Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ : ಶಾಸಕ ಪೊನ್ನಣ್ಣರಿಗೆ ಸನ್ಮಾನ*
  • *ಐಟಿ ಹಬ್ ಆಗಲಿದೆಯೇ ಸಾಂಸ್ಕೃತಿಕ ನಗರಿ?: ಮೈಸೂರು ಇನ್ಮುಂದೆ ರಾಜ್ಯದ ಎರಡನೇ ಐಟಿ ಸಿಟಿ; ಮಂಗಳೂರಿಗೂ ಸಿಕ್ತು ಐಟಿ ಪಾರ್ಕ್ ಭಾಗ್ಯ!*
  • *ಬೆಂಗಳೂರು-ಕಲಬುರಗಿ ಸೇರಿ ಹಲವು ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ; ಮಾರ್ಚ್ 15ರಿಂದ ಹೊಸ ವೇಳಾಪಟ್ಟಿ ಜಾರಿ!*
  • *ಕಾವೇರಿ ಶಾಲೆಯಲ್ಲಿ ಅಚ್ಚುಕಟ್ಟಾಗಿ ನೆರವೇರಿದ ಬೀಳ್ಕೊಡುಗೆ ಹಾಗೂ ಪದವಿ ಪ್ರಧಾನ ಕಾರ್ಯಕ್ರಮ*
  • *ಮೊಣ್ಣಂಡ ಕೆ.ಚೆಂಗಪ್ಪ ಹಾಗೂ ಚೆರಿಯಮನೆ ಕೃಷ್ಣಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮ*
  • *ಬಸವೇಶ್ವರ ಸನ್ನಿಧಿಯಲ್ಲಿ ಮಳೆ ಪೂಜೆ*
  • *ಸವ೯ ಜನರ ಪಾಲಿನ ಕಲ್ಯಾಣದ ಬಜೆಟ್ : ಶಾಸಕ ಡಾ.ಮಂಥರ್ ಗೌಡ ಶ್ಲಾಘನೆ*  
  • *ಕೊಡಗು ಜಿಲ್ಲೆಯನ್ನು ಕಡೆಗಣಿಸಿದ ಬಜೆಟ್ : ತೇಲಪಂಡ ಶಿವಕುಮಾರ್ ಟೀಕೆ*
  • *ಕೊಡಗಿನ ಜನರ ನಿರೀಕ್ಷೆ ಹುಸಿಯಾಗಿದೆ*
  • *ಸಾಲದ ಶೂಲಕ್ಕೆ ತಳ್ಳಿದ ಬಜೆಟ್ : ವಿರಾಜಪೇಟೆ ಕ್ಷೇತ್ರದ ನಿರೀಕ್ಷೆಗಳು ಹುಸಿಯಾಗಿದೆ : ಬಿಜೆಪಿ ಟೀಕೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಶ್ರೀಕಾವೇರಿ ದರ್ಶನಂ ಮತ್ತು ಕೊಡಗಿನಿಂದ ಗಿರಿತನಕ ಕೃತಿ ಬಿಡುಗಡೆ : ಕಾರ್ಯಪ್ಪ ಕಾಲೇಜು ಸಮಸ್ಯೆ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆ : ಎಂ.ಸಿ.ನಾಣಯ್ಯ ಭರವಸೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಶ್ರೀಕಾವೇರಿ ದರ್ಶನಂ ಮತ್ತು ಕೊಡಗಿನಿಂದ ಗಿರಿತನಕ ಕೃತಿ ಬಿಡುಗಡೆ : ಕಾರ್ಯಪ್ಪ ಕಾಲೇಜು ಸಮಸ್ಯೆ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆ : ಎಂ.ಸಿ.ನಾಣಯ್ಯ ಭರವಸೆ*

