ವಿರಾಜಪೇಟೆ ನ.23 : ಬಿಳುಗುಂದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ರಂಗೋಲಿ ಸ್ಪರ್ಧೆ, ಕ್ರೀಡಾ ಸ್ಪರ್ಧೆ ಹಾಗೂ ಗ್ರಾಹಕರ ಸಂಘದ ವತಿಯಿಂದ ಮಕ್ಕಳ ಸಂತೆ ನಡೆಯಿತು.
ಶಾಲಾ ಮುಖ್ಯಶಿಕ್ಷಕಿ ಅರುಣ್ ಆನ್ಸಿ ಡಿಸೋಜ ಭಾಷೆ ಹಾಗೂ ಪಠ್ಯ ವಿಷಯಕ್ಕೆ ಸಂಬಂಧಿಸಿದ ರಂಗೋಲಿ ಸ್ಪರ್ಧೆ ಉದ್ಘಾಟನೆ ಮಾಡಿದರು.
8,9,10ನೇ ತರಗತಿಯ ವಿದ್ಯಾರ್ಥಿಗಳು ತ್ರಿಭುಜ, ಹೃದಯ, ಮೆದುಳು, ನರಮಂಡಲ, ಕಿವಿ, ಸಮಾಸ, ಇಂಗ್ಲೀಷ್ ವ್ಯಾಕರಣ, ಭಾರತದ ನಕ್ಷೆ ಇತ್ಯಾದಿಗಳನ್ನು ರಂಗೋಲಿಯ ಮೂಲಕ ಚಿತ್ರಿಸಿದರು.
ನಂತರ ಎಲ್ಲಾ ವಿದ್ಯಾರ್ಥಿಗಳಿಗೂ, ಪೋಷಕರಿಗೂ, ವಿಷದ ಚೆಂಡು, ಸಂಗೀತ ಖುರ್ಚಿ, ಬಾಲ್ ಇನ್ ದಿ ಬಕೆಟ್, ಬಾಂಬ್ ಇನ್ ದಿ ಸಿಟಿ ಇತ್ಯಾದಿ ಮನೋರಂಜನಾ ಕ್ರೀಡೆಗಳನ್ನು ದೈಹಿಕ ಶಿಕ್ಷಣ ಶಿಕ್ಷಕರಾದ ಎಸ್.ಜಿ.ಲಿನ್ನಿ ನಡೆಸಿಕೊಟ್ಟರು.
ಗ್ರಾಮ ಪಂಚಾಯತ್ ಕಾರ್ಯದರ್ಶಿ ಸುರೇಶ್ ಮಕ್ಕಳ ಸಂತೆ ಕಾರ್ಯಕ್ರಮವನ್ನು ಮಕ್ಕಳಿಂದ ತರಕಾರಿ ವ್ಯಾಪಾರ ಮಾಡುವ ಮೂಲಕ ಉದ್ಘಾಟಿಸಿದರು.
ಮಕ್ಕಳು ಸ್ಥಳೀಯವಾಗಿ ಸಿಗುವ ಸೊಪ್ಪು, ತರಕಾರಿ, ಹೇರಳೆಕಾಯಿ ಇತ್ಯಾದಿಗಳನ್ನು ತಂದು ವ್ಯಾಪಾರ ಮಾಡಿ ಗಮನ ಸೆಳೆದರು.
ಗ್ರಾಹಕರ ಸಂಘದ ಮೂಲಕ ನಡೆದ ಸಂತೆಯ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಲಾಭ-ನಷ್ಟ, ಸಂತೆ ನಡೆಸುವ ವಿಧಾನ, ಸ್ಥಳ ತೆರಿಗೆ, ಸ್ವಚ್ಛತೆ ಮುಂತಾದ ಅಂಶಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಹೆಚ್.ಪಿ.ಅನಿತಾ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಪೋಷಕರು ಮಕ್ಕಳಂತೆ ಆಟವಾಡಿ ಎಲ್ಲರಿಗೂ ಮನೋರಂಜನೆ ನೀಡಿದರು. ಹಾಗೂ ಬಹುಮಾನ ಪಡೆದುಕೊಂಡರು.
ಸಹಶಿಕ್ಷಕಿ ಸಾವಿತ್ರಿ. ಹೆಚ್.ಜಿ.ಪ್ರಾಥಮಿಕ, ಗಂಗಮ್ಮ, ಲೀಲಾವತಿ, ಅನಿತಾ. ಎಸ್. ಡಿ., ಸಹಶಿಕ್ಷಕಿಯವರು ಇದ್ದರು.







