ಮಡಿಕೇರಿ ನ.16 : ನಾಪೋಕ್ಲು ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ನಾಪೋಕ್ಲು ಗ್ರಾಮ ಪಂಚಾಯತಿಗೆ ಸೇರಿದ ಮಹಾತ್ಮ ಗಾಂಧಿ ಸಾರ್ವಜನಿಕ ಉದ್ಯಾನವನದಲ್ಲಿ ಸ್ವಚ್ಛತಾ ಶ್ರಮದಾನ ಮಾಡಲಾಯಿತು.
ಉದ್ಯಾನವನದಲ್ಲಿ ಬೆಳೆದಿದ್ದ ಕಾಡುಕಡಿದು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕಿ ಶುಚಿಗೊಳಿಸಲಾಯಿತು.
ಸ್ವಚ್ಛತಾ ಶ್ರಮದಾನದಲ್ಲಿ ಘಟಕದ ಪದಾಧಿಕಾರಿಗಳಾದ ಶಂಕರ್, ಮಾಯಿಲಪ್ಪ, ದಿಲೀಶ್, ಚೇತನ್, ಗೀತಾ, ಉಮಾಲಕ್ಷ್ಮಿ, ಚಂದ್ರಕಲಾ, ಸಂಯೋಜಕಿ ಬಾಳೆಯಡ ದಿವ್ಯ, ಗ್ರಾ.ಪಂ ಸದಸ್ಯರಾದ ಕುಲ್ಲೆಟಿರ ಅರುಣ್ ಬೇಬ, ಗುತ್ತಿಗೆದಾರ ವಿನಾಯಕ್ ಪಾಲ್ಗೊಂಡಿದ್ದರು.