ಅಕ್ಟೋಬರ್ 16, 20234 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಅ.16 : ಅಮೃತ ಮಹೋತ್ಸವದ ಸಂಭ್ರಮದಲ್ಲಿರಬೇಕಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ಇಂದು ಮಂಗಳೂರು ವಿಶ್ವ ವಿದ್ಯಾನಿಲಯ ಮತ್ತು ಕೊಡಗು ವಿಶ್ವವಿದ್ಯಾನಿಲಯದ ಮಧ್ಯೆ ಸಿಲುಕಿ ಮೂಲಭೂತ ಸಮಸ್ಯೆಯನ್ನು ಎದುರಿಸುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಸೆಳೆದು ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಮಾಜಿ ಸಚಿವ ಮೇರಿಯಂಡ ಸಿ.ನಾಣಯ್ಯ ಭರವಸೆ ನೀಡಿದ್ದಾರೆ.
ಕೊಡವ ಮಕ್ಕಡ ಕೂಟ, ಮಂಗಳೂರು ವಿಶ್ವವಿದ್ಯಾನಿಲಯದ ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠ ಮತ್ತು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಲೇಖಕ ನಾಗೇಶ್ ಕಾಲೂರು ಬರೆದಿರುವ ಶ್ರೀ ಕಾವೇರಿ ದರ್ಶನಂ ಮತ್ತು ಕೊಡಗಿನಿಂದ ಗಿರಿತನಕ (ಮೂಲ ಲೇಖಕರು ದಿ.ಮಳವಂಡ ಗೌರಮ್ಮ ಅಚ್ಚಯ್ಯ) ಕೃತಿಗಳ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಶ್ರೀ ಕಾವೇರಿ ದರ್ಶನಂ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮೂಲಭೂತ ಸೌಲಭ್ಯಗಳಿಂದ ವಂಚಿತವಾಗುತ್ತದೆ ಎಂಬ ಕಾರಣಕ್ಕೆ ತನ್ನ ಅಧಿಕಾರ ಅವಧಿಯಲ್ಲಿಯೇ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜನ್ನು ಮಂಗಳೂರು ವಿಶ್ವ ವಿದ್ಯಾನಿಲಯದ ಭಾಗವಾಗಿ ಮಾಡಲಾಗಿತ್ತು. ಆದರೆ ಇಂದು ಕೊಡಗಿನ ಪ್ರತಿಷ್ಠಿತ ಕಾಲೇಜು ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿರುವುದು ಬೇಸರದ ವಿಚಾರ ಎಂದ ಅವರು, ಇದು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಮೇಲೆ ಪ್ರಭಾವ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ತಾನು ಈ ಕಾಲೇಜಿನ ಹಳೇ ವಿದ್ಯಾರ್ಥಿಯಾಗಿದ್ದು, ಕಾಲೇಜಿನ ಸಮಸ್ಯೆಯನ್ನು ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗುವುದಾಗಿ ತಿಳಿಸಿದರು.
