವಂಗಡ ದಿಲನ್, ಆರಮಣಮಡ ಮದು, ಆರಮಣಮಡ ಸುನಿಲ್, ಆರಮಣಮಡ ಅನಿಲ್, ಆರಮಣಮಡ ಗಣಪತಿ, ಆರಮಣಮಾಡ ಜೀವನ್, ಅಡ್ಡೆಂಗಡ ಗಣಪತಿ, ಕಾಡ್ಯಮಾಡ ಉದಯ್, ಅಡ್ಡೆಂಗಡ ರಾಕಿ, ಪೊಡಮಾಡ ಸುಕೇಶ್, ಅಡ್ಡೆಂಗಡ ಬವಿ, ಪಾರ್ವಂಗಡ ಮಿಲನ್, ಪಾರ್ವಂಗಡ ಗಿರಿ, ಪಾರ್ವಂಗಡ ಬೋಸ್, ಮುಂಜಾಂದಿರ ನಂದ, ಅಡ್ಡೆಂಗಡ ಗಣಪತಿ, ಪಾರ್ವಂಗಡ ಕಿಶೋರ್, ಪಾರ್ವಂಗಡ ಜಯ, ಅಡ್ಡೆಂಗಡ ಯೋಗೇಶ್, ಅಳಮೆಂಗಡ ರಿವಿನ್, ಪಾರ್ವಂಗಡ ಸುಬ್ರಮಣಿ, ಮೇಚಂಡ ಮಾಚಯ್ಯ, ಮಚ್ಚಮಾಡ ಅಯ್ಯಪ್ಪ, ಪುಚ್ಚಿಮಾಡ ಸುಭಾಸ್, ಅರಮಣಮಾಡ ರಂಜನ್ ಚೆಂಗಪ್ಪ, ಪೊಡಮಾಡ ಮೋಹನ್, ಪೊಡಮಾಡ ಗಿರೀಶ್ ಮಾಚಯ್ಯ, ಕಿರುದಂಡ ಚಿಪ್ಪ, ಅಡ್ಡೆಂಗಡ ರಘು, ಆದೆಂಗಡ ರಮೇಶ್, ಅಡ್ಡೆಂಗಡ ಅರುಣ, ಬದುಮಂಡ ಅಚ್ಚಯ್ಯ, ಪಾರ್ವಂಗಡ ಪ್ರವೀಣ, ಆದೆಂಗಡ ಮಂಜು, ಕೊಲ್ಲಿರ ಸನ್ನು, ಚಕ್ಕೆರ ಡಾಲಿ ಮಾದಪ್ಪ, ಮಾಚಂಗಡ ಬೋಪಣ್ಣ, ಪಾರ್ವಂಗಡ ಕಿಶನ್, ಅಳಮಂಗಡ ಕುಶಾಲಪ್ಪ, ಪೊಡಮಾಡ ಸುಬ್ಬಯ್ಯ, ಅಡ್ಡೆಂಗಡ ದೇವಯ್ಯ, ಅಡ್ಡೆಂಗಡ ಶೇಖರ್, ಅಡ್ಡೆಂಗಡ ಅಜಯ್, ಮಾಚಂಗಡ ಬೊಳ್ಳು, ಪಾರ್ವಂಗಡ ಸೋಮಯ್ಯ, ಅಡ್ಡೆಂಗಡ ಶರತ್, ಆದೆಂಗಡ ರಾಣ, ಮಾಪಂಗಡ ಬೆಳ್ಯಪ್ಪ ಮತ್ತಿತರ ಪ್ರಮುಖರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

Share. Facebook Twitter Pinterest LinkedIn Tumblr Email WhatsApp
Previous Article*ಮಡಿಕೇರಿಯಲ್ಲಿ ದೇಸಿ ಜಗಲಿ ಕಥಾ ಕಮ್ಮಟ : ಓದುಗರ ಸಂಖ್ಯೆ ಹೆಚ್ಚಾಗಬೇಕು : ವೀರಕ ಪುತ್ರ ಶ್ರೀನಿವಾಸ್*
Next Article ಮಡಿಕೇರಿಯಲ್ಲಿ ಜನಾಗ್ರಹ ಚಳುವಳಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

Website design development company services in Mangalore

Forex Trading Teacher in India

Related Posts

*ನಂದಿಬೆಟ್ಟದ ಗೇಟ್ ಬಂದ್! ಫೆಬ್ರವರಿ 14 ರಂದು ಪ್ರೇಮಿಗಳ ಪ್ರವೇಶಕ್ಕೆ ನಿರ್ಬಂಧ*

February 13, 2026

*ಮಾರ್ಚ್ 6ಕ್ಕೆ ರಾಜ್ಯ ಬಜೆಟ್ ಮಂಡನೆ: ಗ್ಯಾರಂಟಿ ಯೋಜನೆಗಳ ಕಥೆಯೇನು? ಸಂಪುಟ ಸಭೆಯ ಈ 5 ಪ್ರಮುಖ ನಿರ್ಧಾರಗಳನ್ನು ಮಿಸ್ ಮಾಡ್ಬೇಡಿ!*

