ಮಡಿಕೇರಿ ನ.9 : ನಗರದ ಇತಿಹಾಸ ಪ್ರಸಿದ್ಧ ಶ್ರೀ ಕೋಟೆ ಮಹಾಗಣಪತಿ ದೇವಾಲಯದಲ್ಲಿ ದಸರಾ ಮಂಟಪದ ಕಲಾಕೃತಿಗಳಿಗೆ ಇತ್ತೀಚೆಗೆ ಶಾಂತಿ ಪೂಜೆ ಶ್ರದ್ಧಾಭಕ್ತಿಯಿಂದ ನಡೆಯಿತು.
47 ನೇ ದಸರಾ ಉತ್ಸವದ ಪ್ರಯುಕ್ತ ಆಯೋಜಿಸಿದ್ದ ಲಕ್ಕಿಡಿಪ್ ನ ಡ್ರಾ ಕೂಡ ಇದೇ ಸಂದರ್ಭ ನಡೆಯಿತು. ವಿಜೇತರು ಲಕ್ಕಿಡಿಪ್ ಕೂಪನ್ ನನ್ನು ಹಾಜರು ಪಡಿಸಿ ನ.25 ರೊಳಗೆ ಬಹುಮಾನ ಪಡೆದುಕೊಳ್ಳುವಂತೆ ಶ್ರೀಕೋಟೆ ಮಹಾಗಣಪತಿ ಮಂಟಪ ಸಮಿತಿಯ ಅಧ್ಯಕ್ಷ ಹೆಚ್.ಪಿ.ಲೋಕೇಶ್ ಮನವಿ ಮಾಡಿದ್ದಾರೆ.
::: ಫಲಿತಾಂಶ :::
ಪ್ರಥಮ ಬಹುಮಾನ ಸಂಖ್ಯೆ 3271 (ರೂ.25 ಸಾವಿರ), ದ್ವಿತೀಯ ಬಹುಮಾನ ಸಂಖ್ಯೆ 1892 (ರೂ.15 ಸಾವಿರ) ಮತ್ತು ತೃತೀಯ ಬಹುಮಾನ ಸಂಖ್ಯೆ 3642 (ರೂ.10 ಸಾವಿರ)