ಕೊಡವ ಮಕ್ಕಡ ಕೂಟದ ಮೂಲಕ ಸಂಘಟನೆಯ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಹಲವು ಬರಹಗಾರರನ್ನು ಪ್ರೋತ್ಸಾಹಿಸುತ್ತಾ ಬಂದಿದ್ದು, ಯುವಕರಿಗೆ ಮಾದರಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಕಾರ್ಯಪ್ಪ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಬೇಕು, ಅಧ್ಯಕ್ಷ ಸ್ಥಾನ ಸಿಕ್ಕಿದ್ದಲ್ಲಿ ಕಾಲೇಜಿನ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ನಾಣಯ್ಯ ಹೇಳಿದರು.
ಕೊಡಗಿನಿಂದ ಗಿರಿತನಕ ಮೂಲ ಲೇಖಕರು ದಿ.ಮಳವಂಡ ಗೌರಮ್ಮ ಅಚ್ಚಯ್ಯ ಅವರು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರಾಗಿದ್ದು, ತಮ್ಮ ಕೃತಿಗಳ ಮೂಲಕ ಬರಹಗಾರರ ಜೀವನ ಚರಿತ್ರೆಯನ್ನು ವಿವರಿಸಿದ್ದಾರೆ. ಅಂದಿನ ಕಾಲದ ಕೊಡಗಿನ ಸಂಪೂರ್ಣ ಚಿತ್ರಣವನ್ನು ಪುಸ್ತಕದಲ್ಲಿ ವಿವರಿಸಿದ್ದು, ಲೇಖಕ ನಾಗೇಶ ಕಾಲೂರು ಅವರು ಉತ್ತಮ ರೀತಿಯಲ್ಲಿ ಭಾಷಾಂತರಗೊಳಿಸಿದ್ದಾರೆ. ಶ್ರೀ ಕಾವೇರಿ ದರ್ಶನಂ ಕೃತಿ ಷಟ್ಪದಿ ರೂಪದಲ್ಲಿ ಹಾಡಿನ ರೂಪದಲ್ಲಿ ಬರೆಯಲಾಗಿದೆ. ಕೊಡಗಿನ ಕಾವೇರಿಯ ಇತಿಹಾಸವನ್ನು ತೋರಿಸಿದ್ದು, ಇದು ಜನಾಂಗದ ಗೌರವವನ್ನು ಉಳಿಸುವ ಪುಸ್ತಕವಾಗಿದೆ ಎಂದರು.
ಪದ್ಮಶ್ರೀ ರಾಣಿ ಮಾಚಯ್ಯ ಅವರು ಕಳೆದ 35 ವರ್ಷಗಳಿಂದ ದೇಶ ವಿದೇಶಗಳಲ್ಲಿ ಕೊಡವ ಸಂಸ್ಕೃತಿಯನ್ನು ಪರಿಚಯಿಸಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪುಸ್ತಕವನ್ನು ಓದುವ ಮೂಲಕ ಜ್ಞಾನ ಸಂಪಾದಿಸಿಕೊಳ್ಳಬೇಕು. ಶಿಕ್ಷಕರು ಪೋತ್ಸಾಹಿಸುವ ಕೆಲಸ ಮಾಡಬೇಕು ಎಂದು ನಾಣಯ್ಯ ತಿಳಿಸಿದರು.