February 13, 2026

*ಸಂತೋಷವಾಗಿ ಹೊರಟವರು ಮಸಣ ಸೇರಿದರು! ಪೋಷಕರ ಆಸೆಗಳನ್ನು ಮಣ್ಣು ಮಾಡಿದ ಆ ಒಂದು ಕ್ಷಣದ ಅಚಾತುರ್ಯವೇನು?*

February 13, 2026

*ಮಾರ್ಚ್ 6ಕ್ಕೆ ರಾಜ್ಯ ಬಜೆಟ್ ಮಂಡನೆ: ಗ್ಯಾರಂಟಿ ಯೋಜನೆಗಳ ಕಥೆಯೇನು? ಸಂಪುಟ ಸಭೆಯ ಈ 5 ಪ್ರಮುಖ ನಿರ್ಧಾರಗಳನ್ನು ಮಿಸ್ ಮಾಡ್ಬೇಡಿ!*

February 13, 2026

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಕುರಿತಾದ ಚರ್ಚೆಗಳ ನಡುವೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ವೃತ್ತಿಜೀವನದ ದಾಖಲೆಯ 17ನೇ ಬಜೆಟ್…

*ಸಂತೋಷವಾಗಿ ಹೊರಟವರು ಮಸಣ ಸೇರಿದರು! ಪೋಷಕರ ಆಸೆಗಳನ್ನು ಮಣ್ಣು ಮಾಡಿದ ಆ ಒಂದು ಕ್ಷಣದ ಅಚಾತುರ್ಯವೇನು?*

February 13, 2026

*ಚಿನ್ನಾಭರಣ ಪ್ರಿಯರಿಗೆ ಸುವರ್ಣಾವಕಾಶ : ಕುಶಾಲನಗರದ ಜಿ.ಎಲ್‌.ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ‘ಓಲ್ಡ್ ಗೋಲ್ಡ್ ಎಕ್ಸ್‌ ಚೇಂಜ್ ಮೇಳ’*

February 13, 2026

*ಡೊನಾಲ್ಡ್ ಟ್ರಂಪ್ ಮೆಚ್ಚಿದ ಆ ‘ಒಂದು’ ನಿರ್ಧಾರ ಯಾವುದು? ಭಾರತಕ್ಕೆ ಸಿಗಲಿದೆ ಅತಿದೊಡ್ಡ ಆರ್ಥಿಕ ಲಾಭ!*

February 12, 2026

*ಜಾಹ್ನವಿ ಕಂದುಲಾ ಜೀವಕ್ಕೆ ‘ಬೆಲೆ’ ಕಟ್ಟಿದ ಅಮೆರಿಕಾ! ಸಿಯಾಟಲ್ ನಗರದಿಂದ ಬರಲಿದೆಯೇ ₹262 ಕೋಟಿ ಪರಿಹಾರ?*

February 12, 2026

*ಬಿಸಾಡಿದ ಬಾಟಲಿಗಳಿಂದ ಮತ್ತೆ ಗ್ಲಾಸಿಗೆ? ದೆಹಲಿ ಸ್ಟೇಡಿಯಂ ಸಿಬ್ಬಂದಿಯ ಈ ಕರ್ಮಕಾಂಡ ನೋಡಿ ನೀವೂ ವಾಕರಿಕೆ ಮಾಡ್ಕೊತೀರಾ!*

February 12, 2026

*ಚಿನ್ನಸ್ವಾಮಿಯಲ್ಲಿ ಮತ್ತೆ ಮೊಳಗಲಿದೆ RCB.. RCB.. ಸದ್ದು! ಸರ್ಕಾರದ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಹೇಗೆ? ಅಭಿಮಾನಿಗಳೇ ಈಗಲೇ ರೆಡಿಯಾಗಿ!*

February 12, 2026

*ಕರೆಂಟ್ ಬಿಲ್ ನೋಡಿ ಬೆಚ್ಚಿಬೀಳಬೇಡಿ! ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಗೆ ಕ್ಷಣಗಣನೆ; ಯಾರಿಗೆ ಎಷ್ಟು ಹೊರೆ?*

February 12, 2026

*ಶಾಲೆ ಪ್ರವಾಸಕ್ಕೆ ಟ್ರಕ್ ಬಳಕೆ: ಪೋಷಕರು ಫುಲ್ ಗರಂ! ಹೆಡ್‌ಮಾಸ್ಟರ್ ಅಮಾನತು ಹಿಂದಿನ ಅಸಲಿ ಕಥೆ ಇಲ್ಲಿದೆ*

February 12, 2026

*ಕೊಡಗಿಗೆ ಭೇಟಿ ನೀಡಿದ ಪೊಲೀಸ್ ಮಹಾ ನಿರೀಕ್ಷಕರು*

February 12, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.