ಮಡಿಕೇರಿ ನ.14 : ನಿಲ್ಲಿಸಿದ್ದ ಆಟೋರಿಕ್ಷಾಗೆ ಬೊಲೆರೋ ವಾಹನವೊಂದು ಡಿಕ್ಕಿಯಾದ ಪರಿಣಾಮ ಆಟೋದಲ್ಲಿದ್ದ ಟಿಬೆಟಿಯನ್ ಶಿಬಿರದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಕುಶಾಲನಗರ ಸಮೀಪ ಬೈಲುಕೊಪ್ಪದಲ್ಲಿ ನಡೆದಿದೆ.
ಟಿಬೆಟಿಯನ್ ಶಿಬಿರದ ವ್ಯಕ್ತಿ ಆಟೋದ ಹಿಂಬದಿಯಲ್ಲಿ ಕುಳಿತ್ತಿದ್ದರು, ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಆಟೋಕ್ಕೆ ಡಿಕ್ಕಿಯಾದ ಬೊಲೆರೋ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟಿಂಬರ್ ತುಂಬಿದ ಲಾರಿಗೆ ಡಿಕ್ಕಿ ಹೊಡೆದಿದೆ. ಆಟೋ ಮತ್ತು ಬೊಲೆರೋ ಸಂಪೂರ್ಣ ಜಖಂಗೊಂಡಿದೆ. ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