ಸಾಹಿತಿ ನಾಗೇಶ್ ಕಾಲೂರು ಮಾತನಾಡಿ, ಪ್ರಕೃತಿಯನ್ನು ಉಳಿಸಬೇಕು, ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಬೇಕು, ಜಲ ಸಂರಕ್ಷಣೆಗೆ ಮುಂದಾಗಬೇಕೆಂದು ಕರೆ ನೀಡಿದರು.
ಶ್ರೀ ಕಾವೇರಿ ದರ್ಶನಂ ಪುಸ್ತಕ ಪ್ರಾಕೃತಿಕ ವಿಕೋಪದ ಸಂದರ್ಭ ಸೃಷ್ಠಿಯಾಯಿತು. ಪುರಾಣದಲ್ಲಿರುವ ವಿವಿಧ ವಿಚಾರವನ್ನು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದ್ದು, ಹಿಂದಿನ ಕಾಲದ ಹಲವು ಸಂಸ್ಕೃತಿಯನ್ನು ಇದರಲ್ಲಿ ಕ್ರೋಡಿಕರಿಸಲಾಗಿದೆ. ಇದರಲ್ಲಿ 18 ಅಧ್ಯಾಯಗಳಿದ್ದು, ಬೇರೆ ಬೇರೆ ಕಥೆಗಳನ್ನು ಉಲ್ಲೇಖ ಮಾಡಲಾಗಿದೆ ಎಂದು ತಿಳಿಸಿದರು.
ಕೊಡಗಿನಿಂದ ಗಿರಿತನಕ ಕೃತಿಯ ಮೂಲ ಲೇಖಕರು ದಿ.ಮಳವಂಡ ಗೌರಮ್ಮ ಅಚ್ಚಯ್ಯ ಅವರಾಗಿದ್ದು, ಅದನ್ನು ಭಾಷಾಂತರಗೊಳಿಸಲಾಗಿದೆ. 1925 ರಿಂದ 2000 ಇಸವಿಯ ಸಂಪೂರ್ಣ ಮಾಹಿತಿ ಈ ಪುಸ್ತಕದಲ್ಲಿದ್ದು, ಅಂದಿನ ಪದ್ಧತಿ ಪರಂಪರೆ, ಕೊಡಗಿನ ಜನಜೀವನದ ಬಗ್ಗೆ ವಿವರಿಸಲಾಗಿದೆ ಎಂದರು.
ಕೊಡಗಿನಲ್ಲಿ ಹುಟ್ಟುವ ಜಲದಲ್ಲಿ ಕಾವೇರಿ ಇದ್ದಾಳೆ. ಕೊಡಗಿನ ಜನ ಕೊಡುಗೈದಾನಿಗಳಾಗಿದ್ದು, ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋದಪದಿಂದಾಗಿ ಬೇಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಮಣ್ಣಲ್ಲೇ ಹುಟ್ಟಿದರೂ ಕಾವೇರಿ ಮಾತೆಗೆ ನಾವು ಏನು ನೀಡಿದ್ದೇವೆ ಎಂಬುವುದನ್ನು ಮನನ ಮಾಡಿಕೊಳ್ಳಬೇಕು ಎಂದ ಅವರು, ಜಲಸಂರಕ್ಷಣೆ ಮಾಡದೇ ಇದ್ದರೆ ಪ್ರಾಕೃತಿಕ ವಿಕೋಪದಂತಹ ಘಟನೆಗಳು ಮರುಕಳಿಸಲಿವೆ ಎಂದು ಅಭಿಪ್ರಾಯಪಟ್ಟರು.
ವಿಪರೀತ ರಸಾಯನಿಕ ಗೊಬ್ಬರದ ಸಿಂಪಡಣೆ, ಕಳೆನಾಶಕ, ಯಂತ್ರಗಳ ಬಳಕೆಯಿಂದ ಕೊಡಗಿನಂತ ಸೂಕ್ಷ್ಮ ಪ್ರದೇಶದಲ್ಲಿ ಜಲಮೂಲಗಳನ್ನು ನಾಶ ಮಾಡುತ್ತಿದ್ದೇವೆ. ಕಾವೇರಿಯ ಒಡಲನ್ನು ಯಾವ ರೀತಿ ಶೋಷಣೆ ಮಾಡುತ್ತಿದ್ದೇವೆ ಎಂಬುವುದನ್ನು ಮನನ ಮಾಡಿಕೊಂಡು ಅದರ ರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಹಾರಂಗಿ ಅಣೆಕಟ್ಟೆಯಲ್ಲಿ ಹೂಳು ತುಂಬಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇದನ್ನು ತೆಗೆಯದೇ ಇದ್ದರೆ ಕಟ್ಟೆ ಸಾಮಥ್ರ್ಯ ಕಳೆದುಕೊಳ್ಳಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಕೊಡಗಿನ ಹಿರಿಯರು ಪ್ರಕೃತಿ ಆರಾಧಕರು, ಪ್ರಕೃತಿಯನ್ನು ಉಳಿಸಿ, ಬೆಳೆಸುವ ಮೂಲಕ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದ್ದಾರೆ. ಅದರಂತೆ ಯುವ ಪೀಳಿಗೆ ಸಮಗ್ರವಾಗಿ ಮರಗಿಡಗಳನ್ನು ಸಂರಕ್ಷಿಸಬೇಕು ಎಂದರು.
ಕೊಡವ ಮಕ್ಕಡ ಕೂಟ ದಾಖಲೆಯ 75 ಪುಸ್ತಕಗಳನ್ನು ಬಿಡುಗಡೆ ಮಾಡಿದ್ದು, ಎಲ್ಲರೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಷಟ್ಪದಿ ರೂಪದಲ್ಲಿರುವ ಪುಸ್ತಕವನ್ನು ಗದ್ಯಕ್ಕೆ ತರ್ಜುಮೆ ಮಾಡುವ ಯೋಜನೆ ಇದೆ ಎಂದು ತಿಳಿಸಿದರು.
ಮಂಗಳೂರು ವಿಶ್ವ ವಿದ್ಯಾನಿಲಯದ ನಿವೃತ್ತ ಪ್ರೊ.ಕೋಡಿರ ಲೋಕೇಶ್ ಮಾತನಾಡಿ, ಮನುಷ್ಯನ ಜೀವದಲ್ಲಿ ಧಾರ್ಮಿಕತೆ ಅತ್ಯಂತ ಮುಖ್ಯವೆನಿಸುತ್ತದೆ. ಧಾರ್ಮಿಕ ಜೀವನ ಪುರಾಣದಿಂದ ಕೂಡಿರುತ್ತದೆ. ಪುರಾಣ ಎಂಬುವುದು ಮನುಷ್ಯನ ನಂಬಿಕೆ. ಅದನ್ನ ತೆಗೆದು ಹಾಕಿದರೆ ಮನುಷ್ಯನ ಜೀವನ ಯಾಂತ್ರೀಕೃತಗೊಳ್ಳುತ್ತದೆ ಎಂದರು.
ಕಾವೇರಿ ದರ್ಶನಂ ಪುಸ್ತಕದಲ್ಲಿ ನಾಗರೀಕತೆ ಮತ್ತು ಪರಿಸರದ ನಡುವೆಯ ಹೋರಾಟದ ಶೈಲಿಯನ್ನು ಮನ ಮುಟ್ಟುವಂತೆ ಬರೆದಿದ್ದಾರೆ. ನಮ್ಮ ಸಮಾಜದಲ್ಲಿ ಧಾರ್ಮಿಕತೆ ಹೇಗೆ ಪ್ರಭಾವ ಬೀರಿದೆ ಎಂಬುವುದನ್ನು ತಿಳಿಸಲಾಗಿದೆ ಎಂದು ಹೇಳಿದರು.
ಲೇಖಕಿ ದಿ.ಮಳವಂಡ ಗೌರಮ್ಮ ಅಚ್ಚಯ್ಯ ಅವರ ಕೊಡಗಿನಿಂದ ಗಿರಿಯವರೆಗೆ ಪುಸ್ತಕವನ್ನು ನಾಗೇಶ್ ಕಾಲೂರು ಅವರು ಬಹಳ ಸುಂದರವಾಗಿ ತುರ್ಜುಮೆ ಮಾಡಿದ್ದು, ಅದರ ಭಾವಾರ್ಥಕ್ಕೆ ಅಪಚಾರ ಆಗದ ರೀತಿಯಲ್ಲಿ ನೋಡಿಕೊಂಡಿದ್ದಾರೆ ಎಂದರು.
ಈ ಪುಸ್ತಕದಲ್ಲಿ ಕೊಡಗಿನ ದುರ್ಗಮ ಪ್ರದೇಶದಲ್ಲಿ ಮಹಿಳೆಯರು ಶಿಕ್ಷಣ ಪಡೆಯಲು ಹೇಗೆ ಹೋರಾಟ ನಡೆಸಿದ್ದಾರೆ ಮತ್ತು ಕೊಡಗಿನಲ್ಲಿ ಮಹಿಳಾ ಸಮಾಜ ಹೇಗೆ ಬದಲಾವಣೆ ಆಯಿತು ಎಂಬುವುದನ್ನು ವಿವರಿಸಲಾಗಿದೆ ಎಂದರು.
ಕೊಡವ ಸಾಂಸ್ಕೃತಿಕ ಅಧ್ಯಯನಕ್ಕೆ ಸಹಕಾರ ನೀಡಿದ್ದ ಪದ್ಮಶ್ರೀ ರಾಣಿ ಮಾಚಯ್ಯ ಅವರು, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಸಂದರ್ಭ ಅನುದಾನ ನೀಡುವ ಮೂಲಕ ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ ಎಂದು ಸ್ಮರಿಸಿಕೊಂಡರು.
ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠದ ಸಂಯೋಜಕರಾದ ಡಾ.ಎಂ.ಎಂ.ಮೀನಾಕ್ಷಿ ಪ್ರಾಸ್ತಾವಿಕ ಮಾತನಾಡಿ, ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠ ಕೊಡವ ಭಾಷೆ, ಸಂಸ್ಕೃತಿ, ಇತಿಹಾಸಕ್ಕೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಪುಸ್ತಕಗಳನ್ನು ಬಿಡುಗಡೆ ಮಾಡುತ್ತಾ ಬಂದಿದೆ. ಮುಂದೆಯೂ ಕೊಡಗಿನ ಬಗ್ಗೆ ಅಧ್ಯಯನ ಮತ್ತು ಸಂಶೋಧನೆ ಮಾಡಲಾಗುವುದು ಎಂದರು.
ಕೊಡಗಿನಿಂದ ಗಿರಿಯವರೆಗೆ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಪದ್ಮಶ್ರೀ ಐಮುಡಿಯಂಡ ರಾಣಿ ಮಾಚಯ್ಯ, ವಿದ್ಯಾರ್ಥಿಗಳು ತಾವು ಮಾಡುವ ಕೆಲಸವನ್ನು ಹೃದಯದಿಂದ ಮಾಡಬೇಕು, ತಮ್ಮ ಗುರಿಯನ್ನು ಸಾಧಿಸುವ ಛಲ ಹೊಂದಿರಬೇಕು. ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ಗುರುತಿಸಿಕೊಳ್ಳಬೇಕು. ತಂದೆತಾಯಿಯನ್ನು ಸಮಾಜದಲ್ಲಿ ಗೌರವದಿಂದ ಕಾಣಬೇಕು ಎಂದರು.
ತಾನು ಹಲವು ಸವಾಲುಗಳ ನಡುವೆ ಪ್ರಪಂಚದಲ್ಲಿ ಉಮ್ಮತ್ತಾಟ್ ಅನ್ನು ಪರಿಚಯಿಸುವ ಕೆಲಸ ಮಾಡಿದ್ದು, ಮುಂದಿನ ದಿನಗಳಲ್ಲಿ ಗಂಡುಮಕ್ಕಳಿಗೂ ಕತ್ತಿಯಾಟ್ ಮಾಡುವ ಯೋಚನೆಯಿದೆ. ಉಮ್ಮತ್ತಾಟ್ ನಲ್ಲಿ ಆಸಕ್ತಿ ಇರುವ ವಿದ್ಯಾರ್ಥಿನಿಯರು ತನ್ನನ್ನು ಸಂಪರ್ಕಿಸುವಂತೆ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ರಾಘವ ಮಾತನಾಡಿ, ಮಾಜಿ ಸಚಿವ ಎಂ.ಸಿ.ನಾಣಯ್ಯ ಅವರು ಕಾಲೇಜಿನ ಸಮಸ್ಯೆಯನ್ನು ಪರಿಹರಿಸಲು ತಮ್ಮದೇ ಆದ ಪ್ರಯತ್ನ ಮಾಡಲು ಮುಂದಾಗಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.
ವಿದ್ಯಾರ್ಥಿಗಳು ಮೊಬೈಲ್‍ಗಳಿಗೆ ಹೆಚ್ಚು ದಾಸರಾಗದೆ ತಮ್ಮದೇ ಆದ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ಮೂಲಕ ಶೈಕ್ಷಣಿಕ ಜ್ಞಾನಾರ್ಜನೆಯನ್ನು ಸಂಪಾದಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕೊಡವ ಮಕ್ಕಡ ಕೂಟ ಸಾರಸ್ವತ ಲೋಕಕ್ಕೆ ಅಪಾರ ಕೊಡಗೆ ನೀಡುತ್ತ್ತಾ ಬಂದಿದ್ದು, ಮುಂದೆ ಮತ್ತಷ್ಟು ಕಾರ್ಯಗಳನ್ನು ಮಾಡುವಂತಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ನಾಗೇಶ್ ಕಾಲೂರು ಅವರು ತಮ್ಮ ಮಾತೃ ಭಾಷೆ ತುಳು ಆದರೂ, ಕೊಡವ ಸಾಹಿತ್ಯ ಕ್ಷೇತ್ರಕ್ಕೆ ಹಲವು ಕೊಡುಗೆ ನೀಡಿದ್ದಾರೆ ಎಂದರು.
ವಿದ್ಯಾರ್ಥಿಗಳು ಹೆಚ್ಚು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಪುಸ್ತಕಗಳನ್ನು ಓದದಿದ್ದರೆ ಇತರರೊಂದಿಗೆ ವ್ಯವಹರಿಸಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣವನ್ನು ಉತ್ತಮ ಕಾರ್ಯಗಳಿಗೆ ಸದುಪಯೋಗ ಪಡಿಸಿಕೊಂಡು ಓದಿನೆಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಐಮುಡಿಯಂಡ ರಾಣಿ ಮಾಚಯ್ಯ, ಶ್ರೀಕಾವೇರಿ ದರ್ಶನಂ ಲೇಖಕ, ಕೊಡಗಿನಿಂದ ಗಿರಿಯವರೆಗೆ (ಮೂಲ ಲೇಖಕರು ದಿ.ಮಳವಂಡ ಗೌರಮ್ಮ ಅಚ್ಚಯ್ಯ) ಭಾಷಾಂತರಕಾರ ನಾಗೇಶ್ ಕಾಲೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಚಿಯಕ್ ಪೂವಂಡ ಶ್ವೇತ ಚಂಗಪ್ಪ ಪ್ರಾರ್ಥಿಸಿ, ಕರವಂಡ ಸೀಮಾ ಗಣಪತಿ  ಸ್ವಾಗತಿಸಿ, ಐಚಂಡ ರಶ್ಮಿ ಮೇದಪ್ಪ ನಿರೂಪಿಸಿದರು. ಬೊಪ್ಪಂಡ ಶಾಮ್ ಪೂಣಚ್ಚ ಅವರು ನಾಗೇಶ್ ಕಾಲೂರು ಅವರ ಪರಿಚಯ ಮಾಡಿದರು. ಪುತ್ತರಿರ ವನಿತಾ ಮುತ್ತಪ್ಪ ವಂದಿಸಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ : ಶಾಸಕ ಪೊನ್ನಣ್ಣರಿಗೆ ಸನ್ಮಾನ*

ಮಾರ್ಚ್ 7, 2026

*ಐಟಿ ಹಬ್ ಆಗಲಿದೆಯೇ ಸಾಂಸ್ಕೃತಿಕ ನಗರಿ?: ಮೈಸೂರು ಇನ್ಮುಂದೆ ರಾಜ್ಯದ ಎರಡನೇ ಐಟಿ ಸಿಟಿ; ಮಂಗಳೂರಿಗೂ ಸಿಕ್ತು ಐಟಿ ಪಾರ್ಕ್ ಭಾಗ್ಯ!*

ಮಾರ್ಚ್ 7, 2026

*ಬೆಂಗಳೂರು-ಕಲಬುರಗಿ ಸೇರಿ ಹಲವು ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ; ಮಾರ್ಚ್ 15ರಿಂದ ಹೊಸ ವೇಳಾಪಟ್ಟಿ ಜಾರಿ!*

ಮಾರ್ಚ್ 7, 2026

*ಐಟಿ ಹಬ್ ಆಗಲಿದೆಯೇ ಸಾಂಸ್ಕೃತಿಕ ನಗರಿ?: ಮೈಸೂರು ಇನ್ಮುಂದೆ ರಾಜ್ಯದ ಎರಡನೇ ಐಟಿ ಸಿಟಿ; ಮಂಗಳೂರಿಗೂ ಸಿಕ್ತು ಐಟಿ ಪಾರ್ಕ್ ಭಾಗ್ಯ!*

ಮಾರ್ಚ್ 7, 2026 ಇತ್ತೀಚಿನ ಸುದ್ದಿಗಳು ಕರ್ನಾಟಕ

ಬೆಂಗಳೂರು, ಮಾರ್ಚ್ 7, 2026: ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು ಈಗ ಮಾಹಿತಿ ತಂತ್ರಜ್ಞಾನದ (IT) ಹೊಸ ಕೇಂದ್ರವಾಗಿ ಹೊರಹೊಮ್ಮಲು…

*ಬೆಂಗಳೂರು-ಕಲಬುರಗಿ ಸೇರಿ ಹಲವು ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ; ಮಾರ್ಚ್ 15ರಿಂದ ಹೊಸ ವೇಳಾಪಟ್ಟಿ ಜಾರಿ!*

ಮಾರ್ಚ್ 7, 2026

*ಕಾವೇರಿ ಶಾಲೆಯಲ್ಲಿ ಅಚ್ಚುಕಟ್ಟಾಗಿ ನೆರವೇರಿದ ಬೀಳ್ಕೊಡುಗೆ ಹಾಗೂ ಪದವಿ ಪ್ರಧಾನ ಕಾರ್ಯಕ್ರಮ*

ಮಾರ್ಚ್ 6, 2026

*ಮೊಣ್ಣಂಡ ಕೆ.ಚೆಂಗಪ್ಪ ಹಾಗೂ ಚೆರಿಯಮನೆ ಕೃಷ್ಣಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮ*

ಮಾರ್ಚ್ 6, 2026

*ಬಸವೇಶ್ವರ ಸನ್ನಿಧಿಯಲ್ಲಿ ಮಳೆ ಪೂಜೆ*

ಮಾರ್ಚ್ 6, 2026

*ಸವ೯ ಜನರ ಪಾಲಿನ ಕಲ್ಯಾಣದ ಬಜೆಟ್ : ಶಾಸಕ ಡಾ.ಮಂಥರ್ ಗೌಡ ಶ್ಲಾಘನೆ*  

ಮಾರ್ಚ್ 6, 2026

*ಕೊಡಗಿನ ಜನರ ನಿರೀಕ್ಷೆ ಹುಸಿಯಾಗಿದೆ*

ಮಾರ್ಚ್ 6, 2026

*ಸಾಲದ ಶೂಲಕ್ಕೆ ತಳ್ಳಿದ ಬಜೆಟ್ : ವಿರಾಜಪೇಟೆ ಕ್ಷೇತ್ರದ ನಿರೀಕ್ಷೆಗಳು ಹುಸಿಯಾಗಿದೆ : ಬಿಜೆಪಿ ಟೀಕೆ*

ಮಾರ್ಚ್ 6, 2026

*ಅಸ್ಸಾಂನಲ್ಲಿ ಸುಖೋಯ್-30 ಯುದ್ಧ ವಿಮಾನ ಪತನ: ಇಬ್ಬರು ಪೈಲಟ್‌ಗಳು ಹುತಾತ್ಮ*

ಮಾರ್ಚ್ 6, 2026

*ಹಾರ್ಮುಜ್ ಬಂದ್ ಆದ್ರೂ ತೈಲಕ್ಕೆ ಬರಲ್ಲ ಕಂಟಕ!: ಭಾರತದ ಇಂಧನ ಸುರಕ್ಷತೆ ಬಗ್ಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಅಪ್ಡೇಟ್*

ಮಾರ್ಚ್ 6, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.